ಸಚಿವ ಆರ್​​ ಅಶೋಕ್​ ಬಳಿ ಇದ್ದ ಬೆಂಗಳೂರು ಗ್ರಾಮಾಂತರ ಉಸ್ತುವಾರಿಯನ್ನು ಎಂಟಿಬಿಗೆ ನೀಡಿ ಸಿಎಂ ಆದೇಶ

ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಮೇಲೆ ಕಣ್ಣೀಟ್ಟಿದ್ದ ಅವರಿಗೆ ಈ ಹಿಂದೆ ನಿರಾಸೆಯಾಗಿತ್ತು. ಇದೇ ಕಾರಣದಿಂದ ಯಡಿಯೂರಪ್ಪ ಅವರ ವಿರುದ್ಧ ಮುನಿಸಿನ ಹೇಳಿಕೆ ನೀಡುತ್ತಾ, ಮುಖ್ಯಮಂತ್ರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು

ಎಂಟಿಬಿ ನಾಗರಾಜ್.

ಎಂಟಿಬಿ ನಾಗರಾಜ್.

  • Share this:
    ಬೆಂಗಳೂರು (ಜೂ. 23): ಸಿಎಂ ಯಡಿಯೂರಪ್ಪ ನಾಯಕತ್ವದ ಚೇರ್​ ಗಟ್ಟಿಯಾಗುತ್ತಿದ್ದಂತಲೇ ತಮಗೆ ಸರ್ಕಾರ ನೀಡಲು ಬೆಂಬಲಿಸಿದ್ದ ಎಂಟಿಬಿ ನಾಗರಾಜ್​ಗೆ ಭರ್ಜರಿ ಉಡುಗೊರೆ ನೀಡಿ ಆದೇಶ ನೀಡಿದ್ದಾರೆ. ಈ ಹಿಂದೆ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಿಗದಿದ್ದಕ್ಕೆ ತಮ್ಮ  ವಿರುದ್ಧ ಮುನಿಸಿಕೊಂಡಿದ್ದ ಸಚಿವ ಎಂಟಿಬಿ ಅವರ ಆಸೆಯನ್ನು ಪೂರೈಸುವಲ್ಲಿ ಸಿಎಂ ಬಿಎಸ್​ವೈ ಯಶಸ್ವಿಯಾಗಿದ್ದಾರೆ.   ಕಂದಾಯ ಸಚಿವ ಆರ್ ಅಶೋಕ್​ ಬಳಿ ಇದ್ದ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸ್ಥಾನವನ್ನು ಎಂಟಿಬಿ ನಾಗಾರಾಜ್​ ಅವರಿಗೆ ನೀಡಿ ಇಂದು ಸಿಎಂ ಆದೇಶ ಹೊರಡಿಸಿದ್ದಾರೆ. ತತ್​​ಕ್ಷಣದಿಂದಲೇ ಜಾರಿ ಬರುವಂತೆ ಅವರನ್ನು ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವರಾಗಿ ನೇಮಕ ಮಾಡಲಾಗಿದೆ.

    ಸಚಿವ ಸ್ಥಾನದ ಜೊತೆ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಮೇಲೆ ಕಣ್ಣೀಟ್ಟಿದ್ದ ಅವರಿಗೆ ಈ ಹಿಂದೆ ನಿರಾಸೆಯಾಗಿತ್ತು. ಇದೇ ಕಾರಣದಿಂದ ಯಡಿಯೂರಪ್ಪ ಅವರ ವಿರುದ್ಧ ಮುನಿಸಿನ ಹೇಳಿಕೆ ನೀಡುತ್ತಾ, ಮುಖ್ಯಮಂತ್ರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಇದೀಗ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬಂದು ಹೋದ ಮೇಲೆ ಯಡಿಯೂರಪ್ಪ ನಾಯಕತ್ವ ಅಭಾದಿತವಾಗಿರುವ ಹಿನ್ನಲೆ ಈ ಬದಲಾವಣೆ ನಡೆಸಲಾಗಿದೆ. ಸಿಎಂ ಆದೇಶದಂತೆ, ಗ್ರಾಮಾಂತರ ಉಸ್ತುವಾರಿಯಾಗಿ ನೇಮಕಗೊಳಿಸಿ ಸರ್ಕಾರದ ಅಧೀನ ಕಾರ್ಯದರ್ಶಿಗಳ‌ ಆದೇಶ ಹೊರಡಿಸಿದ್ದಾರೆ.

    ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಬಗ್ಗೆ ಸಿಎಂ ಮುಂದೆ ಈ ಹಿಂದೆ ಎಂಟಿಬಿ ಕೋರಿಕೆ ಇಟ್ಟಿದ್ದರು. ಆದರೆ, ಅವರಿಗೆ ಕೋಲಾರ ಜಿಲ್ಲೆ ಉಸ್ತುವಾರಿಯನ್ನು ನೀಡಲಾಗಿತ್ತು. ಈ ನಡೆಗೆ ಎಂಟಿಬಿ ಬೇಸರ ವ್ಯಕ್ತಪಡಿಸಿದ್ದರು. ಇದೀಗ ಸರ್ಕಾರ ರಚನೆಯಲ್ಲಿ ಸಹಕಾರ ನೀಡಿದ ಎಂಟಿಬಿ ನಾಗರಾಜ್​ ಬೇಡಿಕೆ ಈಡೇರಿಸಿದ್ದಾರೆ. ಈ ಮೂಲಕ ವಲಸಿಗ ನಾಯಕರಿಗೆ ಮತ್ತೆ ಸಿಎಂ ಮಣೆಹಾಕಲು ಮುಂದಾಗಿದ್ದಾರೆ.

    ಇದನ್ನು ಓದಿ: ಮುಂಬೈ ದಾಳಿ ಮಾಸ್ಟರ್​ ಮೈಂಡ್​ ಹಫೀಸ್​​ ಸಯೀದ್​ಯ ಲಾಹೋರ್​ ಮನೆ ಬಳಿ ಬಾಂಬ್​ ಸ್ಪೋಟ

    ಸಿಎಂಗೆ ಪತ್ರ ಬರೆದ  ಅಶೋಕ್​

    ತಮ್ಮ ಬಳಿ ಇದ್ದ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸ್ಥಾನವನ್ನು ಎಂಟಿಬಿ ನಾಗರಾಜ್​ಗೆ ನೀಡಿರುವ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಸಚಿವ ಆರ್​ ಅಶೋಕ್​, ಈ ಬದಲಾವಣೆಗೆ ತಮ್ಮದೇನು ಅಭ್ಯಂತರವೇನೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಎಂಟಿಬಿ ನಾಗರಾಜ್ ಅವರು ನನ್ನನ್ನು ಭೇಟಿಯಾಗಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿಯನ್ನು ನಿರ್ವಹಿಸುವುದಾಗಿ ಕೇಳಿ ಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಸಚಿವರ ಕೋರಿಕೆಯಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿಯನ್ನು ಎಂಟಿಬಿ ನಾಗರಾಜ್ ಅವರಿಗೆ ನೀಡಿರುತ್ತೇನೆ. ಈ ಬಗ್ಗೆ ಯಾವುದೇ ಆಕ್ಷೇಪಣೆ ಇಲ್ಲ ಎಂದು ತಿಳಿಸಿದ್ದಾರೆ.

    ತ್ಯಾಗ ಅಲ್ಲ

    ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್​ ಅಶೋಕ್​, ಎಂಟಿಬಿ ನಾಗರಾಜ್ ಅವರನ್ನು ಪಕ್ಷಕ್ಕೆ ಕರೆತಂದಿದ್ದೇ ನಾನು. ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸ್ಥಾನ ಕೊಡಿ ಎಂದು ಮನವಿ ಮಾಡಿದ್ದರು. ಅವರಿಗೆ ನನ್ನ ಬಳಿ ಇದ್ದ ಉಸ್ತುವಾರಿ ಸ್ಥಾನ ಕೊಡುವಂತೆ ಸಿಎಂಗೆ ಪತ್ರ ಬರೆದಿದ್ದೆ. ನನ್ನ ವಿನಂತಿಯಂತೆ ಸಿಎಂ ಕೊಟ್ಟಿದ್ದಾರೆ. ಇದನ್ನು ಸ್ವಾಗತಿಸುತ್ತೇನೆ. ಇದರಲ್ಲಿ ನನ್ನ ತ್ಯಾಗದ ಪ್ರಶ್ನೆ ಬರುವುದಿಲ್ಲ. ಸಿಎಂ ಅವರು ಬೆಂಗಳೂರು ಉಸ್ತುವಾರಿ ಇದ್ದಾರೆ. ಅವರೇ ಮುಂದುವರಿಯಲಿ ಎಂದರು.

    ಕಾಂಗ್ರೆಸ್​ ವಿರುದ್ಧ ಹರಿಹಾಯ್ದ ಅಶೋಕ್​

    ಇದೇ ವೇಳೆ ಕಾಂಗ್ರೆಸ್​ ವಿರುದ್ಧ ಹರಿಹಾಯ್ದ ಅವರು, ದೇಶದಲ್ಲಿ ಎ, ಬಿ, ಸಿ ಕಾಂಗ್ರೆಸ್ ಇದೆ. ಕರ್ನಾಟಕದಲ್ಲಿ ಇದೀಗ ಡಿ ಮತ್ತು ಎಸ್ ಕಾಂಗ್ರೆಸ್ ಆರಂಭ ಆಗಿದೆ. ಸಿಎಂ ಸ್ಥಾನ ಚರ್ಚೆ ಕೂಸು ಹುಟ್ಟು ಮೊದಲೇ ಕುಲಾವಿ ಎಂಬಂತಾಗಿದೆ. ಯಾರ ಕೈ ಮೇಲೆ ಯಾರದ್ದು ಕೆಳಗಡೆ ಎಂದು ನಿರ್ಧಾರ ಆಗುವ ಸಮಯ ಬಂದಿದೆ. ಕಾಂಗ್ರೆಸ್ ಹೈ ಕಮಾಂಡ್ ವೀಕ್ ಆಗಿದೆ ಆ ಕಾರಣಕ್ಕೆ ಸಿದ್ದರಾಮಯ್ಯ ಮುಂದಿನ ಸಿಎಂ ಹೌದೋ ಅಲ್ಲವೋ ಎಂದು ಹೇಳಲು ಆಗುತ್ತಿಲ್ಲ. ಹಲವು ಶಾಸಕರು ಸಿದ್ದರಾಮಯ್ಯ ಆಗಲಿ ಎನ್ನುತ್ತಿದ್ದಾರೆ. ಆದರೆ, ಬಿಜೆಪಿಯಲ್ಲಿ ಇಂತಹ ಪರಿಸ್ಥಿತಿ ಇಲ್ಲ. ನಮ್ಮ ಪಕ್ಷದಿಂದ ಮುಂದೆ ಯಾರು ಮುಂದಿನ ಸಿಎಂ ಎಂಬುವುದನ್ನು ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದರು.
    Published by:Seema R
    First published: