Accident: ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ, ಭೀಕರ ಕಾರು ಅಪಘಾತದಲ್ಲಿ ನಾಲ್ವರು ವಿದ್ಯಾರ್ಥಿಗಳ ಸಾವು
Road accident: ಅಪಘಾತದಲ್ಲಿ ಗಾಯಗೊಂಡಿದ್ದ ಸಿರಿಕೃಷ್ಣ ಹಾಗೂ ಅಂಕಿತಾ ರೆಡ್ಡಿಯನ್ನು ಹೊಸಕೋಟೆಯ ಖಾಸಗಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ. ಇನ್ನೂ ಕಾರಿನಲ್ಲಿ ಇದ್ದ ನಾಲ್ಕು ಜನ ಹುಡುಗರು ಬೆಂಗಳೂರಿನ ಗಾರ್ಡನ್ ಸಿಟಿ ಕಾಲೇಜಿನ ವಿದ್ಯಾರ್ಥಿಗಳೆಂದು ಇಬ್ಬರೂ ಹುಡುಗಿಯರು ಬೆಂಗಳೂರು ವಿಲ್ಸನ್ ಗಾರ್ಡನ್ ನಿವಾಸಿಗಳು ಎಂದು ಹೇಳಲಾಗುತ್ತಿದೆ.
ಬೆಳ್ಳಂಬೆಳಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದು, ಅತಿವೇಗದಿಂದ (Over speed) ಚಲಿಸುತ್ತಿದ್ದ ಕಾರು (Car) ಡಿವೈಡರ್ (Divider) ಡಿಕ್ಕಿಯಾಗಿ ಲಾರಿಗೆ (Lorry) ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ (Spot death) ಭೀಕರ ಘಟನೆ ನಡೆದಿದೆ.. ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ಹೊಸಕೋಟೆ (Hosakote) ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ (National Highway 75) ಕೋಲಾರ ರಸ್ತೆ (Kolar Road) ಹಾಗೂ ಅಟ್ಟೂರು ಗೇಟ್ (Atturu gate) ಬಳಿ ನಡೆದಿದೆ.. ಈ ಭೀಕರ ಅಪಘಾತದಲ್ಲಿ (Accident) ಮೂರು ಜನ ಯುವಕರು ಹಾಗೂ ಓರ್ವ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದು (Death) ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ (Injury).. ಮೃತಪಟ್ಟವರನ್ನ ವೈಷ್ಣವಿ (Vaishnavi) ಭರತ್ (Bharath) ಸೀರಿಲ್ (Siril) ವೆಂಕಟ್ (Venkat) ಎಂದು ಗುರುತಿಸಲಾಗಿದೆ.
ಲಾಂಗ್ ಡ್ರೈವ್ ಹೋಗಿ ಬರುವಾಗ ಅಪಘಾತ..
ಇನ್ನು ಮೃತಪಟ್ಟ ವಿದ್ಯಾರ್ಥಿಗಳು ಬೆಂಗಳೂರಿನ ಗಾರ್ಡನ್ ಸಿಟಿ ಕಾಲೇಜ್ ವಿದ್ಯಾರ್ಥಿಗಳಾಗಿದ್ದು, ತಮಿಳುನಾಡು ನೋಂದಣಿಯ TN-77-P-4512 ಕಾರಿನಲ್ಲಿ ಕೋಲಾರದ ನರಸಾಪುರ ಬಳಿಯಿರೂ ಕೆಫೆ ಕಾಫಿ ಡೇ ಗೆ ಲಾಂಗ್ ಡ್ರೈವ್ ಹೋಗಿದ್ದರು. ಲಾಂಗ್ ಡ್ರೈವ್ ಮುಗಿಸಿ ವಾಪಸ್ ಬರುವಾಗ ಅಟ್ಟೂರು ಗೇಟ್ ಬಳಿ ನಿಯಂತ್ರಣ ಕಳೆದುಕೊಂಡ ಕಾರು ಚಾಲಕ ಮೊದಲಿಗೆ ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದಾನೆ..
ಬಳಿಕ ಲಾರಿಗೆ ಡಿಕ್ಕಿಯಾಗಿ ಹಳ್ಳಕ್ಕೆ ಕಾರು ಬಿದ್ದಿದೆ.. ಇನ್ನು ಅಪಘಾತದ ರಭಸಕ್ಕೆ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಸಿರಿಕೃಷ್ಣ ಹಾಗೂ ಅಂಕಿತ ರೆಡ್ಡಿ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ..
ಸದ್ಯ ಅಪಘಾತದಲ್ಲಿ ಗಾಯಗೊಂಡಿದ್ದ ಸಿರಿಕೃಷ್ಣ ಹಾಗೂ ಅಂಕಿತಾ ರೆಡ್ಡಿಯನ್ನು ಹೊಸಕೋಟೆಯ ಖಾಸಗಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ. ಇನ್ನೂ ಕಾರಿನಲ್ಲಿ ಇದ್ದ ನಾಲ್ಕು ಜನ ಹುಡುಗರು ಬೆಂಗಳೂರಿನ ಗಾರ್ಡನ್ ಸಿಟಿ ಕಾಲೇಜಿನ ವಿದ್ಯಾರ್ಥಿಗಳೆಂದು ಇಬ್ಬರೂ ಹುಡುಗಿಯರು ಬೆಂಗಳೂರು ವಿಲ್ಸನ್ ಗಾರ್ಡನ್ ನಿವಾಸಿಗಳು ಎಂದು ಹೇಳಲಾಗುತ್ತಿದೆ...
ಸಂಪೂರ್ಣ ನಜ್ಜು ಗುಜ್ಜಾದ ಕಾರು
ಮೊದಲಿಗೆ ಬೆಂಗಳೂರಿನತ್ತ ಬರ್ತಿದ್ದ ಕಾರು ಬೆಳಗಿನ ಜಾವ ಸುಮಾರು 2:30 ಗಂಟೆಗೆ ಚಾಲಕನ ನಿಯಂತ್ರಣ ತಪ್ಪಿ ಮೊದಲಿಗೆ ರಸ್ತೆ ಮಧ್ಯೆಯ ಡಿವೈಡರ್ ಗೆ ಡಿಕ್ಕಿಯಾಗಿ ಮೇಲಕ್ಕೆ ಹಾರಿದೆ. ನಂತರ ನೂರು ಮೀಟರ್ಗೂ ಅಧಿಕ ದೂರ ಹೆದ್ದಾರಿಯಲ್ಲಿ ಪಲ್ಟಿ ಹೊಡೆದು ಬೆಂಗಳೂರು ಕಡೆಯಿಂದ ಕೋಲಾರದ ಕಡೆಗೆ ಹೋಗ್ತಿದ್ದ AP-07-TH-6898 ಸಂಖ್ಯೆಯ ಲಾರಿಗೆ ಡಿಕ್ಕಿ ಹೊಡೆದು ನಂತರ ಹೆದ್ದಾರಿ ಬದಿಯ ಹಳ್ಳಕ್ಕೆ ಬಿದ್ದಿದೆ.
ಈ ಪರಿಣಾಮ ಕಾರು ಸಂಪೂರ್ಣ ನಜ್ಜು ಗುಜ್ಜಾಗಿ ಜಖಂಗೊಂಡಿದ್ದು ಕಾರಿನಲ್ಲಿದ್ದ ವೆಂಕಟ್, ಸಿರಿಲ್, ವೈಷ್ಣವಿ. ಭರತ್ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಎಂವಿಜೆ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.. ಇನ್ನು ಘಟನೆ ನಡೆದ ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.