ಬೆಂಗಳೂರು: ಕಳೆದ ನಾಲ್ಕೈದು ದಿನಗಳ ಹಿಂದೆ ತೆಲುಗು ಸಿನಿಮಾದಲ್ಲಿನ ಸನ್ನಿವೇಶವನ್ನೇ ಹೋಲುವಂತ ಘಟನೆಯೊಂದು ಬೆಳಕಿಗೆ ಬಂದಿತ್ತು. ತೆಲುಗಿನ ಗೀತ ಗೋವಿಂದಂ ಸಿನಿಮಾದಲ್ಲಿ ಚಲಿಸುವ ಬಸ್ನಲ್ಲಿ ಹಿರೋಹಿನ್ಗೆ ಹೀರೋ ಮುತ್ತಿಡುವ ದೃಶ್ಯವಿದೆ. ಥೇಟ್ ಅದೇ ರೀತಿ KSRTC ಬಸ್ನಲ್ಲಿ ಭೂಪನೊಬ್ಬ ಯುವತಿಗೆ ಮುತ್ತಿಟ್ಟಿದ್ದ. ಬಸ್ನಲ್ಲಿ ಪ್ರಯಾಣಿಸುವಾಗ ಮೊಬೈಲ್ನಲ್ಲಿ ಸಿನಿಮಾ ನೋಡುತ್ತಿದ್ದ ಯುವಕ ಸಹ ಪ್ರಯಾಣಿಕಳಿಗೆ ಮುತ್ತು ಕೊಟ್ಟು ಪರಾರಿಯಾಗಿದ್ದ. ಘಟನೆಯಿಂದ ಶಾಕ್ ಆಗಿದ್ದ ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಸದ್ಯ ಆ ಮುತ್ತಿನ ಭೂಪನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೆಎಸ್ಆರ್ಟಿಸಿ ಅಲ್ಟ್ರ ಡಿಲಕ್ಸ್ ಬಸ್ನಲ್ಲಿ ಸಿನಿಮೀಯಾ ಶೈಲಿಯಲ್ಲಿ ಯುವತಿ ಕೆನ್ನೆಗೆ ಮುತ್ತಿಟ್ಟು ಪರಾರಿಯಾಗಿದ್ದ ಆರೋಪಿಯನ್ನ ಬಾಗಲಗುಂಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳ್ಳಾರಿ ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿ 24 ವರ್ಷದ ಮಧುಸೂದನ್ ರೆಡ್ಡಿಯನ್ನ ಪೊಲೀಸರು ಬಂದಿಸಿದ್ದು ನ್ಯಾಯಂಗ ಬಂದನಕ್ಕೆ ಒಪ್ಪಿಸಿದ್ದಾರೆ.
ಥೇಟ್ ತೆಲುಗು ಸಿನಿಮಾ ಗೀತ ಗೋವಿಂದಂ ಸಿನಿಮಾ ಶೈಲಿಯಲ್ಲಿ ಬಸ್ನಲ್ಲಿ ಸಂಚರಿಸುತ್ತಿದ್ದ ಹದಿಹರೆಯದ ಯುವತಿ ನಿದ್ದೆ ಮಂಪರಿನಲ್ಲಿದ್ದ ಸಂದರ್ಭದಲ್ಲಿ ಮಧುಸೂದನ್ ಮುತ್ತು ಕೊಟ್ಟು ಎಸ್ಕೇಪ್ ಆಗಿದ್ದ. ಈ ಬಗ್ಗೆ ಯುವತಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಳು. ಬಳ್ಳಾರಿ ಮೂಲದ 21 ವರ್ಷದ ಯುವತಿ ಬೆಂಗಳೂರಿನ ಪ್ರತಿಷ್ಟಿತ ಕಾಲೇಜಿನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದು, ಹಬ್ಬಕ್ಕೆಂದು ಊರಿಗೆ ತೆರಳಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದ ವೇಳೆ ಈ ರೀತಿ ಘಟನೆ ನಡೆದಿತ್ತು. ಇನ್ನು ಆರೋಪಿ ದಾಸರಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಎಂದು ತಿಳಿದು ಬಂದಿದೆ.
ಅಂದು ಏನಾಯ್ತು?
ಯುವತಿ ಕೆಎಸ್ಆರ್ಟಿಸಿ ಅಲ್ಟ್ರಾ ಡಿಲಕ್ಸ್ ಬಸ್ನಲ್ಲಿ ಆನ್ಲೈನ್ ಟಿಕೆಟ್ ಬುಕ್ ಮಾಡಿ ಬಳ್ಳಾರಿಯಿಂದ ಬೆಂಗಳೂರಿಗೆ ಬರುತ್ತಿದ್ದರು. ಅದೇ ಬಸ್ ಏರಿದ್ದ ಯುವಕನೋರ್ವ ಈಕೆಯನ್ನ ದಿಟ್ಟಿಸಿ ನೋಡುತ್ತಿದ್ದನಂತೆ, ತಲೆ ಕೆಡಿಸಿಕೊಳ್ಳದ ಯುವತಿ ತನ್ನ ಪಾಡಿಗೆ ತಾನು ಮಲಗಿದ್ದಳಂತೆ. ಇನ್ನೇನು ಬಸ್ ಬೆಂಗಳೂರಿಗೆ ತಲುಪಬೇಕು ಎನ್ನುವಷ್ಟರಲ್ಲಿ ಕಾಮುಕ ಯುವಕ ತೆಲುಗಿನ ಗೀತ ಗೋವಿಂದಂ ಸಿನಿಮಾ ನೋಡುತ್ತಿದ್ದನಂತೆ, ನನಗ್ಯಾಕೆ ಬೇಕು ಎಂದು ಯುವತಿ ನಿದ್ದೆ ಮಂಪರಿಗೆ ಜಾರಿದಳಂತೆ. ಗೀತ ಗೋವಿಂದಂ ಸಿನಿಮಾ ನೋಡುತ್ತಿದ್ದ ಕಾಮುಕ ಇನ್ನೇನು ಬಸ್ ದಾಸರಹಳ್ಳಿ ಸಮೀಪಿಸುತ್ತಿದೆ ಎನ್ನುವಷ್ಟರಲ್ಲಿ ಯುವತಿಯ ಕೆನ್ನೆಗೆ ಮುತ್ತು ಕೊಟ್ಟು ಬಸ್ನಿಂದ ಇಳಿದು ಪರಾರಿಯಾಗಿದ್ದ. ಘಟನೆ ಬಗ್ಗೆ ಯಾರೊಂದಿಗೂ ಪ್ರಸ್ತಾಪಿಸದ ಯುವತಿ ಬೆಂಗಳೂರಿನ ತನ್ನ ಮನೆಗೆ ತೆರಳಿ ತನ್ನ ಸಂಬಂಧಿಯೊಂದಿಗೆ ಆಗಮಿಸಿ ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದನ್ನೂ ಓದಿ: Mass Suicide| ಮಗಳನ್ನ ನೇಣಿಗೇರಿಸಿ ತಾಯಿಯೂ ಆತ್ಮಹತ್ಯೆಗೆ ಯತ್ನ; ರಾಜ್ಯದಲ್ಲಿ ಹೆಚ್ಚುತ್ತಿದೆ ಸಾಮೂಹಿಕ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ!
ಯುವಕ ತನ್ನ ಕುಚೇಷ್ಟೆಯಿಂದ ಸದ್ಯ ಕಂಬಿ ಹಿಂದೆ ಸರಿದಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಸಾರಿಗೆ ವ್ಯವಸ್ಥೆಯಲ್ಲಿ ಇಂತಹ ಹುಚ್ಚಾಟಕೆ ಬ್ರೇಕ್ ಹಾಕುವಂತೆ ಪೊಲೀಸರು ಕ್ರಮ ತೆಗೆದುಕೊಳ್ಳಬೇಕಿದೆ.
ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಯುವತಿ ಮೇಲೆ ಅತ್ಯಾಚಾರ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಕಳೆದ ರಾತ್ರಿ ಯುವತಿ ಮೇಲೆ ಕ್ಯಾಬ್ ಚಾಲಕನೋರ್ವ (cab Driver) ಅತ್ಯಾಚಾರ (Rape Case) ನಡೆಸಿದ್ದಾರೆ ಎಂದು ಸಂತ್ರಸ್ತೆ ದೂರು ದಾಖಲಿಸಿದ್ದಾರೆ. ಈ ಪ್ರಕರಣ ಸಂಬಂಧ ಜೀವನ್ ಭೀಮಾನಗರ (jeevan Bhim nagar) ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆಂಧ್ರ ಪ್ರದೇಶದ ಮೂಲದ ದೇವರಾಜ್ ಬಂಧಿತ ಆರೋಪಿ. ಘಟನೆ ನಡೆದ 24 ಗಂಟೆಗಳ ಒಳಗೆ ಆರೋಪಿಯನ್ನು ಬಂಧಿಸಲಾಗಿದೆ. ಸಂತ್ರಸ್ತ ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.
ಏನಿದು ಘಟನೆ?
ಖಾಸಗಿ ಹೋಟೆಲ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂತ್ರಸ್ತೆ ಮಹಿಳೆ ನಿನ್ನೆ ರಾತ್ರಿ ಸ್ನೇಹಿತರ ಮನೆಗೆ ಔತಣ ಕೂಟಕ್ಕೆ ಹೋಗಿದ್ದಳು. ಇದನ್ನು ಮುಗಿಸಿ ರಾತ್ರಿ ಮಲ್ಲೇಶ್ ಪಾಳ್ಯಕ್ಕೆ ಹೋಗಲು ಕ್ಯಾಬ್ ಬುಕ್ ಮಾಡಿದ್ದಳು. ಮಹಿಳೆ ಮನೆಯ ಬಳಿ ಬಂದಾಗ ಆರೋಪಿ ದೇವರಾಜ್ ಅತ್ಯಾಚಾರ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಇಂದು ಬೆಳಗಿನ ಜಾವ 3 ರಿಂದ 4 ಗಂಟೆಯಲ್ಲಿ ಈ ಘಟನೆ ನಡೆದಿದೆ ಎಂದು ಸಂತ್ರಸ್ತ ಯುವತಿ ಜೀವನ ಭೀಮಾ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ಗ್ರಾಮಾಂತರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ