HOME » NEWS » State » BENGALURU RURAL BENGALURU RURAL DISTRICT 14 YEAR BOY GREAT ACHIEVEMENT IN YOGA RHHSN CANK

ಯೋಗದಲ್ಲಿ ಅದ್ಭುತ ಸಾಧನೆಗೈದ 14ರ ಪೋರ; ವಿದೇಶಗಳಲ್ಲೂ ಕಮಾಲ್ ಮಾಡಿದ ಕನ್ನಡಿಗ!

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಯಶವಂತ್ ಯೋಗ ಕ್ಷೇತ್ರದಲ್ಲಿ ತನ್ನ ವಯಸ್ಸಿಗೂ ಮೀರಿದ ಸಾಧನೆ ಮಾಡಿದ್ದು,  ಅಂತಾರಾಷ್ಟ್ರೀಯ ಯೋಗ ದಿನದಂದು ನ್ಯೂಸ್ 18 ಕನ್ನಡ ಪುಟ್ಟ ಪೋರ ಯಶವಂತನ ಸಾಧನೆಗೆ ಪ್ರಶಂಸಿಸುತ್ತ ಮತ್ತಷ್ಟು ಸಾಧನೆ ಮಾಡಲಿ ಎಂದು ಹಾರೈಸುತ್ತದೆ.

news18-kannada
Updated:June 21, 2021, 10:47 PM IST
ಯೋಗದಲ್ಲಿ ಅದ್ಭುತ ಸಾಧನೆಗೈದ 14ರ ಪೋರ; ವಿದೇಶಗಳಲ್ಲೂ ಕಮಾಲ್ ಮಾಡಿದ ಕನ್ನಡಿಗ!
ಯೋಗ ಪಟು ಯಶವಂತ
  • Share this:
ಆನೇಕಲ್: ಅವನಿಗೆ ಚಿಕ್ಕಂದಿನಿಂದಲೇ ಯೋಗದ ಮೇಲೆ ಎಲ್ಲಿಲ್ಲದ ಕ್ರೇಜ್. ಅದರಲ್ಲು ಕಾಮನಬಿಲ್ಲು ಸಿನಿಮಾದಲ್ಲಿ ರಾಜಕುಮಾರ್ ಅವರ ಯೋಗ ಕಂಡು ಅವರಂತೆಯೇ ಯೋಗ ಮಾಡುವ ಕನಸು ಕಂಡಿದ್ದ. ಅದಕ್ಕೆ ಪೋಷಕರು ಸಹ ಪ್ರೊತ್ಸಾಹ ನೀಡಿದರು. ಅಂತೆಯೇ ಕಷ್ಟಪಟ್ಟು ನಿರಂತರ ಯೋಗ ಅಭ್ಯಾಸ ಮಾಡುವ ಮೂಲಕ ಇಂದು ಯೋಗದಲ್ಲಿ ಅದ್ಬುತ ಸಾಧನೆ ಮಾಡಿದ್ದಾನೆ ಈ ಬಾಲಕ.

ಕಾಮನಬಿಲ್ಲು ಸಿನಿಮಾದಲ್ಲಿ ವರನಟ ಡಾ ರಾಜ್ ಕುಮಾರ್ ಅವರಂತೆ ಯೋಗದ ವಿವಿಧ ಭಂಗಿಯಲ್ಲಿ ಆಸನಗಳನ್ನು ಮಾಡುತ್ತಿರುವ ಈತನ ಹೆಸರು ಯಶವಂತ್. ಕೇವಲ 14 ವರ್ಷದ ಈ ಪೋರ ಅಪ್ಪಟ ರಾಜ್ ಅಭಿಮಾನಿ. ಕಾಮನಬಿಲ್ಲು ಸಿನಿಮಾದಲ್ಲಿ ಡಾ ರಾಜ್ ಕುಮಾರ್ ಯೋಗ ಮಾಡುವುದನ್ನು ಕಂಡ ತಾನು ಸಹ ಅವರ ರೀತಿಯಲ್ಲಿ ಯೋಗ ಮಾಡಬೇಕು ಎಂದು ಪಟ್ಟು ಬಿಡದೆ ಸಾಧನೆ ಮಾಡಿದ ಛಲದಂಕ ಮಲ್ಲ. ಹೌದು ಕೇವಲ 14 ವರ್ಷಕ್ಕೆ ನಿರಂತರ ಅಭ್ಯಾಸ ಮಾಡುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಯೋಗ ಪಟುವಾಗಿ ಖ್ಯಾತಿ ಗಳಿಸಿದ್ದಾನೆ. ಈಗಾಗಲೇ ಚಿನಾ, ಹಾಂಕಾಂಗ್, ಮಲೇಶಿಯಾ ಥಾಯ್ಲ್ಯಾಂಡ್ ಮುಂತಾದ ದೇಶಗಳಲ್ಲಿ ನಡೆದ ಯೋಗ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಅದ್ಬುತ ಸಾಧನೆ ಮಾಡಿದ್ದಾನೆ. ತಾನು ಕಲಿತ ಯೋಗ ವಿದ್ಯೆಯನ್ನು ಇತರರಿಗೆ ಧಾರೆ ಎರೆಯಲು ಲಾಕ್ ಡೌನ್ ಸಂದರ್ಭದಲ್ಲಿ ಆನ್ಲೈನ್ ಮೂಲಕ ಉಚಿತವಾಗಿ ಯೋಗ ತರಬೇತಿ ನೀಡಿದ್ದಾನೆ. ಅದರಲ್ಲು, ಕೊರೋನಾ ಸಂದರ್ಭದಲ್ಲಿ ಅಕ್ಸಿಜನ್ ಪ್ರಮಾಣ ಹೆಚ್ಚಿಸಿಕೊಳ್ಳುವುದು, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಅಗತ್ಯವಾದ ಅಸನಗಳನ್ನು ಜನ ಸಾಮಾನ್ಯರಿಗೆ ಆನ್ಲೈನ್ ಮೂಲಕ ಹೇಳಿ ಕೊಟ್ಟಿರುವುದಾಗಿ ಯೋಗ ಬಾಯ್ ಯಶವಂತ್ ತಿಳಿಸಿದ್ದಾನೆ.

ಇನ್ನೂ ಚಿಕ್ಕಂದಿನಲ್ಲಿ ತುಂಬಾ ತುಂಟನಾಗಿದ್ದ ಯಶವಂತನನ್ನು ಪೋಷಕರು ಪ್ರಾರಂಭದಲ್ಲಿ ಸಂಗೀತ ಕಲಿಯಲು ಕಳುಹಿಸಿದರು. ಆದರೆ ಅಲ್ಲಿಗೆ ಮೂರು ದಿನಕ್ಕೆ ಹೋಗುವುದನ್ನು ನಿಲ್ಲಿಸಿದ. ಬೇಸರಗೊಳ್ಳದ ಪೋಷಕರು ಆವನ ಇಚ್ಚೆಯಂತೆ ಯೋಗ ಕಲಿಸಲು ಪರಿಚಿತ ಯೋಗ ಗುರು ಬಳಿ ಕಳುಹಿಸಿದ್ರು. ಅವನ ಪ್ರತಿಭೆ ಗುರುತಿಸಿ ಯೋಗ ಕಲಿಕೆಗೆ ಪ್ರೋತ್ಸಾಹ ನೀಡಿದ್ದರಿಂದ ಇಂದು ಯೋಗ ಕ್ಷೇತ್ರದಲ್ಲಿ ಅದ್ಬುತ ಸಾಧನೆ ಮಾಡಿದ್ದಾನೆ. ಪೋಷಕರು ಮಕ್ಕಳಿಗೆ ಇಷ್ಟವಿಲ್ಲದ ಕ್ಷೇತ್ರದಲ್ಲಿ ಸಾಧನೆ ಮಾಡುವಂತೆ ಒತ್ತಾಯಿಸುತ್ತಾರೆ. ಆದರೆ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಯಿಸಿದರೆ ಯಶವಂತ್ ರೀತಿಯಲ್ಲಿ ಸಾಧನೆ ಮಾಡಬಹುದು ಎನ್ನುವುದು ಪೋಷಕರ ಅಭಿಪ್ರಾಯವಾಗಿದೆ. ಮಗನ ಸಾಧನೆ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದು, ಇಂದು ಜನ ನಮ್ಮನ್ನು ಯೋಗಪಟು ಯಶವಂತ್ ಪೋಷಕರು ಎಂದು ಗುರುತಿಸುತ್ತಾರೆ. ಮಾತ್ರವಲ್ಲದೇ ಆನೇಕ ರಿಯಾಲಿಟಿ ಶೋಗಳಲ್ಲಿ ಯಶವಂತ್ ಭಾಗವಹಿಸಿದ್ದು, ಪ್ರಶಸ್ತಿ ಗಳಿಸಿದ್ದಾನೆ ಎಂದು ಯಶವಂತ್ ಸಾಧನೆ ಬಗ್ಗೆ ಖುಷಿ ವ್ಯಕ್ತಪಡಿಸುತ್ತಾರೆ.

ಇದನ್ನು ಓದಿ: ವಿದ್ಯಾರ್ಥಿನಿಗೆ ಬೇಬಿ ಎಂದು ಕರೆದ ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ಪ್ರಾಧ್ಯಾಪಕ; ಕಾಲೇಜು ಪರ ರಾಮಲಿಂಗಾರೆಡ್ಡಿ ಎಂಟ್ರಿ

ಒಟ್ಟಿನಲ್ಲಿ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಯಶವಂತ್ ಯೋಗ ಕ್ಷೇತ್ರದಲ್ಲಿ ತನ್ನ ವಯಸ್ಸಿಗೂ ಮೀರಿದ ಸಾಧನೆ ಮಾಡಿದ್ದು,  ಅಂತಾರಾಷ್ಟ್ರೀಯ ಯೋಗ ದಿನದಂದು ನ್ಯೂಸ್ 18 ಕನ್ನಡ ಪುಟ್ಟ ಪೋರ ಯಶವಂತನ ಸಾಧನೆಗೆ ಪ್ರಶಂಸಿಸುತ್ತ ಮತ್ತಷ್ಟು ಸಾಧನೆ ಮಾಡಲಿ ಎಂದು ಹಾರೈಸುತ್ತದೆ.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.ವರದಿ : ಆದೂರು ಚಂದ್ರು 
Published by: HR Ramesh
First published: June 21, 2021, 10:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories