Bengaluru Rains: ಮೂರು ದಶಕಗಳ ಬಳಿಕ ಬೆಂಗಳೂರಿನಲ್ಲಿ ಮತ್ತೆ ಕಾಣಿಸಿಕೊಂಡ ನದಿ; ಜನರು ಮರೆತೇ ಬಿಟ್ಟಿದ್ರು!

ಮೂರು ದಶಕಗಳಿಂದ ಬತ್ತಿ ಹೋಗಿದ್ದ ದಕ್ಷಿಣ ಪಿನಾಕಿನಿ ನದಿ (Dakshina Pinakini River) ಹರಿಯಲು ಆರಂಭಿಸಿದೆ. ನಿರಂತರ ಮಳೆಯಿಂದಾಗಿ ನದಿ ಉಕ್ಕಿ ಹರಿಯುತ್ತಿದೆ. ಚನ್ನಸಂದ್ರ ಮುಖ್ಯರಸ್ತೆಯ ಬಳಿಯ ಟೆಕ್ ಕಾರಿಡಾರ್ ಜಲಾವೃತವಾಗಿದೆ. ರಸ್ತೆಯ ಮೇಲೆ ಮೂರರಿಂದ ನಾಲ್ಕು ಅಡಿಯಷ್ಟು ನೀರು ಹರಿದಿದೆ. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.

ಬೆಂಗಳೂರು ಮಳೆ

ಬೆಂಗಳೂರು ಮಳೆ

  • Share this:
ಈ ಬಾರಿ ಬೆಂಗಳೂರಿನಲ್ಲಿ ಸುರಿದ ಮಳೆ (Bengaluru Rains) ಇಡೀ ದೇಶದಲ್ಲಿ ಸುದ್ದಿಯಾಗಿದೆ. ನಿರಂತರ ಸುರಿದ ಮಳೆಗೆ (Rainfall) ನಗರದ ಪ್ರತಿಷ್ಠಿತ ಬಡಾವಣೆಗಳು, ಐಟಿ ಟೆಕ್ ಪಾರ್ಕ್​ಗಳು ಮುಳುಗಡೆಯಾಗಿವೆ. ಕೆರೆಗಳ (Lakes) ಒತ್ತುವರಿ ಮಾಡಿಕೊಂಡ ಪರಿಣಾಮವನ್ನು ಬೆಂಗಳೂರಿನ (Bengaluru) ಜನತೆ ನೋಡುತ್ತಿದ್ದಾರೆ. ಕೊಳಚೆ ನೀರು ಹರಿಯಲು ಸೀಮಿತವಾಗಿದ್ದ ಅರ್ಕಾವತಿ ನದಿ (Arkavathi River) ಸಹ ದಶಕಗಳ ಬಳಿಕ ತುಂಬಿ ಹರಿಯುತ್ತಿದೆ. ಬೆಂಗಳೂರು ಜನರು (Bangaloreans) ಮರೆತು ಹೋಗಿದ್ದ ನದಿಯೊಂದು ಮೂರು ದಶಕಗಳ ಬಳಿಕ ಹರಿಯಲಾರಂಭಿಸಿದೆ. ನದಿ ಹರಿದ ಪರಿಣಾಮ ರಸ್ತೆಗಳು ಜಲಾವೃತಗೊಂಡಿವೆ. ಇಲ್ಲೊಂದು ನದಿ ಇತ್ತಾ ಎಂದು ಬೆಂಗಳೂರಿನ ಜನರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

ಮೂರು ದಶಕಗಳಿಂದ ಬತ್ತಿ ಹೋಗಿದ್ದ ದಕ್ಷಿಣ ಪಿನಾಕಿನಿ ನದಿ (Dakshina Pinakini River) ಹರಿಯಲು ಆರಂಭಿಸಿದೆ. ನಿರಂತರ ಮಳೆಯಿಂದಾಗಿ ನದಿ ಉಕ್ಕಿ ಹರಿಯುತ್ತಿದೆ. ಚನ್ನಸಂದ್ರ ಮುಖ್ಯರಸ್ತೆಯ ಬಳಿಯ ಟೆಕ್ ಕಾರಿಡಾರ್ ಜಲಾವೃತವಾಗಿದೆ. ರಸ್ತೆಯ ಮೇಲೆ ಮೂರರಿಂದ ನಾಲ್ಕು ಅಡಿಯಷ್ಟು ನೀರು ಹರಿದಿದೆ. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.

ಚನ್ನಸಂದ್ರ ಮುಖ್ಯರಸ್ತೆ ಜಲಾವೃತ

ವೈಟ್‌ಫೀಲ್ಡ್ ಬಳಿಯ ಹೋಪ್ ಫಾರ್ಮ್ ಜಂಕ್ಷನ್‌ನಿಂದ ಆರಂಭಗೊಂಡು ಕೊರಳೂರಿನ ಮೂಲಕ ಹೊಸಕೋಟೆ ಮತ್ತು ಮಾಲೂರಿಗೆ ಸಂಪರ್ಕ ಕಲ್ಪಿಸುವ ಚನ್ನಸಂದ್ರ ಮುಖ್ಯರಸ್ತೆ 25 ಕ್ಕೂ ಹೆಚ್ಚು ಹಳ್ಳಿಗಳಿಂದ ಸುತ್ತುವರೆದಿದೆ, ಇದು ನಿಧಾನವಾಗಿ ಟೆಕ್ ವಲಯದಲ್ಲಿ ಕೆಲಸ ಮಾಡುವವರಿಗೆ ವಸತಿ ಜೇಬಿಗೆ ಬದಲಾಗುತ್ತಿದೆ. ದಿನನಿತ್ಯ ನಗರಕ್ಕೆ ತರಕಾರಿಗಳು ಮತ್ತು ಇಂಧನ (ದೇವನಗೊಂತಿ ತೈಲ ಮಾರುಕಟ್ಟೆ ಟರ್ಮಿನಲ್‌ನಿಂದ) ಸಾಗಣೆಗೆ ಅನುಕೂಲವಾಗುವ ಪ್ರಮುಖ ರಸ್ತೆಗಳಲ್ಲಿ ಇದು ಕೂಡ ಒಂದಾಗಿದೆ.

Bengaluru Rains After 30 year Dakshina Pinakini river overflow mrq
ಬೆಂಗಳೂರು ಮಳೆ ಎಫೆಕ್ಟ್​


ಇದನ್ನೂ ಓದಿ:  Sanikatta Salt: ಎಲ್ಲೂ ಸಿಗ್ತಿಲ್ಲ ಸಾಣಿಕಟ್ಟಾ ಉಪ್ಪು; ಉತ್ಪಾದನೆಯಲ್ಲಿ ಭಾರೀ ಕುಸಿತ, ಕಾರಣ ಏನು?

ಚನ್ನಸಂದ್ರ ಮುಖ್ಯರಸ್ತೆ ವೈಟ್​ ಫೀಲ್ಡ್​​ ಬಳಿಯ ಹೋಪ್ ಫಾರ್ಮ್​ ಜಂಕ್ಷನ್​ನಿಂದ ಆರಂಭವಾಗಿ ಕೊರಲೂರು, ಮಾಲೂರು ಮತ್ತು ಹೊಸಕೋಟೆಗೆ ಸಂಪರ್ಕ ಕಲ್ಪಿಸುತ್ತದೆ. ಈ ಮಾರ್ಗದಲ್ಲಿ ಸುಮಾರು 25 ಬಡವಾಣೆಗಳಿದ್ದು, ಇಲ್ಲಿಯ ಐಟಿ ಬಿಟಿ ಕಂಪನಿಯ ಉದ್ಯೋಗಿಗಳು ಹೆಚ್ಚಾಗಿ ವಾಸವಾಗಿದ್ದಾರೆ. ಚನ್ನಸಂದ್ರ ಪ್ರಮುಖ ರಸ್ತೆ ಮೂಲಕವೇ ನಗರಕ್ಕೆ ಹೆಚ್ಚಿನ ಪ್ರಮಣದ ತರಕಾರಿ ಸರಬರಾಜು ಆಗುತ್ತದೆ. ಇದೇ ಮಾರ್ಗದ ಮೂಲಕವೇ ದಿನನಿತ್ಯದ ಬೇಸ್​ ಮೇಲೆ ಇಂಧನ ಪೂರೈಕೆ ಮಾಡಲಾಗುತ್ತಿದೆ.

ಉದ್ಘಾಟನೆಯಾಗದ ಸೇತುವೆ ಜಲಾವೃತ

ಈ ಭಾಗದಲ್ಲಿರುವ ಸೇತುವೆ ಮೇಲೆಯೂ ದಕ್ಷಿಣ ಪಿನಾಕಿನಿ ನದಿ ಹರಿಯಲಾರಂಭಿಸಿದೆ. ಇನ್ನೂ ಈ ಸೇತುವೆ ಉದ್ಘಾಟನೆ ಸಹ ಆಗಿಲ್ಲ. ನದಿ ಉಕ್ಕಿ ಹರಿಯುತ್ತಿದ್ದ ಪರಿಣಾಮ ಕೊರಲೂರು ಬಳಿಯ ಸಂಚಾರ ಸ್ಥಗಿತಗೊಂಡಿತ್ತು.

ಈ ಕುರಿತು ಮಾತನಾಡಿರುವ ಸ್ಥಳೀಯ ನಿವಾಸಿ ಭೋದನಹೊಸಹಳ್ಳಿಯ ಸೊಣ್ಣೇಗೌಡ, ಕಳೆದ ಮೂವತ್ತು ವರ್ಷಗಳಿಂದ ಈ ನದಿ ಹರಿದಿರೋದನ್ನು ನಾವು ನೋಡಿಯೇ ಇಲ್ಲ. ಈಗ ಅಪಾಯಮಟ್ಟದಲ್ಲಿ ದಕ್ಷಿಣ ಪಿನಾಕಿನಿ ನದಿ ಹರಿಯುತ್ತಿದೆ ಎಂದು ಹೇಳಿದ್ದಾರೆ.

ತುಂಬಿ ಹರಿಯುತ್ತಿದೆ ದಕ್ಷಿಣ ಪಿನಾಕಿನಿ

ನಂದಿ ಬೆಟ್ಟದ ಪರಿಸರದಲ್ಲಿ ಹುಟ್ಟವ ಈ ನದಿ ಚಿಕ್ಕಬಳ್ಳಾಪುರ, ಹೊಸಕೋಟೆ, ಕಾಡುಗೋಡಿ, ಸರ್ಜಾಪುರ ಮತ್ತು ಮಾಲೂರು ಮೂಲಕ ಹರಿಯುತ್ತದೆ. ಬೆಳ್ಳಂದೂರು ಮತ್ತು ವರ್ತೂರು ಕೆರೆಗಳಿಗೆ  ಸೇರಿ ತಮಿಳುನಾಡು ಪ್ರವೇಶಿಸುತ್ತದೆ. ಕಳೆದ ಎರಡು ದಶಕಗಳಿಂದ ನದಿಯ ಜಲಾನಯದ ಪ್ರದೇಶ ಮಾಲೂರುವರೆಗೆ ಬರಿದಾಗಿತ್ತು. ಹಾಗಾಗಿ ದಕ್ಷಿಣ ಪಿನಾಕಿನಿಯನ್ನು ಜನರು ಮರೆತಿದ್ದರು. ಈಗ ಮಳೆಯಿಂದಾಗಿ ದಕ್ಷಿಣ ಪಿನಾಕಿನಿ ತುಂಬಿ ಹರಿಯುತ್ತಿದೆ.

Bengaluru Rains After 30 year Dakshina Pinakini river overflow mrq
ಬೆಂಗಳೂರು ಮಳೆ ಎಫೆಕ್ಟ್​


ಸಮೇತನಹಳ್ಳಿಯ ಅರುಣ್‌ಕುಮಾರ್‌ ಮಾತನಾಡಿ, ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಧಾರಾಕಾರ ಮಳೆಯಾಗಿದೆ. ಎಲೆ ಮಲ್ಲಪ್ಪ ಶೆಟ್ಟಿ ಕೆರೆ, ಹೊಸಕೋಟೆಯ ಕೆರೆ ಭರ್ತಿಯಾಗಿದೆ. ಸ್ಥಳೀಯ ಅಂತರ್ಜಲ ಮಟ್ಟ ಸಹ ಏರಿಕೆಯಾಗುತ್ತಿದೆ. ಸುಮಾರು 30-40 ವರ್ಷಗಳಿಂದ ನದಿ ಹೀಗೆ ಹರಿಯುತ್ತಿತ್ತು ಹಳೆ ದಿನಗಳನ್ನು ಮೆಲುಕು ಹಾಕಿಕೊಂಡರು.

ಇದನ್ನೂ ಓದಿ: Rain Alert: ಬೆಂಗಳೂರಿಗರೇ ಎಚ್ಚರ, ರಾಜ್ಯದಲ್ಲಿ ಇನ್ನೂ ಐದು ದಿನ ಭಾರೀ ಮಳೆಯ ಅಲರ್ಟ್​

ಇದು ನಮಗೆ ಎಚ್ಚರಿಕೆ

ಮೂವತ್ತು ವರ್ಷಗಳ ಬಳಿಕ ಹರಿಯುತ್ತಿರುವ ದಕ್ಷಿಣ ಪಿನಾಕಿನಿ ನಮಗೆಲ್ಲರಿಗೂ ಎಚ್ಚರಿಕೆ ನೀಡುತ್ತಿದೆ. ನಾವೂ ಏನೇ ಒತ್ತುವರಿ ಮಾಡಿಕೊಂಡ್ರೂ ಮುಂದೊಂದು ದಿನ ಅದನ್ನ ಪ್ರಕೃತಿಗೆ ಮರಳಿಸಬೇಕು ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಅರುಣ್ ಕುಮಾರ್ ಹೇಳುತ್ತಾರೆ.
Published by:Mahmadrafik K
First published: