HOME » NEWS » State » BENGALURU RURAL LOCKDOWN EFFECT HIT ON ROSE FLOWERS FARMERS IN ANEKAL AREA RHHSN CANK

ಲಾಕ್ ಡೌನ್ ಎಫೆಕ್ಟ್; ಮಾರುಕಟ್ಟೆ ಬಂದ್, ಸಂಕಷ್ಟದಲ್ಲಿ ಗುಲಾಬಿ ಹೂ ಬೆಳೆಗಾರರು!

ಕೊರೋನಾ ಮಾಹಾಮಾರಿ ತಡೆಗಟ್ಟಲು ಜಾರಿಗೆ ತಂದಿರುವ ಲಾಕ್ ಡೌನ್ ಎಫೆಕ್ಟ್ ಗುಲಾಬಿ ಹೂ ಕೃಷಿಕರಿಗೂ ತಟ್ಟಿದೆ. ಸಂಕಷ್ಟದಲ್ಲಿ ಇರುವ ಗುಲಾಬಿ ಬೆಳೆಗಾರರು ನೆರವಿಗಾಗಿ ಸರ್ಕಾರದತ್ತ ಕೈ ಚಾಚಿದ್ದು,  ಗುಲಾಬಿ ಹೂ ಬೆಳೆಗಾರರ ಕೂಗಿಗೆ ಸರ್ಕಾರ ಯಾವ ರೀತಿ ಸ್ಪಂದಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

news18-kannada
Updated:May 13, 2021, 9:14 PM IST
ಲಾಕ್ ಡೌನ್ ಎಫೆಕ್ಟ್; ಮಾರುಕಟ್ಟೆ ಬಂದ್, ಸಂಕಷ್ಟದಲ್ಲಿ ಗುಲಾಬಿ ಹೂ ಬೆಳೆಗಾರರು!
ಕೆಂಪು ಗುಲಾಬಿ
  • Share this:
ಆನೇಕಲ್: ನಿಯಂತ್ರಣಕ್ಕೆ ಸಿಗದೆ ರಣಕೇಕೆ ಹಾಕುತ್ತಿರುವ ಕೊರೋನಾ ಮಹಾಮಾರಿಯನ್ನು ಬಗ್ಗು ಬಡಿಯುವ ಸಲುವಾಗಿ ರಾಜ್ಯ ಸರ್ಕಾರ 14 ದಿನಗಳ ಸಂಪೂರ್ಣ ಲಾಕ್ ಡೌನ್ ಘೋಷಿಸಿದೆ. ಲಾಕ್ ಡೌನ್ ನಿಂದಾಗಿ ಮಾರುಕಟ್ಟೆಗಳು ಬಂದ್ ಆಗಿವೆ. ಇದರ ಪರಿಣಾಮ ರೈತರು ಬೆಳೆದು ನಿಂತಿರುವ ಗುಲಾಬಿ ಗಿಡಗಳನ್ನು ಕಡಿಯುತ್ತಿರುವುದು. ಕಟಾವಿಗೆ ಬಂದ ಗುಲಾಬಿ ಹೂವನ್ನು ಕಿತ್ತೆಸೆಯುತ್ತಿದ್ದಾರೆ. ಮಾರುಕಟ್ಟೆ ಬಂದ್ ಆಗಿರುವುದರಿಂದ ಗುಲಾಬಿ ಹೂ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಈಗ ಪರಿಹಾರಕ್ಕಾಗಿ ರಾಜ್ಯ ಸರ್ಕಾರದತ್ತ ಕೈ ಚಾಚಿದ್ದಾರೆ. 

ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಮಾಯಸಂದ್ರ ಸುತ್ತಮುತ್ತಲಿನ ಗ್ರಾಮಗಳಲ್ಲಿ ನೂರಾರು ರೈತರು ದಶಕಗಳಿಂದ ಗುಲಾಬಿ ಕೃಷಿ ನೆಚ್ಚಿಕೊಂಡು ಜೀವನ ಕಟ್ಟಿಕೊಂಡಿದ್ದಾರೆ. ಈ ಬಾರಿ ಸುಮಾರು 600 ಕ್ಕೂ ಅಧಿಕ ಎಕರೆ ಜಮೀನಿನಲ್ಲಿ ಗುಲಾಬಿ ಹೂ ಉತ್ತಮ ಫಸಲು ಬಂದಿದ್ದು, ತಮಿಳುನಾಡಿನ ಚೆನ್ನೈ ಮತ್ತು ತಿರುಚ್ಚಿಗೆ ಹೂ ಕಳುಹಿಬೇಕಾಗಿತ್ತು. ಆದ್ರೆ ಕೊರೋನಾ ಎರಡನೇ ಅಲೆ ಪರಿಣಾಮ ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆ ಆಗಿದೆ. ಸಭೆ ಶುಭ ಸಮಾರಂಭ ಮತ್ತು ಧಾರ್ಮಿಕ ಕಾರ್ಯಗಳು ಬಂದ್ ಆಗಿರುವುದರಿಂದ ಗುಲಾಬಿ ಹೂ ಕೇಳುವವರಿಲ್ಲದೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಇಷ್ಟಾದರೂ ಅಧಿಕಾರಿಗಳು  ಮತ್ತು ಜನಪ್ರತಿನಿಧಿಗಳು ನಮ್ಮ ಕಷ್ಟ ಆಲಿಸಿಲ್ಲ. ಇನ್ನಾದರೂ ಸರ್ಕಾರ ರೈತರಿಗಾಗಿ ಪರಿಹಾರದ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ನೊಂದ ರೈತ ಮಹೇಶ್ ಆಗ್ರಹಿಸಿದ್ದಾರೆ.

ಇದನ್ನು ಓದಿ: ರಾಜ್ಯದಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ನಮಗೆ ಕೊಡಿ; ಕೇಂದ್ರ ಸರ್ಕಾರಕ್ಕೆ ಜಗದೀಶ್ ಶೆಟ್ಟರ್ ಆಗ್ರಹ

ಇನ್ನೂ ಮದುವೆಯಂತಹ ಶುಭ ಸಮಾರಂಭಗಳ ಸೀಸನ್ ಆದ್ದರಿಂದ ಉತ್ತಮವಾಗಿ ಫಸಲು ಸಹ ಬಂದಿದೆ. ಆದರೆ ಲಾಕ್ ಡೌನ್​ನಿಂದಾಗಿ ಮದುವೆಗಳು ಸರಳವಾಗಿ ನಡೆಯುತ್ತಿರುವುದರಿಂದ ಬೇಡಿಕೆ ತೀವ್ರವಾಗಿ ಕುಸಿದಿದೆ. ಮಾರುಕಟ್ಟೆ ಇಲ್ಲದೆ ಹೂ ಕೊಳ್ಳುವವರು ಇಲ್ಲ. ಹೀಗಾಗಿ ಲಾಭದ ನಿರೀಕ್ಷೆಯಲ್ಲಿದ್ದ ರೈತರುಈಗ  ನಷ್ಟ ಅನುಭವಿಸುವಂತಾಗಿ, ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೂ ಖರೀದಿಸುವವರು ಇಲ್ಲದೆ ಇರುವುದರಿಂದ ಬೇರೆ ದಾರಿ ಇಲ್ಲದೆ ಗುಲಾಬಿ ಹೂ ಗಿಡಗಳನ್ನು ಕಡಿದು ಹಾಕಲಾಗುತ್ತಿದೆ. ಜೊತೆಗೆ ಕಟಾವಿಗೆ ಬಂದಿರುವ ಹೂವನ್ನು ಕಿತ್ತೆಸೆಯಲಾಗುತ್ತಿದೆ. ಬಹುತೇಕ ರೈತರು ಸಾಲ ಮಾಡಿ ಗುಲಾಬಿ ಹೂ ಕೃಷಿ ಮಾಡುತ್ತಿದ್ದು, ಸದ್ಯದ ಸ್ಥಿತಿಯಲ್ಲಿ ದಿಕ್ಕು ತೋಚದಂತಾಗಿದೆ ಎಂದು ಗುಲಾಬಿ ಹೂ ಬೆಳೆಗಾರ ರಾಮಚಂದ್ರ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
Youtube Video

ಒಟ್ಟಿನಲ್ಲಿ ಕೊರೋನಾ ಮಾಹಾಮಾರಿ ತಡೆಗಟ್ಟಲು ಜಾರಿಗೆ ತಂದಿರುವ ಲಾಕ್ ಡೌನ್ ಎಫೆಕ್ಟ್ ಗುಲಾಬಿ ಹೂ ಕೃಷಿಕರಿಗೂ ತಟ್ಟಿದೆ. ಸಂಕಷ್ಟದಲ್ಲಿ ಇರುವ ಗುಲಾಬಿ ಬೆಳೆಗಾರರು ನೆರವಿಗಾಗಿ ಸರ್ಕಾರದತ್ತ ಕೈ ಚಾಚಿದ್ದು,  ಗುಲಾಬಿ ಹೂ ಬೆಳೆಗಾರರ ಕೂಗಿಗೆ ಸರ್ಕಾರ ಯಾವ ರೀತಿ ಸ್ಪಂದಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ವರದಿ: ಆದೂರು ಚಂದ್ರು 
Published by: HR Ramesh
First published: May 13, 2021, 9:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories