Power Cut: ಇಂದೂ ಸಹ ಬೆಂಗಳೂರಿನ ಹಲವೆಡೆ ಪವರ್ ಕಟ್, ಯಾವ್ಯಾವ ಏರಿಯಾ? ಇಲ್ಲಿದೆ ಲಿಸ್ಟ್​

Bescom: ಡಿಸೆಂಬರ್ 31ರಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಕಮಲಾನಗರ ಮುಖ್ಯರಸ್ತೆ, ಗೃಹಲಕ್ಷ್ಮಿ ಲೇಔಟ್ 2ನೇ ಹಂತ, ಟಿಆರ್ ನಗರ, ಕೆಇಬಿ ಕ್ವಾರ್ಟರ್ಸ್ ಬಳಿ, ಬಾಲಶಾಪಲ್ಲಿಯ ರಸ್ತೆ, ವಿದ್ಯಾಪೀಠ ರಸ್ತೆ, ಟಿಜಿ ಪಾಳ್ಯ ಮುಖ್ಯರಸ್ತೆ, ಆಂಧ್ರಹಳ್ಳಿ ಮೈಲಾಸಂದ್ರದ ಕೆಲವು ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೆಂಗಳೂರಿಗರಿಗೆ(Bengaluru)ಪ್ರತಿನಿತ್ಯ ಇರುವ ಹಲವು ಸಮಸ್ಯೆಗಳ(Problems)ಜೊತೆ ವಿದ್ಯುತ್ ಕಡಿತ(Lower Cut)ಸಂಪರ್ಕ ಸಮಸ್ಯೆಯು ದೊಡ್ಡ ತೊಂದರೆಯಾಗಿ ಪರಿಣಮಿಸಿದೆ.. ಈಗಾಗಲೇ ಒಂದಲ್ಲ ಒಂದು ಕಾರಣ ಹೇಳಿ ಪ್ರತಿನಿತ್ಯ ಬೆಂಗಳೂರಿನ ಹಲವಾರು ಪ್ರದೇಶಗಳಲ್ಲಿ ಬೆಸ್ಕಾಂ(BESCOM)ವಿದ್ಯುತ್ ಕಡಿತ ಮಾಡುತ್ತಲೇ ಇದೆ.. ಹೀಗಾಗಿ ಎಷ್ಟೋ ಜನರು ತಮ್ಮ ಹಲವು ಅಗತ್ಯಗಳನ್ನು ಪೂರೈಕೆ ಮಾಡಿಕೊಳ್ಳಲಾಗದ ಸ್ಥಿತಿಯಲ್ಲಿ ಇದ್ದಾರೆ.. ಅದರಲ್ಲೂ ವರ್ಕ್ ಫ್ರಮ್ ಹೋಮ್(Work From Home )ಎಂದು ಕಾರ್ಯ ನಿರ್ವಹಣೆ ಮಾಡುತ್ತಿರುವ ಜನರು ಪ್ರತಿನಿತ್ಯ ವಿದ್ಯುತ್ ಕಡಿತವಾಗುತ್ತಿರುವುದಕ್ಕೆ ತೊಂದರೆಗೆ ಒಳಗಾಗಿದ್ದಾರೆ.. ಇದು ಸಾಲದು ಎಂಬಂತೆ ರಾಜ್ಯದಲ್ಲಿ ತೀವ್ರ ಚಳಿ (Cold)ಶುರುವಾಗಿದ್ದು, ಜನರು ಮನೆಯಿಂದ(Home) ಹೊರ ಬರಲಾರದೆ ಸಂಕಷ್ಟ ಪಡುತ್ತಿದ್ದಾರೆ. ಹೀಗಾಗಿ ವಾರಾಂತ್ಯದ(weekend) ವೇಳೆಯಲ್ಲಿ ಕುಟುಂಬಸ್ಥರು(Family) ಜೊತೆಗೆ ಕುಳಿತು ಮನೆಯಲ್ಲಿ ಕಾಲ ಕಳೆಯುತ್ತಾ ಟಿವಿ(TV) ನೋಡಬೇಕು ಎಂದುಕೊಳ್ಳುತ್ತಿರುವವರಿಗೂ ಬೆಸ್ಕಾಂ(BESCOM) ವಿದ್ಯುತ್ ಕಡಿತ ಮಾಡುತ್ತಿರುವುದು ದೊಡ್ಡ ರಗಳೆಯಾಗಿದೆ.ಅಲ್ಲದೆ ಡಿಸೆಂಬರ್(December) 31ರಂದು ಬೆಂಗಳೂರಲ್ಲಿ ತುರ್ತು ವಿದ್ಯುತ್ ನಿರ್ವಹಣೆ ಕಾಮಗಾರಿ ಇರುವುದರಿಂದ ವಿದ್ಯುತ್ ವ್ಯತ್ಯಯ ಆಗಲಿದೆ.

    ಡಿಸೆಂಬರ್ 31ರಂದು ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

    ದಕ್ಷಿಣ ವಲಯ: ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೆ ಆರ್‌ಬಿಐ ಲೇಔಟ್, ಯಾದವ್ ಫಾರ್ಮ್, ಸಿದ್ದನ ಲೇಔಟ್, ಕರೆಸಂದ್ರ ಬನಶಂಕರಿ 2ನೇ ಹಂತ, ಕಿಡ್ನಿ ಫೌಂಡೇಶನ್, ಆರ್‌ಕೆ ಲೇಔಟ್, ಜೆಪಿ ನಗರ 5ನೇ ಹಂತ, ಕೆಆರ್ ಲೇಔಟ್, ವೆಂಕಟಾದ್ರಿ ಲೇಔಟ್, ದೊರೆಸಾನಿಪಾಳ್ಯ, ಚಿಕ್ಕಲಸಂದ್ರ, ಅಶ್ವಿನಿ ಲೇಔಟ್ ಮತ್ತು ಕೆಆರ್‌ಬಿ ಲೇಔಟ್ ನಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

    ಇದನ್ನೂ ಓದಿ : ಗಡಿನಾಡು ಬೀದರ್​​ನಲ್ಲಿ ಗಢ ಗಢ ನಡುಗಿಸುವ ವಿಪರೀತ ಚಳಿ; ಕನಿಷ್ಠ ಉಷ್ಣಾಂಶ ದಾಖಲು

    ಉತ್ತರ ವಲಯ : ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಮತ್ತಿಕೆರೆ, ಎಸ್‌ಬಿಎಂ ಕಾಲೋನಿ, ನ್ಯೂ ಬಿಇಎಲ್ ರಸ್ತೆ, ಡಾಲರ್ಸ್ ಕಾಲೋನಿ, ಬಂಡೆಪ್ಪ ಗಾರ್ಡನ್, ಟಾಟಾನಗರ, ದೇವಿ ನಗರ, ಲೊಟ್ಟೆಗೋಳಹಳ್ಳಿ, ಎಲ್‌ಕೆಆರ್ ನಗರ, ಜಕ್ಕೂರು ಮುಖ್ಯರಸ್ತೆ, ಬಾಗಲೂರು ಮುಖ್ಯರಸ್ತೆ, ಬಾಬಾ ನಗರ, ವಿನಾಯಕನಗರ ಮತ್ತು ದ್ವಾರಕಾ ನಗರ ಸೇರಿದಂತೆ ಪೀಡಿತ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ.

    ಪಶ್ಚಿಮ ವಲಯ: ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಕಮಲಾನಗರ ಮುಖ್ಯರಸ್ತೆ, ಗೃಹಲಕ್ಷ್ಮಿ ಲೇಔಟ್ 2ನೇ ಹಂತ, ಟಿಆರ್ ನಗರ, ಕೆಇಬಿ ಕ್ವಾರ್ಟರ್ಸ್ ಬಳಿ, ಬಾಲಶಾಪಲ್ಲಿಯ ರಸ್ತೆ, ವಿದ್ಯಾಪೀಠ ರಸ್ತೆ, ಟಿಜಿ ಪಾಳ್ಯ ಮುಖ್ಯರಸ್ತೆ, ಆಂಧ್ರಹಳ್ಳಿ, ವಿದ್ಯಾಮಾನ ನಗರ, ಎಸ್‌ಎಲ್‌ವಿ ಕೈಗಾರಿಕಾ ಪ್ರದೇಶ, ಪೊಲೀಸ್ ಕ್ವಾರ್ಟರ್ ಹೊಸಹಳ್ಳಿ, ಎಸ್‌ಐಆರ್ ಎಂವಿ ಲೇಔಟ್ 1 ಬ್ಲಾಕ್, ಬಿಡಿಎ ಏರಿಯಾ ಬ್ಲಾಕ್ 1, ಉತ್ತರಹಳ್ಳಿ ರಸ್ತೆ, ಕೊಂಚಂದ್ರ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಲೇಔಟ್, ಕುವೆಂಪು ಮುಖ್ಯರಸ್ತೆ, ಗಂಗಾನಗರ, ಮಲ್ಲತ್ತಳ್ಳಿ ಲೇಔಟ್, ದ್ವಾರಕಾಬಸ ರಸ್ತೆ, ಎಸ್ ಐಆರ್ ಎಂವಿ ಲೇಔಟ್ 5ನೇ ಬ್ಲಾಕ್, ಎಸ್ ಐಆರ್ ಎಂವಿ ಲೇಔಟ್ 3ನೇ ಬ್ಲಾಕ್, ಕೆಂಗೇರಿ, ಮೈಲಾಸಂದ್ರದ ಕೆಲವು ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

    ಇದನ್ನೂ ಓದಿ : Puneeth Rajkumar ನಿಧನದ ನಂತರ ಹಾಸನ ಜಿಲ್ಲೆಯಲ್ಲಿ ಹಿಂದೆಂದೂ ಕಾಣದ ದೊಡ್ಡ ಬದಲಾವಣೆ

    ಪೂರ್ವ ವಲಯ: ಬೆಳಗ್ಗೆ 10ರಿಂದ ಸಂಜೆ 4ರವರೆಗೆ . ನಾಗವಾರ ಪಾಳ್ಯ ರಸ್ತೆ, ಎನ್‌ಬಿಸಿ ಲೇಔಟ್ ಮತ್ತು ಬನ್ನಪ ಪಾರ್ಕ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ
    Published by:ranjumbkgowda1 ranjumbkgowda1
    First published: