Anekal: ಮುದ್ದಿನ ಮಗಳನ್ನು ಕೊಂದ ತಂದೆ.. ಕಾರಣ ತಿಳಿದರೆ ಕಣ್ಣೀರಾಗುತ್ತೀರಿ.. ಕಾಡುವ ಕೊಲೆ!

ಇವತ್ತು ಸ್ಕೂಲಿಗೆ ಹೋಗೋದು ಬೇಡ ಎಂದು ಮಗಳನ್ನು ಜೊತೆಯಲ್ಲೇ ಇರಿಸಿಕೊಂಡಿದ್ದನು. ಹೆಂಡತಿ ಕೆಲಸಕ್ಕೆ ‌ಹೋದ ಬಳಿಕ ಮೊಬೈಲ್ ಚಾರ್ಜರ್ ವೈಯರ್​​​ ಬಳಸಿ ಮಗಳ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾನೆ.

ತಂದೆ ವಿಜಯ್​ ಕುಮಾರ್​

ತಂದೆ ವಿಜಯ್​ ಕುಮಾರ್​

  • Share this:
ಆನೇಕಲ್ :  ಆತ ಹಗಲಿರುಳು ದುಡಿದ್ರೂ ಅದೃಷ್ಟ ಕೈಕೊಟ್ಟಿತ್ತು(Bad Luck) . ಮಾಡಿದ ಬಿಸಿನೆಸ್ಸು (Business) ಲಾಸ್ ಆಗಿತ್ತು. ಇತ್ತೀಚೆಗೆ ಕೆಲಸದಿಂದ ಸಹ ತೆಗೆಯಲಾಗಿತ್ತು. ಹಾಗಾಗಿ ತಾನು ಮಾಡಿದ ಸಾಲ (Debt) ತೀರಿಸೋಕೆ ಆಗಿರ್ಲಿಲ್ಲ. ಗಂಡ, ಹೆಂಡತಿ ಕೆಲಸಕ್ಕೆ ಹೋದ್ರೂ,  ಮಗಳ ಭವಿಷ್ಯ (Daughter Future) ಏನು ಎಂಬ ಚಿಂತೆ ತಂದೆಗೆ ಕಾಡಿತ್ತು, ಹೀಗಾಗಿ ಮಗಳನ್ನು ಕೊಂದ ತಂದೆ ತಾನೂ ನೇಣಿಗೆ ಕೊರಳೊಡ್ಡಿದ್ದಾನೆ. ಬಡ ಕುಟುಂಬವೊಂದಕ್ಕೆ ಬೆಂಗಳೂರು ಜೀವನ ಎಷ್ಟೊಂದು ಕಷ್ಟ..ಎಷ್ಟೊಂದು ದುಸ್ತರ ಅನ್ನೋದು ಮತ್ತೆ ಮತ್ತೆ ಸಾಬೀತು ಆಗ್ತಿದೆ.  ಗಂಡ, ಹೆಂಡತಿ ಇಬ್ಬರೂ ದುಡಿದ್ರೂ ತಿಂಗಳ ಕೊನೆಗೆ EMI ಕಟ್ಟೋಕೆ ದುಡ್ಡು ಸಾಲಲ್ಲ.  ಬಡ್ಡಿ ಅದರ ಮೇಲೆ ಚಕ್ರಬಡ್ಡಿ ಬೇರೆ. ಕನಿಷ್ಠ ವೇತನದಿಂದ ಮನೆಯ ಬಾಡಿಗೆ ಕಟ್ಟಿ ಒಂದೊತ್ತು ಊಟ ತಿಂದ್ರೆ ಸಾಕಪ್ಪ‌ ಅದೇ ನೆಮ್ಮದಿಯ ಜೀವನ ಅಂತ‌ ಇದ್ದ ಕುಟುಂಬವೊದಕ್ಕೆ ಸಾಲದ ಶೂಲ ಬರ ಸಿಡಿಲಿನಂತೆ ಬಡಿದಿದೆ. ಎಲ್ಲಾ ತಂದೆಯರಂತೆ ತನ್ನ ಮಗಳ ಉಜ್ವಲ ಭವಿಷ್ಯ ಕಂಡಿದ್ದ ಕೋಲಾರ ಜಿಲ್ಲೆಯ ಬಂಗಾರಪೇಟೆ ಮೂಲದ ವಿಜಯ್ ಕುಮಾರ್ , ತನ್ನ ಕೈಯಿಂದಲೇ ಮಗಳ ಹತ್ಯೆ ಮಾಡಿ, ತಾನೂ ನೇಣು ಬಿಗಿದುಕೊಂಡು ಸಾವನಪ್ಪಿದ್ದಾನೆ.

ಇದನ್ನೂ ಓದಿ: Hassan: ಉಪನಯನ ಕಾರ್ಯಕ್ರಮ ಮಾಡಿದ 3 ದಿನದಲ್ಲೇ ಮಸಣ ಸೇರಿದ ಕುಟುಂಬ.. ಅಯ್ಯೋ ಏನಾಯ್ತು?

ಕೆಲಸ ಇಲ್ಲದೆ ಖಿನ್ನತೆಗೆ ಒಳಗಾಗಿದ್ದ ತಂದೆ 

ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ  ವೆಲ್ಡ್ಡಿಂಗ್ ಕೆಲಸ ಮಾಡಿಕೊಂಡು ಜೀವನ‌ ಸಾಗಿಸುತ್ತಿದ್ದ ವಿಜಯ್ ಕುಮಾರ್ ಕಳೆದ‌ ಮೂರು ತಿಂಗಳಿನಿಂದ ಕೆಲಸಕ್ಕೆ ಹೋಗಿರಲಿಲ್ಲ. ಕಂಪನಿ ಲಾಸ್ ನಲ್ಲಿ ನಡೆಯುತ್ತಿದೆ ಎಂದು ವಿಜಯ್ ಕುಮಾರ್ ಸೇರಿದಂತೆ ಹತ್ತು ಮಂದಿಯನ್ನು ಕೆಲಸದಿಂದ ತೆಗೆಯಲಾಗಿತ್ತು. ಅಂದಿನಿಂದ ವಿಜಯ್ ಕುಮಾರ್ ಖಿನ್ನತೆಗೆ ಒಳಗಾಗಿದ್ದರು. ಜೊತೆಗೆ ಸಾಲ ಕಟ್ಟಲು ಅಲ್ಲಿ ಇಲ್ಲಿ ಕೆಲಸಕ್ಕೆ ಅಲೆದಾಡಿ ಸುಸ್ತಾಗಿದ್ದು, ಫುಡ್​ ಡಿಲಿವರಿ ಬಾಯ್​​ ಆಗಿಯೂ ಕೆಲ ಕಾಲ ಕೆಲಸ ಮಾಡಿದ್ದರು. 'ಮೃದು ಸ್ವಭಾವದ ವಿಜಯ್ ಕುಮಾರ್ ಸಭ್ಯಸ್ಥನಾಗಿದ್ದು, ಯಾರಿಗೂ ತೊಂದರೆ ನೀಡಿದವನಲ್ಲ. ನಾನು ಮತ್ತು ವಿಜಯ್ ಕುಮಾರ್ ವೆಲ್ಡಿಂಗ್ ಶಾಪ್ ಆರಂಭಿಸಿದ್ವಿ. ಆದ್ರೆ ವಿಜಯ್ ಕುಮಾರ್ ನಷ್ಟ ಹೊಂದಿದ್ದರು' ಎಂದು ಸಹದ್ಯೋಗಿಯಾದ ಸುಮನ್ ಅಭಿಪ್ರಾಯಪಟ್ಟಿದ್ದಾರೆ.

ಮಗಳನ್ನು ಕೊಂದು ನೇಣಿಗೆ ಶರಣು 

ಇನ್ನೂ ಸ್ವಾಭಿಮಾನಿಯಾಗಿದ್ದ ಮೃತ ವಿಜಯ್ ಕುಮಾರ್ ಖಾಸಗಿ ಶಾಲೆಯೊಂದರಲ್ಲಿ ತನ್ನ ಮಗಳು  ಸಮೀಕ್ಷಾ ಳನ್ನು ಓದಿಸುತ್ತಿದ್ದರು. ಅಲ್ಲದೇ ಮಗಳ ಭವಿಷ್ಯಕ್ಕಾಗಿ ಹಾಗೂ ದಿನನಿತ್ಯದ ಖರ್ಚಿಗಾಗಿ ಯಾರನ್ನೂ ಬೇಡಬಾರದು ಅಂತ‌ ಅಂದುಕೊಂಡಿದ್ದ ವಿಜಯ್ ತನ್ನ ಜತೆ ಸಾವಿನ ಮನೆ ಸೇರಲು ತನ್ನ ಮಗಳನ್ನು ಇವತ್ತು ‌ಶಾಲೆಗೆ‌ ಕಳಹಿಸದೇ ತನ್ನ ಬಳಿ ಇರಿಸಿಕೊಂಡಿದ್ದರು. ಬಿಸಿನೆಸ್‌ ಗಾಗಿ ಕಾರಣ ಹಲವೆಡೆ ಸಾಲ‌‌ ಮಾಡಿಕೊಂಡಿದ್ದ ವಿಜಯ್ ,  ಮಗಳ ಭವಿಷ್ಯದ ಬಗ್ಗೆ ಯೋಚಿಸಿ ಯಾತನೆಯಲ್ಲಿದ್ದರು. ತನ್ನ ‌ಹೆಂಡತಿ ಕೆಲಸಕ್ಕೆ ‌ಹೋಗಿದ್ದ ವೇಳೆ, ಮೊಬೈಲ್ ಚಾರ್ಜರ್ ವೈಯರ್​​​ ಬಳಸಿ ಮಗಳ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾನೆ. ಅಲ್ಲದೇ ಅದಕ್ಕೂ‌ ಮೊದಲು ಮದ್ಯದ ಬಾಟಲಿಗೆ ವಿಷ ಮತ್ತು ನಿದ್ದೆ ಮಾತ್ರೆ ಸೇವಿಸಿ, ತಾನೂ ಮಂಪರಿಗೆ ಹೋಗಲು ಪ್ರಯತ್ನಿಸಿ ಕೊನೆಗೆ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ಸಹೋದರ ಚಂದ್ರು ತಿಳಿಸಿದ್ದಾನೆ.

ಇದನ್ನೂ ಓದಿ: Chikkaballapur: ಚೆನ್ನಾಗಿ ಓದಿದ್ದಳು.. ಇನ್ನು 23 ವರ್ಷವಷ್ಟೇ.. ಗಂಡನ ಮನೆಯಲ್ಲಿ ನಿಗೂಢವಾಗಿ ಹೆಣವಾದಳು!

ಕೆಲಸದಿಂದ ಬಂದ ಪತ್ನಿ ಅದೆಷ್ಟೋ ಬಾರಿ ಕಾಲ್ ಮಾಡಿದ್ರೂ ಫೋನ್ ಪಿಕ್ ಮಾಡದ ವಿಜಯ್, ಬಾಗಿಲು ಎಷ್ಟೇ ಬಡಿದ್ರೂ ತೆಗೆದಿರಲಿಲ್ಲ, ಬಳಿಕ ಮನೆ ಮಾಲೀಕನ ಬಳಿ ಇನ್ನೊಂದು ಕೀ ಬಳಸಿ ಬಾಗಿಲು ತೆಗೆದಾಗ ಆತ್ಮಹತ್ಯೆ ಮಾಡಿಕೊಂಡಿರೋದು ಬೆಳಕಿಗೆ ಬಂದಿದೆ. ಹೆಬ್ಬಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Published by:Kavya V
First published: