Suicide: ವೈದ್ಯ ದಂಪತಿಯ ಒಬ್ಬನೇ ಮಗ ಆತ್ಮಹತ್ಯೆಗೆ ಶರಣು.. ‘ಪ್ರಪೋಸ್ ಡೇ’ ಸುತ್ತ ಅನುಮಾನ..!

ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯರಾಗಿರುವ ಶರಣು ಪಾಟೀಲ್ ಮತ್ತು ಮಮತಾ ಅವರ  ಏಕೈಕ ಪುತ್ರ ಆದಿತ್ಯ ಪಾಟೀಲ್ ಆತ್ಮಹತ್ಯೆ. ಬೇಗೂರು ಸಮೀಪದ ಟ್ರಿಮಿಸ್ ಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಆದಿತ್ಯ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಆನೇಕಲ್  : ಆತ ಮೃದು ಸ್ವಭಾವದ ಹುಡುಗ. ಪ್ರತಿಷ್ಠಿತ ಶಾಲೆಯೊಂದರಲ್ಲಿ (Prestigious School) ಹತ್ತನೇ ತರಗತಿ ವ್ಯಾಸಂಗ (10th Standard Student )ಮಾಡುತ್ತಿದ್ದ, ಹುಡುಗ ಓದಿನಲ್ಲೂ ಮುಂದಿದ್ದ. ಅಪ್ಪ ಅಮ್ಮ ಇಬ್ಬರು ವೈದ್ಯರಾಗಿದ್ದು, ಯಾವುದಕ್ಕೂ ಕೊರತೆ ಇರಲಿಲ್ಲ. ಆದ್ರೆ ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಐದಂತಸ್ತಿನ ಮಹಡಿಯಿಂದ ಹಾರಿ ಆತ್ಮಹತ್ಯೆಗೆ (Suicide) ಶರಣಾಗಿದ್ದಾನೆ. ಅಷ್ಟಕ್ಕೂ ಪ್ರತಿಷ್ಠಿತ ಆಸ್ಪತ್ರೆಯ ವೈದ್ಯ ದಂಪತಿಯ ಒಬ್ಬನೇ ಮಗನ ಹೆಸರು ಆದಿತ್ಯ ಪಾಟೀಲ್.  ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಕಮ್ಮಸಂದ್ರ ಸಮೀಪದ ಡ್ಯಾಡಿಸ್ ಬಡಾವಣೆ ಗಾರ್ಡನ್ ಅಪಾರ್ಟ್ಮೆಂಟ್ ನ ಐದನೇ ಮಹಡಿಯ ತೆರೆಸ್ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಬಾಲಕ. ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯರಾಗಿರುವ ಶರಣು ಪಾಟೀಲ್ ಮತ್ತು ಮಮತಾ ಅವರ  ಏಕೈಕ ಪುತ್ರ ಆದಿತ್ಯ ಪಾಟೀಲ್. ಬೇಗೂರು ಸಮೀಪದ ಟ್ರಿಮಿಸ್ ಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಆದಿತ್ಯನಿಗೆ ಕಳೆದ ಎರಡು ದಿನಗಳಿಂದ ತರಗತಿ ಪರೀಕ್ಷೆ ನಡೆಯುತ್ತಿತ್ತು. ಇಂದು ಸಹ ಒಂದು ಗಂಟೆಗೆ ಪರೀಕ್ಷೆಗೆ ಹಾಜರಾಗಬೇಕಿತ್ತು. ಈ ನಡುವೆ ಆತ್ಮಹತ್ಯೆಗೆ ಶರಣಾಗಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

ಅಂಗಡಿಗೆ ಹೋದವನು ವಾಪಸ್​ ಬರಲೇ ಇಲ್ಲ  

ಸದಾ ಹಸ್ಮುಖಿ, ಲವಲವಿಕೆಯಿಂದ ಇರ್ತಿದ್ದ. ಮಾಡಿದ ಆಡುಗೆ ತಿನ್ನುತ್ತಿದ್ದ. ಅಂಟಿ ನಾಳೆ ಪನ್ನೀರು ಮಾಡಿಕೊಂಡಿ ಎಂದಿದ್ದ. ತುಂಬಾ ಒಳ್ಳೆ ಹುಡುಗ. ಇವತ್ತು ಪರೀಕ್ಷೆಗೆ ಹೋಗ ಬೇಕಿತ್ತು. ಕ್ಯಾಬ್ ಸಹ ಶಾಲೆಗೆ ಕರೆದೊಯ್ಯಲು ಬಂದಿತ್ತು. ಪರೀಕ್ಷೆ ಬರೆಯಲು ಶಾಲೆಗೆ ಹೋಗಲು ಸಿದ್ದವಾಗು ಎಂದಾಗ ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂಸ ಹೊರಟ. ಎಷ್ಟೊತ್ತಾದರೂ ಮನೆಗೆ ಮರಳದಿದ್ದಾಗ ಹುಡುಕುವಂತೆ ಡ್ರೈವರ್ ಗೆ ತಿಳಿಸಿದೆ. ಅಷ್ಟೊತ್ತಿಗೆ ಕೆಲಸ ಮುಗಿದ್ದಿದ್ದರಿಂದ ಮನಗೆ ಹೊರಟು ಬಿಟ್ಟೆ, ಅಕ್ಕಪಕ್ಕ ನೋಡಲಿಲ್ಲ ಎಂದು ಮನೆಗೆಲಸದಾಕೆ  ರಾಜಮ್ಮ ತಿಳಿಸಿದ್ದಾರೆ.

ಇದನ್ನೂ ಓದಿ: Hijab Controversy: 3 ದಿನಗಳ ಕಾಲ ಶಾಲಾ-ಕಾಲೇಜುಗಳಿಗೆ ರಜೆ: ನಾಳೆ ಮತ್ತೆ ಹೈಕೋರ್ಟ್​​ನಲ್ಲಿ​​ ವಿಚಾರಣೆ

ಸಾಯಲು ಕಾರಣವೇ ಇರಲಿಲ್ಲವಂತೆ.. 

ಇನ್ನೂ ಕಳೆದ ಒಂದು ತಿಂಗಳಿಂದ ಯಾರೊಂದಿಗು ಹೋಗಲು ಬಿಟ್ಟಿರಲಿಲ್ಲ. ರೂಮಿನಲ್ಲೇ ಕುಳಿತು ಓದಿಕೊಳ್ಳುತ್ತಿದ್ದನು. ಯಾವುದೇ ಕೆಟ್ಟ ಅಭ್ಯಾಸ ಇರಲಿಲ್ಲ. ಚಿಕ್ಕ ಮಗುವಿನಿಂದ ನೋಡಿದ್ದೆವೆ. ಹೊರಗಡೆ ಹೋಗಬೇಕಾದರು ಹೇಳಿ ಹೋಗುತ್ತಿದ್ದರು. ಅಪ್ಪ ಅಮ್ಮ ಮಗನನ್ನು ಬೈಯ್ಯುವಂತರಲ್ಲ. ಮೊಬೈಲ್ ವಿಚಾರವಾಗಿ ಯಾವುದೇ ಜಗಳ ಸಹ ನಡೆದಿಲ್ಲ. ಶಾಲೆಗೆ ಕರೆದೊಯ್ಯಲು ಕಾರು ಬಂದಾಗ ಐದು ನಿಮಿಷ ರೆಡಿಯಾಗುತ್ತೆನೆ ಎಂದು ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಹೋದವನು ಬಾರದ ಲೋಕಕ್ಕೆ ಹೋಗಿದ್ದಾನೆ ಎಂದು ಮನೆ ಕೆಲಸದಾಕೆ ರತ್ನಮ್ಮ ತಿಳಿಸಿದ್ದಾರೆ.

ಪ್ರಪೋಸ್ ಡೇ ಇದೆಯಾ ಸಂಬಂಧ..? 

ಸದ್ಯ ಘಟನಾ ಸ್ಥಳಕ್ಕೆ ಆನೇಕಲ್ ಉಪವಿಭಾಗದ ಡಿವೈಎಸ್ಪಿ ಮಲ್ಲೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಂದಹಾಗೆ ಪರೀಕ್ಷೆ ಹಿನ್ನೆಲೆ ಕಳೆದ ಒಂದು ತಿಂಗಳಿಂದ ಆದಿತ್ಯನ ಪೋಷಕರು ಮೊಬೈಲ್ ನೀಡಿರಲಿಲ್ಲ. ಹಾಗಾಗಿ ಕಳೆದ ಒಂದು ತಿಂಗಳಿನಿಂದ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ. ಜೊತೆಗೆ ಇಂದು ಪ್ರಪೋಸ್ ಡೇ ಆಗಿದ್ದು, ಕಾಕತಾಳೀಯವಾಗಿ ಇಂದೇ ಆದಿತ್ಯ ಆತ್ಮಹತ್ಯೆ ಮಾಡಿಕೊಂಡಿಕೊಂಡಿರುವುದರಿಂದ ಯಾವುದಾದರೂ ಹುಡುಗಿಗೆ ಪ್ರಾಪೊಸ್ ಮಾಡಿ ಒಪ್ಪದಿದ್ದಾಗ ಆತ್ಮಹತ್ಯೆ ಮಾಡಿಕೊಂಡನಾ ಎಂಬ ಶಂಕೆ ಮೂಡುತ್ತಿದ್ದು, ಪೊಲೀಸರ ತನಿಖೆಯಿಂದ ಆದಿತ್ಯನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬರಬೇಕಿದೆ.

ವಿಶೇಷ ಸೂಚನೆ: ಆತ್ಮಹತ್ಯೆಯಂತಹ ಸುದ್ದಿಗಳು ನಿಮ್ಮ ಮನಸ್ಸಿಗೆ ಆಘಾತ ಉಂಟು ಮಾಡಿದ್ದರೆ, ಕೂಡಲೇ ಸಂಬಂಧಪಟ್ಟವರನ್ನು ಸಂಪರ್ಕಿಸಿ. ಆತ್ಮಹತ್ಯಾ ಯೋಚನೆಗಳು ಕ್ಷಣಿಕವಾಗಿದ್ದು, ಸಮಾಲೋಚನೆ ಮೂಲಕ ಪರಿಹಾರ ಕಂಡುಕೊಳ್ಳಬಹುದು.

ವರದಿ : ಆದೂರು ಚಂದ್ರು
Published by:Kavya V
First published: