Bengaluru Rains: ಬೆಂಗಳೂರಿನಲ್ಲಿ ಪಂಪ್​ಸೆಟ್​ಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​!

Bengaluru Rain: ಮನೆಯ ನೆಲಮಾಳಿಗೆಯಲ್ಲಿ ಮತ್ತು ಕಾಂಪೌಂಡ್​​ನಲ್ಲಿ ನಿಂತ ನೀರನ್ನು ಹೊರಗೆ ತೆಗೆದು ಹಾಕಲು ಈ ಪಂಪ್ ಸೆಟ್ ಗಳನ್ನು ಬಳಸಿದ ಬೆಂಗಳೂರು ನಿವಾಸಿಗಳು.

ವಾಟರ್ ಪಂಪ್

ವಾಟರ್ ಪಂಪ್

  • Share this:
ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ (Bengaluru) ಭಾರಿ ಮಳೆಯಾಗುತ್ತಿದ್ದು, ನಗರದಲ್ಲಿರುವ (City) ಬಹುತೇಕ ಪ್ರದೇಶಗಳು ಜಲಾವೃತಗೊಂಡು ಅಲ್ಲಿನ ಜನರು ತಮ್ಮ ಮನೆಗಳಿಂದ ಹೊರಗೆ ಬರಲಾಗದೆ ಆಹಾರ ಮತ್ತು ನೀರಿಗಾಗಿ ಅಲ್ಲದೆ ತಮ್ಮ ಪ್ರಾಣ ರಕ್ಷಣೆಗೂ ಸಹಾಯ (Help) ಕೋರುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಒಟ್ಟಿನಲ್ಲಿ ಹೇಳುವುದಾದರೆ ವರುಣನ ಆರ್ಭಟ ತುಂಬಾನೇ ಜೋರಾಗಿದ್ದು, ಅನೇಕ ಪ್ರದೇಶಗಳಲ್ಲಿರುವ ದೊಡ್ಡ ದೊಡ್ಡ ಅಪಾರ್ಟ್ಮೆಂಟ್ ಗಳ (Apartment)  ಪಾರ್ಕಿಂಗ್ ಸ್ಥಳಗಳಲ್ಲಿ ಎದೆಯುದ್ದಕ್ಕೂ ನೀರು (Water) ನಿಂತಿದ್ದು, ಅಲ್ಲಿ ನಿಲ್ಲಿಸಿದ ವಾಹನಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ ಎಂದು ಹೇಳಬಹುದು.

ಇಷ್ಟೇ ಅಲ್ಲದೆ ಮುಖ್ಯ ರಸ್ತೆಗಳಲ್ಲಿಯೂ ಸಹ ಒಳಚರಂಡಿಯ ವ್ಯವಸ್ಥೆ ಸರಿಯಾಗಿರದ ಕಾರಣ ಮಳೆಯ ನೀರು ಜಮೆ ಆಗಿ ವಾಹನ ಸವಾರರು ಸಹ ತಮ್ಮ ಕಚೇರಿಗೆ ಮತ್ತು ಕಂಪನಿಗಳಿಗೆ ಕೆಲಸಕ್ಕೆ ಹೋಗಲು ಪರದಾಡುವಂತಾಗಿದೆ. ಈ ಬಿಟ್ಟು ಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆ ಜನರಿಗೆ ಒಂದು ದುಸ್ವಪ್ನದಂತೆ ಕಾಡುತ್ತಿದ್ದರೆ, ಇತ್ತ ಬೆಂಗಳೂರಿನ ಪಂಪ್ ಸೆಟ್ ಬಾಡಿಗೆ ಸಹ ಮುಗಿಲು ಮುಟ್ಟಿದೆ ಅಂತ ಹೇಳಬಹುದು.

ಪಂಪ್ ಸೆಟ್ ಬಾಡಿಗೆ ನೀಡುವ ವ್ಯಾಪಾರ

ಹೌದು, ಪ್ರತಿಯೊಬ್ಬರು ತಮ್ಮ ಮನೆಯ ನೆಲಮಾಳಿಗೆಯಲ್ಲಿ ಮತ್ತು ಕಾಂಪೌಂಡ್ ನಲ್ಲಿ ನಿಂತಂತಹ ನೀರನ್ನು ಹೊರಗೆ ತೆಗೆದು ಹಾಕಲು ಈ ಪಂಪ್ ಸೆಟ್ ಗಳನ್ನು ಬಳಸುತ್ತಾರೆ. ಇದು ಪ್ರತಿಯೊಬ್ಬರ ಮನೆಯಲ್ಲಿ ಇರುವುದಿಲ್ಲ, ಇದನ್ನು ಬಾಡಿಗೆಗೆ ಪಡೆದು ಬಳಸಬೇಕಾಗುತ್ತದೆ. ಹೀಗಾಗಿ ಈ ಪಂಪ್ ಸೆಟ್ ಬಾಡಿಗೆ ನೀಡುವವರ ವ್ಯಾಪಾರ ಮಾತ್ರ ತುಂಬಾನೇ ಚೆನ್ನಾಗಿ ನಡೆದಿದೆ ಅಂತ ಹೇಳಬಹುದು.

ಇದನ್ನೂ ಓದಿ: ಬೆಂಗಳೂರನ್ನು ಟ್ರೋಲ್ ಮಾಡುವವರಿಗೆ ತಪರಾಕಿ, ಕನ್ನಡಿಗರು ಹೇಳ್ತಿದ್ದಾರೆ ಬೆಂಗಳೂರು ಬಿಟ್ಟು ತೊಲಗಿ!

ಪಂಪ್ ಸೆಟ್ ಏಜೆನ್ಸಿಗಳು

ಪಂಪ್ ಸೆಟ್ ಗಳ ಬೇಡಿಕೆ ಹೆಚ್ಚಾಗಿದುದರಿಂದ ಪಂಪ್ ಸೆಟ್ ಗಳನ್ನು ಬಾಡಿಗೆ ನೀಡುವ ಏಜೆನ್ಸಿಗಳು ಬೆಂಗಳೂರಿನ ನಿವಾಸಿಗಳ ಮೇಲೆ ಸಾಮಾನ್ಯಕ್ಕಿಂತಲೂ ತುಂಬಾನೇ ಹೆಚ್ಚು ಶುಲ್ಕವನ್ನು ವಿಧಿಸುತ್ತಿವೆ ಎಂದು ಹೇಳಲಾಗುತ್ತಿದೆ. ಮಳೆ ಇಲ್ಲದ ಒಂದು ಸಾಮಾನ್ಯವಾದ ದಿನದಂದು, ಈ ಏಜೆನ್ಸಿಗಳು 2 ಬಿಪಿ ಪಂಪ್ ಸೆಟ್ ಅನ್ನು ಬಾಡಿಗೆಗೆ ನೀಡಲು ಒಂದು ದಿನಕ್ಕೆ 2,000 ರೂಪಾಯಿ ಪಡೆಯುತ್ತಾರೆ. ಆದರೆ ಕಳೆದ ಒಂದು ವಾರದಲ್ಲಿ, ಈ ಪಂಪ್ ಸೆಟ್ ಗಳ ಆಪರೇಟರ್ ಗಳು ರಾತ್ರಿ ಭತ್ಯೆಯಾಗಿ ಹೆಚ್ಚುವರಿಯಾಗಿ 1,000 ರೂಪಾಯಿಯ ಜೊತೆಗೆ 12,000 ರೂಪಾಯಿಗಳವರೆಗೆ ಬಾಡಿಗೆಯ ದರಗಳನ್ನು ಹೆಚ್ಚಿಸಿದ್ದಾರೆ.

ಜಲಾವೃತಗೊಂಡ ನೆಲಮಾಳಿಗೆಗಳು

ಸೋಮವಾರ ರಾತ್ರಿ ಸುರಿದ ಮಳೆಯಿಂದಾಗಿ ನಲ್ಲೂರುಹಳ್ಳಿ ಕೆರೆಯ ಬಳಿಯ ಅಪಾರ್ಟ್ಮೆಂಟ್ ಗಳ ನೆಲಮಾಳಿಗೆಗಳು ಇನ್ನೂ ಜಲಾವೃತಗೊಂಡಿವೆ. ಮುಂದಿನ ಕೆಲವು ದಿನಗಳಲ್ಲಿ ಇದೇ ರೀತಿಯ ಮಳೆಯ ನಿರೀಕ್ಷೆ ಇರುವುದರಿಂದ ಸುಮಾರು ಐದು ವಸತಿ ಅಪಾರ್ಟ್ಮೆಂಟ್ ಗಳ ಸ್ಥಿತಿ ಸಹ ಅಸ್ಪಷ್ಟವಾಗಿದೆ ಎಂದು ಹೇಳಲಾಗುತ್ತಿದೆ. ನೆಲಮಾಳಿಗೆಗಳಲ್ಲಿನ ನೀರಿನ ಜೊತೆಗೆ, ಅನೇಕ ಕಡೆಗಳಲ್ಲಿ ಗೋಡೆಗಳು ಸಹ ಕುಸಿದಿವೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಕಾಣದಂತೆ ಮಾಯವಾಯ್ತಣ್ಣ ಬೆಂಗಳೂರು ಕೆರೆಗಳು! ಜೀವಸೆಲೆಯ ನೆಲೆ ಮೇಲೆ ತಲೆ ಎತ್ತಿದ ಲೇಔಟ್‌ಗಳು!

ಜಿಎಸ್ಆರ್ ಶ್ರೀನಿವಾಸಂ ಅಪಾರ್ಟ್ಮೆಂಟ್ ನ ವೆಂಕಟೇಶ್ ಆದಿಕೇಶವನ್ ಅವರು ಮಾತನಾಡಿ, ಅವರ ಕುಟುಂಬವು ಕಳೆದ ಒಂದು ವಾರದಿಂದ ಪಂಪ್ ಸೆಟ್ ಗಳನ್ನು ಬಾಡಿಗೆಗೆ ಪಡೆಯಲು 60,000 ರೂಪಾಯಿ ವೆಚ್ಚ ಮಾಡಿದೆ ಎಂದು ಹೇಳಿದರು.

"ಸೋಮವಾರ, ನಾವು ಪಂಪ್ ಗಳನ್ನು ಬಳಸುವುದನ್ನು ನಿಲ್ಲಿಸಿದ್ದೇವೆ, ಏಕೆಂದರೆ ಅದು ವ್ಯರ್ಥ ಅಂತ ನಮಗೆ ಈ ಮಳೆಯಲ್ಲಿ ಗೊತ್ತಾಗಿದೆ. ನೆಲಮಾಳಿಗೆಯನ್ನು ಖಾಲಿ ಮಾಡಿದ ಕೇವಲ 15 ನಿಮಿಷಗಳ ನಂತರ, ಹತ್ತಿರದ ಕೆರೆಗಳಿಂದ ನೀರು ಮತ್ತೆ ಒಳಗೆ ಹರಿಯುತ್ತಿದೆ" ಎಂದು ಅವರು ಹೇಳಿದರು. ಜಿಎಸ್ಆರ್ ಶ್ರೀನಿವಾಸಂ ಅವರು 32 ಅಪಾರ್ಟ್ಮೆಂಟ್ ಗಳನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಬಾಡಿಗೆ ದಿನಕ್ಕೆ 2,000 ರೂಪಾಯಿ

ಮಾಲಿಬು ಪಲೋಮಾ ನಿವಾಸಿಯಾದ ಶೇಕ್ಸ್ಪಿಯರ್ ಅವರು “ಪಂಪ್ ಗಾಗಿ ಆಪರೇಟರ್ ಗೆ ಸಾರಿಗೆ ಮತ್ತು ಭತ್ಯೆ ಸೇರಿದಂತೆ 14,000 ರೂಪಾಯಿಗಳನ್ನು ನೀಡುತ್ತಿದ್ದೇವೆ. ಕಳೆದ ಮೂರು ದಿನಗಳಲ್ಲಿ ನಾವು ಎರಡು ಪಂಪ್ ಸೆಟ್ ಗಳನ್ನು ಬಾಡಿಗೆಗೆ ಪಡೆದಿದ್ದೇವೆ ಮತ್ತು ಇಲ್ಲಿನ ನಿವಾಸಿಗಳು ಸಹ ಇವುಗಳ ಬಾಡಿಗೆಗಾಗಿ 40,000 ರೂಪಾಯಿಗಳನ್ನು ಖರ್ಚು ಮಾಡಿದರು. ಅಪಾರ್ಟ್ಮೆಂಟ್ ಈಗ ನಿಮಿಷಕ್ಕೆ 1,100 ಲೀಟರ್ ನೀರನ್ನು ಪಂಪ್ ಮಾಡುವ ಸೆಟ್ ಅನ್ನು ಖರೀದಿಸಿದೆ. 2 ಬಿಪಿ ಪಂಪ್ ಸೆಟ್ ಬಾಡಿಗೆಗೆ ದಿನಕ್ಕೆ 2,000 ರೂಪಾಯಿಗಳಿಂದ 12,000 ರೂಪಾಯಿಗಳವರೆಗೆ ಏಜೆನ್ಸಿಗಳು ಹೆಚ್ಚಿಸಿವೆ ಎಂದು ಅವರು ಹೇಳಿದರು.
First published: