Power Cut: ಬೆಂಗಳೂರಲ್ಲಿ ಮುಗಿಯದ ವಿದ್ಯುತ್ ವ್ಯತ್ಯಯದ ಕಾಟ, ಇಂದು ಮತ್ತು ನಾಳೆ ಮತ್ತೆ ಪವರ್ ಶಾಕ್

Bescom: ಡಿಸೆಂಬರ್ 30ರಂದು ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೆ ಜೆಪಿ ನಗರ 6 ನೇ ಹಂತ, ಪುಟ್ಟೇನಹಳ್ಳಿ, ಸಂಗಮ್ ಸರ್ಕಲ್, ಎಲ್ಐಸಿ ಕಾಲೋನಿ, ಜೆಪಿ ನಗರ 1 ನೇ ಹಂತ, ಬನಶಂಕರಿ 2 ನೇ ಹಂತ, ಅಂಬೇಡ್ಕರ್ ನಗರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ

ಸಾಂಧರ್ಬಿಕ ಚಿತ್ರ

ಸಾಂಧರ್ಬಿಕ ಚಿತ್ರ

  • Share this:
    ಬೆಂಗಳೂರಿಗರಿಗೆ (Bengaluru) ಪ್ರತಿನಿತ್ಯ ಇರುವ ಹಲವು ಸಮಸ್ಯೆಗಳ (Problems) ಜೊತೆ ವಿದ್ಯುತ್ ಕಡಿತ (Power Cut) ಸಂಪರ್ಕ ಸಮಸ್ಯೆಯು ದೊಡ್ಡ ತೊಂದರೆಯಾಗಿ ಪರಿಣಮಿಸಿದೆ.. ಈಗಾಗಲೇ ಒಂದಲ್ಲ ಒಂದು ಕಾರಣ ಹೇಳಿ ಪ್ರತಿನಿತ್ಯ ಬೆಂಗಳೂರಿನ ಹಲವಾರು ಪ್ರದೇಶಗಳಲ್ಲಿ ಬೆಸ್ಕಾಂ (BESCOM) ವಿದ್ಯುತ್ ಕಡಿತ ಮಾಡುತ್ತಲೇ ಇದೆ.. ಹೀಗಾಗಿ ಎಷ್ಟೋ ಜನರು ತಮ್ಮ ಹಲವು ಅಗತ್ಯಗಳನ್ನು ಪೂರೈಕೆ ಮಾಡಿಕೊಳ್ಳಲಾಗದ ಸ್ಥಿತಿಯಲ್ಲಿ ಇದ್ದಾರೆ.. ಅದರಲ್ಲೂ ವರ್ಕ್ ಫ್ರಮ್ ಹೋಮ್ (Work From Home) ಎಂದು ಕಾರ್ಯ ನಿರ್ವಹಣೆ ಮಾಡುತ್ತಿರುವ ಜನರು ಪ್ರತಿನಿತ್ಯ ವಿದ್ಯುತ್ ಕಡಿತವಾಗುತ್ತಿರುವುದಕ್ಕೆ ತೊಂದರೆಗೆ ಒಳಗಾಗಿದ್ದಾರೆ.. ಇದು ಸಾಲದು ಎಂಬಂತೆ ರಾಜ್ಯದಲ್ಲಿ ತೀವ್ರ ಚಳಿ (Cold) ಶುರುವಾಗಿದ್ದು, ಜನರು ಮನೆಯಿಂದ ಹೊರ ಬರಲಾರದೆ ಸಂಕಷ್ಟ ಪಡುತ್ತಿದ್ದಾರೆ. ಹೀಗಾಗಿ ವಾರಾಂತ್ಯದ ವೇಳೆಯಲ್ಲಿ ಕುಟುಂಬಸ್ಥರು ಜೊತೆಗೆ ಕುಳಿತು ಮನೆಯಲ್ಲಿ ಕಾಲ ಕಳೆಯುತ್ತಾ ಟಿವಿ ನೋಡಬೇಕು ಎಂದುಕೊಳ್ಳುತ್ತಿರುವವರಿಗೂ ಬೆಸ್ಕಾಂ ವಿದ್ಯುತ್ ಕಡಿತ ಮಾಡುತ್ತಿರುವುದು ದೊಡ್ಡ ರಗಳೆಯಾಗಿದೆ. ಅಲ್ಲದೆ ಡಿಸೆಂಬರ್ 30 ಹಾಗೂ 31ರಂದು ಬೆಂಗಳೂರಲ್ಲಿ ತುರ್ತು ವಿದ್ಯುತ್ ನಿರ್ವಹಣೆ ಕಾಮಗಾರಿ ಇರುವುದರಿಂದ ವಿದ್ಯುತ್ ವ್ಯತ್ಯಯ ಆಗಲಿದೆ.

    ಡಿಸೆಂಬರ್ 30ರಂದು ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

    ದಕ್ಷಿಣ ವಲಯ: ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೆ ಜೆಪಿ ನಗರ 6 ನೇ ಹಂತ, ಪುಟ್ಟೇನಹಳ್ಳಿ, ಸಂಗಮ್ ಸರ್ಕಲ್, ಎಲ್ಐಸಿ ಕಾಲೋನಿ, ಜೆಪಿ ನಗರ 1 ನೇ ಹಂತ, ಬನಶಂಕರಿ 2 ನೇ ಹಂತ, ಅಂಬೇಡ್ಕರ್ ನಗರ, ಎಸ್ಪಿ ರಸ್ತೆ, ಉತ್ತರಹಳ್ಳಿ ಮುಖ್ಯ ರಸ್ತೆ, ಜೆಪಿ ನಗರ 2 ನೇ ಹಂತ, 3 ನೇ ಹಂತ, 4 ನೇ ಹಂತ, 15 ನೇ ಹಂತ, ಕ್ರಾಸ್, ಡಾಲರ್ ಲೇಔಟ್, ಮುನಿರೆಡ್ಡಿ ಲೇಔಟ್, ಚಿಕ್ಕಲಸಂದ್ರ ಬಸ್ ನಿಲ್ದಾಣ, ಸಿದ್ದಾಪುರ, ಈಜಿಪುರ, ಮಾರತಹಳ್ಳಿ, ಸಂಜಯನಗರ, ಮಂಜುನಾಥ ನಗರ, ಅಶ್ವಥ್ ನಗರ ಮತ್ತು ಕೆಆರ್‌ಬಿ ಲೇಔಟ್ ನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

    ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಮೋಡ ಕವಿದ ವಾತಾವರಣ: ಈ ಜಿಲ್ಲೆಯಲ್ಲಿ ಮಳೆ ಸಾಧ್ಯತೆ

    ಉತ್ತರ ವಲಯ: ಬೆಳಿಗ್ಗೆ 10 ರಿಂದ ಸಂಜೆ 5.30 ರವರೆಗೆ ನ್ಯೂ ಬಿಇಎಲ್ ರಸ್ತೆ, ಡಾಲರ್ಸ್ ಕಾಲೋನಿ, ಯಶವಂತಪುರ, ಅಂಬೇಡ್ಕರ್ ನಗರ, ಮಾದರಿ ಕಾಲೋನಿ, ಕೆಎನ್ ವಿಸ್ತರಣೆ, ಎಲ್‌ಎನ್ ಕಾಲೋನಿ, ಸಿದ್ದಾರ್ಥ ಸ್ಲಂ, ರಾಮಚಂದ್ರಾಪುರ ಗ್ರಾಮ, ಆದಿತ್ಯ ನಗರ, ಎಂಎಸ್ ಪಾಳ್ಯ ಸೇರಿದಂತೆ ಪೀಡಿತ ಪ್ರದೇಶಗಳಲ್ಲಿ , ಅಕ್ಷಯನಗರ, ದೊಡ್ಡಬೇಟಹಳ್ಳಿ, ಮಾರುತಿ ನಗರ, ಭಾಗ  ವಿದ್ಯಾರಣ್ಯಪುರ, ಬಸವಸಮಿತಿ ನಂಜಪ್ಪ ಸರ್ಕಲ್, ತಿಂಡ್ಲು ಗ್ರಾಮ, ಅಮೃತಹಳ್ಳಿ, ಜಕ್ಕೂರು, ಆನಂದನಗರ, ಎಸ್‌ಬಿಎಂ ಕಾಲೋನಿ, ಕುಂತಿ ಗ್ರಾಮ, ಹೆಬ್ಬಾಳ, ವಿನಾಯಕ ನಗರ, ಶೆಟ್ಟಿಹಳ್ಳಿ ಮತ್ತು ಮಲ್ಲಸಂದ್ರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

    ಪಶ್ಚಿಮ ವಲಯ: ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಉತ್ತರಹಳ್ಳಿ ರಸ್ತೆ, ಕೋನಚಂದ್ರ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಲೇಔಟ್, ಭೂಮಿಕಾ ಲೇಔಟ್, ಪಟಂಗಿರಿ, ಬಿಎಚ್‌ಇಎಲ್ ಲೇಔಟ್, ಶ್ರುಸ್ತಿ ನಗರ, ವೀರಭದ್ರೇಶ್ವರ ನಗರ, ಡಿ ಗ್ರೂಪ್ ಲೇಔಟ್, ಹೊಸಹಳ್ಳಿ ರಸ್ತೆ, ಗಂಟಕನದೊಡ್ಡಿ, ಅಪೂರ್ವ ಲೇಔಟ್, ಡಿ.ಎಸ್.ಎಸ್.ಎಸ್.ಬಿ. ಬಿಇಎಲ್ 1ನೇ ಹಂತ, ಬಿಇಎಲ್ 2ನೇ ಹಂತ ಮತ್ತು ಭವಾನಿನಗರದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

    ಪೂರ್ವ ವಲಯ: ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಜೋಗುಪಾಳ್ಯ ಮುಖ್ಯ ಚಾನಲ್ ರಸ್ತೆ, ಇಲ್ಪೆ ತೋಪು, ವೆಂಕಟೇಶ್ವರ ಲೇಔಟ್, ಬಿಳೇಶಿವಾಲೆ ಮತ್ತು ಕಾಫಿ ಬೋರ್ಡ್ ಲೇಔಟ್ ನಲ್ಲಿ ವಿದ್ಯುತ್ ಕಡಿತವಾಗಲಿದೆ..

    ಡಿಸೆಂಬರ್ 31ರಂದು ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

    ದಕ್ಷಿಣ ವಲಯ: ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೆ ಆರ್‌ಬಿಐ ಲೇಔಟ್, ಯಾದವ್ ಫಾರ್ಮ್, ಸಿದ್ದನ ಲೇಔಟ್, ಕರೆಸಂದ್ರ ಬನಶಂಕರಿ 2ನೇ ಹಂತ, ಕಿಡ್ನಿ ಫೌಂಡೇಶನ್, ಆರ್‌ಕೆ ಲೇಔಟ್, ಜೆಪಿ ನಗರ 5ನೇ ಹಂತ, ಕೆಆರ್ ಲೇಔಟ್, ವೆಂಕಟಾದ್ರಿ ಲೇಔಟ್, ದೊರೆಸಾನಿಪಾಳ್ಯ, ಚಿಕ್ಕಲಸಂದ್ರ, ಅಶ್ವಿನಿ ಲೇಔಟ್ ಮತ್ತು ಕೆಆರ್‌ಬಿ ಲೇಔಟ್ ನಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

    ಉತ್ತರ ವಲಯ : ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಮತ್ತಿಕೆರೆ, ಎಸ್‌ಬಿಎಂ ಕಾಲೋನಿ, ನ್ಯೂ ಬಿಇಎಲ್ ರಸ್ತೆ, ಡಾಲರ್ಸ್ ಕಾಲೋನಿ, ಬಂಡೆಪ್ಪ ಗಾರ್ಡನ್, ಟಾಟಾನಗರ, ದೇವಿ ನಗರ, ಲೊಟ್ಟೆಗೋಳಹಳ್ಳಿ, ಎಲ್‌ಕೆಆರ್ ನಗರ, ಜಕ್ಕೂರು ಮುಖ್ಯರಸ್ತೆ, ಬಾಗಲೂರು ಮುಖ್ಯರಸ್ತೆ, ಬಾಬಾ ನಗರ, ವಿನಾಯಕನಗರ ಮತ್ತು ದ್ವಾರಕಾ ನಗರ ಸೇರಿದಂತೆ ಪೀಡಿತ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ.

    ಇದನ್ನೂ ಓದಿ: ಫ್ಲೈಓವರ್ ಬಂದ್‌ ಆಗಿದ್ದಕ್ಕೆ ಪ್ರಯಾಣಿಕರಿಗಾಗಿ ನಾಗಸಂದ್ರ ಮೆಟ್ರೋ ‘ಬಿ’ ಎಂಟ್ರಿ ಓಪನ್

    ಪಶ್ಚಿಮ ವಲಯ: ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಕಮಲಾನಗರ ಮುಖ್ಯರಸ್ತೆ, ಗೃಹಲಕ್ಷ್ಮಿ ಲೇಔಟ್ 2ನೇ ಹಂತ, ಟಿಆರ್ ನಗರ, ಕೆಇಬಿ ಕ್ವಾರ್ಟರ್ಸ್ ಬಳಿ, ಬಾಲಶಾಪಲ್ಲಿಯ ರಸ್ತೆ, ವಿದ್ಯಾಪೀಠ ರಸ್ತೆ, ಟಿಜಿ ಪಾಳ್ಯ ಮುಖ್ಯರಸ್ತೆ, ಆಂಧ್ರಹಳ್ಳಿ, ವಿದ್ಯಾಮಾನ ನಗರ, ಎಸ್‌ಎಲ್‌ವಿ ಕೈಗಾರಿಕಾ ಪ್ರದೇಶ, ಪೊಲೀಸ್ ಕ್ವಾರ್ಟರ್ ಹೊಸಹಳ್ಳಿ, ಎಸ್‌ಐಆರ್ ಎಂವಿ ಲೇಔಟ್ 1 ಬ್ಲಾಕ್, ಬಿಡಿಎ ಏರಿಯಾ ಬ್ಲಾಕ್ 1, ಉತ್ತರಹಳ್ಳಿ ರಸ್ತೆ, ಕೊಂಚಂದ್ರ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಲೇಔಟ್, ಕುವೆಂಪು ಮುಖ್ಯರಸ್ತೆ, ಗಂಗಾನಗರ, ಮಲ್ಲತ್ತಳ್ಳಿ ಲೇಔಟ್, ದ್ವಾರಕಾಬಸ ರಸ್ತೆ, ಎಸ್ ಐಆರ್ ಎಂವಿ ಲೇಔಟ್ 5ನೇ ಬ್ಲಾಕ್, ಎಸ್ ಐಆರ್ ಎಂವಿ ಲೇಔಟ್ 3ನೇ ಬ್ಲಾಕ್, ಕೆಂಗೇರಿ, ಮೈಲಾಸಂದ್ರದ ಕೆಲವು ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

    ಪೂರ್ವ ವಲಯ: ಬೆಳಗ್ಗೆ 10ರಿಂದ ಸಂಜೆ 4ರವರೆಗೆ. ನಾಗವಾರ ಪಾಳ್ಯ ರಸ್ತೆ, ಎನ್‌ಬಿಸಿ ಲೇಔಟ್ ಮತ್ತು ಬನ್ನಪ ಪಾರ್ಕ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
    Published by:ranjumbkgowda1 ranjumbkgowda1
    First published: