• Home
  • »
  • News
  • »
  • state
  • »
  • Biggest Butterfly: ಏಷ್ಯಾದಲ್ಲಿಯೇ ಅಪರೂಪದ & ಅತಿ ದೊಡ್ಡ ಚಿಟ್ಟೆ ಕರುನಾಡಲ್ಲಿ ಪತ್ತೆ, ಏನಿದರ ವಿಶೇಷತೆ?

Biggest Butterfly: ಏಷ್ಯಾದಲ್ಲಿಯೇ ಅಪರೂಪದ & ಅತಿ ದೊಡ್ಡ ಚಿಟ್ಟೆ ಕರುನಾಡಲ್ಲಿ ಪತ್ತೆ, ಏನಿದರ ವಿಶೇಷತೆ?

ಅಟ್ಲಾಸ್ ಪತಂಗ

ಅಟ್ಲಾಸ್ ಪತಂಗ

ದೈತ್ಯಾಕಾರದ ಪತಂಗ ‘ಅಟ್ಲಾಸ್ ಮಾಥ್​​’ ಈಗಾಗಲೇ ಕರಾವಳಿ ಜಿಲ್ಲೆಯ ಹಲವು ಭಾಗಗಳಲ್ಲಿ ಇದು ಪತ್ತೆಯಾಗಿತ್ತು. ಇದೀಗ ಇದೇ ಮೊದಲ ಬಾರಿಗೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಪತ್ತೆಯಾಗಿದೆ.

  • Share this:

ಆನೇಕಲ್: ರೆಕ್ಕೆ ತುದಿಗಳು ನಾಗರ ಹಾವಿನಂತಿದೆ. ಆದ್ರೆ ಬುಸುಗುಡುವ ನಾಗರ ಹಾವಲ್ಲ. ನೆರಳೆ, ಕಂದು, ಕೆಂಪ ಹೀಗೆ ವರ್ಣಮಯ ಚಿತ್ತಾರದ ಪಾತರಗಿತ್ತಿ ಪತಂಗ(Butterfly). ಅದು ಅಪರೂಪದಲ್ಲಿ ಅಪರೂಪವಾಗಿ ಕಾಣ ಸಿಗುವ ಏಷ್ಯಾದಲ್ಲಿಯೇ ಅತಿ ದೊಡ್ಡ ಪತಂಗ ಪ್ರಭೇದಕ್ಕೆ ಸೇರಿದ ಅಟ್ಲಾಸ್ ಪತಂಗ(Atlas Butterfly) . ಇದೀಗ ಇದೇ ಮೊದಲ ಬಾರಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ (Bannerghatta National Park) ಪತ್ತೆಯಾಗಿದೆ.  ಅಪರೂಪದ ಅಟ್ಲಾಸ್ ಪತಂಗ ಕಂದು, ಕೆಂಪು, ನೆರಳೆ ಹಳದಿ ವರ್ಣಗಳ ರೆಕ್ಕೆಗಳನ್ನು ಹೊಂದಿದ್ದು, ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದ ವ್ಯಾಪ್ತಿಯಲ್ಲಿ ಕಂಡು ಬಂದಿದೆ. ಏಷ್ಯಾದಲ್ಲಿಯೇ ಅತಿ ದೊಡ್ಡ ಅಟ್ಲಾಸ್ ಪತಂಗ ಇದಾಗಿದ್ದು, ಸುಮಾರು 12 ಸೆ.ಮಿ ಉದ್ದವಿದೆ. ಸಾಮಾನ್ಯವಾಗಿ ಪಶ್ಚಿಮ ಘಟ್ಟಗಳಲ್ಲಿ ಅಪರೂಪಕ್ಕೊಮ್ಮೆ ಕಾಣಸಿಗುವ ಈ ಪತಂಗ ನಿಶಾಚರಿಯಾಗಿದ್ದು, ರಾತ್ರಿ ವೇಳೆ ಹೆಚ್ಚು ಹಾರಾಟ ನಡೆಸುತ್ತವೆ. 


ಮೊದಲ ಬಾರಿಗೆ ಬನ್ನೇರುಘಟ್ಟದಲ್ಲಿ ಪ್ರತ್ಯಕ್ಷ 


ದೈತ್ಯಾಕಾರದ ಪತಂಗ ‘ಅಟ್ಲಾಸ್ ಮಾಥ್​​’ ಈಗಾಗಲೇ ಕರಾವಳಿ ಜಿಲ್ಲೆಯ ಹಲವು ಭಾಗಗಳಲ್ಲಿ ಇದು ಪತ್ತೆಯಾಗಿತ್ತು. ಇದೀಗ ಇದೇ ಮೊದಲ ಬಾರಿಗೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಪತ್ತೆಯಾಗಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಕೇರಳದ ವೈನಾಡು ಅರಣ್ಯ ತಮಿಳುನಾಡಿನ ಸತ್ಯಮಂಗಲಂ ಅರಣ್ಯ ಮತ್ತು ರಾಜ್ಯದ ಕಾವೇರಿ, ಮಹದೇಶ್ವರ ಬೆಟ್ಟ ಹಾಗೂ ಪಶ್ಚಿಮ ಘಟ್ಟಗಳಿಗೆ ಕೊಂಡಿಯಾಗಿದ್ದು, ಅಪಾರ ಜೀವವೈವಿಧ್ಯತೆಯನ್ನು ಹೊಂದಿದೆ. ಹಾಗಾಗಿ ಪತಂಗಗಳು ಸಂತಾನೋತ್ಪತ್ತಿಗಾಗಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಗೆ ಬರುತ್ತವೆ. ಈ ವೇಳೆ ಚಿಟ್ಟೆ ಪಾರ್ಕ್ ಸಿಬ್ಬಂದಿಗಳು ಗುರುತಿಸಿ ಅಟ್ಲಾಸ್ ಪತಂಗವನ್ನು ರಕ್ಷಣೆ ಮಾಡಿದ್ದಾರೆ.


ನಾಗರ ಹಾವಿನ ತಲೆಗೆ ಹೋಲುವ ಪತಂಗ


ಇನ್ನೂ ಅಟ್ಲಾಸ್ ಕೇವಲ ಹತ್ತರಿಂದ ಹದಿನೈದು ದಿನ ಬದುಕುವ ಅಲ್ಪಾವಧಿಯ ಕೀಟ. ಅಟ್ಲಾಸ್‌ ಪತಂಗಗಳು ಪಶ್ಚಿಮ ಘಟ್ಟದಂತಹ ಮಳೆ ಕಾಡುಗಳಲ್ಲಿ ಕಂಡು ಬರುತ್ತವೆ. ಅಟ್ಲಾಸ್ ಪತಂಗ ಪ್ರಪಂಚದ ಅತಿ ದೊಡ್ಡ ಗಾತ್ರದ ಕೀಟಗಳ ಜಾತಿಗೆ ಸೇರಿದ್ದು, ರೆಕ್ಕೆಗಳಿಗೆ ಹೋಲಿಸಿದರೆ ದೇಹವು ಬಹಳಷ್ಟು ಚಿಕ್ಕದಾಗಿವೆ. ರೆಕ್ಕೆಗಳನ್ನು ಬಿಡಿಸಿದಾಗ ಸಾಮಾನ್ಯವಾಗಿ 10ರಿಂದ 12 ಇಂಚುಗಳಷ್ಟು ಗಾತ್ರ ಕಂಡುಬರುತ್ತವೆ. ಗಂಡು ಪತಂಗಗಳು ಆ್ಯಂಟೆನಾಗಳನ್ನು ಹೊಂದಿದ್ದು, ಹೆಣ್ಣಿಗಿಂತಲೂ ಗಾತ್ರ ಹಾಗೂ ಭಾರದಲ್ಲಿ ಚಿಕ್ಕದಾಗಿರುತ್ತವೆ. ಬೆಳಕಿಗೆ ಆಕರ್ಷಿಸಲ್ಪಡುವ ಈ ಪತಂಗಗಳಿಗೆ ವಿರೋಧಿಗಳು ಹೆಚ್ಚು ಹಾಗಾಗಿ ರೆಕ್ಕೆಗಳ ಸುಳಿಗಳು ನಾಗರ ಹಾವಿನ ತಲೆಗೆ ಹೋಲುತ್ತಿದ್ದು, ಯಾವುದಾದರೂ ಪ್ರಾಣಿ ಅಥವಾ ಪಕ್ಷಿ ಬೇಟೆಯಾಡಲು ಬಂದಾಗ,ರೆಕ್ಕೆಗಳನ್ನು ಮೇಲಕ್ಕೆತ್ತಿ ಹಾವು ಅಥವಾ ಜಂತುಗಳ ರೀತಿಯಲ್ಲಿ ಕಾಣುವಂತೆ ಮಾಡಿ ಶತ್ರುಗಳಿಂದ ತಪ್ಪಿಸಿಕೊಳ್ಳುತ್ತದೆ.
 ಕೇವಲ 10 ರಿಂದ 15 ದಿನ ಮಾತ್ರ ಆಯಸ್ಸು


ಇನ್ನೂ ಮರಿ ಹುಳುಗಳು ಹಕ್ಕಿಗಳಿಗೆ ಆಹಾರವಾದರೆ ಪ್ರೌಢ ಪತಂಗಗಳನ್ನು ಬಾವಲಿ, ಗೂಬೆ, ಹಲ್ಲಿ, ಬೆಕ್ಕು, ಕರಡಿ ಇನ್ನಿತರ ಪ್ರಾಣಿಗಳು ಭಕ್ಷಿಸುತ್ತವೆ. ಮರಿ ಹಂತದಲ್ಲಿರುವಾಗ ಮಾತ್ರ ಎಲೆ, ಸಸ್ಯ, ಕಾಂಡಗಳನ್ನು ಕೊರೆದು ಬೇರುಗಳನ್ನು ಭಕ್ಷಿಸುತ್ತಾ ತಾನೇ ನೇಯುವ ಗೂಡಿನಲ್ಲಿ ಬಂಧಿಯಾಗುತ್ತವೆ. ಅಲ್ಲೇ ಪ್ರೌಢ ಹಂತ ತಲುಪಿ ಗೂಡನ್ನು ಸೀಳಿ ಹೊರಬಂದು ಪತಂಗಗಳಾಗಿ ರೂಪಾಂತರ ಹೊಂದುತ್ತವೆ. ದೇಹದಲ್ಲಿರುವ ದೈಹಿಕ ಒಳ ಶಕ್ತಿಯಿಂದ ಜೀವಿಸುವ ಇವುಗಳಿಗೆ ಪ್ರೌಢಾವಸ್ಥೆಯ ಬಳಿಕ ಕೇವಲ 10 ರಿಂದ 15 ದಿನ ಮಾತ್ರ ಆಯಸ್ಸು. ಹಾಗಾಗಿ ಅಪರೂಪದ ಅಟ್ಲಾಸ್ ಪತಂಗಗಳ ವಂಶಾಭಿವೃದ್ಧಿ ಮಾಡುವ ಸಲುವಾಗಿ ಸಕಲ ಸಿದ್ದತೆ ಮಾಡಿಕೊಂಡಿದ್ದು, ವಂಶಾಭಿವೃದ್ಧಿ ಬಳಿಕ ಉದ್ಯಾನವನದ ಚಿಟ್ಟೆಪಾರ್ಕ್ ನಲ್ಲಿ ಪತಂಗಗಳು ಬಿಟ್ಟು ಬಂದಂತಹ ಪ್ರವಾಸಿಗರಿಗೆ ಪತಂಗಗಳ ಬಗ್ಗೆ ಅರಿವು ಮೂಡಿಸುವುದು ನಮ್ಮ ಉದ್ದೇಶವಾಗಿದೆ ಎಂದು ಉದ್ಯಾನವನದ ಕೀಟ ತಜ್ಞ ಲೋಕನಾಥ್ ತಿಳಿಸಿದ್ದಾರೆ.


ಇದನ್ನೂ ಓದಿ: Hassanamba Temple: ಬೇಡಿದ ವರ ನೀಡಿದ್ರೆ 5 ಸಾವಿರ ಕೊಡ್ತೀನಿ, ಹಾಸನಾಂಬೆ ತಾಯಿಗೆ ಆಫರ್ ಕೊಟ್ಟ ಭಕ್ತ


ಒಟ್ನಲ್ಲಿ ಬೃಹದಾಕಾರ ಪತಂಗಗಳನ್ನು ಬಹುತೇಕ ಮಂದಿ ಚಿಟ್ಟೆ ಅಥವಾ ಪಾತರಗಿತ್ತಿ ಎಂದೇ ಭಾವಿಸಿ ಕೊಂಡಿದ್ದಾರೆ. ಆದರೆ ಇದು ಪತಂಗವೇ ಹೊರತು ಚಿಟ್ಟೆ(ಪಾತರಗಿತ್ತಿ) ಅಲ್ಲ. ಪತಂಗವನ್ನು ಆಂಗ್ಲ ಭಾಷೆಯಲ್ಲಿ ಮಾಥ್​​ ಎಂದು ಕರೆಯಲಾಗುತ್ತದೆ. ಚಿಟ್ಟೆಗೂ ಪತಂಗಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಅದು ಪತಂಗಗಳ ಪ್ರಭೇದಗಳಲ್ಲಿಯೇ ಅತಿ ದೊಡ್ಡ ಪತಂಗ. ಅದ್ರಲ್ಲು ಅದು ಏಷ್ಯಾದಲ್ಲಿಯೇ ಅತಿ ದೊಡ್ಡ ಪತಂಗ ಇದಾಗಿದ್ದು, ನಿಜಕ್ಕೂ ಪರಸರ ಪ್ರೇಮಿಗಳಿಗೆ ಗುಡ್ ನ್ಯೂಸ್ ಆಗಿದ್ದು, ಮುಂದಿನ ದಿನಗಳಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಚಿಟ್ಟೆಗಳ ಜೊತೆ ಅಪರೂಪದ ಅಟ್ಲಾಸ್ ಪತಂಗಗಳನ್ನು ಕಾಣಬಹುದಾಗಿದ್ದು, ಪ್ರವಾಸಿಗರು ಸಂತಸಗೊಂಡಿದ್ದಾರೆ.ವರದಿ: ಆದೂರು ಚಂದ್ರು

Published by:Kavya V
First published: