Route Change: ಸವಾರರೇ ಅಲರ್ಟ್; ಸರ್ಕಾರದ ಸಾಧನಾ ಸಮಾವೇಶ ಹಿನ್ನೆಲೆ ಮಾರ್ಗ ಬದಲಾವಣೆ: ಇಲ್ಲಿದೆ ಸಂಪೂರ್ಣ ಮಾಹಿತಿ

ನಾಳೆ ನಗರದಲ್ಲಿ ಸಂಚಾರ ದಟ್ಟಣೆ ಆಗುವ ಸಾಧ್ಯತೆಗಳಿದ್ದು, ಅದನ್ನು ತಪ್ಪಿಸಲು ಮಾರ್ಗ ಬದಲಾವಣೆ ಮಾಡಲಾಗಿದೆ. ಬೆಂಗಳೂರಿನಿಂದ ದೊಡ್ಡಬಳ್ಳಾಪುರಕ್ಕೆ ಹೋಗೋ ವಾಹನಗಳಿಗೆ ಸಂಚಾರಿ ಮಾರ್ಗ ಬದಲಾವಣೆ ಮಾಡಲಾಗಿದೆ. ಈ ಕೆಳಕಂಡ ಮಾರ್ಗಗಳ ಮೂಲಕ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
 ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ (Karnataka Chief Minister) ಬಸವರಾಜ ಬೊಮ್ಮಾಯಿ (Basavaraj Bommai) ಅಧಿಕಾರವಹಿಸಿಕೊಂಡು ನಾಳೆಗೆ (ಜು.28) 1 ವರ್ಷ ಆಗುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಸಾಧನಾ ಸಮಾವೇಶ (State Govt Sadhana Samavesha) ಹಮ್ಮಿಕೊಂಡಿದೆ. ನಗರದ ಹೊರ ವಲಯದ ದೊಡ್ಡಬಳ್ಳಾಪುರದಲ್ಲಿ ಸಮಾವೇಶ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಸಂಚಾರ ದಟ್ಟಣೆ ಆಗುವ ಸಾಧ್ಯತೆಗಳಿದ್ದು, ಅದನ್ನು ತಪ್ಪಿಸಲು ಮಾರ್ಗ ಬದಲಾವಣೆ ಮಾಡಲಾಗಿದೆ. ಬೆಂಗಳೂರಿನಿಂದ ದೊಡ್ಡಬಳ್ಳಾಪುರಕ್ಕೆ ಹೋಗೋ ವಾಹನಗಳಿಗೆ ಸಂಚಾರಿ ಮಾರ್ಗ ಬದಲಾವಣೆ ಮಾಡಲಾಗಿದೆ. ಈ ಕೆಳಕಂಡ ಮಾರ್ಗಗಳ ಮೂಲಕ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಎಲ್ಲೆಲ್ಲಿ ಮಾರ್ಗ ಬದಲಾವಣೆ..?

ಬಸವನಗುಡಿ, ಹನುಮಂತ ನಗರ, ಚಾಮರಾಜಪೇಟೆ, ಜೆ.ಜೆ ನಗರ ಕಡೆಯಿಂದ ಬರುವ ವಾಹನಗಳಿಗೆ - ಗೂಡ್ ಶೆಡ್ ರಸ್ತೆ ಮೂಲಕ ಆನಂದ್ ರಾವ್ ಸರ್ಕಲ್ ಫ್ಲೈ ಒವರ್-ಓಲ್ಡ್ ಜೆ.ಡಿಎಸ್ ಕಚೇರಿ- ರೇಸ್ ಕೋರ್ಸ್ ರಸ್ತೆ -ರೇಸ್ ವ್ಯೂವ್ ಜಂಕ್ಷನ್ ಮೂಲಕ ಕೆ.ಕೆ ರಸ್ತೆ ತಲುಪಿ ವಿಡ್ಸರ್ ಮ್ಯಾನರ್ ನಲ್ಲಿ ಎರಡ ತಿರುವು ಪಡೆದು ಮೇಖ್ರಿ ಸರ್ಕಲ್ ಮಾರ್ಗವಾಗಿ ಸಂಚರಿಸಬಹುದು. ಜೆ.ಪಿ‌ನಗರ ಕಡೆಯಿಂದ ಹೋಗೋ ವಾಹನಗಳು - ಜೆ.ಸಿ ರಸ್ತೆ, ಟೌನ್ ಹಾಲ್, ಎನ್ ಆರ್ ಜಂಕ್ಷನ್, ಪೊಲೀಸ್ ಕಾರ್ನರ್ ಬಳಿ ಎಡ ತಿರುವು ಪಡೆದು -ಕೆ.ಜಿ ರಸ್ತೆ ಮಾರ್ಗವಾಗಿ ಮೈಸೂರು ಬ್ಯಾಂಕ್ ಸರ್ಕಲ್ ನಿಂದ ಬಲ ತಿರುವು ಪಡೆದು- ಪ್ಯಾಲೇಸ್ ರಸ್ತೆ ಮೇಖ್ರಿ ಸರ್ಕಲ್ ಮೂಲಕ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಇದನ್ನೂ ಓದಿ: Praveen Nettar ಅಂತಿಮಯಾತ್ರೆ ವೇಳೆ ಕಟೀಲ್ ಅವರ ಕಾರು ಉರುಳಿಸಲು ಯತ್ನ, ಲಾಠಿ ಚಾರ್ಜ್

ಕೋರಮಂಗಲ, ಅಶೋಕ್ ನಗರ, ಆನೇಪಾಳ್ಯ, ವಿವೇಕನಗರ ಕಡೆಯಿಂದ ಬರೋ ವಾಹನಗಳಿಗೆ - ರಿಚ್ಮಂಡ್ ಸರ್ಕಲ್, ಆರ್ ಆರ್ ಎಮ್ ಆರ್, ಹಡ್ಸನ್ ಸರ್ಕಲ್ ನಲ್ಲಿ ಬಲ ತಿರುವು ಪಡೆದು, ಕೆ.ಬಿ ರಸ್ತೆ, ಸಿದ್ದಲಿಂಗಯ್ಯ ಜಂಕ್ಷನ್, ಕ್ವೀನ್ಸ್ ಜಂಕ್ಷನ್ ಬಳಿ ಎಡ ತಿರುವು ಪಡೆದು- ಕ್ವೀನ್ಸ್ ರಸ್ತೆ ಮಾರ್ಗವಾಗಿ ಸಿಟಿಓ ಜಂಕ್ಷನ್ ಎಡ ತಿರುವು, ಪೊಲೀಸ್ ತಿಮ್ಮಯ್ಯ ಜಂಕ್ಷನ್, ರಾಜಭವನ ರಸ್ತೆ ಮೂಲಕ ಹೈಗ್ರೌಂಡ್ಸ್ ಜಂಕ್ಷನ್ ಬಲ ತಿರುವು ಪಡೆದು ಬಸವೇಶ್ವರ ಜಂಕ್ಷನ್ ಬಳಿ ಬಲ ತಿರುವು ಪಡೆದು ವಿನ್ಸರ್ ಮ್ಯಾನರ್ ಜಂಕ್ಷನ್ ಮೂಲಕ‌ ಮೇಖ್ರಿ ಸರ್ಕಲ್ ಮಾರ್ಗವಾಗಿ ಸಂಚರಿಸಬಹುದು.

ಭಾರಿ‌ ವಾಹನಗಳಿಗೆ ಮಾರ್ಗ ಬದಲಾವಣೆ

ತುಮಕೂರು ಕಡೆಗೆ ಹೊಗುವ ವಾಹನಗಳಿಗೆ ಮಾರ್ಗ:  ಅನಂತಪುರ, ಬಾಗೇಪಲ್ಲಿ, ಚಿಕ್ಕಬಳ್ಳಾಪುರ ಕಡೆಯಿಂದ ಬರುವು ಭಾರೀ ವಾಹನಗಳಿಗೆ ದೇವನಹಳ್ಳಿಯ ದೊಡ್ಡ ಬಳ್ಳಾಪುರ ಕ್ರಾಸ್ ಬದಲಾಗಿ ದೇವನಹಳ್ಳಿ ರಾಣಿ ಕ್ರಾಸ್ ಇರುತ್ತೆ.  ದೇವನಹಳ್ಳಿಯ ರಾಣಿ ಕ್ರಾಸ್, ನಂದಿ ರಸ್ತೆ, ನೀಲೇರಿ ಕ್ರಾಸ್, ಕಾರಳ್ಳಿ ಕ್ರಾಸ್, ಹೆಗಡೇಹಳ್ಳಿ ಕ್ರಾಸ್, ಮೆಳೆ ಕೋಟೆ ಜಂಕ್ಷನ್, ಮೆಳೆಕೋಟೆ, ಘಾಟಿ ರಸ್ತೆ, ಕಂಟಕನಕುಂಟೆ ಜಂಕ್ಷನ್, ಹೊಸಹಳ್ಳಿ ರೋಡ್ ಜಂಕ್ಷನ್ , ಮರಳೇನಹಳ್ಳಿ ರೋಡ್ ಜಂಕ್ಷನ್ ಮೂಲಕ ತುಮಕೂರು ರಸ್ತೆಗೆ ಮಾರ್ಗ ಕಲ್ಪಿಸಲಾಗಿದೆ.

ಬಾಗೇಪಲ್ಲಿ, ಚಿಕ್ಕಬಳ್ಳಾಪುರ ಕಡೆಯಿಂದ‌ ಬರೋ ವಾಹನಗಳು- ದೊಡ್ಡ ಬಳ್ಳಾಪುರ ಕ್ರಾಸ್, ಎನ್ ಹೆಚ್ 44 ಮೂಲಕ- ವಿಶ್ವನಾಥಪುರ, ಚಪ್ಪರಕಲ್ಲು, ನಾಗನಾಯಕನಹಳ್ಳಿ, ರಘುನಾಥಪುರ ಮಾರ್ಗವಾಗಿ ದೊಡ್ಡಬಳ್ಳಾಪುರ ತಲುಪಬಹುದು. ಕೋಲಾರ, ಕೆ.ಜಿ ಎಫ್, ಹೊಸಕೋಟೆ ಕಡೆಯಿಂದ ದೊಡ್ಡ ಬಳ್ಳಾಪುರ ತಲಪಲು- ವಿಜಯಪುರ, ವಿಜಯಪುರ ಕ್ರಾಸ್, ದೊಡ್ಡಬಳ್ಳಾಪುರ ಕ್ರಾಸ್, ದೇವನಹಳ್ಳಿ ಬಳಿಯ ಎನ್ ಹೆಚ್ -44 ಮೂಲಕ ದೇವನಹಳ್ಳಿ ಮಾರ್ಗವಾಗಿ ವಿಶ್ವನಾಥಪುರ, ಚಪ್ಪರಕಲ್ಲು, ನಾಗನಾಯಕನಹಳ್ಳಿ, ರಘುನಾಥಪುರ ಮೂಲಕ ದೊಡ್ಡಬಳ್ಳಾಪುರ ತಲುಪಬಹುದು.

ಇನ್ನು ಬೆಂಗಳೂರು ನಗರ ಹೆಬ್ಬಾಳ ಫ್ಲೈ ಓವರ್ ನಿಂದ ದೊಡ್ಡ ಬಳ್ಳಾಪುರಕ್ಕೆ ತೆರಳಲು- ಹೆಬ್ಬಾಳ ಫ್ಲೈ ಓವರ್- ಕೆಂಪಾಪುರ ಕ್ರಾಸ್ ಫ್ಲೈ ಓವರ್, ಕಾಫಿ ಡೇ ಹುಣಸೇ ಮಾರನಹಳ್ಳಿ ಕ್ರಾಸ್, ಕೋಟೆ ಕ್ರಾಸ್, ಸಾದಳ್ಳಿ ಗೇಟ್ ಮೂಲಕ ವಯಾಟೋಲ್ ದೊಡ್ಡ ಬಳ್ಳಾಪುರ ಕ್ರಾಸ್ ನಿಂದ ದೇವನಹಳ್ಳಿ ಎನ್ ಹೆಚ್ 44 ಎಡತಿರುವು ಪಡೆದು -ವಿಶ್ವನಾಥಪುರ, ಚಪ್ಪರಕಲ್ಲು, ನಾಗನಾಯಕನಹಳ್ಳಿ, ರಘುನಾಥಪುರ ಮೂಲಕ ದೊಡ್ಡಬಳ್ಳಾಪುರ ತಲುಪಬಹುದು.
Published by:Kavya V
First published: