• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Actress Leelavathi: ಬಚ್ಚಲು ಮನೆಯಲ್ಲಿ ಕಾಲು ಜಾರಿ ಬಿದ್ದು ನಟಿ ಲೀಲಾವತಿ ಅವರ ಬೆನ್ನಿನ ಮೂಳೆಗೆ ಹಾನಿ!

Actress Leelavathi: ಬಚ್ಚಲು ಮನೆಯಲ್ಲಿ ಕಾಲು ಜಾರಿ ಬಿದ್ದು ನಟಿ ಲೀಲಾವತಿ ಅವರ ಬೆನ್ನಿನ ಮೂಳೆಗೆ ಹಾನಿ!

ನಟಿ ಲೀಲಾವತಿ, ಪುತ್ರ ವಿನೋದ್​ ರಾಜ್​

ನಟಿ ಲೀಲಾವತಿ, ಪುತ್ರ ವಿನೋದ್​ ರಾಜ್​

ಬಚ್ಚಲು ಮನೆಗೆ ಹೋಗಿದ್ದಾಗ ಕಾಲು ಜಾರಿ ಬಿದ್ದುಬಿಟ್ಟಿದ್ದಾರೆ. ಎದ್ದು ಬಚ್ಚಲು ಮನೆಯ ಚಿಲಕ ತೆಗೆಯಲು ಆಗದೆ ಅರ್ಧ-ಮುಕ್ಕಾಲು ಗಂಟೆ ಒದ್ದಾಡಿದ್ದಾರೆ. ಜೋರಾಗಿ ಕೂಗಿ ಯಾರನ್ನಾದರೂ ಕರೆಯಲು ಸಾಧ್ಯವಾಗದೆ ನರಳಾಡಿದ್ದಾರೆ.

  • Share this:

    ನೆಲಮಂಗಲ: ಹಿರಿಯ ನಟಿ ಲೀಲಾವತಿ ಕಾಲು ಜಾರಿ ಬಿದ್ದು ಸೊಂಟದ ಮೂಳೆಗೆ ಗಾಯವಾಗಿದೆ. ಸೋಲದೇವನಹಳ್ಳಿ ತೋಟದ ಮನೆಯಲ್ಲಿ ಇಂದು ಬಚ್ಚಲ ಮನೆಗೆ ಹೋಗಿದ್ದಾಗ ಬಿದ್ದಿದ್ದಾರೆ ಎಂದು ಅವರ ಪುತ್ರ, ನಟ ವಿನೋದ್​ ರಾಜ್  ಮಾಹಿತಿ ನೀಡಿದರು. ಬಚ್ಚಲು ಮನೆಗೆ ಹೋಗಿದ್ದಾಗ ಕಾಲು ಜಾರಿ ಬಿದ್ದುಬಿಟ್ಟಿದ್ದಾರೆ. ಎದ್ದು ಬಚ್ಚಲ ಮನೆಯ ಚಿಲಕ ತೆಗೆಯಲು ಆಗದೆ ಅರ್ಧ-ಮುಕ್ಕಾಲು ಗಂಟೆ ಒದ್ದಾಡಿದ್ದಾರೆ. ಜೋರಾಗಿ ಕೂಗಿ ಯಾರನ್ನಾದರೂ ಕರೆಯಲು ಸಾಧ್ಯವಾಗದೆ ಬಚ್ಚಲ ಮನೆಯಲ್ಲೇ ನರಳಾಡಿದ್ದಾರೆ. ಕೊನೆಗೆ ಸುಧಾರಿಸಿಕೊಂಡು ಅವರೇ ಬೀಗ ತೆಗೆದು ಹೊರ ಬಂದಿದ್ದಾರೆ ಎಂದು ವಿನೋದ್​ ರಾಜ್​ ​ ತಿಳಿಸಿದರು.


    ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಲೀಲಾವತಿಯವರು ಚಿಕಿತ್ಸೆ ಪಡೆದಿದ್ದಾರೆ. ಅಮ್ಮನಿಗೆ ನೋವು ತಡೆಯಲಾಗುತ್ತಿರಲಿಲ್ಲ, ಹೀಗಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇನೆ. ಅಮ್ಮನನ್ನು ಪರೀಕ್ಷಿಸಿದ ವೈದ್ಯರು ದೊಡ್ಡ ಅಪಾಯವೇನು ಇಲ್ಲ. ಆದರೆ ಬೆನ್ನಿನ ಮೂಳೆಗೆ ಸಣ್ಣ ಗಾಯವಾಗಿದೆ ಎಂದು ತಿಳಿಸಿದ್ದಾರೆ. ಬೆನ್ನಿಗೆ ಬೆಂಬಲವಾಗಿ ಪಟ್ಟಿ ನೀಡಿದ್ದಾರೆ ಎಂದು ಎಂದು ವಿನೋದ್​ ತಿಳಿಸಿದರು. ಮನೆಯಲ್ಲೇ ಒಂದು ತಿಂಗಳ ಕಾಲ ಚಿಕಿತ್ಸೆ ಜೊತೆಗೆ ವಿಶ್ರಾಂತಿಗೆ ವೈದ್ಯರು ಸೂಚನೆ ನೀಡಿದ್ದಾರೆ.


    ಹಿರಿಯ ನಟಿ ಲೀಲಾವತಿ ಅವರಿಗೆ 83 ವರ್ಷ ವಯಸ್ಸಾಗಿದ್ದು, ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳ ನೂರಾರು ಸಿನಿಮಾಗಳಲ್ಲಿ ಲೀಲಾವತಿ ಅವರು ನಟಿಸಿದ್ದಾರೆ. ಸದ್ಯ ನಟನೆಯಿಂದ ದೂರವಿರುವ ಅವರು ಪುತ್ರ ವಿನೋದ್​ ರಾಜ್​ ​ ಅವರ ಜೊತೆ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ತೋಟದ ಮನೆಯಲ್ಲಿ ನೆಲೆಸಿದ್ದಾರೆ.


    ಇದನ್ನೂ ಓದಿ: ಐಷಾರಾಮಿ ಕಾರಿಗೆ ತೆರಿಗೆ ವಿನಾಯಿತಿ ಕೋರಿದ್ದ ನಟ ಧನುಷ್‌ರನ್ನು ತರಾಟೆಗೆ ತೆಗೆದುಕೊಂಡ ಮದ್ರಾಸ್‌ ಹೈಕೋರ್ಟ್‌


    ಇನ್ನು 2-3 ದಿನಗಳ ಹಿಂದೆ ವಿನೋದ್​ ರಾಜ್​ ​​​ ತಮ್ಮ ಬಗೆಗಿನ ಅವಹೇಳನಕಾರಿ ಪೋಸ್ಟ್​​ ವಿರುದ್ಧ ಸೈಬರ್​​ ಕ್ರೈಂ ಠಾಣೆಗೆ ಭೇಟಿ ನೀಡಿದ್ದರು. ಕಳೆದ 8 ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ನಟ ವಿನೋದ್ ರಾಜ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಹರಿದಾಡಿತ್ತು. ಈ ಕುರಿತು ವಿನೋದ್​ ರಾಜ್​ ​​ ಉತ್ತರ CEN ರಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ಸಂಬಂಧ ಪೊಲೀಸರು ಹೆಚ್ಚಿನ ಮಾಹಿತಿಗೆ ವಿನೋದ್​ ರಾಜ್  ಅವರನ್ನು ಕರೆಸಿದ್ದರು. ತನಿಖಾ ಹಂತದಲ್ಲಿ ಕೆಲವು ಮಾಹಿತಿಯನ್ನು ಪೊಲೀಸ್ರು ಕಲೆ ಹಾಕಿದ್ದಾರೆ. ಆ ಹಿನ್ನೆಲೆ ಹೆಚ್ಚಿನ ಮಾಹಿತಿಗೆ ಕರೆಸಿದ್ದರು.


    ಠಾಣೆ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ವಿನೋದ್​ ರಾಜ್​  ಬೇಸರ ವ್ಯಕ್ತಪಡಿಸಿದ್ದರು. ನಾನು ಫೇಸ್​ಬುಕ್​ ಸೇರಿದಂತೆ ಯಾವುದೇ ಸಾಮಾಜಿಕ ಮಾಧ್ಯಮಗಳನ್ನು ಬಳಸೋಲ್ಲ, ಸಕ್ರಿಯವಾಗಿಯೂ ಇಲ್ಲ. ಆದರೆ ಕೆಲ ತಿಂಗಳುಗಳ ಹಿಂದೆ ನನ್ನ ಮಾನಹಾನಿ ಆಗುವಂತ ಫೋಟೋವೊಂದ ಫೇಸ್​ಬುಕ್​ನಲ್ಲಿ ಪೋಸ್ಟ್​ ಆಗಿರುವುದನ್ನು ಸ್ನೇಹಿತರು ನನ್ನ ಗಮನಕ್ಕೆ ತಂದರು. ನನಗೆ ನಿಜಕ್ಕೂ ಶಾಕ್​​ ಆಯಿತು.


    ನನ್ನ ಫೋಟೋವನ್ನು ತಿರುಚಿ ಅವಹೇಳಕಾರಿಯಾಗಿ ಪೋಸ್ಟ್​​ ಮಾಡಲಾಗಿತ್ತು. ಫೋಟೋ ತಿರುಚುವಿಕೆಯಿಂದ ಮಾನ ಕಳೆಯುವ ಪ್ರಯತ್ನ ನಡೆದಿತ್ತು. ಇದರ ವಿರುದ್ಧ ದೂರು ನೀಡೋಣ ಎಂದು ಸ್ನೇಹಿತರೇ ಸಲಹೆ ನೀಡಿದರು. ಯಾರಿಗದರೂ ಈ ರೀತಿ ಮಾಡಿದರೆ ತುಂಬಾ ನೋವಾಗುತ್ತೆ. ಸುಳ್ಳು ಸುದ್ದಿ, ಸುಳ್ಳು ಆರೋಪಗಳು ಯಾರಿಗಾದರೂ ಬೇಸರ ತರಿಸುತ್ತೆ. ನಾನು ನನ್ನ ತಾಯಿಯನ್ನು ನೋಡಿಕೊಂಡು, ಕೃಷಿ ಮಾಡಿಕೊಂಡು ನಮ್ಮ ಪಾಡಿಗೆ ನಾವಿದ್ದೇವೆ. ನಮ್ಮ ವಿರುದ್ಧ ಮಾನಹಾನಿ ಪೋಸ್ಟ್​ ಯಾರು ಮಾಡಿದ್ದಾರೋ ಗೊತ್ತಿಲ್ಲ ಎಂದು ವಿನೋದ್​ ತಿಳಿಸಿದ್ದರು.

    Published by:Kavya V
    First published: