Anekal Murder: ಪತ್ನಿಯನ್ನು ಕೊಂದು, ಕುತ್ತಿಗೆ ಕೊಯ್ದುಕೊಂಡ ಗಂಡ; ಅನಾಥವಾದ ಮಕ್ಕಳು
ಇತ್ತೀಚಿಗೆ ಅಂತೂ ಸಂಪತ್ ಕುಡಿದ ಮತ್ತಿನಲ್ಲಿ ಪತ್ನಿಯ ಮೇಲೆ ಶೀಲ ಶಂಕಿಸಿ ಪ್ರತಿದಿನ ಗಲಾಟೆ ಮಾಡುತ್ತಿದ್ದನಂತೆ. ಭಾನುವಾರ ಸಹ ಪತ್ನಿ ಮನೆಯವರು ಮನೆಗೆ ಬಂದು ರಾಜಿ ಮಾಡಿ ಬುದ್ಧಿ ಹೇಳಿ ಹೋಗಿದ್ದರು.
Husband Kills Wife: ಅನುಮಾನ ಅನ್ನೋದು ಹಾಗೇ, ಒಮ್ಮೆ ವಕ್ಕರಿಸಿದರೆ ಮುಗಿತು. ಏನೆಲ್ಲ ಮಾಡಿಸುತ್ತೆ ಅನ್ನೋದಕ್ಕೆ ಇದೊಂದು ತಾಜ ನಿದರ್ಶನ. ಹೌದು ಹತ್ತು ವರ್ಷಗಳ ಕಾಲ ಆಕೆಯ ಜೊತೆ ದಾಂಪತ್ಯ ನಡೆಸಿದ್ದ ಪತಿ ಶೀಲ ಶಂಕಿಸಿ ಪತ್ನಿ(Wife)ಯನ್ನೇ ಭೀಕರವಾಗಿ ಕೊಲೆ ಮಾಡಿದ್ದಲ್ಲದೆ ತಾನು ಕೂಡ ಕತ್ತು ಕೊಯ್ದು ಕೊಂಡು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಹೌದು ಕೊಲೆಯಾದ ಮಹಿಳೆಯ ಹೆಸರು ಲಾವಣ್ಯ ಅಂತ. ಕೈವಾರ (Kaivara) ಮೂಲದ ಲಾವಣ್ಯಳನ್ನು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಯಡವನಹಳ್ಳಿ (Anekal, Bengaluru) ವಾಸಿ ಸಂಪತ್ ಎಂಬಾತನಿಗೆ ಹತ್ತು ವರ್ಷಗಳ ಹಿಂದೆ ಮದುವೆ (Marriage) ಮಾಡಿಕೊಡಲಾಗಿತ್ತು. ಹತ್ತು ವರ್ಷಗಳ ದಾಂಪತ್ಯ ಜೀವನಕ್ಕೆ ಇಬ್ಬರು ಮುದ್ದಾದ ಮಕ್ಕಳು (Two Child) ಸಹ ಇದ್ದರು.
ಪ್ರಾರಂಭದಲ್ಲಿ ಅನ್ಯೊನ್ಯತೆಯಿಂದಿದ್ದ ಇವರ ದಾಂಪತ್ಯ ಜೀವನ ಹಳಿ ತಪ್ಪಿತ್ತು. ತೀವ್ರ ಕುಡಿತದ ಚಟಕ್ಕೆ ದಾಸನಾದ ಸಂಪತ್ ಸದಾ ಪತ್ನಿ ಮೇಲೆ ನಿತ್ಯ ಗಲಾಟೆ ಕಾಯಕವನ್ನಾಗಿ ಮಾಡಿಕೊಂಡಿದ್ದ. ನಿಂತರೂ, ಕುಳಿತರೂ ಅನುಮಾನದ ದೃಷ್ಟಿಯಿಂದ ನೋಡುತ್ತಿದ್ದ ಎನ್ನಲಾಗಿದೆ.
ಪತ್ನಿಯ ಶೀಲ ಶಂಕಿಸಿ ಪ್ರತಿದಿನ ಗಲಾಟೆ
ಇತ್ತೀಚಿಗೆ ಅಂತೂ ಸಂಪತ್ ಕುಡಿದ ಮತ್ತಿನಲ್ಲಿ ಪತ್ನಿಯ ಮೇಲೆ ಶೀಲ ಶಂಕಿಸಿ ಪ್ರತಿದಿನ ಗಲಾಟೆ ಮಾಡುತ್ತಿದ್ದನಂತೆ. ಭಾನುವಾರ ಸಹ ಪತ್ನಿ ಮನೆಯವರು ಮನೆಗೆ ಬಂದು ರಾಜಿ ಮಾಡಿ ಬುದ್ಧಿ ಹೇಳಿ ಹೋಗಿದ್ದರು. ಆದರೆ ಇಂದು ಬೆಳ್ಳಂಬೆಳಗ್ಗೆ ಲಾವಣ್ಯ ಭೀಕರವಾಗಿ ಕೊಲೆಯಾಗಿ ಹೋಗಿದ್ದಾಳೆ ಎಂದು ಪಕ್ಕದ ಮನೆ ವಾಸಿ ರಾಜಪ್ಪ ತಿಳಿಸಿದ್ದಾರೆ.
ಬೆಳಗಿನ ಜಾವ ಮೂರ್ನಾಲ್ಕು ಗಂಟೆ ಸುಮಾರಿಗೆ ಚೀರಾಟ ಕಿರುಚಾಟ ಶುರುವಾಯಿತು. ನಾನು ಭಯಕ್ಕೆ ಹೊರ ಹೋಗಲಿಲ್ಲ. ಅಷ್ಟೊತ್ತಿಗೆ ಆ ಮಗು ರಕ್ತ ಸುರಿಸಿಕೊಂಡು ಹೊರಗಡೆ ಓಡಿ ಬಂತು. ಅದೇ ವೇಳೆ ಹೊರಗಡೆ ಬಂದ ಪಾಪಿ ಕುತ್ತಿಗೆ ಕುಯ್ದುಕೊಂಡು ಚರಂಡಿಗೆ ಬಿದ್ದ. ಅಕ್ಕಪಕ್ಕದವರು ಸ್ಥಳಕ್ಕೆ ಹೋಗಿ ನೋಡಿದಾಗ ಲಾವಣ್ಯಳನ್ನು ಮಲಗಿರುವ ವೇಳೆ ಕುತ್ತಿಗೆ ಕುಯ್ದು ಕೊಂದಿರುವುದು ಕಂಡು ಬಂತು ಎಂದು ಸ್ಥಳೀಯರು ಹೇಳ್ತಾರೆ.
ಮೃತ ಲಾವಣ್ಯ ಅಂತಹ ಕೆಟ್ಟ ಕೆಲಸಕ್ಕೆ ಹೋದವಳಲ್ಲ. ಒಳ್ಳೆಯ ಹೆಣ್ಣು ಮಗಳು. ಆದ್ರೆ ಗಂಡ ಮಾತ್ರ ಯಾವಾಗಲೂ ಅನುಮಾನ ಪಿಶಾಚಿಯಾಗಿ ಕಾಡುತ್ತಿದ್ದ. ಕೊನೆಗೆ ಹೀಗೆ ಮಾಡಿದ್ದಾನೆ. ಅವರ ಮನೆಯಲ್ಲಿ ಇಬ್ಬರು ಮಕ್ಕಳು ಗಂಡ ಹೆಂಡತಿ ಮತ್ತು ಮಾವ ಮಾತ್ರ ಇದ್ದರು. ಘಟನೆ ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಆತನನ್ನು ಆಸ್ಪತ್ರೆಗೆ ರವಾನೆ ಮಾಡಲಾಯಿತು ಎಂದು ಸ್ಥಳೀಯರಾದ ವೆಂಕಟಮ್ಮ ತಿಳಿಸಿದ್ದಾರೆ.
ಅನಾಥವಾದ ಮಕ್ಕಳು
ಒಟ್ಟಿನಲ್ಲಿ ಗಂಡ ಹೆಂಡತಿ, ಇಬ್ಬರು ಮಕ್ಕಳು ಮುದ್ದಾದ ಸಂಸಾರ. ಬಾಳಿ ಬದುಕಿ ಬಾಳಬೇಕಾದವರು. ಆದ್ರೆ ಸಂಸಾರದಲ್ಲಿ ಅನುಮಾನ ಎಂಬ ಪೆಡಂಭೂತ ರುದ್ರ ನರ್ತನ ಮಾಡಿದ್ದು, ಇದೀಗ ಇಡೀ ಕುಟುಂಬ ದಿಕ್ಕಾಪಾಲಾಗಿದೆ.
ಗಂಡ ಸಾವು ಬದುಕಿನ ಹೋರಾಟ ನಡೆಸುತ್ತಿದ್ದರೆ, ಹೆಂಡತಿ ಮಸಣ ಸೇರಿದ್ದು, ಮಕ್ಕಳು ಅನಾಥವಾಗಿದ್ದಾರೆ. ಏನೆ ಹೇಳಿ ಅನ್ಯಾಯದ ಸಾವಿಗೆ ಹೊಣೆ ಯಾರು ಎಂಬ ಪ್ರಶ್ನೆ ಮಾತ್ರ ಕಾಡುತಿದೆ.
Flyover Construction: ಬೆಂಗಳೂರಿನ 2ನೇ ಅತಿ ದೊಡ್ಡ ಮೇಲ್ಸೇತುವೆ ಕಾಮಗಾರಿ ಸ್ಥಗಿತ, ಟೆಂಡರ್ ಕ್ಯಾನ್ಸಲ್
ರಾಜಧಾನಿ ಬೆಂಗಳೂರಿನಲ್ಲಿ (Bengaluru) ಎರಡನೇ ಅತಿದೊಡ್ಡ ಫ್ಲೈಓವರ್ (Fly Over) ಕಾಮಗಾರಿ ನಿಂತು ಹೋಗಿದೆ. ಈಜಿಪುರ ಫ್ಲೈಓವರ್ ನಿರ್ಮಾಣವಾದ್ರೆ ಸಾಕು ಟ್ರಾಫಿಕ್ (Traffic) ಸಮಸ್ಯೆಗೆ ಮುಕ್ತಿ ಸಿಗುತ್ತೆಅಂತ ಜನರು ಕಾಯ್ತಿದ್ರು ಆದ್ರೀಗ ಕೆಲಸವೇ ನಿಂತು ಹೋಗ್ತಿದ್ದು, ಟ್ರಾಫಿಕ್ ಸಮಸ್ಯೆ ಕೂಡ ದೊಡ್ಡ ತಲೆನೋವಾಗಲಿದೆ. ಆದ್ರೆ ಈಜಿಪುರ (Ejipura ) ಫ್ಲೈಓವರ್ ಕೆಲಸ ಆರಂಭವಾಗಿ ಹಲವು ವರ್ಷ ಕಳೆದಿದ್ರು, ಕೆಲಸ ಮಾತ್ರ ಆಮೆಗತಿಯಲ್ಲಿ ಸಾಗ್ತಾಯಿತ್ತು, ಸದ್ಯ ಕಾಮಗಾರಿಯ ಟೆಂಡರ್ ಕ್ಯಾನ್ಸಲ್ ಆಗಿದೆ