EV Charging Point: ಬೆಂಗಳೂರಿನಲ್ಲಿ ಕೇವಲ 1 ರೂಪಾಯಿಗೆ EV ಚಾರ್ಜಿಂಗ್ ಪಾಯಿಂಟ್‌!

Bengaluru: ಇಂಧನ ಬೆಲೆಗಳು ಗಗನಕ್ಕೇರುತ್ತಿರುವಾಗ ಮತ್ತು ನಗರದಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್‌ಗಳ ಕೊರತೆಯಿಂದಾಗಿ, ಬೆಂಗಳೂರು ಮೂಲದ ಸ್ಟಾರ್ಟಪ್ ಇ-ಮೊಬಿಲಿಟಿಯನ್ನು ಉತ್ತೇಜಿಸಲು ವೆಚ್ಚ-ಪರಿಣಾಮಕಾರಿ ಪರಿಹಾರ ತಂದಿದೆ.

EV Charging Point

EV Charging Point

  • Share this:
    ಪೆಟ್ರೋಲ್ (Petrol)‌, ಡೀಸೆಲ್ (Diesel)‌ ಬೆಲೆ ಗಗನಕ್ಕೇರುತ್ತಲೇ ಇದ್ದು, ತಮ್ಮ ವಾಹನಕ್ಕೆ ಇಂಧನ ತುಂಬಿಸುವಾಗಲೆಲ್ಲಾ ಬಹುತೇಕರು ಬೈದುಕೊಳ್ಳುತ್ತಲೇ ಅಥವಾ ಹಿಡಿ ಶಾಪ ಹಾಕಿಕೊಳ್ಳುತ್ತಲೇ ಇರುತ್ತಾರೆ. ಇನ್ನು, ಎಲೆಕ್ಟ್ರಿಕ್‌ ವಾಹನಗಳು (Electric Vehicle) ಇದಕ್ಕೆ ಪರ್ಯಾಯ ಆಯ್ಕೆ ಎನಿಸಿದರೂ, ಚಾರ್ಜಿಂಗ್‌ ಪಾಯಿಂಟ್‌ಗಳ (charging Point) ಕೊರತೆ ಇದೆ. ಮನೆಯಲ್ಲೇ ಹೇಗೆ ಚಾರ್ಜ್‌ ಮಾಡುವುದು, ವಿದ್ಯುತ್‌ ಬಿಲ್‌ ಎಷ್ಟು ಜಾಸ್ತಿಯಾಗಬಹುದು ಎಂಬ ಗೊಂದಲವೂ ಹಲವರಲ್ಲಿದೆ. ಇದಕ್ಕೆ ಬೆಂಗಳೂರಿನ ಸ್ಟಾರ್ಟಪ್‌ (Startup) ಕಂಪನಿಯೊಂದು ಪರಿಹಾರ ನೀಡಿದೆ ನೋಡಿ.. ಹೌದು, ಇಂಧನ ಬೆಲೆಗಳು ಗಗನಕ್ಕೇರುತ್ತಿರುವಾಗ ಮತ್ತು ನಗರದಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್‌ಗಳ ಕೊರತೆಯಿಂದಾಗಿ, ಬೆಂಗಳೂರು ಮೂಲದ ಸ್ಟಾರ್ಟಪ್ ಇ-ಮೊಬಿಲಿಟಿಯನ್ನು (E-mobility) ಉತ್ತೇಜಿಸಲು ವೆಚ್ಚ-ಪರಿಣಾಮಕಾರಿ ಪರಿಹಾರ ತಂದಿದೆ.

    ಅದೇನು ಪರಿಹಾರ ಅಂತೀರಾ..? REVOS ಮಂಗಳವಾರ BOLT ಚಾರ್ಜಿಂಗ್ ಪಾಯಿಂಟ್‌ಗಳನ್ನು 1 ರೂ. ಗೆ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದೆ. ಇದು ಉದ್ಘಾಟನಾ ಕೊಡುಗೆಯಾಗಿದ್ದು, ಅಕ್ಟೋಬರ್ 29ರಿಂದ ಡಿಸೆಂಬರ್ 31ರವರೆಗೆ ಈ ಆಫರ್‌ ಮಾನ್ಯವಾಗಿರುತ್ತದೆ. ಆದರೆ, ಜನವರಿ 1,2022ರಿಂದ ಪ್ರತಿ ಚಾರ್ಜಿಂಗ್ ಘಟಕಕ್ಕೆ 3,000 ರೂ. ವೆಚ್ಚವಾಗಲಿದೆ.

    ಇನ್ನು, ಬೆಂಗಳೂರಿನಲ್ಲಿ ಮಾತ್ರವಲ್ಲ REVOS ಭಾರತದ 500 ನಗರಗಳಲ್ಲಿ ಮತ್ತು ಇತರ ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು BOLT ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಲು ಯೋಜಿಸುತ್ತಿದೆ.

    "ಇದು ಸಾರ್ವತ್ರಿಕ BOLT ಚಾರ್ಜಿಂಗ್ ಪಾಯಿಂಟ್ ಮತ್ತು BOLT ಆಪರೇಟಿಂಗ್ ಸಿಸ್ಟಮ್ ಅನ್ನು ಒಳಗೊಂಡಿರುವ ಅತಿ ದೊಡ್ಡ ಪೀರ್-ಟು-ಪೀರ್ ಚಾರ್ಜಿಂಗ್ ನೆಟ್‌ವರ್ಕ್‌ಗಳಲ್ಲಿ ಒಂದಾಗಿದೆ. ಇದು IOT-ಸಕ್ರಿಯಗೊಳಿಸಿದ EV ಚಾರ್ಜಿಂಗ್ ಪಾಯಿಂಟ್ ಆಗಿದ್ದು, ಇದು EVಗಳೊಂದಿಗೆ ಬರುವ ಯಾವುದೇ ಪೋರ್ಟಬಲ್ ಚಾರ್ಜರ್‌ಗೆ ಹೊಂದಿಕೆಯಾಗುತ್ತದೆ ಮತ್ತು ಮನೆಯಲ್ಲಿ ಹಾಗೂ ವಾಣಿಜ್ಯ ಸಂಸ್ಥೆಗಳಲ್ಲಿ ಅಸ್ತಿತ್ವದಲ್ಲಿರುವ AC ವಿದ್ಯುತ್ ಪೂರೈಕೆಯೊಂದಿಗೆ ಕಾರ್ಯನಿರ್ವಹಿಸುತ್ತದೆ” ಎಂದು REVOSನ ಸಹ-ಸಂಸ್ಥಾಪಕ ಮೋಹಿತ್ ಯಾದವ್ ಹೇಳಿದರು.

    ಇದನ್ನು ಓದಿ: Diwali offer 2021: ಕೇವಲ 101 ರೂ. ಪಾವತಿಸಿ ವಿವೋ ಸ್ಮಾರ್ಟ್​ಫೋನ್​ ಖರೀದಿಸಿ!

    "ಯಾರಾದರೂ ತಮ್ಮ ಅಂಗಡಿಗಳು, ಗ್ಯಾರೇಜ್‌ಗಳು, RWAಗಳು, ವಾಣಿಜ್ಯ ಪಾರ್ಕಿಂಗ್ ಸ್ಥಳಗಳು ಇತ್ಯಾದಿಗಳಲ್ಲಿ ಸವಾರರಿಗಾಗಿ BOLT ಅನ್ನು ಖರೀದಿಸಬಹುದು ಮತ್ತು ಸ್ಥಾಪಿಸಬಹುದು.. ಇದನ್ನು ಸ್ಥಾಪಿಸಲು ಯಾವುದೇ ಹೆಚ್ಚುವರಿ ಮೂಲಸೌಕರ್ಯ ಅಗತ್ಯವಿಲ್ಲ ಮತ್ತು 30 ನಿಮಿಷಗಳಲ್ಲಿ ಇದನ್ನು ಮಾಡಬಹುದು" ಎಂದು ಮೋಹಿತ್‌ ಯಾದವ್ ಹೇಳಿದರು.

    ಇನ್ನೊಂದೆಡೆ, "BOLT ಮಾಲೀಕರು 'ಸಾರ್ವಜನಿಕ' ಮತ್ತು 'ಖಾಸಗಿ'ಯ ನಡುವೆ ಸಾಧನದ ಸ್ಥಿತಿಯನ್ನು ಬದಲಾಯಿಸಲು ಆಯ್ಕೆ ಮಾಡಬಹುದು. ಒಂದು ವೇಳೆ ನೀವು ನಿಮ್ಮ ಚಾರ್ಜಿಂಗ್ ಪಾಯಿಂಟ್‌ ಅನ್ನು ‘ಸಾರ್ವಜನಿಕ’ ಎಂದು ಆಯ್ಕೆ ಮಾಡಿದರೆ, BOLT ಅಪ್ಲಿಕೇಶನ್‌ನಲ್ಲಿ ಬುಕಿಂಗ್ ಮಾಡಲು 'ಸಾರ್ವಜನಿಕ' ಚಾರ್ಜಿಂಗ್ ಪಾಯಿಂಟ್‌ಗಳು ಲಭ್ಯವಿರಲಿವೆ. ಇನ್ನೊಂದು ವೇಳೆ 'ಖಾಸಗಿ' ಎಂದು ಗುರುತಿಸಲಾದವುಗಳು ಸಾಧನ ಮಾಲೀಕರ ಬಳಕೆಗೆ ಮಾತ್ರ" ಎಂದು REVOSನ ಸಹ-ಸಂಸ್ಥಾಪಕ ಜ್ಯೋತಿರಂಜನ್ ಹರಿಚಂದನ್ ಹೇಳಿದರು.

    ಇದನ್ನು ಓದಿ: 1.50 ಲಕ್ಷದ ಸ್ಮಾರ್ಟ್​ಫೋನ್​ 60 ಸಾವಿರಕ್ಕೆ! MOTOROLA Razr​ ಖರೀದಿಸುವ ಕನಸನ್ನ ನನಸಾಗಿಸೋ ಸಮಯ

    ನಿಮ್ಮ ಬಳಿಯೂ ವಿದ್ಯುತ್ ಚಾಳಿತ ವಾಹನವಿದ್ಯಾ..? ಅಥವಾ ಅದನ್ನು ತೆಗೆದುಕೊಳ್ಳಲು ಯೋಚಿಸುತ್ತಿದ್ದೀರಾ..? ಹಾಗಾದ್ರೆ, ಶೀಘ್ರದಲ್ಲೇ 1 ರೂ. ಗೆ ದೊರೆಯುವ ಚಾರ್ಜಿಂಗ್‌ ಪಾಯಿಂಟ್‌ ಅನ್ನು ನಿಮ್ಮದಾಗಿಸಿಕೊಳ್ಳಬಹುದು. ಇದರಿಂದ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯ ಚಿಂತೆ ನಿಮಗಿರುವುದಿಲ್ಲ.
    Published by:Sharath Sharma Kalagaru
    First published: