Bengaluru Crime: ಬೆಂಗಳೂರಿನಲ್ಲಿ ಸಾವಿಗೆ ಶರಣಾದ ಮತ್ತೊಂದು ಕುಟುಂಬ, ಡೆತ್ ನೋಟ್ ಬರೆದಿಟ್ಟು ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಈ ಮೂರು ಜನ ಸಾವಿನ ಹಿಂದೆ ಇಂದು ಕರಾಳ‌ ಇತಿಹಾಸ ಸಹ ಇದೆ, ಬಿಎಂಟಿಸಿಯಲ್ಲಿ ಚಾಲಕ‌ ಕಂ ನಿರ್ವಾಹಕನಾಗಿದ್ದ ಪ್ರಸನ್ನ ಕುಮಾರು 2020ರ ಆಗಸ್ಟ್ ತಿಂಗಳ 7 ರಂದು ಮಹಾಮಾರಿ ಕೊರೋನಾಗೆ ಅಸುನೀಗಿದ್ದರು.

ಸಾವನ್ನಪ್ಪಿದ ತಾಯಿ-ಮಕ್ಕಳು (ತಂದೆ ಕಳೆದ ವರ್ಷ ಮೃತಪಟ್ಟಿದ್ದರು)

ಸಾವನ್ನಪ್ಪಿದ ತಾಯಿ-ಮಕ್ಕಳು (ತಂದೆ ಕಳೆದ ವರ್ಷ ಮೃತಪಟ್ಟಿದ್ದರು)

 • Share this:
  ಬೆಂಗಳೂರು(ಅ.2):  ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಕೆಲ ದಿನಗಳ ಹಿಂದೆ  ಒಂದೇ ಕುಟುಂಬದ ಐವರು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದರು. ಈ ಘಟನೆ ಮಾಸುವ ಮುನ್ನವೇ ಬೆಂಗಳೂರು ಗ್ರಾಮಾಂತರದಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ. ಅದು ಭಾರೀ ಅನ್ಯೋನ್ಯವಾಗಿದ್ದ ತುಂಬು ಕುಟುಂಬ, ಆದ್ರೆ ಕೊರೋನಾ ಮಹಾಮಾರಿ ಇಡೀ ಕುಟುಂಬದ ಹಣೆ ಬರಹವನ್ನೆ ಬದಲಿಸಿತ್ತು. ಒಂದು ವರ್ಷದ ಹಿಂದೆ ಕುಟುಂಬದ ಯಜಮಾನ ಕೊರೋನಾ ಮಹಾಮಾರಿಗೆ ಬಲಿಯಾಗಿದ್ದರೆ, ನಿನ್ನೆ ರಾತ್ರಿ ಕುಟುಂಬದ ಮೂವರೂ ನೇಣಿಗೆ ಶರಣಾಗಿರುವ ರಣ ಭೀಕರ ಘಟನೆ ನಡೆದಿದೆ. ಅಷ್ಟಕ್ಕೂ ಏನಿದು ಸ್ಟೋರಿ, ಅಲ್ಲಿ ನಡೆದದ್ದಾದರೂ ಏನೂ ಅಂತೀರಾ, ಈ ಸ್ಟೋರಿ ಓದಿ..

  ಒಂದು ಕೊಠಡಿಯ ಫ್ಯಾನ್‌ನಲ್ಲಿ ನೇಣಿಗೆ ಕೊರಳೊಡ್ಡಿರುವ ಬಾಲಕ, ಮತ್ತೊಂದು ಕೊಠಡಿಯಲ್ಲಿ ಒಂದೇ ಕುಣಿಕೆಯಲ್ಲಿ ಜೋತು ಬಿದ್ದಿರುವ ಮಹಿಳೆ ಹಾಗೂ ಮಗಳು, ರಣಭೀಕರ ದೃಶ್ಯಗಳಿಗೆ ಸಾಕ್ಷಿಯಾದದ್ದು ಬೆಂಗಳೂರು ಉತ್ತರ ತಾಲೂಕಿನ ತೋಟದ ಗುಡ್ಡದಹಳ್ಳಿಯ ಪ್ರಕೃತಿ ಬಡಾವಣೆಯಲ್ಲಿ.

  ಬೆಂಗಳೂರು ಉತ್ತರ ತಾಲೂಕು‌ ತೋಟದ ಗುಡ್ಡದಹಳ್ಳಿಯ ಪ್ರಕೃತಿ ಲೇಔಟ್‌ನಲ್ಲಿ ಈ ಘಟನೆ ನಡೆದಿದೆ.  ಮೃತರನ್ನು ತಾಯಿ ವಸಂತ (40), ಮಗ ಯಶ್ವಂತ್ (15), ಮಗಳು ನಿಶ್ಚಿತ (06) ಎಂದು ಗುರುತಿಸಲಾಗಿದೆ. ಮನೆಯ ಕೋಣೆಯೊಂದರ ಒಂದು ಫ್ಯಾನಿಗೆ ತಾಯಿ-ಮಗಳು,  ಮತ್ತೊಂದು ಕೋಣೆಯ ಫ್ಯಾನಿಗೆ ಮಗ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಹೌದು,  ಪ್ರಕೃತಿ ಬಡಾವಣೆಯಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಸ್ವಂತ ಮನೆ ಖರೀದಿಸಿ ವಾಸಿಸುತ್ತಿದ್ದ ಇಡೀ ಕುಟುಂಬದ ವಾಸಸ್ಥಾನವೇ ಇಂದು ಸ್ಮಶಾನವಾಗಿದೆ. ನೇಣು ಕುಣಿಕೆಯಲ್ಲಿ ನೇತಾಡುತ್ತಿರುವ ಇವರು 40 ವರ್ಷದ ತಾಯಿ ವಸಂತ, 15 ವರ್ಷದ ಮಗ ಯಶ್ವಂತ್, 6 ವರ್ಷದ ಮಗಳು ನಿಶ್ಚಿತ ದಾರೂಣವಾಗಿ ಸಾವನ್ನಪ್ಪಿದ್ದಾರೆ.

  ಇದನ್ನೂ ಓದಿ:Byadarahalli suicide case: ಒಂದೇ ಕುಟುಂಬದಲ್ಲಿ ಐವರ ಸಾವು ಪ್ರಕರಣ; 9 ತಿಂಗಳ ಮಗುವಿನ ಕತ್ತು ಹಿಸುಕಿದ್ದು ತಾಯಿಯೇ..!

  ಇನ್ನೂ ಮಗನಿಗೆ ಆತ್ನಹತ್ಯೆಗೆ ಪ್ರಚೋದಿಸಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಒತ್ತಾಯಿಸಿ, ಮಗಳನ್ನ ಈಕೆಗೆ ನೇಣಿನ ಕುಣಿಕೆಗೆ ಏರಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಜೆ 4 ಸುಮಾರಿಗೆ ಆತ್ನಹತ್ಯೆ ಮಾಡಿಕೊಂಡಿದ್ದು, ಮೃತಳ ತಮ್ಮ ಫೋನ್ ಮಾಡಿದ ವೇಳೆ ಕರೆ ಸ್ವೀಕರಿಸದಿದ್ದಾಗ, ಹಾಗೂ ಸುತ್ತಮುತ್ತಲ ಜನ ಅನುಮಾನಗೊಂಡು ನೋಡಿದ್ದಾರೆ. ಆಗ ಒಳಗಿನಿಂದ ಬಾಗಿಲು ಲಾಕ್ ಮಾಡಿಕೊಂಡಿದ್ರು, ಮತ್ತೆ ಏಣಿ ಏರಿ ಕಿಟಕಿ ಮೂಲಕ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದ್ದು, ಬಾಗಿಲು ಮುರಿದು ನೋಡುವಷ್ಟರಲ್ಲಿ ಮೂರು ಜನ ಉಸಿರು ಚೆಲ್ಲಿದ್ದರು‌.

  ಸಾವಿಗೆ ಕಾರಣವೇನು?

  ಇನ್ನು, ಈ ಮೂರು ಜನ ಸಾವಿನ ಹಿಂದೆ ಇಂದು ಕರಾಳ‌ ಇತಿಹಾಸ ಸಹ ಇದೆ, ಬಿಎಂಟಿಸಿಯಲ್ಲಿ ಚಾಲಕ‌ ಕಂ ನಿರ್ವಾಹಕನಾಗಿದ್ದ ಪ್ರಸನ್ನ ಕುಮಾರು 2020ರ ಆಗಸ್ಟ್ ತಿಂಗಳ 7 ರಂದು ಮಹಾಮಾರಿ ಕೊರೋನಾಗೆ ಅಸುನೀಗಿದ್ದರು. ಮೂರು ವರ್ಷದ ಹಿಂದೆ ಮನೆ ಖರೀದಿಗೆ 20 ಲಕ್ಷದಷ್ಟು ಸಾಲ ಸಹ ಮಾಡಿದ್ದರಂತೆ. ಗಂಡನ ಅಗಲಿಕೆಯ ನೋವು ಬಿಟ್ಟು ಬಿಡದೇ ಕಳೆದ ಒಂದು ವರ್ಷದಿಂದ ಕಾಡಿತ್ತು.

  ಕೆರೆಗೆ ಬೀಳಲು ಯತ್ನಿಸಿದ ಮಹಿಳೆ

  ಒಂದು ವರ್ಷದ ಹಿಂದೆ ಸಹ ಹೆಸರಘಟ್ಟ ಕೆರೆ ಬಳಿ ಆತ್ಮಹತ್ಯೆಗೆ ಯತ್ನಿಸಲು ತೆರಳಿದ್ದಾಗ ಸ್ಥಳೀಯರು ಬುದ್ದಿವಾದ ಹೇಳಿ ಕಳುಹಿಸಿದ್ದರು. ಆದರೂ ಬುದ್ದಿ ಕಲಿಯದ ವಸಂತ ಡಿಪ್ರೆಷನ್‌‌ಗೆ ಒಳಗಾಗಿದ್ದ ಹಿನ್ನೆಲೆ ಇಂದು ತನ್ನ ಮಗನಿಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿ, ಮಗಳನ್ನ ನೇಣಿಗೆ ಏರಿಸಿ ತಾನೂ ಕೂಡ ಜೀವಬಿಟ್ಟಿದ್ದಾಳೆ.

  ಡೆತ್​ ನೋಟ್​ನಲ್ಲಿ ಏನಿತ್ತು?

  ಅಲ್ಲದೆ ಆತ್ಮಹತ್ಯೆಗೂ ಮುನ್ನಾ ಮೂರು ಪುಟದ ಡೆತ್ ನೋಟ್ ಬರೆದಿಟ್ಟಿದ್ದು, ನನ್ನ ಸಾವಿಗೆ ನಾನೇ ಕಾರಣ, ನನ್ನ ಗಂಡನನ್ನ ಕಳೆದುಕೊಂಡ ನೋವಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನವರು ಅಂತ ಯಾರು ಇಲ್ಲ, ಈ ಮನೆ ಮಾರಾಟ ಮಾಡಿ ನಮ್ಮ ಸಾಲ ತೀರಿಸಿಬಿಡಿ ಎಂದು ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಆಗಮಿಸಿ, ತನಿಖೆ ನಡೆಸುತ್ತಿದ್ದಾರೆ.

  ಒಟ್ಟಾರೆ ಕೊರೋನಾ ಮಹಾಮಾರಿ ಒಂದು ಕುಟುಂಬವನ್ನೇ ಕೊಂದಿದ್ದು, ಮೃತ ಮಹಿಳೆ ವಸಂತ ಸ್ವಲ್ಪ ಗಟ್ಟಿ ಮನಸ್ಸು ಮಾಡಿದ್ದರೇ ಇಂದು ಇಬ್ಬರು ಮಕ್ಕಳೊಟ್ಟಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಬೆಂಗಳೂರಿನಲ್ಲಿ ಸರಣಿ ಸಾವುಗಳ ನಡುವೆ ಈ ಒಂದು ಸಾವು ಸಹ ಮನಕಲಕುವಂತಿದೆ.

  • ವರದಿ: ಅಭಿಷೇಕ್ ಚಿಕ್ಕಮಾರನಹಳ್ಳಿ

  Published by:Latha CG
  First published: