HOME » NEWS » State » BENGALURU RIOTS BJP LEADERS ARE THE REASON FOR BANGALORE VIOLENCE DK SHIVAKUMAR ACCUSES SCT

ಕಾವಲ್​ ಭೈರಸಂದ್ರ ಗಲಭೆಗೆ ಬಿಜೆಪಿಯವರ ಒಳತಂತ್ರವೇ ಕಾರಣ; ಡಿ.ಕೆ. ಶಿವಕುಮಾರ್ ಗಂಭೀರ ಆರೋಪ

Bangalore Riots: ಇದೇ ರೀತಿ ಹೇಳಿಕೆ ಕೊಡಬೇಕು ಅಂತ ಅಖಂಡ ಶ್ರೀನಿವಾಸ್ ಮೂರ್ತಿ ಮೇಲೆ ಒತ್ತಡ ಹಾಕಿದ್ದಾರೆ. ಅದೆಲ್ಲ ನಮಗೆ ಗೊತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಕೋಮು ಗಲಭೆ ನಡೆಯುತ್ತದೆ ಎಂದು ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.

news18-kannada
Updated:August 15, 2020, 12:27 PM IST
ಕಾವಲ್​ ಭೈರಸಂದ್ರ ಗಲಭೆಗೆ ಬಿಜೆಪಿಯವರ ಒಳತಂತ್ರವೇ ಕಾರಣ; ಡಿ.ಕೆ. ಶಿವಕುಮಾರ್ ಗಂಭೀರ ಆರೋಪ
ಡಿ.ಕೆ ಶಿವಕುಮಾರ್
  • Share this:
ಬೆಂಗಳೂರು (ಆ. 15): ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಕೋಮು ಗಲಭೆ ನಡೆಯುತ್ತದೆ. ಈ ಸರ್ಕಾರದಲ್ಲಿ ಒಬ್ಬ ಶಾಸಕ, ಸಚಿವನನ್ನು ಕೂಡ ನಿಯಂತ್ರಿಸಲು ಆಗುತ್ತಿಲ್ಲ. ಕಾಂಗ್ರೆಸ್​ ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯವಿದೆ ಎನ್ನಲು ಬೊಮ್ಮಾಯಿ ಯಾರು? ಎಂದು  ಕಾವಲ್​ ಭೈರಸಂದ್ರ ಗಲಭೆ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಇಂದು ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು,  ಬೆಂಗಳೂರಿನ ಕಾವಲ್ ಭೈರಸಂದ್ರ ಗಲಭೆಗೆ ಬಿಜೆಪಿಯವರೇ ಕಾರಣ. ವಿನಾಕಾರಣ ಗೃಹ ಸಚಿವ ಬಸವರಾಜ ಬೊಮ್ಮಾಯಿ ಈ ಗಲಭೆಗೆ ಕಾಂಗ್ರೆಸ್​ನಲ್ಲಿನ ಆಂತರಿಕ ಭಿನ್ನಾಭಿಪ್ರಾಯವೇ ಕಾರಣ ಎಂದು ಆರೋಪಿಸುತ್ತಿದ್ದಾರೆ. ನಮ್ಮ ಪಕ್ಷದಲ್ಲಿ ಭಿನ್ನಾಭಿಪ್ರಾಯವಿದೆ ಎನ್ನಲು ಅವನು ಯಾರು? ಅವನು ಅಥಾರಿಟೀನಾ? ಸಬ್ ಇನ್​ಸ್ಪೆಕ್ಟರಾ? ಆಯೋಗನಾ? ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿರುದ್ದ ಏಕವಚನದಲ್ಲಿ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ.

ಇದನ್ನೂ ಓದಿ: ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ 5 ದಿನ ಭಾರೀ ಮಳೆ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

ಕಾಂಗ್ರೆಸ್​ನಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆದರೆ, ಬಿಜೆಪಿಯೊಳಗೆ ಸಾಕಷ್ಟು ಆಂತರಿಕ ಕಚ್ಚಾಟ ಇದೆ. ಬಿಜೆಪಿಯವರ ಒಳ ತಂತ್ರದಿಂದಲೇ ಕಾವಲಭೈರಸಂದ್ರ  ಗಲಭೆ ನಡೆದಿದ್ದು ಎಂದು ಡಿಕೆಶಿ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಸಹ ಈ  ಘಟನೆ ಬಗ್ಗೆ ಆಂತರಿಕ ತನಿಖೆ ಮಾಡಲಿದೆ. ಆದರೆ ಬಿಜೆಪಿಯವರು ನಮ್ಮ ಕಾರ್ಪೊರೇಟರ್​ಗಳನ್ನು ಪೊಲೀಸರಿಂದ ಹೆದರಿಸ್ತಿದ್ದಾರೆ ಎಂದು ಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.

ಇದೇ ಹೇಳಿಕೆ ಕೊಡಬೇಕು ಅಂತ ಅಖಂಡ ಶ್ರೀನಿವಾಸ್ ಮೂರ್ತಿ ಮೇಲೆ ಒತ್ತಡ ಹಾಕಿದ್ದಾರೆ.  ಅದೆಲ್ಲ ನಮಗೆ ಗೊತ್ತಿದೆ. ನಾವು ಇದನ್ನು ಸಹಿಸಲ್ಲ. ಏನೇನು ನಡೀತಿದೆ ಅಂತ ನಮಗೆ ಗೊತ್ತಿದೆ. ಇವರು ಅಧಿಕಾರಕ್ಕೆ ಬಂದಾಗಲೆಲ್ಲ ಕೋಮು ಗಲಭೆ ನಡೆಯುತ್ತೆ. ಈ ಸರ್ಕಾರದಲ್ಲಿ ಒಬ್ಬ ಸಚಿವ, ಶಾಸಕನನ್ನು ನಿಯಂತ್ರಿಸಲು ಅವರಿಂದಲೇ ಸಾಧ್ಯಾವಗುತ್ತಿಲ್ಲ ಎಂದು ಡಿಕೆಶಿ ಕಿಡಿಕಾರಿದ್ದಾರೆ.

ಇದನ್ನೂ ಓದಿ: Independence Day: ಲಾಕ್​ಡೌನ್​ನಿಂದ ಸಂಕಷ್ಟಕ್ಕೀಡಾದ ಕ್ಷೇತ್ರಗಳಿಗೆ 3,187 ಕೋಟಿ ರೂ. ಪ್ಯಾಕೇಜ್; ಸಿಎಂ ಯಡಿಯೂರಪ್ಪ ಘೋಷಣೆ

ನಮ್ಮ ಕಾರ್ಪೊರೇಟರ್ ಗಳಿಗೆ ನೊಟೀಸ್ ಕೊಟ್ಟು‌ ಬ್ಲಾಕ್ ಮೇಲ್ ಮಾಡ್ತಿದ್ದಾರೆ ಎಂದು ಗೃಹ ಸಚಿವ ಬೊಮ್ಮಾಯಿ ವಿರುದ್ಧ ಡಿಕೆಶಿ ಆರೋಪ ಮಾಡಿದ್ದಾರೆ.  ಏನು ನಡೀತಿದೆ ಇಲ್ಲಿ? ನಾವೇನು ಸುಮ್ನೆ ಕೂತಿದ್ದೀವಾ ? ಕಾವಲಭೈರಸಂದ್ರ , ಡಿಜೆ ಹಳ್ಳಿಯ ಗಲಭೆಗೆ ಕಾರಣ ಅವರ ಕಾರ್ಯಕರ್ತ ಟ್ವೀಟ್ ಮಾಡಿದ್ದೇ ಹೊರತು ಕಾಂಗ್ರೆಸ್ ಅಲ್ಲ. ಗಲಭೆ ನಿಯಂತ್ರಣ ಮಾಡುವಲ್ಲಿ ಗೃಹ ಸಚಿವರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂರು ಗಂಟೆ ಅವಧಿಯಲ್ಲಿ ಗಲಭೆ ನಿಯಂತ್ರಿಸಲಿಲ್ಲ. ಗಲಾಟೆ ಮಾಡಲು ಬಿಟ್ಬಿಟ್ಟು ಈಗ ಜಾತಿ ಬಣ್ಣ ಬಳೀತಿದಾರೆ ಎಂದು ಡಿಕೆಶಿ ಆರೋಪ ಮಾಡಿದ್ದಾರೆ. ಅಖಂಡ ಶ್ರೀನಿವಾಸ್ ನಮ್ಮ ಶಾಸಕ ಅವರ  ವಿರುದ್ಧ ವ್ಯವಸ್ಥಿತ ಪಿತೂರಿ ನಡೆದಿದೆ.  ಮನೆ ಮೇಲಿನ ದಾಳಿಯನ್ನ ನಾವು ಕಟುವಾಗಿ ಖಂಡಿಸಿದ್ದೇವೆ. ಗಲಭೆಕೋರರ ವಿರುದ್ಧ ಕಠಿಣ ಕ್ರಮ‌ ತಗೊಳ್ಳಿ ಇದಕ್ಕೆ ನಮ್ಮ ಬೆಂಬಲವೂ ಇದೆ . ಅದು ಬಿಟ್ಟು ಕಾಂಗ್ರೆಸ್ ನಲ್ಲಿ ಒಳ ಜಗಳ ಇದೆ ಅಂತ ಹೇಳಲು ಬೊಮ್ಮಾಯಿ ಯಾರು ಎಂದು ಡಿಕೆಶಿ ಪ್ರಶ್ನೆ ಮಾಡಿದ್ದಾರೆ.
Published by: Sushma Chakre
First published: August 15, 2020, 12:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories