ಹಸುಗೂಸು ಮಾರಾಟ ಮಾಡಿದ ಎರಡನೇ ಪತಿ; ಮನೆಗೆಲಸದವಳಿಗೆ ಮೋಸ ಮಾಡಿದ ಮನೆಯೊಡತಿ

ಹದಿನೈದು ವರ್ಷದಿಂದ ಮಗು ಆಗಿರಲಿಲ್ಲ, ಇದೇ ಕಾರಣಕ್ಕೆ ಮಗುವನ್ನ ತೆಗೆದುಕೊಳ್ಳಲಾಯ್ತು ಎಂದು ಹೇಳಿಕೆ ನೀಡಿದ್ದಾರೆ. ಕೋರ್ಟ್ ಅನುಮತಿ ಪಡೆದು ಮಗುವನ್ನ ತಾಯಿಗೆ ಒಪ್ಪಿಸಿ ಕಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಗೆಲಸದವಳ ಮಗು ಮಾರಾಟ ಮಾಡಿದ ಮನೆಯೊಡತಿ

ಮನೆಗೆಲಸದವಳ ಮಗು ಮಾರಾಟ ಮಾಡಿದ ಮನೆಯೊಡತಿ

  • Share this:
ಮನೆ ಕೆಲಸ ಮಾಡುತ್ತಿದ್ದ ಅಮಾಯಕ ಮಹಿಳೆಯ ಮಗುವನ್ನೇ ಮಾರಾಟ ಮಾಡಿದ ನೀಚ ಮನೆಯೊಡತಿಯನ್ನ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ಬಡ ಕುಟುಂಬದಲ್ಲಿನ ಮಹಿಳೆಯರಿಗೆ ಹಣದ ಆಸೆ ತೋರಿಸಿ ಅವರ ಮಕ್ಕಳನ್ನ ಉಪಾಯವಾಗಿ ಪಡೆದುಕೊಂಡು ಮಾರಾಟ ಮಾಡೋದು ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತದೆ. ಎಷ್ಟೇ ಕಡಿವಾಣ ಹಾಕಿದರೂ ಈ ದಂಧೆ ಮಾತ್ರ ಕದ್ದು ಮುಚ್ಚಿ ನಡೆಯುತ್ತಲೇ ಇದೆ.

ಇದರ ಸ್ಪಷ್ಟ ನಿದರ್ಶನವೆಂಬಂತೆ ವಿಲ್ಸನ್ ಗಾರ್ಡನ್ ಪೊಲೀಸರು, ಮಗುವನ್ನ ಮಾರಾಟ ಮಾಡಿದ್ದ ಸ್ವಯಂ ಘೋಷಿತ ಸಮಾಜ ಸೇವಕಿಯನ್ನ ಪರಪ್ಪನ ಅಗ್ರಹಾರಕ್ಕೆ ಕಳಿಸಿದ್ದಾರೆ.

ವಿವೇಕ ನಗರದ ನಿವಾಸಿಯಾದ ಸಂತ್ರಸ್ತೆಯನ್ನು ಕಳೆದ ಎರಡು ವರ್ಷಗಳ ಹಿಂದೆ  ಮದುವೆಯಾಗಿದ್ದ ಪತಿರಾಯ ಬಿಟ್ಟು ಹೋಗಿದ್ದಾನೆ. ಈ ಮಧ್ಯೆ ಮುಬಾರಕ್ ಎಂಬಾತ ಇವಳಿಗೆ ಜೀವನ ಕೊಡ್ತೀನಿ ಎಂದು ಮುಂದೆ ಬಂದಿದ್ದಾನೆ. ಈ ಜೋಡಿಗೆ ಮುದ್ದಾದ ಎರಡು ಗಂಡು ಮಗು ಸಹ ಆಗಿದ್ದವು. ಆದರೆ ಈ ಹಸುಗೂಸನ್ನೇ ಮಾರಾಟ ಮಾಡಿ ಹಣ ಮಾಡೋಕೆ ಮುಬಾರಕ್ ಮುಂದಾಗಿದ್ದ. ಇದಕ್ಕೆ ಪ್ರಚೋದನೆ ಕೊಟ್ಟಿದ್ದು ಶಿರಿನ್  ಕೆಲಸ ಮಾಡುತ್ತಿದ್ದ ಮನೆಯೊಡತಿ ತಬುಸಮ್​ ಬಾನು.

ತಬಸುಮ್​ ಬಾನು ಮನೆಯಲ್ಲಿ ಸಂತ್ರಸ್ತೆ ತುಂಬಾ ವರ್ಷಗಳಿಂದ ಕೆಲಸ ಮಾಡುತ್ತಿದ್ದಳು, ಗರ್ಭವತಿಯಾದ ಸಂತ್ರಸ್ತೆ ಕಷ್ಟದ ಪರಿಸ್ಥಿತಿ ತಿಳಿದಿದ್ದ ತಬಸುಮ್, ಎರಡನೇ ಪತಿ ಮುಬಾರಕ್ ಗೆ ಮಗು ಮಾರಾಟ ಮಾಡಿದರೆ ಸಾಕಷ್ಟು ಹಣ ಬರುತ್ತದೆ ಎಂದು ಬ್ರೈನ್ ವಾಶ್ ಮಾಡಿದ್ದಾಳೆ. ಇತ್ತೀಚೆಗೆ  ಒಂದು ತಿಂಗಳ ಹಸುಗೂಸಿಗೆ ಜ್ವರ ಕಾಣಿಸಿಕೊಂಡಿದೆ, ಆಗ ಉಪಾಯ ಮಾಡಿ ಆಸ್ಪತ್ರೆಗೆ  ಮಗುವನ್ನ ತೋರಿಸಲು ತೆಗೆದುಕೊಂಡು ಹೋಗುವುದಾಗಿ ಹೇಳಿದ ಮುಬಾರಕ್​, ಆ ಮಗುವನ್ನು  ತಬಸುಮ್​ ಕೈಗೆ ಕೊಟ್ಟಿದ್ದಾನೆ.

ಜ್ವರದಿಂದ ಬಳಲುತ್ತಿದ್ದ ಮಗುವನ್ನ ಸಂಬಂಧಿಕರಿಗೆ 1.30 ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗಿದೆ. ಮುಂಗಡವಾಗಿ ಐವತ್ತು ಸಾವಿರ ಹಣ ತಬಸುಮ್​ ಪಡೆದಿದ್ದಾಳೆ. ಮನೆಗೆ ಬಂದ ಮುಬಾರಕ್​ ಬಳಿ ಮಗು ಎಲ್ಲಿ ಎಂದು ಕೇಳಿದ ತಾಯಿಗೆ ಆಸ್ಪತ್ರೆಯಲ್ಲಿದೆ ಎಂದು ಮುಬಾರಕ್ ಕಥೆ ಕಟ್ಟಿದ್ದ. ಆದರೆ ಮಗು ಮಾರಿದ ಹಣವನ್ನ ಮುಬಾರಕ್ ಗೆ ಕೊಡದೆ  ಬಾನು ಸತಾಯಿಸಿದ್ದಾಳೆ.

ಈ ನಡುವೆ ಮತ್ತೊಬ್ಬರಿಗೆ ಅದೇ ಮಗುವಿನ ಪೋಟೋ ತೋರಿಸಿ 4.5 ಲಕ್ಷಕ್ಕೆ ಮಾರಾಟದ ಮಾತುಕತೆ ನಡೆಸಿದ್ದಾಳೆ. ಬೇರೆಯವರು ಹೆಚ್ಚಿನ ಹಣ ಕೊಡ್ತಾರೆ ಎಂದವಳೇ, ಮೊದಲು ಮಗು ಖರೀದಿ ಮಾಡಿದ್ದವರ ಬಳಿ ಹೋಗಿ ಗಲಾಟೆ ಮಾಡಿದ್ದಾಳೆ.

ಈ ವಿಚಾರ ತಿಳಿದ ಪೊಲೀಸರು  ಅನುಮಾನ ಬಂದು ಸ್ಥಳಕ್ಕೆ ಹೋಗಿ  ವಿಚಾರಣೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಸ್ಥಳಕ್ಕೆ ಹೋಗುತ್ತಿದ್ದಂತೆ ಮುಬಾರಕ್  ಪರಾರಿಯಾಗಿದ್ದಾನೆ. ಸದ್ಯ ವಿಲ್ಸನ್ ಗಾರ್ಡನ್ ಪೊಲೀಸರು ತಾಯಿಯನ್ನು​ ಕರೆಸಿ ಮಗುವನ್ನ ರಕ್ಷಿಸಿದ್ದಾರೆ. ಜೊತೆಗೆ ಆರೋಪಿಗಳಾದ ತಬಸುಮ್ ಬಾನು ಹಾಗೂ ಮಗು ಖರೀದಿ ಮಾಡಿದ್ದ ದಂಪತಿಯನ್ನ ಬಂಧಿಸಲಾಗಿದೆ.

ಇದನ್ನೂ ಓದಿ: ಕುಕ್ಕೆ‌, ಧರ್ಮಸ್ಥಳ, ಕಟೀಲು: ಆಗಸ್ಟ್ 30 ರವರೆಗೆ ಸಾರ್ವಜನಿಕರಿಗೆ ಸಿಗುವುದಿಲ್ಲ ಯಾವುದೇ ಸೇವೆ

ಹದಿನೈದು ವರ್ಷದಿಂದ ಮಗು ಆಗಿರಲಿಲ್ಲ, ಇದೇ ಕಾರಣಕ್ಕೆ ಮಗುವನ್ನ ತೆಗೆದುಕೊಳ್ಳಲಾಯ್ತು ಎಂದು ಹೇಳಿಕೆ ನೀಡಿದ್ದಾರೆ. ಕೋರ್ಟ್ ಅನುಮತಿ ಪಡೆದು ಮಗುವನ್ನ ತಾಯಿಗೆ ಒಪ್ಪಿಸಿ ಕಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:HR Ramesh
First published: