Power Cut: ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

Bescom: ಜನವರಿ 13ರಂದು ದಕ್ಷಿಣ ವಲಯದ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿನಾಯಕ ನಗರ, ಜರಗನಹಳ್ಳಿ, ಕೃಷ್ಣ ದೇವರಾಯ ನಗರ, ವಿಟ್ಲ ನಗರ, ಕುಮಾರಸ್ವಾಮಿ ಲೇಔಟ್, ಸಿದ್ದಾಪುರ, ಸೋಮೇಶ್ವರನಗರ ಈ ಪ್ರದೇಶದಲ್ಲಿ ವಿದ್ಯುತ್‌ ಕಡಿತವಾಗಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕೊರೋನಾ(Corona) ಮಹಾಮಾರಿಯ ಕಾಟ ಅಧಿಕವಾಗಿದೆ. ಮನೆಯಿಂದ(Home) ಆಚೆ ಬರಲು ಭಯ ಪಡುವ ವಾತಾವಾರಣ ನಿರ್ಮಾಣವಾಗಿದೆ. ಇತ್ತ ಕಚೇರಿಗಳಿಗೆ(Office) ಹೋಗಿ ಕೆಲಸ ಮಾಡುವವರು ಕೊರೋನಾ ಹಾಗೂ ಓಮಿಕ್ರಾನ್(Omicron) ಮಹಾಮಾರಿಯಿಂದ ವರ್ಕ್ ಫ್ರಮ್ ಹೋಮ್(Work From Home) ಕೆಲಸವೇ ಬೆಸ್ಟ್ ಎಂದು ಮನೆಯಲ್ಲಿಯೇ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ. ಮಕ್ಕಳು ಸಹ ಶಾಲೆಗೆ ಹೋಗೋದಕ್ಕಿಂತ ಆನ್ ಲೈನ್ ಕ್ಲಾಸ್(Online Class) ಉತ್ತಮ ಎಂದು ಕೊಂಡು ಮನೆಯಲ್ಲಿಯೇ ಆನ್ ಲೈನ್ ಕ್ಲಾಸ್ ಕೇಳಲು ಸಿದ್ದರಾಗಿದ್ದಾರೆ.. ಕೊರೋನಾ ಇರೋದ್ರಿಂದ್ದ ಹೇಗಿದ್ರು ಮನೆಯಿಂದ ಹೊರಗೆ ಹೋಗೋದಕ್ಕೆ ಆಗೋದಿಲ್ಲ ಹೀಗಾಗಿ ಬೆಳಗ್ಗೆ 10 ಗಂಟೆಯೊಳಗೆ ಮನೆ ಕೆಲಸ ಮುಗಿಸಿ ಸೀರಿಯಲ್(Serial) ನೋಡ್ಬೆಕು ಅಂತ ಅಂದುಕೊಂಡು ನಾನಾ ಪ್ಲಾನ್ ಮಾಡಿರೋ ಜನಗಳಿಗೆ ಎಂದಿನಂತೆ ಬೆಸ್ಕಾಂ(BESCOM) ಶಾಕ್ ನೀಡಲು ಮುಂದಾಗಿದೆ. ವಿವಿಧ ಪ್ರದೇಶಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಬೆಂಗಳೂರಿನ(Bengaluru) ನಾಲ್ಕು ಕಡೆಗಳಲ್ಲಿ ಬೆಸ್ಕಾಂ ಇಂದಿನಿಂದ 3 ದಿನಗಳ ಕಾಲ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ(Power Cut) ಮಾಡಲಿದೆ.

  ಜನವರಿ 13ರಂದು ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

  ದಕ್ಷಿಣ ವಲಯ: ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿನಾಯಕ ನಗರ, ಜರಗನಹಳ್ಳಿ, ಕೃಷ್ಣ ದೇವರಾಯ ನಗರ, ವಿಟ್ಲ ನಗರ, ಕುಮಾರಸ್ವಾಮಿ ಲೇಔಟ್, ಸಿದ್ದಾಪುರ, ಸೋಮೇಶ್ವರನಗರ, ಜೆಪಿ ನಗರ 6ನೇ ಹಂತ, ಪುಟ್ಟೇನಹಳ್ಳಿ, ಜೆಪಿ ನಗರ 1ನೇ ಹಂತ, ಶಾಕಾಂಬರಿ ನಗರ, ಸಾರಕ್ಕಿ ಮಾರುಕಟ್ಟೆ, ಬನಶಂಕರಿ 2ನೇ ಹಂತ, ಅಯೋದ್ಯನಗರ, ಜೆಪಿ ನಗರ 5ನೇ ಹಂತ, ಸರ್ವಭೌಮನಗರ, ಅಮರಜ್ಯೋತಿ ವೆಸ್ಟ್ ವಿಂಗ್, ಮಾರತಹಳ್ಳಿ, ಸಂಜಯ್ ನಗರ, ಮಂಜುನಾಥ ನಗರ, ಹೊಂಗಸಂದ್ರ, ಬಿಡಿಎ ಮೊದಲ ಹಂತ, 4ನೇ ಬ್ಲಾಕ್ ಬಿಡಿಎ ಮತ್ತು ನ್ಯಾನಪ್ಪನಹಳ್ಳಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ

  ಇದನ್ನೂ ಓದಿ: ಬೆಂಗಳೂರಲ್ಲಿ Corona ಅಟ್ಟಹಾಸ.. ಮಾರುಕಟ್ಟೆಗಳು ಶಿಫ್ಟ್ ಸೇರಿದಂತೆ ಇಂದಿನಿಂದ ಈ ಎಲ್ಲಾ ರೂಲ್ಸ್ ಜಾರಿ!

  ಪೂರ್ವ ವಲಯ: ಮುನಿಯಪ್ಪ ಲೇಔಟ್, ಉದಯನಗರ, ಕೆಜಿ ಪುರ ಮುಖ್ಯರಸ್ತೆ, ಬಾಣಸವಾಡಿ, ರಾಚೇನಹಳ್ಳಿ, ಶ್ರೀರಾಂಪುರ, ಮೇಸ್ತ್ರಿ ಪಾಳ್ಯ, ಚಾಮುಂಡಿ ಲೇಔಟ್, ಅರ್ಕಾವತಿ ಲೇಔಟ್ ಮತ್ತು ಎಚ್‌ಬಿಆರ್ ಲೇಔಟ್ ಪೀಡಿತ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

  ಉತ್ತರ ವಲಯ: ಗಾಯತ್ರಿನಗರ, ರಾಮಮೋಹನಪುರ, ಮತ್ತಿಕೆರೆ ಮುಖ್ಯರಸ್ತೆ, ಎಸ್‌ಬಿಎಂ ಕಾಲೋನಿ, ನಂಜಪ್ಪ ಲೇಔಟ್, ಕುವೆಂಪು ನಗರ, ಎಂಎಲ್‌ಎ ಲೇಔಟ್, ಕಿರ್ಲೋಸ್ಕರ್ ಲೇಔಟ್, ಶಿವಕೋಟೆ, ಮಾವಳ್ಳಿಪುರ, ಕಾವೇರಿ ನಗರ, ಭುವನೇಶ್ವರಿ ನಗರ, ಹೆಗಡೆ ನಗರ, ಜಕ್ಕೂರು ಮುಖ್ಯರಸ್ತೆ, ಸಂಜಯನಗರ ಮುಖ್ಯರಸ್ತೆ, ಸಂಜಯನಗರ ಮುಖ್ಯರಸ್ತೆ , ಜೆಸಿ ನಗರ ಮತ್ತು ಎಂಇಐ ರಸ್ತೆಯಲ್ಲಿ ಬೆಳಗ್ಗೆ 9.30ರಿಂದ ಸಂಜೆ 6ರವರೆಗೆ ವಿದ್ಯುತ್ ಕಡಿತವಾಗಲಿದೆ.

  ಇದನ್ನೂ ಓದಿ: ಹೈಕೋರ್ಟ್ ತರಾಟೆ ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ.. Mekedatu ಪಾದಯಾತ್ರೆ ತಡೆಯುವಂತೆ ಆದೇಶ

  ಪಶ್ಚಿಮ ವಲಯ: ಬೆಳಗ್ಗೆ 10ರಿಂದ ಸಂಜೆ 7ರವರೆಗೆ ಟಿಜಿ ಪಾಳ್ಯ ಮುಖ್ಯರಸ್ತೆ, ಪೊಲೀಸ್ ಕ್ವಾರ್ಟರ್ಸ್, ವಿಘ್ನೇಶ್ವರ ನಗರ, ವಿದ್ಯಾಮಾನ ನಗರ, ಹನುಮಂತ ನಗರ, ಬಸವೇಶ್ವರ ನಗರ, ವೆಸ್ಟ್ ಆಫ್ ಕಾರ್ಡ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಟೀಚರ್ಸ್ ಕಾಲೋನಿ, ಜೆಸಿ ನಗರ ಸುತ್ತಮುತ್ತ, ಹೊಸಹಳ್ಳಿ, ವಿಜಯನಗರ, ಹಾವನೂರು ವೃತ್ತ, ಅತ್ತಿಗುಪ್ಪೆ, ಶಾರದ ಕಾಲೋನಿ, ಮಂಜುನಾಥ್ ನಗರ, ಅಗ್ರಹಾರ ದಾಸರಹಳ್ಳಿ, ಕೆಎಚ್ ಬಿ ಕಾಲೋನಿ ಮತ್ತು ಗಂಗೊಂಡನ ಹಳ್ಳಿಯಲ್ಲಿ ವಿದ್ಯುತ್‌ ಕಡಿತವಾಗಲಿದೆ
  Published by:ranjumbkgowda1 ranjumbkgowda1
  First published: