ನೆಲಮಂಗಲ (ಜೂನ್ 26): ಶಿಕ್ಷಕರನ್ನು ದೇವರೆಂದು ಪರಿಗಣಿಸುವ ಕಾಲವೊಂದಿತ್ತು. ತಂದೆ-ತಾಯಿಯ ನಂತರದ ಸ್ಥಾನವನ್ನು ಗುರುವಿಗೇ ನೀಡಬೇಕೆಂದು ಹಿರಿಯರು ಸಾರಿ ಹೋಗಿದ್ದಾರೆ. ಆದರೆ, ಬೇಲಿಯೇ ಎದ್ದು ಹೊಲ ಮೇಯ್ದಂತೆ ಬೆಂಗಳೂರಿನಲ್ಲಿ ಶಾಲೆಯ ಮುಖ್ಯೋಪಾಧ್ಯಾಯರೇ ತಮ್ಮ ವಿದ್ಯಾರ್ಥಿಯನ್ನು ಸಲಿಂಗ ಕಾಮಕ್ಕೆ ಬಳಸಿಕೊಂಡ ಆರೋಪ ಕೇಳಿಬಂದಿದೆ.
ಬೆಂಗಳೂರಿನ ನೆಲಮಂಗಲದಲ್ಲಿರುವ ಧರಿತ್ರಿ ಎಂಬ ವಿಶೇಷ ಮಕ್ಕಳ ವಸತಿ ಶಾಲೆಯ ಮುಖ್ಯೋಪಾಧ್ಯಾಯ ಈ ರೀತಿಯ ನೀಚ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಶಾಲಾ ಮುಖ್ಯೋಪಾಧ್ಯಾಯರೇ ಈ ರೀತಿ ಮಾಡಿದರೆ ಮಕ್ಕಳ ಪಾಡೇನು? ಎಂಬ ಆಕ್ರೋಶವೂ ವ್ಯಕ್ತವಾಗಿದೆ. ಶಿಕ್ಷಕರೆಂದರೆ ದೇವರು ಎನ್ನುತ್ತಾರೆ, ಆದರೆ ಶಿಕ್ಷಕನ ಸಲಿಂಗ ಕಾಮಕ್ಕೆ ಅದೇ ಶಾಲೆಯ 21 ವರ್ಷದ ವಿದ್ಯಾರ್ಥಿ ಬಲಿಯಾಗಿದ್ದು, ನಡೆದ ಘಟನೆಯನ್ನು ಶಾಲೆಯ ಮುಖ್ಯಸ್ಥರ ಬಳಿ ಹೇಳಿಕೊಂಡಿದ್ದಾರೆ.
21 ವರ್ಷದ ವಿದ್ಯಾರ್ಥಿಗೆ ನೀಲಿ ಚಿತ್ರ ತೋರಿಸಿ ವಿಡಿಯೋದಲ್ಲಿ ಇರುವಂತೆ ಮಾಡು ಎಂದು ಮುಖ್ಯೋಪಾಧ್ಯಾಯ ಒತ್ತಾಯ ಹೇರಿದ್ದಾರೆ ಎನ್ನಲಾಗಿದೆ. ಆ ವಿದ್ಯಾರ್ಥಿಯ ಬಟ್ಟೆ ಬಿಚ್ಚಿಸಿ ಮುಖ್ಯೋಪಾಧ್ಯಾಯರು ಸಲಿಂಗ ಕಾಮ ನಡೆಸಿದ್ದಾರೆ ಎನ್ನಲಾಗುತ್ತಿದೆ. ತಮ್ಮ ಮನೆಯಲ್ಲಿ ಹೆಂಡತಿ ಇರದ ಸಮಯದಲ್ಲಿ ಮನೆಗೆ ವಿಧ್ಯಾರ್ಥಿಯನ್ನ ಕರೆದೊಯ್ದು ಈ ಕೃತ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: Karnataka Weather Today: ಜೂ. 30ರವರೆಗೆ ಕರಾವಳಿ, ಮಲೆನಾಡಿನಲ್ಲಿ ಗುಡುಗು ಸಹಿತ ಮಳೆ
ನೆಲಮಂಗಲ ತಾಲೂಕಿನ ನರಸೀಪುರದ ಧರಿತ್ರಿ ವಿಶೇಷ ಮಕ್ಕಳ ವಸತಿ ಶಾಲೆಯ ಮುಖ್ಯೋಪಾಧ್ಯಾಯ ರಂಗನಾಥ್ ತನ್ನ ವಿದ್ಯಾರ್ಥಿಗೆ ಬ್ಲೂ ಫಿಲ್ಮ್ ತೋರಿಸಿ, ಸಲಿಂಗ ಕಾಮಕ್ಕೆ ಬಳಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮೇ 6 ಮತ್ತು 7ನೇ ತಾರೀಕು ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಈ ಘಟನೆ ಬಗ್ಗೆ ಶಾಲೆಯ ವ್ಯವಸ್ಥಾಪಕರಿಗೆ ಮಾಹಿತಿ ತಿಳಿಸಿದ್ದ ಸಂತ್ರಸ್ತ ವಿಧ್ಯಾರ್ಥಿ ಬಳಿಕ ಸಂಸ್ಥೆಯ ಕಾರ್ಯದರ್ಶಿ ಶ್ರೀಕಾಂತ್ ಬೆಟ್ಟಗೇರಿ ಮಾರ್ಗದರ್ಶನದಲ್ಲಿ ಕೌನ್ಸಿಲಿಂಗ್ ಕೂಡ ಪಡೆದಿದ್ದರು. ಸಂತ್ರಸ್ತ ವಿದ್ಯಾರ್ಥಿ ಹಾಗೂ ಮುಖ್ಯೋಪಾಧ್ಯಾಯರ ಕೌನ್ಸಿಲಿಂಗ್ ನಡೆಸಲಾಗಿತ್ತು. ಕೌನ್ಸಿಲಿಂಗ್ ವೇಳೆ ತಾನು ಸಲಿಂಗ ಕಾಮಕ್ಕೆ ವಿದ್ಯಾರ್ಥಿಯನ್ನು ಬಳಸಿಕೊಂಡ ಬಗ್ಗೆ ಮುಖ್ಯೋಪಾಧ್ಯಾಯ ರಂಗನಾಥ್ ಒಪ್ಪಿಕೊಂಡಿದ್ದರು. ಜೂನ್ 11ರಂದು ಈ ಕೃತ್ಯದ ಬಗ್ಗೆ ಮಾನಸಿಕ ತಜ್ಞರು ವರದಿ ನೀಡಿದ್ದರು. ಆ ವರದಿ ಆಧರಿಸಿ ಡಾಬಸ್ಪೇಟೆ ಪೊಲೀಸರಿಗೆ ದೂರು ನೀಡಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ