• Home
  • »
  • News
  • »
  • state
  • »
  • ಕೆರೆಯಲ್ಲಿ ಮೀನುಗಳ ಮಾರಣಹೋಮ; ಅಕ್ರಮ ಬ್ಯಾಟರಿ ಘಟಕದ ಕೆಮಿಕಲ್ ತ್ಯಾಜ್ಯದಿಂದ ಸಾವು ಶಂಕೆ

ಕೆರೆಯಲ್ಲಿ ಮೀನುಗಳ ಮಾರಣಹೋಮ; ಅಕ್ರಮ ಬ್ಯಾಟರಿ ಘಟಕದ ಕೆಮಿಕಲ್ ತ್ಯಾಜ್ಯದಿಂದ ಸಾವು ಶಂಕೆ

ಮೀನುಗಳ ಮಾರಣಹೋಮ

ಮೀನುಗಳ ಮಾರಣಹೋಮ

Hundreds of Fish Died in Lake: ಕೆರೆ ಮೇಲಿನ ಗುಡ್ಡದ ತಪ್ಪಲಿನ ಸರ್ಕಾರಿ ಜಮೀನು ಮತ್ತು ಖಾಸಗಿ ಜಮೀನುಗಳಲ್ಲಿ ಅಕ್ರಮ ಬ್ಯಾಟರಿ ಘಟಕಗಳು ಇದ್ದು, ಅಲ್ಲಿ ಬಳಕೆಯಾದ ಬ್ಯಾಟರಿಗಳಲ್ಲಿನ ಸಿಸವನ್ನು ಸಂಗ್ರಹಿಸುತ್ತಾರೆ. ಈ ವೇಳೆ ಉತ್ಪತ್ತಿಯಾಗುವ ಕೆಮಿಕಲ್ ತ್ಯಾಜ್ಯವನ್ನು ಮಳೆ ನೀರಿನೊಂದಿಗೆ ಹರಿ ಬಿಟ್ಟಿದ್ದಾರೆ.

ಮುಂದೆ ಓದಿ ...
  • Share this:

ಆನೇಕಲ್ : ಅದು ಅರಣ್ಯದಂಚಿನ ಬೆಟ್ಟ ಗುಡ್ಡಗಳ ನಡುವಿನ ದೊಡ್ಡ ಕೆರೆ . ಆ ಕೆರೆಯ ಮೀನಿಗೆ ಎಲ್ಲಿಲ್ಲದ ಬೇಡಿಕೆ. ಕಳೆದೊಂದು ವಾರದಿಂದ ಉತ್ತಮ ಮಳೆಯಾಗಿದ್ದರಿಂದ ಕೆರೆಯು ಕೆಂಪು ನೀರಿನಿಂದ ತುಂಬಿತ್ತು. ಆದ್ರೆ ಇದ್ದಕ್ಕಿದ್ದಂತೆ ಕೆರೆ ಸ್ಮಶಾನವಾಗಿದೆ. ಸಾವಿರಾರು ಮೀನುಗಳು ಸಾವನ್ನಪ್ಪಿವೆ.  ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಮೈಸೂರಮ್ಮನದೊಡ್ಡಿ ಕೆರೆಯಲ್ಲಿ ಕಂಡ ಕಂಡಲ್ಲಿ ಮೀನುಗಳು ಸತ್ತು ತೇಲುತ್ತಿವೆ. ಮೀನುಗಳ ಸಾವಿನಿಂದ ಕೆರೆ ನೀರು ಗಬ್ಬುನಾರುತ್ತಿದೆ.


ಬನ್ನೇರುಘಟ್ಟ ಅರಣ್ಯಕ್ಕೆ ಹೊಂದಿಕೊಂಡಂತಿರುವ ಈ ಕೆರೆಯ ಮೀನುಗಳು ರುಚಿಗೆ ಹೆಸರುವಾಸಿ. ಹಾಗಾಗಿ ಇಂಡ್ಲವಾಡಿ ಗ್ರಾಮದ ಮಹಾದೇವ್ ಎಂಬುವವರು ಕಳೆದ ಮೂರು ವರ್ಷಗಳಿಂದ  ಗ್ರಾಮ ಪಂಚಾಯ್ತಿ ವತಿಯಿಂದ ಟೆಂಡರ್ ಪಡೆದು ಕಟ್ಲಾ, ಗ್ಲಾಸ್ ಕರ್ಪು, ಕಾಮನ್ ಕರ್ಪು, ಮುರುಗಲ್, ರಘು ಮತ್ತು ಸಿಲ್ವರ್ ಜಾತಿಯ ಮೀನುಗಳನ್ನು ಸಾಕಿದ್ದರು. ಒಂದೊಂದು ಮೀನು ಎರಡರಿಂದ ಮೂರು ಕೆಜಿ ತೂಗುತ್ತಿದ್ದವು. ಮಳೆಗಾಲ ಮುಗಿಯುವ ಹೊತ್ತಿಗೆ ಮೀನು ಮತ್ತಷ್ಟು ಮರಿಗಳನ್ನು ಉತ್ಪತ್ತಿ ಮಾಡುತ್ತವೆ. ಬಳಿಕ ಮಾರಾಟ ಮಾಡುವ ಸಲುವಾಗಿ ಮೂರು ತಿಂಗಳಿಂದ ಮೀನು ಹಿಡಿದಿರಲಿಲ್ಲ. ಆದ್ರೆ ಇದ್ದಕ್ಕಿದ್ದಂತೆ ಸಾವಿರಾರು ಮೀನುಗಳು ಸಾವನ್ನಪ್ಪಿದ್ದು, ಇದೀಗ ಮೀನು ಸಾಕಾಣಿಕೆದಾರನಿಗೆ ಬರ ಸಿಡಿಲು ಬಡಿದಂತಾಗಿದೆ. ಲಕ್ಷಾಂತರ ನಷ್ಟ ಉಂಟಾಗಿದ್ದು, ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಮೀನು ಸಾಕಾಣಿಕೆದಾರ ಮಹಾದೇವ್ ಮನವಿ ಮಾಡಿದ್ದಾರೆ.


ಇನ್ನೂ  ಇಡೀ ಕುಟುಂಬ ಮೀನು ಸಾಕಾಣಿಕೆ ನಂಬಿಕೊಂಡು ಜೀವನ ಸಾಗಿಸುತ್ತಿದ್ದೆವು. ಮಳೆಗಾಲದಲ್ಲಿ ಮೀನುಗಳು ಸಂತಾನೋತ್ಪತ್ತಿ  ಮಾಡುವುದರಿಂದ ಕಳೆದ ಐದಾರು ತಿಂಗಳಿಂದ ಮೀನು ಹಿಡಿದು ಮಾರಾಟ ಮಾಡಿರಲಿಲ್ಲ. ಜೊತೆಗೆ ಇತ್ತೀಚೆಗೆ ಸುಮಾರು ಒಂದು ಲಕ್ಷ ಮೀನು ಮರಿಗಳನ್ನು ಕೆರೆಗೆ ಬಿಡಲಾಗಿತ್ತು. ಅಂದಾಜು ಒಂದೊಂದು ಮೀನು ಎರಡರಿಂದ ಮೂರು ಕೆಜಿ ತೂಗುತ್ತಿತ್ತು. ಆದ್ರೆ ಇದೀಗ ಸಾವಿರಾರು ಮೀನುಗಳು ದಾರುಣವಾಗಿ ಸಾವನ್ನಪ್ಪಿವೆ. ಕೆರೆ ಮೇಲಿನ ಗುಡ್ಡದ ತಪ್ಪಲಿನ ಸರ್ಕಾರಿ ಜಮೀನು ಮತ್ತು ಖಾಸಗಿ ಜಮೀನುಗಳಲ್ಲಿ ಅಕ್ರಮ ಬ್ಯಾಟರಿ ಘಟಕಗಳು ಇದ್ದು, ಅಲ್ಲಿ ಬಳಕೆಯಾದ ಬ್ಯಾಟರಿಗಳಲ್ಲಿನ ಸಿಸವನ್ನು ಸಂಗ್ರಹಿಸುತ್ತಾರೆ. ಈ ವೇಳೆ ಉತ್ಪತ್ತಿಯಾಗುವ ಕೆಮಿಕಲ್ ತ್ಯಾಜ್ಯವನ್ನು ಮಳೆ ನೀರಿನೊಂದಿಗೆ ಹರಿ ಬಿಟ್ಟಿದ್ದಾರೆ.


ಇದನ್ನೂ ಓದಿ: School Reopen: 6ರಿಂದ 8ನೇ ತರಗತಿಗೆ ಶಾಲಾರಂಭ: ಯಾವ ತರಗತಿಗೆ ಯಾವ ರೂಲ್ಸ್? ಸಮಯ, ನಿಯಮಗಳ ಫುಲ್ ಡೀಟೆಲ್ಸ್


ಕೆಮಿಕಲ್ ನೀರು ಕೆರೆ ಸೇರಿ ಮೀನುಗಳು ಸಾವನ್ನಪ್ಪಿವೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಅಕ್ರಮ ಬ್ಯಾಟರಿ ಘಟಕಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಮೀನು ಸಾಕಾಣಿಕೆದಾರ ಮಲ್ಲೇಶ್ ಒತ್ತಾಯಿಸಿದ್ದಾರೆ .  ಒಟ್ನಲ್ಲಿ ಬ್ಯಾಟರಿ ಘಟಕಗಳ ಕೆಮಿಕಲ್ ತ್ಯಾಜ್ಯ ಕೆರೆ ಸೇರಿ ಮೀನುಗಳು ಸಾವನ್ನಪ್ಪಿರುವ  ಆರೋಪ ನಿಜವಾದರೆ ಬನ್ನೇರುಘಟ್ಟ ಅರಣ್ಯದಲ್ಲಿರುವ ಅಪರೂಪವಾದ ವನ್ಯಜೀವಿ ಸಂಕುಲಕ್ಕೆ ಅಪಾಯ ಕಟ್ಟಿಟ್ಟಬುತ್ತಿ. ಇನ್ನಾದರೂ ರಾಜ್ಯ ಪರಿಸರ ಮತ್ತು ಮಾಲಿನ್ಯ ‌ನಿಯಂತ್ರಣ ಮಂಡಳಿ ಅಧಿಕಾರಿಗಳು ಅಕ್ರಮ ಬ್ಯಾಟರಿ ಘಟಕಗಳಿಗೆ ಬ್ರೇಕ್ ಹಾಕಬೇಕಿದೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

Published by:Kavya V
First published: