• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Bengaluru: ಮಳೆಗೆ ಏಕಾಏಕಿ ಬಾಯ್ತೆರೆದ ರಸ್ತೆ; ಕಳಪೆ ಕಾಮಗಾರಿ ಹಿನ್ನೆಲೆ ವಾಹನ ಸವಾರ ಪರದಾಟ!

Bengaluru: ಮಳೆಗೆ ಏಕಾಏಕಿ ಬಾಯ್ತೆರೆದ ರಸ್ತೆ; ಕಳಪೆ ಕಾಮಗಾರಿ ಹಿನ್ನೆಲೆ ವಾಹನ ಸವಾರ ಪರದಾಟ!

ಮಳೆಗೆ ಕುಸಿದ ರಸ್ತೆ

ಮಳೆಗೆ ಕುಸಿದ ರಸ್ತೆ

ತರಾತುರಿಯಲ್ಲಿ ಹಾಗೂ ಕಳಪೆ ಗುಣಮಟ್ಟದ ಕಾಮಗಾರಿಯಿಂದ ಪ್ರಮುಖ ರಸ್ತೆಯೊಂದು ಅರ್ಧ ಕುಸಿದಿದೆ. ಇದನ್ನ ಸರಿಪಡಿಸದಿದ್ದರೆ ಮುಂದೆ ಪೂರ್ತಿ ರಸ್ತೆಯೇ ಕುಸಿಯುವ ಆತಂಕ ಎದುರಾಗಿದೆ.

 • News18 Kannada
 • 5-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಎರಡು ಮೂರು ದಿನ ಸಾಮಾನ್ಯ ಮಳೆ (Rains) ಆದರೆ ಸಾಕು, ಸರ್ಕಾರದ ಕಾಮಗಾರಿಗಳ (Govt Works) ಗುಣಮಟ್ಟ ಬಟಾಬಯಲು ಆಗುತ್ತೆ. ಅದೇ ರೀತಿ ನಗರದ ಮತ್ತೊಂದು ಮುಖ್ಯ ರಸ್ತೆ ಕುಸಿತ ಕಂಡಿದೆ. ಟ್ರಾಫಿಕ್ (Traffic) ಹೆಚ್ಚಾಗಿರುವ ಈ ರಸ್ತೆಯಲ್ಲಿ ಅರ್ಧ ಭಾಗ ಕುಸಿದಿದ್ದು ಸಂಕಷ್ಟ ಶುರುವಾಗಿದೆ. ಬೆಂಗಳೂರಿನಲ್ಲಿ ಮೊನ್ನೆ ಸುರಿದ ಮಳೆಗೆ ನಗರದ ಹಲವು ಭಾಗಗಳಲ್ಲಿ ಅವ್ಯವಸ್ಥೆ ಉಂಟಾಗಿತ್ತು. ಫ್ಲೈಓವರ್, ಅಂಡರ್ ಪಾಸ್ ಸೇರಿ ಕೆಲ ಸ್ಥಳಗಳಲ್ಲಿ ನೀರು ನಿಂತು, ಜನ ಪರದಾಡಿದ್ದರು. ಮಾರತಹಳ್ಳಿಯ (Marathahalli) ಸಮೀಪದ ವರ್ತೂರು ಮುಖ್ಯ ರಸ್ತೆಯ ಸಿದ್ದಾಪುರದಲ್ಲಿ (Siddapura) ಅರ್ಧ ರಸ್ತೆಯೇ ಕುಸಿದು ಹೋಗಿತ್ತು. ಕಾಡುಗೋಡಿ, ವೈಟ್ ಫೀಲ್ಡ್, ವರ್ತೂರು ಮಾರ್ಗವಾಗಿ ಸಂಚಾರ ಮಾಡುವ ವಾಹನ ಸವಾರರು ಟ್ರಾಫಿಕ್ ಸಮಸ್ಯೆಗೆ ತುತ್ತಾಗಿದ್ದರು.


ಮಳೆಗೆ ರಸ್ತೆಯ ಅರ್ಧ ಭಾಗ ಬಾಯಿತೆರೆದಿದೆ


ಕಳೆದ ಒಂದೆರಡು ತಿಂಗಳುಗಳ ಹಿಂದೆ ಕಾವೇರಿ ಪೈಪ್ ಲೈನ್ ಅಳವಡಿಕೆ ಮಾಡುಲು ಇಲ್ಲಿ ಅರ್ಧ ರಸ್ತೆಯನ್ನು ಬಿಡಬ್ಲ್ಯೂಎಸ್​​ಎಸ್​​ಬಿ ಅಗೆದು ಹಾಕಿತ್ತು. ಆಗಲೂ ಟ್ರಾಫಿಕ್ ಸಂಕಷ್ಟ ಮಿತಿಮೀರಿತ್ತು. ಜನರಿಗೆ ಸಹಕಾರಿ ಆಗುವ ಯೋಜನೆ ಅನ್ನೋ ಕಾರಣಕ್ಕೆ ಜನರು ಸಹಿಸಿಕೊಂಡಿದ್ದರು.


ಇದನ್ನೂ ಓದಿ: Bengaluru: ಸಚಿವ ಮುನಿರತ್ನ ವಿರುದ್ದ ಆರ್​​ಆರ್​ ನಗರ ಠಾಣೆಯಲ್ಲಿ FIR ದಾಖಲು!


ಕಾಮಗಾರಿ ಮುಗಿಸಿ ಸಾರ್ವಜನಿಕ ಬಳಕೆಗೆ ಅನುವು ಮಾಡಿಕೊಡಲಾಗಿತ್ತು. ಇದೀಗ ನಿನ್ನೆ ಸುರಿದ ಮಳೆಗೆ ರಸ್ತೆಯ ಕೆಲ ಭಾಗದ ಮಣ್ಣು ಕುಸಿದಿದ್ದು, ಅರ್ಧ ಭಾಗ ಬಾಯಿತೆರೆದಿದೆ. ಜಲಮಂಡಳಿ ಅಧಿಕಾರಿಗಳನ್ನು ಸಂಪರ್ಕ ಮಾಡಿದಾಗ, ಈ ರೀತಿ ಎಲ್ಲಿಯೂ ಆಗಿರಲಿಲ್ಲ. ಇಲ್ಲಿನ ಸಮಸ್ಯೆಯನ್ನ ಬಗೆಹರಿಸುತ್ತೇವೆ ಎಂದಿದ್ದಾರೆ.
ಜಲಮಂಡಳಿ ಕಾಮಗಾರಿಗಳಿಂದ ಜನರಿಗೆ ತೊಂದರೆ ಆ ಬಳಿಕ ಕಾಮಗಾರಿ ಮುಗಿದ ಮೇಲೂ ಜನರಿಗೆ ಸಮಸ್ಯೆಗಳು. ತರಾತುರಿಯಲ್ಲಿ ಹಾಗೂ ಕಳಪೆ ಗುಣಮಟ್ಟದ ಕಾಮಗಾರಿಯಿಂದ ಪ್ರಮುಖ ರಸ್ತೆಯೊಂದು ಅರ್ಧ ಕುಸಿದಿದೆ. ಇದನ್ನ ಸರಿಪಡಿಸದಿದ್ದರೆ ಮುಂದೆ ಪೂರ್ತಿ ರಸ್ತೆಯೇ ಕುಸಿಯುವ ಆತಂಕ ಎದುರಾಗಿದೆ.

top videos
  First published: