BWSSB: ನಿಮ್ಮ ಏರಿಯಾದಲ್ಲಿ ನೀರಿನ ಸಮಸ್ಯೆ ಇದ್ಯಾ? ಅಧಿಕಾರಿಗಳು ಮನೆಗೆ ಬರ್ತಾರೆ, ಅವರಿಗೆ ಹೇಳಿ..!

Water Adala:ಜನರ ಸಮಸ್ಯೆ ಆಲಿಸಲು ಜನರ ಬಳಿಗೆ ಹೋಗಲು ನಿರ್ಧಾರ ಮಾಡಿರುವ ಬೆಂಗಳೂರು ನೀರು ಸರಬರಾಜು ಮಂಡಳಿ ತನ್ನ ಮಂಡಳಿಯ ವಿವಿಧ ಉಪವಿಭಾಗಗಳಲ್ಲಿ ನೀರಿನ ಅದಾಲತ್ ನಡೆಸಲು ತೀರ್ಮಾನ ಮಾಡಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ನಗರದಲ್ಲಿ ಹಲವು ವಿಭಾಗಗಳನ್ನು(Division) ಹೊಂದಿದ್ದು ಅವುಗಳನ್ನು ಪೂರ್ವ ಮತ್ತು ಪಶ್ಚಿಮ(East and West) ವಲಯಗಳಾಗಿ ವಿಂಗಡಿಸಿದೆ. ಈ ವ್ಯಾಪ್ತಿಯಲ್ಲಿ 110 ಹಳ್ಳಿಗಳನ್ನು(Village) ಒಳಗೊಂಡು ನಗರದಲ್ಲಿನ(City) 12.9 ಲಕ್ಷ ಜನಸಂಖ್ಯೆಗೆ ಬಿಡಬ್ಲ್ಯುಎಸ್ ಎಸ್ ಬಿ ಪ್ರಸ್ತುತ ನಗರಕ್ಕೆ ಪ್ರತಿದಿನ 1,450 ದಶಲಕ್ಷ ಲೀಟರ್ ಕಾವೇರಿ ನೀರನ್ನು(Carvery Water) ಈ ಮೆಟ್ರೊಪಾಲಿಟನ್ ಸಿಟಿಗೆ ಕುಡಿಯುವ ನೀರನ್ನು ಪೂರೈಕೆ ಮಾಡುತ್ತಿದೆ. ಅಂದ್ರೆ ಅನಧಿಕೃತವಾಗಿ ಕಾವೇರಿ ನೀರಿನ ಪೂರೈಕೆ ಸಂಪರ್ಕ ಪಡೆದಿರುವವರ ಸಂಖ್ಯೆ ಹೆಚ್ಚಳವಾಗಿದೆ. ಹೀಗಾಗಿ ಅದೆಷ್ಟೋ ಕಡೆ ಸರಿಯಾದ ಸಮಯಕ್ಕೆ ಕಾವೇರಿ ನೀರು ಲಭಿಸದೇ ಜನರು ಪರದಾಟ ನಡೆಸುತ್ತಿದ್ದಾರೆ. ಹೀಗಾಗಿ ಜನಸಾಮಾನ್ಯರ ಸಮಸ್ಯೆ ಅರ್ಥಮಾಡಿಕೊಂಡಿರುವ ಬೆಂಗಳೂರು ಜಲಮಂಡಳಿ ತನ್ನ ವಲಯಗಳಿಗೆ ಭೇಟಿ ನೀಡಿ ಯಾವ ಯಾವ ಪ್ರದೇಶದಲ್ಲಿ ಏನು ಸಮಸ್ಯೆ ಇದೆ ಎಂದು ಗ್ರಾಹಕರನ್ನು ಕೇಳಿ ತಿಳಿದುಕೊಳ್ಳಲು ಮುಂದಾಗಿದೆ.

  ಜನಸಾಮಾನ್ಯರ ಕುಂದುಕೊರತೆಯನ್ನು ಆಲಿಸಲು ಮುಂದಾದ ಜಲಮಂಡಳಿ

  ಪ್ರಸ್ತುತ ಬೆಂಗಳೂರಿನಲ್ಲಿ ಜಲಮಂಡಳಿ ಬಗ್ಗೆ ಸಾರ್ವಜನಿಕರು ಸಾಕಷ್ಟು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.. ಕೆಲವು ಕಡೆ ಸರಿಯಾದ ಸಮಯಕ್ಕೆ ನೀರು ಬರುತ್ತಿಲ್ಲ.. ನೀರಿನ ದರ ಏರಿಕೆಯಾಗಿದೆ. ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿ ವಿಳಂಬವಾಗುತ್ತಿದೆ.

  ಸರಿಯಾಗಿ ನಲ್ಲಿ ಸಂಪರ್ಕ ಬಂದಿಲ್ಲ.. ಗೃಹ ಬಳಕೆಗೂ ನೀರು ಸಿಗುತ್ತಿಲ್ಲ ಹೀಗೆ ನಾನಾ ರೀತಿಯ ದೂರಗಳನ್ನು ಪ್ರತಿನಿತ್ಯ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕೇಳುತ್ತಲೇ ಇದೆ. ಹೀಗಾಗಿ ಜನರ ಸಮಸ್ಯೆ ಆಲಿಸಲು ಜನರ ಬಳಿಗೆ ಹೋಗಲು ನಿರ್ಧಾರ ಮಾಡಿರುವ ಬೆಂಗಳೂರು ನೀರು ಸರಬರಾಜು ಮಂಡಳಿ ತನ್ನ ಮಂಡಳಿಯ ವಿವಿಧ ಉಪವಿಭಾಗಗಳಲ್ಲಿ ನೀರಿನ ಅದಾಲತ್ ನಡೆಸಲು ತೀರ್ಮಾನ ಮಾಡಿದೆ.

  ಇದನ್ನೂ ಓದಿ: ಬಿಳಿಗುಂಡ್ಲು ಜಲಮಾಪನಾ ಕೇಂದ್ರ ಸ್ಥಳಾಂತರ ಹಾಗೂ ಜಂಟಿ ಸರ್ವೆಗೆ ಹೆಚ್ಚಿದ ಒತ್ತಡ

  ಜನವರಿ 27ರಂದು ವಿವಿಧ ಭಾಗಗಳಲ್ಲಿ ನೀರಿನ ಅದಾಲತ್..

  ಜನವರಿ 27ರ ಬೆಳಗ್ಗೆ 9.30 ರಿಂದ 11ಗಂಟೆಯವರೆಗೆ ದಕ್ಷಿಣ,ಆಗ್ನೇಯ, ಪಶ್ಚಿಮ, ನೈರುತ್ಯ,ಪೂರ್ವ, ವಾಯುವ್ಯ ಈಶಾನ್ಯ ಮತ್ತು ಉತ್ತರ ವಿಭಾಗಗಳಲ್ಲಿ, ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ, ನೀರಿನ ಬೆಲೆ ಏರಿಕೆ ಸೇರಿ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮುಂದಾಗಿದೆ.

  ಈ ಪ್ರದೇಶಗಳಲ್ಲಿ ಜಲಮಂಡಳಿಯಿಂದ ನೀರಿನ ಅದಾಲತ್

  1) ದಕ್ಷಿಣ ಉಪ ವಿಭಾಗ 2: ದಕ್ಷಿಣ ಉಪ ವಿಭಾಗ 2ರಲ್ಲಿ ಕೂಡ್ಲು ಹಾಗೂ ಬೇಗೂರು ಗೆ ಸಂಬಂಧಪಟ್ಟ ನೀರಿನ ಅದಾಲತ್ ಅನ್ನು, ಸೆಂಟ್ರಲ್ ಜೈಲು ರಸ್ತೆ ಕೂಡ್ಲು ಜಿ ಎಲ್ ಕೂಡ್ಲು ವಿನಲ್ಲಿ ಜಲಮಂಡಳಿ ನಡೆಸಲಿದೆ.

  2) ಆಗ್ನೇಯ ಉಪವಿಭಾಗ 5: ಆಗ್ನೇಯ ಉಪ ವಿಭಾಗ ಐದರಲ್ಲಿ ಜೆಪಿನಗರ 1 ಹಾಗೂ 3ನೇ ಹಂತ, ಜಯನಗರ 4ನೇ ಟಿ ಬ್ಲಾಕ್, ಜಯನಗರ ನಾಲ್ಕನೇ ಬ್ಲಾಕ್, ಹೊಂಬೆಗೌಡ ನಗರ ಬೈರಸಂದ್ರ ನೀರಿನ ಅದಾಲತ್ ಸಮಸ್ಯೆಯನ್ನು ಜಯನಗರದಲ್ಲಿರುವ ಕಪಿಲಾ ಭವನದಲ್ಲಿ ಜಲಮಂಡಳಿ ನಡೆಸಲಿದೆ.

  3) ಪಶ್ಚಿಮ ವಿಭಾಗ 1: ಪಶ್ಚಿಮ ವಿಭಾಗ 1ರಲ್ಲಿ ಲಿಂಗಧೀರನಹಳ್ಳಿ ಹೆಮ್ಮಿಗೆಪುರ, ಬನಶಂಕರಿ ಆರನೇ ಹಂತದ ನೀರಿನ ಸಮಸ್ಯೆಗಳನ್ನು ಆಲಿಸಲು ಲಿಂಗಧೀರನಹಳ್ಳಿಯ ರಾಘವೇಂದ್ರ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಜಲಮಂಡಳಿ ನೀರಿನ ಅದಾಲತ್ ನಡೆಸಲಿದೆ..

  4) ನೈರುತ್ಯ ವಿಭಾಗ 4: ಬನಗಿರಿ ನಗರ, ಬಿಎಸ್ ಕೆ, ಕುಮಾರಸ್ವಾಮಿ ಲೇಔಟ್ 1 ಮತ್ತು 2ನೇ ಹಂತ, ಇಸ್ರೋ ಲೇಔಟ್, ಪೂರ್ಣಪ್ರಜ್ಞಾ ಲೇಔಟ್ ನ ನೀರಿನ ಸಮಸ್ಯೆಗಳನ್ನು, ಬನಶಂಕರಿ ಮೂರನೇ ಹಂತದ ಒಂದನೇ ಮುಖ್ಯರಸ್ತೆಯ ಬನಗಿರಿ ವಾಟರ್ ಟ್ಯಾಂಕ್ ಸಮೀಪ ಬೆಂಗಳೂರು ಜಲಮಂಡಳಿ ನೀರಿನ ಅದಾಲತ್ ನಡೆಸಲಿದೆ.

  5) ಪೂರ್ವ ವಿಲೇಜ್ 3: ಅರಳೂರು, ದೊಡ್ಡಕನಹಳ್ಳಿ ಕಸವನಹಳ್ಳಿ ಗೆ ಸಂಬಂಧಪಟ್ಟಂತೆ,ಸೆಂಟ್ರಲ್ ಜೈಲು ರಸ್ತೆ ಕೂಡ್ಲು ಜಿ ಎಲ್ ಆರ್ ಕೂಡ್ಲುವಿನ ಮರಳೂರು ರಸ್ತೆಯಲ್ಲಿ ಬೆಂಗಳೂರು ಜಲಮಂಡಳಿ ನೀರಿನ ಅದಾಲತ್ ನಡೆಸಲಿದೆ.

  6)ಪೂರ್ವ ವಿಲೇಜ್ 1: ಐ ಎಸ್ ಪಿ ಎಸ್, ಹೊರಮಾವು ಪ್ರಾಚೀನ ಕಲ್ಲಿನ ನೀರಿನ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ಹೊರಮಾವಿನ ಬಂಜಾರ ಲೇಔಟ್ ನ ಎಸ್ಟಿಪಿ ಆವರಣದಲ್ಲಿ ನೀರಿನ ಅದಾಲತ್ ನಡೆಯಲಿದೆ.

  7) ವಾಯುವ್ಯ 5: ಎಚ್ಎಂಟಿ ಪೀಣ್ಯ,ದಾಸರಹಳ್ಳಿ ಪೀಣ್ಯ ಅಂಗ ಧೀರನ ಹಳ್ಳಿ, ಪಂದರಹಳ್ಳಿ ಅಂದ್ರಳ್ಳಿ ಯಾ ನೀರಿನ ಅದಾಲತ್, ಪೀಣ್ಯ ಎರಡನೆಯ ಹಂತದ ಶ್ರೀರಾಮ ಡಿಲಕ್ಸ್ ಹೋಟೆಲ್ ಹಿಂಭಾಗ ನಡೆಯಲಿದೆ.

  8) ಈಶಾನ್ಯ 3: ಆರ್ ಟಿ ನಗರ ಕಾವಲಭೈರಸಂದ್ರ ಗಂಗಾನಗರ, ಆನಂದನಗರ ಮನೋರಾಯನ ಪಾಳ್ಯದ ನೀರಿನ ಕುಂದು ಕೊರತೆಗಳ ಸಭೆ ಆರ್ ಟಿ ನಗರದ P&T ಕಾಲೋನಿಯಲ್ಲಿ ನಡೆಯಲಿದೆ

  9) ಉತ್ತರ 1: ಸಹಕಾರನಗರ ಜಕ್ಕೂರು ಕೆಂಪಾಪುರ ಕಾಫಿ ಬೋರ್ಡ್ ಲೇಔಟ್ ನಲ್ಲಿನ ನೀರಿನ ಸಮಸ್ಯೆಗಳ ಕುರಿತು ತಿಳಿಯಲು ಸಹಕಾರನಗರ ಎಂಟನೇ ಮುಖ್ಯರಸ್ತೆಯ ಡಿ ಬ್ಲಾಕ್ ನಲ್ಲಿ ಬೆಂಗಳೂರು ಜಲಮಂಡಳಿ ನೀರಿನ ಅದಾಲತ್ ನಡೆಸಲಿದೆ.

  ಇದನ್ನೂ ಓದಿ: ಇಂದೂ ಸಹ ಬೆಂಗಳೂರಿನಲ್ಲಿ ವಿದ್ಯುತ್ ವ್ಯತ್ಯಯ- ಈ ಏರಿಯಗಳಲ್ಲಿ ಪವರ್ ಕಟ್​

  ಇನ್ನು ಬೆಂಗಳೂರಿನಲ್ಲಿ ಪ್ರತಿನಿತ್ಯ ಕಾವೇರಿ ನೀರು ನಿರ್ವಹಣೆ ಹಾಗೂ ಪೂರೈಕೆಗೆ ಸಂಬಂಧಿಸಿದಂತೆ ಪ್ರತಿನಿತ್ಯ ದೂರುಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 1916ಕ್ಕೆ ಕರೆಮಾಡಿ ದೂರುಗಳನ್ನು ಸಲ್ಲಿಸಬಹುದು.ಅಥವಾ 8762228888ಗೆ ಸಂದೇಶ ಕಳಿಸುವ ಮೂಲಕ ದೂರನ್ನು ಸಲ್ಲಿಸಬಹುದು.

  ಇದು ಬೆಂಗಳೂರು ಜಲ ಮಂಡಳಿ ತಿಳಿಸಿದೆ.. ಇನ್ನು ಬಹುಮುಖ್ಯವಾಗಿ ಅದಾಲತ್ ಸೌಲಭ್ಯವನ್ನು ಬಳಸಿಕೊಳ್ಳಲು ಸಭೆಗೆ ಹಾಜರಾಗುವವರು ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಬೇಕು ಎಂದು ಬೆಂಗಳೂರು ಜಲಮಂಡಳಿ ನಿರ್ದೇಶನ ನೀಡಿದೆ
  Published by:ranjumbkgowda1 ranjumbkgowda1
  First published: