ಇನ್ಮುಂದೆ ಯಾರೂ ರೈತರ ಸಾಲ ಮನ್ನಾ ಮಾಡಲ್ಲ; ನಾನು ಮಾಡಿ ಏನೂ ಉಪಯೋಗಕ್ಕೆ ಬರಲಿಲ್ಲ: HD Kumaraswamy

ರಾಜ್ಯದಲ್ಲಿ ಇನ್ಮುಂದೆ ಯಾರೂ ರೈತರ ಸಾಲ ಮನ್ನಾ (Farmers Loan Waiver) ಮಾಡಲ್ಲ. ನಾನು ಮುಖ್ಯಮಂತ್ರಿ ಆಗಿದ್ದಾಗ 25 ಸಾವಿರ ಕೋಟಿ ಸಾಲಮನ್ನಾ ಮಾಡಿದ್ನಲ್ಲ, ಆದರೂ ಏನೂ ಉಪಯೋಗಕ್ಕೆ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಎಚ್​.ಡಿ ಕುಮಾರಸ್ವಾಮಿ.

ಎಚ್​.ಡಿ ಕುಮಾರಸ್ವಾಮಿ.

  • Share this:
ದೇವನಹಳ್ಳಿ: ಸಿಂದಗಿ-ಹಾನಗಲ್​​ ಉಪ ಚುನಾವಣೆಯಲ್ಲಿ (Sindagi-Hanagal By Election) ಜೆಡಿಎಸ್​(JDS) ಹೀನಾಯ ಸೋಲು ಕಂಡ ಬಳಿಕ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ (HD Kumaraswamy) ಮಾತಿನಲ್ಲಿ ವಿಷಾದ ಕಾಣುತ್ತಿದೆ. ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಇನ್ಮುಂದೆ ಯಾರೂ ರೈತರ ಸಾಲ ಮನ್ನಾ (Farmers Loan Waiver) ಮಾಡಲ್ಲ. ನಾನು ಮುಖ್ಯಮಂತ್ರಿ ಆಗಿದ್ದಾಗ 25 ಸಾವಿರ ಕೋಟಿ ಸಾಲಮನ್ನಾ ಮಾಡಿದ್ನಲ್ಲ, ಆದರೂ ಏನೂ ಉಪಯೋಗಕ್ಕೆ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಅದನ್ನ ಹೈನುಗಾರಿಕೆ, ದ್ರಾಕ್ಷಿ, ತೋಟಗಾರಿಕೆ ಬೆಳೆಗಳಿಗೆ ಕೊಟ್ರೆ ಅನುಕೂಲವಾಗುತ್ತೆ. ನಾನು ಸಹ 25 ಹಸುಗಳನ್ನ ಸಾಕಾಣಿಕೆ ಮಾಡಿ ಹೈನುಗಾರಿಕೆಯ ಕಷ್ಟ ಏನು ಅಂತ ತಿಳ್ಕೊಂಡಿದ್ದೀನಿ. ನನಗೆ ಐದು ವರ್ಷ ಸರ್ಕಾರ ಕೊಟ್ರೆ ಯಾವುದೇ ರೈತ ಒಂದು ರೂಪಾಯಿ ಸಾಲ ಮಾಡಲು ಬಿಡಲ್ಲ. ಒಂದು ವೇಳೆ ನಾನು ಅದನ್ನ ಮಾಡದಿದ್ರೆ ಜೆಡಿಎಸ್ ಬಾಗಿಲು ಮುಚ್ಚಿಸುತ್ತೇನೆ ಎಂದು ಶಪಥ ಮಾಡಿದರು.

ಕಲಬುರಗಿಯಲ್ಲಿ ಧರ್ಮಸಿಂಗ್​-ಖರ್ಗೆ ಏನು ಮಾಡಿದ್ದಾರೆ? 

ಇನ್ನೂ ಮುಂದಿನ ಒಂದು ವರ್ಷ ಒಮ್ಮೆ ಅಧಿಕಾರ ಕೊಡಿ ಅಂತ ಹಳ್ಳಿಗಳತ್ತ ಹೋಗ್ತೀನಿ. ಇದು ನನ್ನ ಕೊನೆಯ ಹೋರಾಟ ಎಂದರು. ಧರ್ಮಸಿಂಗ್ 20 ತಿಂಗಳು, ಮಲ್ಲಿಕಾರ್ಜುನ್ ಖರ್ಗೆ ಹಲವು ಬಾರಿ ಅಧಿಕಾರದಲ್ಲಿದ್ರು. ಆದ್ರೆ ಕಲಬುರಗಿ ಜಿಲ್ಲೆ ಮಾತ್ರ ಅಭಿವೃದ್ಧಿಯಾಗಿಲ್ಲ. ಆ ಭಾಗದ ಜನ ಹೇಗೆ ಬದುಕುತ್ತಿದ್ದಾರೂ ಏನೋ ದೇವರೆ ಬಲ್ಲ ಎಂದು ಕಳಕಳಿ ವ್ಯಕ್ತಪಡಿಸಿದರು.

ಎತ್ತಿನಹೊಳೆ ಯೋಜನೆ ಎಲ್ಲಿಗೆ ಬಂತು?

ಬೆಂಗಳೂರಿನ ತೆರಿಗೆ ಹಣವನ್ನ ಉತ್ತರ ಕರ್ನಾಟಕದ ಬಡ ಜನರ ಅಭಿವೃದ್ಧಿಗೆ ಅಂತ ಕೊಡುತ್ತಿದ್ದೇವೆ. ಆದ್ರೆ 100 ರೂಪಾಯಿ ಕೊಟ್ರೆ 70 ರೂಪಾಯಿ ಕೆಲಸಾನೂ ಆಗ್ತಿಲ್ಲ. ಆದರೂ ಬೆಂಗಳೂರಿಗೆ ಬಂದು ಉತ್ತರ ಕರ್ನಾಟಕದ ನಾಯಕರು ನಮಗೆ ಅನ್ಯಾಯ ಆಗ್ತಿದೆ ಅಂತ ಬಾಯಿ ಬಡ್ಕೋತ್ತಾರೆ. 16 ಸಾವಿರ ಕೋಟಿ ಎತ್ತಿನಹೊಳೆಗೆ ಸಿದ್ದರಾಮಯ್ಯ ಕೊಟ್ರು, ಎಲ್ಲಿ ಎತ್ತಿನಹೊಳೆ ನೀರು ಇನ್ನೂ ಸಕಲೇಶಪುರ ದಾಟಿ ಮುಂದಕ್ಕೆ ಬಂದಿಲ್ಲ. ಒಂದು ವರ್ಷದಲ್ಲಿ ಎತ್ತಿನಹೊಳೆ ನೀರು ಹರಿಸುತ್ತಿವಿ ಅಂದ್ರು. ಆದರೆ ಪ್ರಾಜೆಕ್ಟ್ ಆರಂಭವಾದ ಮೇಲೆ ಸಿಎಂ ಆಗಿ ಸದಾನಂದಗೌಡರು, ಜಗದೀಶ್ ಶೆಟ್ಟರ್, ನಾನು, ಯಡಿಯೂರಪ್ಪ ಬಂದೋದ್ರು ಇದೀಗ ಬೊಮ್ಮಾಯಿ ಬಂದು ಕೂತಿದ್ದಾರೆ. 8 ಸಾವಿರ ಕೋಟಿಯಿಂದ ಆರಂಭವಾದ ಪ್ರಾಜೆಕ್ಟ್ 24 ಕ್ಕೆ ಬಂದು ನಿಂತಿದೆ. ಮುಂದೆ 50ಕ್ಕೆ‌ ಹೋಗುತ್ತೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್​ ಸಹವಾಸದಿಂದಲೇ ಎಲ್ಲಾ..

ಜೆಡಿಎಸ್ ಎಲ್ಲಿದೆ, ಮುಗಿದೋಗಿದೆ ಅಂತ ಕೆಲವರು ಹೇಳ್ತಾರೆ. 2018ರ ಚುನಾವಣೆ ನಂತರ ಕಾಂಗ್ರೆಸ್​​ನವರ ಸಹವಾಸ ಮಾಡಿದೆನಲ್ಲ. ಆಗ ಜೆಡಿಎಸ್ ಮುಗಿಸುವ ಕಥೆ ಶುರುವಾಗಿತ್ತು, ಆದ್ರೆ ದೇವರ ಮತ್ತು ಜನರ ಆಶೀರ್ವಾದದಿಂದ ಇಂದಿಗೂ ಇದೆ ಎಂದರು.

ಇದನ್ನೂ ಓದಿ: ಹೆಚ್.ಡಿ.ಕುಮಾರಸ್ವಾಮಿ ಅವರ ಕಾರ್ಯಕ್ರಮಕ್ಕೆ ಗೈರಾಗಿದ್ದೇಕೆ? GT Devegowda ನೀಡಿದ ಉತ್ತರ ಏನು?

ಇನ್ನು ಜಿ.ಟಿ.ದೇವೇಗೌಡರು ಮಾತ್ರವಲ್ಲ ಗುಬ್ಬಿ ಶ್ರೀನಿವಾಸ್ ಸಭೆ ಮಾಡ್ತಿದ್ದಾರೆ. ಅವರೇ ಹೇಳಿದ್ದಾರೆ ಕಾಂಗ್ರೆಸ್​​​ಗೆ ಹೋಗ್ತೀವಿ. ಗುಬ್ಬಿ ಸಭೆಯಲ್ಲಿ ಎಲ್ಲವನ್ನೂ ಜನತೆ ಮುಂದಿಟ್ಟಿದ್ದೇನೆ.ಜನತೆ ಅದರ ತೀರ್ಮಾನ ಮಾಡಲಿದ್ದಾರೆ. ಕಳೆದ ಎರಡು ವರ್ಷಗಳಿಂದ ಮಾಧ್ಯಮಗಳಿಗೆ ನೀಡಿರೋ ಹೇಳಿಕೆ ನೋಡಿ. ಆಗಲೇ ಮಾನಸಿಕವಾಗಿ ಹೋಗಿದ್ರು, ಈಗ ದೈಹಿಕವಾಗಿ ಹೋಗ್ತಿದ್ದಾರೆ. ಎರಡು ಮೂರು ಹೆಸರು ಹೇಳಿದ್ದೀರಿ, ಹೋಗುವವರು ಸಂತೋಷವಾಗಿ ಹೋಗಲಿ ಎಂದರು. ಯಾರು ಬಿಟ್ಟು ಹೋಗ್ತಿದ್ದಾರೆ ಅವರೆಲ್ಲ ಪಕ್ಷದಲ್ಲಿ ಅಭಿವೃದ್ಧಿ ಪಡೆದು, ಬೇರೆ ಬಸ್ ಹತ್ತುತ್ತಿರುವವರು. ಯಾರ್ಯಾರು ಹೋಗ್ತಾರೆ ಅನ್ನೋದು ಎರಡು ವರ್ಷದ ಹಿಂದೆಯೇ ಗೊತ್ತಿದೆ. ನಿಮಗೆ ಇದೆಲ್ಲಾ ಹೊಸ ವಿಚಾರ, ನಂಗೆ ಮೊದಲೇ ಗೊತ್ತಿತ್ತು.
Published by:Kavya V
First published: