Hoskote Politics: ಟೇಪ್ ಕಟ್ ವೇಳೆ ಸಚಿವ MTB, ಶಾಸಕ ಶರತ್ ಬಚ್ಚೇಗೌಡ ಮಧ್ಯೆ ತಳ್ಳಾಟ, ಜಗಳ..!

ಟೇಪ್​ ಕಟ್​​ ಮಾಡುವಾಗ ಎಂಟಿಬಿ ಅವರನ್ನು ತಳ್ಳಿ ಶಾಸಕರು ಒಳನುಗ್ಗಿದಾಗ ಪರಿಸ್ಥಿತಿ ಕೈ ಮೀರಿತು. ತಳ್ಳಿದ್ದಕ್ಕೆ ಗರಂ ಆದ ಎಂಟಿಬಿ, ತಂದೆ-ಮಗದ ದಬ್ಬಾಳಿಕೆ ಜಾಸ್ತಿ ಆಗುತ್ತಿದೆ ಎಂದರು. ಇದಕ್ಕೆ ಕೋಪದಿಂದಲೇ ಉತ್ತರಿಸಿದ ಶಾಸಕ ಶರತ್​, ಕೈ ತೋರಿಸಿ ಮಾತನಾಡೋದೆಲ್ಲಾ ಚನ್ನಾಗಿ ಇರೋಲ್ಲ ಎಂದು ಎಚ್ಚರಿಕೆ ನೀಡಿದರು.

ಶರತ್​​ ಬಚ್ಚೇಗೌಡ, ಎಂಟಿಬಿ ನಾಗರಾಜು

ಶರತ್​​ ಬಚ್ಚೇಗೌಡ, ಎಂಟಿಬಿ ನಾಗರಾಜು

  • Share this:
 ಬೆಂಗಳೂರು ಗ್ರಾಮಾಂತರ: ಹೊಸಕೋಟೆ ರಾಜಕೀಯ ( Hoskote Politics) ಮತ್ತಷ್ಟು ಬಿರುಸುಗೊಂಡಿದೆ. ಸಚಿವ ಎಂಟಿಬಿ ನಾಗರಾಜು(MTB Nagaraj), ಶಾಸಕ ಶರತ್​ ಬಚ್ಚೇಗೌಡ (Sharath BacheGowda) ನಡುವಿನ ಜಟಾಪಟಿ ಮತ್ತೊಮ್ಮೆ ಜನರ ಎದುರು ಬಯಲಾಗಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವರು, ಶಾಸಕರು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಮುತ್ಸಂದ್ರ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟನೆ ವೇಳೆ ಶಾಸಕ ಶರತ್ ಬಚ್ಚೇಗೌಡ, ಸಚಿವ ಎಂಟಿಬಿ ನಾಗರಾಜ್  ಟೇಪ್​​​​ ಕಟ್​ ಮಾಡುವ ವಿಚಾರವಾಗಿ ಕ್ಷುಲ್ಲಕವಾಗಿ ನಡೆದುಕೊಂಡಿದ್ದಾರೆ. ಸಚಿವರನ್ನು ಓವರ್​ ಟೇಕ್​ ಮಾಡಿ ಶಾಸಕರು ಟೇಪ್​ ಕಟ್​ ಮಾಡಲು ಮುಂದಾದರು. ಈ ವೇಳೆ ಸಚಿವರಿಗೆ ಗೌರವ ಕೊಡುವಂತೆ ಎಂಟಿಬಿ ನಾಗರಾಜ್ ವಾರ್ನ್ ಮಾಡಿದ್ದಾರೆ. ಕಿರಿದಾದ ಬಾಗಿಲ ಬಳಿ ಇಬ್ಬರೂ ಟೇಪ್​ ಕಟ್​ ಮಾಡಲು ತಾಮುಂದು, ನಾಮುಂದು ಎಂಬಂತೆ ವರ್ತಿಸಿದರು. ರಾಜಕೀಯ ತಿಕ್ಕಾಟ ದೈಹಿತ ತಳ್ಳಾಟಕ್ಕೂ ಕಾರಣವಾಗಿದ್ದು ಸುದ್ದಿಗೆ ಗ್ರಾಸವಾಗಿದೆ.

ಇದನ್ನೂ ಓದಿ: ವಿದ್ಯಾರ್ಥಿಗಳಿಗೆ Saffron Shawl ನೀಡಿದ್ದು ಸಂಘ ಪರಿವಾರ, Modi ದೇಶ ಹಾಳು ಮಾಡಿದ್ರು: Sidddaramaiah ವಾಗ್ದಾಳಿ

ಕೈ ತೋರಿಸಿ ಮಾತಾಡ್ಬೇಡ ಚನ್ನಾಗಿರೋಲ್ಲ

ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಮುತ್ಸಂದ್ರ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟನೆ ವೇಳೆ ಸಚಿವ ಎಂಟಿಬಿ ನಾಗರಾಜ್ ಮತ್ತು ಶಾಸಕ ಶರತ್ ನಡುವೆ ಗಲಾಟೆ ನಡೆದಿದ್ದು ಇಬ್ಬರೂ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು. ಟೇಪ್​ ಕಟ್​​ ಮಾಡುವಾಗ ಎಂಟಿಬಿ ಅವರನ್ನು ತಳ್ಳಿ ಶಾಸಕರು ಒಳನುಗ್ಗಿದಾಗ ಪರಿಸ್ಥಿತಿ ಕೈ ಮೀರಿತು. ತಳ್ಳಿದ್ದಕ್ಕೆ ಗರಂ ಆದ ಎಂಟಿಬಿ, ತಂದೆ-ಮಗದ ದಬ್ಬಾಳಿಕೆ ಜಾಸ್ತಿ ಆಗುತ್ತಿದೆ ಎಂದರು. ಇದಕ್ಕೆ ಕೋಪದಿಂದಲೇ ಉತ್ತರಿಸಿದ ಶಾಸಕ ಶರತ್​, ಕೈ ತೋರಿಸಿ ಮಾತನಾಡೋದೆಲ್ಲಾ ಚನ್ನಾಗಿ ಇರೋಲ್ಲ ಎಂದು ಎಚ್ಚರಿಕೆ ನೀಡಿದರು. ಇಬ್ಬರ ನಡುವೆ ಪರಸ್ಪರ ಮಾತಿಗೆ ಮಾತು ಬೆಳೆದು ಮಾತಿನ ಚಕಮಕಿ ತಾರಕಕ್ಕೇರಿತು.

ಇಬ್ಬರೂ ಭಾಷಣ ಮಾಡಲಿಲ್ಲ..

ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾರೆ. ಸ್ಥಳದಲ್ಲಿ ಮುಖಂಡರು, ಅಧಿಕಾರಿಗಳು, ಪೊಲೀಸರು ಇಬ್ಬರನ್ನು ಸಮಾಧಾನ ಪಡಿಸಲು ಹರಸಾಹಸ ಪಟ್ಟರು. ಈ‌ ಹಿಂದೆಯೂ ಇದೇ ರೀತಿ ಕಾರ್ಯಕ್ರಮದಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿತ್ತು.ಇಷ್ಟು ಸಾಲದು ಅಂತ ಕಾರ್ಯಕ್ರಮದ ವೇದಿಯಲ್ಲೂ ಇಬ್ಬರೂ ಗಲಾಟೆ ಮಾಡಿಕೊಂಡರು. ನೀವೇ ಮೊದಲು ಮಾತಾಡಿ, ಬೇಡಪ್ಪ ನೀನೇ ಮೊದಲು ಮಾತಾಡು ಎಂದು ಪರಸ್ಪರರ ಮೇಲೆ ಸಿಟ್ಟಿ ಮಾಡಿಕೊಂಡು ಕೊನೆಗೆ ಇಬ್ಬರೂ ಭಾಷಣ ಮಾಡದೆ ತೆರಳಿದ್ದಾರೆ.

ಎಂಟಿಬಿ ಆಕ್ರೋಶ

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಎಂಟಿಬಿ ಉದ್ಘಾಟನೆಗೆ ಈಶ್ವರಪ್ಪ, ಸುಧಾಕರ್ ಬರದಿದ್ದಕ್ಕೆ ನಾನು ಬಂದಿದ್ದೆ. ಸರ್ಕಾರದ ಪರವಾಗಿ ನಾನು ಬಂದಿದ್ದೇನೆ. ಶಾಸಕ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದಾರೆ, ನಾನು ಉದ್ಘಾಟನೆ ಮಾಡಬೇಕಿತ್ತು. ಈ‌ ಜಿಲ್ಲೆಯನ್ನ ನೋಡಲ್ ಜಿಲ್ಲೆಯಾಗಿ ಪಡೆದುಕೊಂಡಿದ್ದೇನೆ. ನಾವು ಕೊಡುವ ಕಾಮಗಾರಿಗಳೆಲ್ಲ ಇವರೇ ಉದ್ಘಾಟಿಸ್ತಿದ್ದಾರೆ. ನಾವು ಮಾಡಿದರೆ ಮಾತ್ರ ಶಿಷ್ಠಾಚಾರ ಅಂತಾರೆ. ಇವರು ಮಾಡಿದ್ರೆ ಶಿಷ್ಠಾಚಾರ ಬರಲ್ವಾ ಎಂದು ಎಂಟಿಬಿ ಪ್ರಶ್ನೆ ಮಾಡಿದ್ರು. ಇವರು ಹಿಂದೆ ಹೇಗೆ ಆಡಳಿತ ಮಾಡಿದ್ದಾರೆ ಜನಕ್ಕೆ ಗೊತ್ತು. ಇದೀಗ ಮತ್ತೆ ಅದನ್ನೆ ಮುಂದುವರೆಸಿದ್ದಾರೆ. ಮುಂದಿನ ದಿನಗಳಲ್ಲಿ ಜನರೆ ಇವರಿಗೆ ಬುದ್ಧಿ ಕಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: Murder: ಹೊರಗಡೆ ಪ್ರೇಮ'ಯೋಗ', ಪ್ರಿಯಕರನ ಜೊತೆ ಪಲ್ಲಂಗ! ಇದು ಪತಿ, ಪತ್ನಿ ಮತ್ತು ಅವನ ಕಥೆ

ಈ ಹಿಂದೆಯೂ ಸರ್ಕಾರಿ ಯೋಜನೆ ಉದ್ಘಾಟನೆ ಸಂಬಂಧ ಸಚಿವರು, ಶಾಸಕರ ಬೆಂಬಲಿಗರು ಹೊಡೆದಾಟ ನಡೆಸಿದ್ದರು. ಕಾಂಗ್ರೆಸ್​ನಲ್ಲಿ ಎಂಟಿಬಿ ನಾಗರಾಜು ನಂತರ ಬಿಜೆಪಿ ತೆರಳಿ ಹೋಗಿ ಸಚಿವರಾಗಿದ್ದಾರೆ. ಇನ್ನು ಶಾಸಕ ಶರತ್​ ಅವರ ತಂದೆ ಬಚ್ಚೇಗೌಡ ಬಿಜೆಪಿಯಿಂದ ಸಂಸದರಾಗಿದ್ದಾರೆ. ವಿರೋಧದ ನಡುವೆಯೂ ಕಳೆದ ಚುನಾವಣೆಯಲ್ಲಿ ಎಂಟಿಬಿ ವಿರುದ್ಧ ಪಕ್ಷೇತರನಾಗಿ ಸ್ಪರ್ಧಿಸಿ ಶರತ್​ ಬಚ್ಚೇಗೌಡ ಶಾಸಕರಾದರೂ. ಶರತ್ ಎದುರು ಎಂಟಿಬಿ ಪರಾಭವಗೊಂಡರು. ನಂತರ ದಿನಗಳಲ್ಲಿ ಶರತ್​ ಬಚ್ಚೇಗೌಡ ಕಾಂಗ್ರೆಸ್​ಗೆ ಸೇರ್ಪಡೆಗೊಂಡರು.
Published by:Kavya V
First published: