Anekal Lake: ಉತ್ತಮ ಮಳೆಯಾದ್ರೂ ಆನೇಕಲ್ ದೊಡ್ಡಕೆರೆ ಬರಿದು: ಒತ್ತುವರಿ ಭೂತಕ್ಕೆ ಬಲಿ!

ಕಳೆದ 18 ವರ್ಷಗಳಿಂದ ಕೆರೆ ತುಂಬಿಲ್ಲ. ಆನೇಕಲ್ ಪಟ್ಟಣದ ಕೊಳಚೆ ನೀರು ಕೆರೆ ಸೇರುತ್ತಿದ್ದು, ಕಲುಷಿತಗೊಂಡಿದೆ. ಆಧಿಕಾರಿಗಳು ಕೆರೆ ಉಳಿವಿಗೆ ಕ್ರಮಕೈಗೊಂಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬರಿದಾಗಿರುವ ದೊಡ್ಡಕೆರೆ

ಬರಿದಾಗಿರುವ ದೊಡ್ಡಕೆರೆ

  • Share this:
ಆನೇಕಲ್ : ರಾಜ್ಯದೆಲ್ಲೆಡೆ ವರುಣ (Heavy Rain) ಆರ್ಭಟಿಸುತ್ತಿದ್ದಾನೆ. ಅಂತೆಯೇ ಆನೇಕಲ್ (Anekal) ತಾಲ್ಲೂಕಿನಲ್ಲಿಯೂ ಉತ್ತಮ ಮಳೆಯಾಗುತ್ತಿದೆ. ಬಹುತೇಕ ಕೆರೆ-ಕುಂಟೆ, ಕಾಲುವೆಗಳು ತುಂಬಿ ಹರಿಯುತ್ತಿವೆ. ಆದ್ರೆ ಇಲ್ಲೊಂದು ಕೆರೆ (Lake) ಮಾತ್ರ ಹಲವು ವರ್ಷಗಳಿಂದ ನೀರಿಗೆ ಬರ ಎದುರಿಸುತ್ತಿದೆ. ನೀರಿನ ಹರಿವಿಲ್ಲದೆ ಬರಿದಾಗಿದೆ.   ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದ ಐತಿಹಾಸಿಕ ದೊಡ್ಡಕೆರೆ ನೀರಿಲ್ಲದೆ ಗಿಡಗಂಟಿಗಳಿಂದ ತುಂಬಿದೆ. ಕಳೆದ ಒಂದು ತಿಂಗಳಿಂದ ಅಕಾಲಿಕೆ ಮಳೆ ಅಬ್ಬರಿಸುತ್ತಿದೆ. ಆದ್ರೆ ದೊಡ್ಡಕೆರೆಯಲ್ಲಿ ನೀರು ಮಾತ್ರ ಶೇಖರಣೆಯಾಗುತ್ತಿಲ್ಲ. ಆನೇಕಲ್ ಪಟ್ಟಣದ ಕೊಳಚೆ ನೀರು ಮಾತ್ರ ಕೆರೆಗೆ ಹರಿದು ಬರುತ್ತಿದ್ದು, ಗಬ್ಬುನಾರುತ್ತಿದೆ.

ರಾಜಕಾಲುವೆಗಳ ಒತ್ತುವರಿಯಿಂದ ಬರಿದಾದ ಕೆರೆ 

ರಾಜಕಾಲುವೆಗಳು ಮತ್ತು ಸಂಪರ್ಕ ಕಾಲುವೆಗಳ ಮೂಲಕ ಮಳೆ ನೀರು ಕೆರೆಗೆ ಸರಾಗವಾಗಿ ಹರಿದು ಬರುತ್ತಿತ್ತು. ಆದ್ರೆ ಈಗ ರಾಜಕಾಲುವೆಗಳು ಒತ್ತುವರಿಯಾಗಿವೆ. ಇದರಿಂದ ಕೆರೆಗೆ ನೀರಿನ ಹರಿವು ಇಲ್ಲದೆ ಬರಿದಾಗಿದೆ. ಕೆರೆ ತುಂಬಿ 20 ವರ್ಷಗಳು ಕಳೆದಿದೆ. ಹಲವು ಬಾರಿ ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸಿದರು ಮತ್ತೆ ಮತ್ತೆ ಒತ್ತುವರಿಯಾಗುತ್ತಿದೆ. ಹಾಗಾಗಿ ರಾಜಕಾಲುವೆಗಳ ಒತ್ತುವರಿದಾರರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಸಂಬಂದಪಟ್ಟ ಅಧಿಕಾರಿಗಳು ಮುಂದಾಗಬೇಕಿದೆ ಎಂದು ಸ್ಥಳೀಯರಾದ ಶ್ರೀಕಂಠಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

18 ವರ್ಷಗಳಿಂದ ಕೆರೆ ತುಂಬಿಲ್ಲ
 
ಕೃಷಿ ಮತ್ತು ಜಾನುವಾರುಗಳಿಗೆ ನೀರಿನ ಮೂಲವಾಗಿದ್ದ ದೊಡ್ಡ ಕೆರೆ ಇಂದು ನೀರಿಲ್ಲದೆ ಬತ್ತಿಹೋಗಿದೆ. ತಾವು ಚಿಕ್ಕ ವಯಸ್ಸಿನಲ್ಲಿ ಒಂದು ದಿನಕ್ಕೆ ಕೆರೆ ತುಂಬಿ ಕೋಡಿ ಹೋಗುತ್ತಿತ್ತು.  ಆಗ ವರ್ಷಕ್ಕೆ ರೈತರು ಮೂರು ಬೆಳೆ ತೆಗೆಯುತ್ತಿದ್ರು. ಈಗ ಒಂದು ಬೆಳೆ ತೆಗೆಯುವುದು ಕಷ್ಟವಾಗಿದೆ. ಇದು ಹೀಗೆ ಮುಂದುವರಿದರೆ ಜಲಕ್ಷಾಮ ಬಂದೆರಗಿದ್ರು ಆಶ್ಚರ್ಯಪಡಬೇಕಿಲ್ಲ ಎನ್ನುವ ರೈತರು ಕಳೆದ 18 ವರ್ಷಗಳಿಂದ ಕೆರೆ ತುಂಬಿಲ್ಲ. ಆನೇಕಲ್ ಪಟ್ಟಣದ ಕೊಳಚೆ ನೀರು ಕೆರೆ ಸೇರುತ್ತಿದ್ದು, ಕಲುಷಿತಗೊಂಡಿದೆ. ಆಧಿಕಾರಿಗಳು ಮಾತ್ರ ಕೆರೆ ಉಳಿವಿಗೆ ಕ್ರಮಕೈಗೊಂಡಿಲ್ಲ ಎಂದು ರೈತ ನಾರಾಯಣಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಹಶೀಲ್ದಾರ್ ಭರವಸೆ 
 
ದೊಡ್ಡ ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಗಳು ಈ ಹಿಂದೆ ಒತ್ತುವರಿಯಾಗಿದ್ವು. ಅವುಗಳನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಮತ್ತೆ ಒತ್ತುವರಿಯಾಗಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಾಜಕಾಲುವೆಗಳು ಒತ್ತುವರಿಯಾಗಿರುವ ಬಗ್ಗೆ ಸರ್ವೆ ಕಾರ್ಯಕ್ಕೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಕೆಲವೇ ದಿನಗಳಲ್ಲಿ ಒತ್ತುವರಿಯಾಗಿರುವ ರಾಜಕಾಲುವೆಗಳನ್ನು ಮುಲಾಜಿಲ್ಲದೆ ತೆರವುಗೊಳಿಸಲಾಗುವುದು. ಸದ್ಯ ಸರ್ವೆಯರ್ಗಳ ಕೊರತೆ ಇದೆ. ಹಾಗಾಗಿ ಹಂತ ಹಂತವಾಗಿ ರಾಜಕಾಲುವೆ ಮತ್ತು ಸಂಪರ್ಕ ಕಾಲುವೆಗಳನ್ನು ತೆರವುಗೊಳಿಸಲು ಸೂಕ್ತ ಕ್ರಮ ವಹಿಸಲಾಗುವುದು ಎಂದು ತಹಶೀಲ್ದಾರ್ ದಿನೇಶ್ ತಿಳಿಸಿದ್ದಾರೆ.

ಮಳೆ ಬಂದ್ರೂ ಕೆರೆಗೆ ಮಳೆ ನೀರು ಸಂಗ್ರಹವಾಗದೆ ಆನೇಕಲ್ ದೊಡ್ಡಕೆರೆ ನೀರಿನ ಬರ ಎದುರಿಸುತ್ತಿದ್ದು, ಇದು ಹೀಗೆ ಮುಂದುವರಿದರೆ ಪುರಾತನವಾದ ಆನೇಕಲ್ ದೊಡ್ಡ ಕೆರೆ ಅಸ್ತಿತ್ವ ಕಳೆದುಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಇನ್ನಾದ್ರು ತಾಲ್ಲೂಕು ಆಡಳಿತ ಎಚ್ಚೆತ್ತು ಕೆರೆ ಅಭಿವೃದ್ದಿಗೆ ಮುಂದಾಗಬೇಕಿದೆ.

ಇದನ್ನೂ ಓದಿ: ಚೇತರಿಕೆ ಕಾಣುತ್ತಿರುವ Coastal Tourism ಮೇಲೆ ಮತ್ತೆ Corona ಕರಿನೆರಳು; ಕರಾವಳಿ ಭಾಗದಲ್ಲಿ ಆತಂಕ

ಇನ್ನು ಬರದ ಭೂಮಿಯಾಗಿ ಬಯಲುಸೀಮೆಯಾಗಿದ್ದ ಚಿತ್ರದುರ್ಗದಲ್ಲಿ ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಲಾದ ಮಾರಿಕಣಿವೆ ಅಥವಾ ವಾಣಿವಿಲಾಸಸಾಗರ ಜಲಾಶಯ ಚಂಡಮಾರುತದ ಪರಿಣಾಮ ಕಳೆದ 15 ದಿನಗಳ ಹಿಂದೆ ಸುರಿದ ಜಿಟಿ-ಜಿಟಿ ಮಳೆಯಿಂದ ಹಾಗೂ ಭದ್ರಾ ಜಲಾಶಯದಿಂದ ಹರಿಸಿದ ನೀರಿನಿಂದ ತುಂಬುವ ಹಂತಕ್ಕೆ ಬಂದು ತಲುಪಿದೆ. ಸದ್ಯ ಜಲಾಶಯದ ನೀರಿನ ಮಟ್ಟ 122.75 ಅಡಿಗೆ ಬಂದು ತಲುಪಿದ್ದು, ಶೀಘ್ರವೇ ಡ್ಯಾಮ್ ತುಂಬುವ ವಿಶ್ವಾಸದಲ್ಲಿ ರೈತರು ಇದ್ದಾರೆ.
Published by:Kavya V
First published: