ಬೆಂಗಳೂರಿನಲ್ಲೊಂದು ಮಾನವೀಯ ನೆಲೆಯ ರೆಸ್ಟೋರೆಂಟ್: ಇಲ್ಲಿ ಬಡವರಿಗೆ, ನಿರ್ಗತಿಕರಿಗೆ ಆಹಾರ ಉಚಿತ..!

ಈ ಒಳ್ಳೆ ಕೆಲಸ ನೋಡಿ ಕೆಲವು ಗ್ರಾಹಕರು ತಾವೂ ಒಂದಷ್ಟು ಹೆಚ್ಚಿನ ಆಹಾರವನ್ನು ಆರ್ಡರ್ ಮಾಡಿ, ಅದನ್ನು ಪಾರ್ಸಲ್ ಮಾಡಿಸಿ ಫ್ರಿಡ್ಜ್ ನೊಳಗೆ ಇಟ್ಟು ಹೋಗುತ್ತಾರೆ.

zahir | news18
Updated:June 3, 2019, 4:50 PM IST
ಬೆಂಗಳೂರಿನಲ್ಲೊಂದು ಮಾನವೀಯ ನೆಲೆಯ ರೆಸ್ಟೋರೆಂಟ್: ಇಲ್ಲಿ ಬಡವರಿಗೆ, ನಿರ್ಗತಿಕರಿಗೆ ಆಹಾರ ಉಚಿತ..!
.
  • News18
  • Last Updated: June 3, 2019, 4:50 PM IST
  • Share this:
ಒಂದಷ್ಟು ಸಮಯದ ಹಿಂದೆ ಬೆಂಗಳೂರಿನ ಕೆಲವೆಡೆ ಹಸಿದವರಿಗಾಗಿ ಉಚಿತವಾಗಿ ಆಹಾರ ಸರಬರಾಜು ಮಾಡೋಕೆ ಫ್ರಿಡ್ಜ್​ಗಳನ್ನು ಇಟ್ಟಿದ್ದು ನಿಮಗೂ ನೆನಪಿರಬಹುದು. ಅವುಗಳಲ್ಲಿ ಅನೇಕವು ಈಗ ನಾಪತ್ತೆಯಾಗಿದೆ. ಆದರೆದ್ರೆ ಇಂದಿರಾನಗರದ ಲೆಬನೀಸ್ ರೆಸ್ಟೋರೆಂಟ್​ವೊಂದು ಮಾತ್ರ ದಿನವೂ ತಪ್ಪಿಸದೇ ತನ್ನ ಕೈಂಕರ್ಯ ಮುಂದುವರೆಸಿದೆ.

'ಬಿಬ್ಲೋಸ್' ರೆಸ್ಟೋರೆಂಟ್ ಇಂದಿರಾನಗರದಲ್ಲಿ ಸಾಕಷ್ಟು ಹೆಸರುವಾಸಿಯಾಗಿರೋ ಸ್ಥಳ. ಆದರೆ ಈ ರೆಸ್ಟೋರೆಂಟ್​ನ ಒಳಗಿನ ಖಾದ್ಯಗಳಿಗಿಂತ ಹೊರಗಿರುವ ಫ್ರಿಡ್ಜ್​ವೊಂದು ಅನೇಕರ ಚಪ್ಪಾಳೆ ಗಿಟ್ಟಿಸುತ್ತಿದೆ. ಇದಕ್ಕೆ ಮುಖ್ಯ ಕಾರಣ ಇಲ್ಲಿನ ಶೆಫ್​ನ ಹೃದಯವಂತಿಕೆ.

ಹೌದು, ಈ ರೆಸ್ಟೋರೆಂಟ್ ಮುಂದಿರುವುದು ಫ್ರೀ ಫ್ರಿಡ್ಜ್. ಅಂದರೆ ಇದರಲ್ಲಿರುವ ಎಲ್ಲಾ ಆಹಾರದ ಡಬ್ಬಿಗಳು, ಹಣ್ಣುಗಳು, ನೀರಿನ ಬಾಟಲ್, ಎಲ್ಲವೂ ಉಚಿತ. ಹಸಿದ ಜೀವಗಳಿಗೆ ಹಣವಿಲ್ಲದೇ ಹೊಟ್ಟೆ ತುಂಬಿಸೋ ಪ್ರಯತ್ನವನ್ನು ಈ ಫ್ರಿಡ್ಜ್ ಮೂಲಕ ಮಾಡಲಾಗುತ್ತಿದೆ. ಸುಮಾರು ಮೂರೂವರೆ ವರ್ಷಗಳಿಂದ ಈ ಕೆಲಸವನ್ನು ನಿರಂತರವಾಗಿ ಮಾಡುತ್ತಿರುವವರು ಇಲ್ಲಿನ ಶೆಫ್ ಅಮ್ಮರ್ ಮೋಲ್ಕಿ.ಪ್ರತಿದಿನ ರೆಸ್ಟೋರೆಂಟ್​ನಲ್ಲಿ ಮಾಡುವ ಅಡುಗೆಯಲ್ಲಿ ಒಂದು ಭಾಗವನ್ನು ಹೀಗೆ ಡಬ್ಬದಲ್ಲಿ ತುಂಬಿ ಈ ಫ್ರಿಡ್ಜ್ ನೊಳಗೆ ಇಡುತ್ತಾರೆ. ಈ ಮಾರ್ಗದಲ್ಲಿ ಬರುವ ಅನೇಕ ಭಿಕ್ಷುಕರು, ನಿರ್ಗತಿಕರಿಗೆ ಈ ಫ್ರಿಡ್ಜ್ ತುತ್ತಿನ ಚೀಲ ತುಂಬಿಸಿದೆ.ದಿನಕ್ಕೆ ಕನಿಷ್ಟ 15-20 ಜನರಾದರೂ ಖುಷಿಯಿಂದ ರುಚಿಯಾದ ಊಟ ಮಾಡೋಕೆ ಇದರಿಂದ ಸಾಧ್ಯವಾಗುತ್ತಿದೆ. ಕೆಲವೊಮ್ಮೆ ದಿನಕ್ಕೆ ಎರಡು ಬಾರಿ ಕೂಡಾ ಡಬ್ಬಿಗಳನ್ನು ತುಂಬಿಸಿದ ಉದಾಹರಣೆಗಳಿವೆ.

ಬಿಬ್ಲೋಸ್ ರೆಸ್ಟೋರೆಂಟ್ ಮಾಡ್ತಿರೋ ಈ ಒಳ್ಳೆ ಕೆಲಸ ನೋಡಿ ಕೆಲವು ಗ್ರಾಹಕರು ತಾವೂ ಒಂದಷ್ಟು ಹೆಚ್ಚಿನ ಆಹಾರವನ್ನು ಆರ್ಡರ್ ಮಾಡಿ, ಅದನ್ನು ಪಾರ್ಸಲ್ ಮಾಡಿಸಿ ಫ್ರಿಡ್ಜ್ ನೊಳಗೆ ಇಟ್ಟು ಹೋಗುತ್ತಾರೆ. ಇವರ ಈ ಉದಾಹರಣೆಯನ್ನು ನೋಡಿ ಮತ್ತಷ್ಟು ಜನ, ಮತ್ತಷ್ಟು ಸ್ಥಳಗಳು ಕೆಲವು ಹೊಟ್ಟೆಗಳನ್ನಾದ್ರೂ ತುಂಬಿಸುವ ಪ್ರಯತ್ನ ಮಾಡಲಿ ಎನ್ನುವುದೇ ಇವರ ಆಶಯ.
( ವರದಿ: ಸೌಮ್ಯ ಕಳಸ )

First published:June 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ