IT BT Shock: ಒಂದೇ ಮಳೆಗೆ ಸಿಲಿಕಾನ್ ಸಿಟಿ ಬರ್ಬಾದ್! 255 ಕೋಟಿ ನಷ್ಟ, ಐಟಿ ಕಂಪೆನಿಗಳಿಂದ ಬೆಂಗಳೂರು ತೊರೆಯುವ ಎಚ್ಚರಿಕೆ

ಮಳೆಯಿಂದಾದ ಅವಾಂತರದಿಂದ ಆಕ್ರೋಶಗೊಂಡಿರುವ ಬೆಂಗಳೂರು ಐಟಿ ಕಂಪೆನಿಗಳು ವಲಸೆ ಹೋಗುವ ಎಚ್ಚರಿಕೆ ನೀಡಿದೆ. ಖ್ಯಾತ ಉದ್ಯಮಿ ಮೋಹನ್ ದಾಸ್ ಪೈಯವರ ಅಧ್ಯಕ್ಷತೆಯ ಸಂಘದಿಂದ ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆಯಲಾಗಿದೆ. ನಾವು ಬೆಂಗಳೂರು ಬಿಡಬೇಕಾದೀತು ಅಂತಾ ಐಟಿ ಕಂಪೆನಿಗಳು ಸರ್ಕಾರಕ್ಕೆ ಎಚ್ಚರಿಸಿದೆ.

ರಸ್ತೆಗಳು ಜಲಾವೃತ

ರಸ್ತೆಗಳು ಜಲಾವೃತ

  • Share this:
ಐಟಿ ಬಿಟಿ ಸಿಟಿ ಬೆಂಗಳೂರಿಗೆ (Bengaluru) ಶಾಕಿಂಗ್ ಎದುರಾಗಿದೆ. ಒಂದೇ ಒಂದು ಮಳೆಗೆ ಬೆಂಗಳೂರಿನ ಮಾನ ಮರ್ಯಾದೆ ಹರಾಜಾಗಿದೆ. ಕಳೆದ ಆಗಸ್ಟ್ 30ರಂದು ಸುರಿದ ಮಳೆಗೆ ಐಟಿ ಬಿಟಿ (IT BT) ಏರಿಯಾಗಳು ಸಂಪೂರ್ಣ ಜಲಾವೃತವಾಗಿ (Heavy Rain)  ಬೆಂಗಳೂರಿನ ನಿಜ ದರ್ಶನ ಮಾಡಿಸಿದೆ. ಒತ್ತುವರಿ, ಚರಂಡಿ ಅವ್ಯವಸ್ಥೆ, ಕಿತ್ತೋದ ಫುಟ್​ಪಾತ್​​​ಗಳಿಂದ ನೀರು ನಿಂತಲ್ಲೇ ನಿಂತಿತ್ತು. ಕೇಂದ್ರೀಯ ರೇಷ್ಮೆ ಮಂಡಳಿಯಿಂದ ಕೆ.ಆರ್​. ಪುರಂವರೆಗೆ 17 ಕಿಮಿ ಅಂತರದಲ್ಲಿ ಅನೇಕ ಐಟಿ ಕಂಪನಿಗಳು ಇದೆ . ಎಕೋಸ್ಪೇಸ್ ಭಾಗದ ಹೊರವರ್ತುಲ ರಸ್ತೆ ಐಟಿ ಟೆಕ್ ಪಾರ್ಕ್ ಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ. ಆದರೆ ಮಳೆ ಬಂದು ಅಲ್ಲಿ ನೀರು ನಿಂತು (Road Block) ಪರದಾಡುವಂತಾಗಿತ್ತು. ಇದರಿಂದಾಗಿ ಐಟಿ ಕಂಪೆನಿಗಳು ಬೆಂಗಳೂರನ್ನು ತೊರೆಯುವ ಎಚ್ಚರಿಕೆ (Warning to Karnataka Government) ನೀಡಿದೆ.

ಬೆಂಗಳೂರಿನಿಂದ ಐಟಿ ಕಂಪನಿಗಳ ವಲಸೆ ಎಚ್ಚರಿಕೆ..!
ಮಳೆಯಿಂದಾದ ಅವಾಂತರದಿಂದ ಕೊಟ್ಯಾಂತರ ನಷ್ಟ ಉಂಟಾಗಿತ್ತು. ಇದರಿಂದ ಆಕ್ರೋಶಗೊಂಡಿರುವ ಬೆಂಗಳೂರು ಐಟಿ ಕಂಪೆನಿಗಳು ವಲಸೆ ಹೋಗುವ ಎಚ್ಚರಿಕೆ ನೀಡಿದೆ. ಖ್ಯಾತ ಉದ್ಯಮಿ ಮೋಹನ್ ದಾಸ್ ಪೈಯವರ ಅಧ್ಯಕ್ಷತೆಯ ಸಂಘದಿಂದ ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆಯಲಾಗಿದೆ. ನಾವು ಬೆಂಗಳೂರು ಬಿಡಬೇಕಾದೀತು ಅಂತಾ ಐಟಿ ಕಂಪೆನಿಗಳು ಸರ್ಕಾರಕ್ಕೆ ಎಚ್ಚರಿಸಿದೆ.

ಆ.30ರ ಮಳೆಗೆ 255 ಕೋಟಿ ರೂ ನಷ್ಟ..!
ಆಗಸ್ಟ್ 30ರಂದು ಬೆಂಗಳೂರಿನಲ್ಲಿ ಭಾರೀ ಮಳೆಯಾಗಿತ್ತು. ಪರಿಣಾದ 5 ಗಂಟೆಗಳ ಕಾಲ ಔಟರ್ ರಿಂಗ್ ರೋಡ್ನಲ್ಲಿ ನೂರಾರು ಟೆಕ್ಕಿಗಳು ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಹಾಕಿಕೊಂಡಿದ್ರು. ಇದೆಲ್ಲದರ ಪರಿಣಾಮ ಅಂದು ಒಂದೇ ದಿನ ಬರೋಬ್ಬರಿ 255 ಕೋಟಿ ರೂಪಾಯಿ ನಷ್ಟವಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಚೈನೀಸ್ ಆ್ಯಪ್​​ಗಳಿಗೆ ಶಾಕ್! ಇಡಿ ದಾಳಿ, 17 ಕೋಟಿ ವಶಕ್ಕೆ

ಬೆಂಗಳೂರಿಗೆ ಶೇ.32ರಷ್ಟು ತೆರಿಗೆ ಐಟಿ ಕಂಪೆನಿಗಳಿಂದಲೇ ಪಾವತಿ!
ಶೇ 32% ನಷ್ಟು ಬೆಂಗಳೂರಿನ ಆದಾಯದ ತೆರಿಗೆ ಈ ಭಾಗದ ಐಟಿ ಕಂಪನಿಗಳೇ ಪಾವತಿ ಮಾಡುತ್ತಿದೆ. ಐಟಿ ಕಂಪೆನಿಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಿದೆ. ಆದ್ರೆ ಔಟರ್ ರಿಂಗ್ ರೋಡ್ನ ನಿರ್ವಹಣೆ ಇಲ್ಲದೇ ಕಂಪೆನಿಗಳಿಗೆ ನಷ್ಟವಾಗಿದೆ ಎಂದು ಪತ್ರದಲ್ಲಿ ಬರೆದು ಆಕ್ರೋಶ ಹೊರಹಾಕಲಾಗಿದೆ.

ಹೂಡಿಕೆ ವಾಪಸ್ ತೆಗೆದುಕೊಳ್ಳಬೇಕಾಗುತ್ತೆ ಅಂತಾ ಎಚ್ಚರಿಕೆ
ಬೊಮ್ಮಾಯಿಯವರೇ ಹೊರವರ್ತುಲ ಅಭಿವೃದ್ಧಿ ಬಗ್ಗೆ ಭರವಸೆ ಕೊಟ್ಟಿದ್ರಿ. ಆದ್ರೇ ಇದುವರೆಗೆ ಈಡೇರಿಲ್ಲ. ಐಟಿ ಕಾರಿಡಾರ್ ನಲ್ಲಿ ಯಾವ ಮೂಲಭೂತ ಸೌಕರ್ಯಗಳನ್ನು ಕೊಡಲಾಯಿತು ಎನ್ನೋದ್ರ ಬಗ್ಗೆ ವಿವರ ಕೊಡಿ ಅಂತಾ ಆಗ್ರಹಿಸಲಾಗಿದೆ. ಐಟಿ ಕಂಪನಿಗಳು ಅನಿವಾರ್ಯ ವಾಗಿ ಬೇರೆ ಕಡೆ ವಲಸೆ ಹೋಗಬೇಕಾಗುತ್ತೆ. ಹೂಡಿಕೆ ವಾಪಾಸು ತೆಗೆದುಕೊಳ್ಳಬೇಕಾಗುತ್ತೆ ಎಂತಾ ಐಟಿ ಕಂಪೆನಿಗಳು ಎಚ್ಚರಿಕೆ ಕೊಟ್ಟಿದೆ.

ಸಾಕು ನಿಮ್ಮ ದುರಾಸೆ- ನ್ಯಾ. ಸಂತೋಷ್ ಹೆಗ್ಡೆ ಕಿಡಿ
ಸರ್ಕಾರದ ವಿರುದ್ಧ ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಕಿಡಿಕಾರಿದ್ದಾರೆ. ಸರ್ಕಾರಕ್ಕೆ ಬಹುದೊಡ್ಡ ಆದಾಯ ತರುವ ವಲಯದ ನಿರ್ಲಕ್ಷ್ಯ ಸರಿಯಲ್ಲ. ಸಾಕು ನಿಮ್ಮ ದುರಾಸೆ. ಕಣ್ಣು ಮುಚ್ಚಿ ಕುಳಿತುಕೊಳ್ಳುವುದು ಇನ್ನು ಸಾಧ್ಯವಿಲ್ಲ. ದುರಾಸೆ ಬಿಟ್ಟು ಕೆಲ್ಸ ಮಾಡಿ ಅಂತಾ ಚಾಟಿ ಬೀಸಿದ್ದಾರೆ.

ಎಲ್ಲಾ ಗೋವಿಂದ ಗೋವಿಂದ- ಡಿಕೆಶಿ ಕಿಡಿ
ಬ್ರ್ಯಾಂಡ್ ಬೆಂಗಳೂರು ಹಾಳಾಗಿರುವ ಬಗ್ಗೆ ಐಟಿಯವರು ಪತ್ರ ಬರೆದಿದ್ದಕ್ಕೆ ಡಿಕೆಶಿ ಪ್ರತಿಕ್ರಿಯಿಸಿದ್ದಾರೆ. 20 ವರ್ಷದಿಂದ ಎಲ್ಲಾ ಉಳಿಸಿದ್ದೆವು. ಎಸ್.ಎಂ.ಕೃಷ್ಣ ಕಾಲದಲ್ಲೂ ಇತ್ತು. ಸಿದ್ದರಾಮಯ್ಯ ಕಾಲದಲ್ಲೂ ಬ್ರ್ಯಾಂಡ್ ಬೆಂಗಳೂರು ಉಳಿಸಿದ್ದೆವು. ಈಗ ಎಲ್ಲಾ ಗೋವಿಂದ ಗೋವಿಂದ ಅಂತಾ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ನಾಯಕರೇ ನೀವು ಒತ್ತುವರಿ ಸಮರ್ಥಿಸಿಕೊಳ್ತೀರಾ; ಶಾಸಕ ಅರವಿಂದ್ ಲಿಂಬಾವಳಿ ಪ್ರಶ್ನೆ

ಬಿಬಿಎಂಪಿಯಿಂದ ಒತ್ತುವರಿ ತೆರವು ಕಾರ್ಯಾಚರಣೆ
ಎಲ್ಲಾ ಕಡೆ ಆಕ್ರೋಶ ಹೆಚ್ಚಾಗ್ತಿದ್ದಂತೆ ನಗರದ ಹಲವು ಕಡೆ ಒತ್ತುವರಿ ತೆರವು ಕಾರ್ಯಾಚರಣೆ ಶುರುವಾಗಿದೆ. ದೊಡ್ಡ ಬೊಮ್ಮಸಂಧ್ರದ ಜಿಡಿ ಲೇ ಔಟ್ ನಲ್ಲಿ ತೆರವು ಕಾರ್ಯಾಚರಣೆ ಆರಂಭವಾಗಿದೆ. ರಾಜಕಾಲುವೆ ಒತ್ತುವರಿ ಮಾಡಿ ಅನಧಿಕೃತ ಕಟ್ಟಡ ಕಟ್ಟಿರೋರಿಗೆ ಶಾಕ್ ಎದುರಾಗಿದೆ.
Published by:Thara Kemmara
First published: