• Home
  • »
  • News
  • »
  • state
  • »
  • Bengaluru Rains: ನಡುರಸ್ತೆಯಲ್ಲೇ ಕಂದಕ, ಅಂಡರ್​ಪಾಸ್​​ನಲ್ಲಿ ಎಂಟು ಅಡಿಗಳಷ್ಟು ನೀರು ಸಂಗ್ರಹ

Bengaluru Rains: ನಡುರಸ್ತೆಯಲ್ಲೇ ಕಂದಕ, ಅಂಡರ್​ಪಾಸ್​​ನಲ್ಲಿ ಎಂಟು ಅಡಿಗಳಷ್ಟು ನೀರು ಸಂಗ್ರಹ

ಮಳೆ

ಮಳೆ

ಬನ್ನೇರುಘಟ್ಟದ ಕೋಡಿಚಿಕ್ಕನಹಳ್ಳಿ ಜಲಾವೃತ ಆಗಿದೆ. ಮನೆಗಳಿಗೆ ನೀರು ನುಗ್ಗಿದೆ. ಲೇಔಟ್‌ನ ರಸ್ತೆಗಳು ಕೆರೆಯಂತಾಗಿವೆ. ಅಗ್ನಿಶಾಮಕ ದಳ ಸಿಬ್ಬಂದಿ ನೀರು ಹೊರಹಾಕಲು ಹರಸಾಹಸ ಪಡುತ್ತಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಸಿಲಿಕಾನ್ ಸಿಟಿಯಲ್ಲಿ ಮಳೆಯ (Bengaluru Rains) ಅಬ್ಬರ ಮತ್ತಷ್ಟು ಜಾಸ್ತಿಯಾಗಿದ್ದು, ನಿನ್ನೆ ರಾತ್ರಿ 8 ವಲಯದ 51 ವಾರ್ಡ್​​ಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ. ಬುಧವಾರ ನಗರದಲ್ಲಿ ಸರಾಸರಿ 1.06 ಸೆಂ. ಮೀ ಮಳೆಯಾಗಿದೆ. ಮೆಜೆಸ್ಟಿಕ್‍ನಲ್ಲಿ ತಡೆಗೋಡೆ ಕುಸಿದು (Wall Collapsed) 7 ಕಾರು ಜಖಂಗೊಂಡಿದೆ. ಶಿವಾನಂದ ಅಂಡರ್ ಪಾಸ್‍ನಲ್ಲಿ ಡಾಂಬಾರ್‌ ಕಿತ್ತು ಹೋಗಿದೆ. ಹಲವೆಡೆ ಮನೆಗಳಿಗೆ ಅಪಾರ ಪ್ರಮಾಣದ ನೀರು (Water Enters House) ನುಗ್ಗಿದೆ. ಶಿವಾಜಿ ನಗರದಲ್ಲಿ ಮಳೆಗೆ ಕೊಚ್ಚಿ ಹೋಗ್ತಿದ್ದ ಬೈಕ್ ರಕ್ಷಿಸಲು ಸವಾರರು ಹರಸಾಹಸಪಟ್ಟಿರುವ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Social Media) ಆಗಿವೆ. ವಿಧಾನಸೌಧ ರಸ್ತೆಯಲ್ಲಿ ಮಂಡಿಯುದ್ದ ನಿಂತ ನೀರು ನಿಂತಿತ್ತು. ಶಾಂತಿನಗರದ ಮುಖ್ಯರಸ್ತೆಯ ನಡು ನೀರಿನಲ್ಲಿ ಬಿಎಂಡಬ್ಲ್ಯೂ ಕಾರುಗಳು (BMW Cars) ಕೆಟ್ಟು ನಿಂತಿದ್ದವು.


ಬೆಂಗಳೂರಿನ ಮೆಟ್ರೋ ಟನಲ್‌ ಬಳಿ ಗೋಡೆ ಕುಸಿದಿದೆ. ಶೇಷಾದ್ರಿಪುರಂ ಜೆಡಿಎಸ್ ಕಚೇರಿಯ ಮುಂದೆ ತಡೆಗೋಡೆ ಕುಸಿದಿದ್ದು, 7 ಕಾರು, 2 ಬೈಕ್ ಜಖಂ ಆಗಿವೆ. ಅದೃಷ್ಟವಶಾತ್ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದಕ್ಕೆಲ್ಲಾ ಕಳಪೆ ಕಾಮಗಾರಿಯೇ ಕಾರಣ ಅಂತ ಮೆಟ್ರೋ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಘಟನಾ ಸ್ಥಳಕ್ಕೆ ಶಾಸಕ ದಿನೇಶ್ ಗುಂಡೂರಾವ್, BMRCL ಎಂಡಿ ಅಂಜುಂ ಪರ್ವೇಜ್​ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.


ಬೆಂಗಳೂರಿನ ಪಟ್ಟೇಗಾರಪಾಳ್ಯದಲ್ಲಿ ನಡುರಸ್ತೆಯಲ್ಲೇ ಕಂದಕ ನಿರ್ಮಾಣವಾಗಿವೆ. ರಾತ್ರಿ ಸುರಿದ ಭಾರೀ ಮಳೆಗೆ ರಸ್ತೆ ಮಧ್ಯೆಯೇ ಸುರಂಗ ನಿರ್ಮಾಣವಾಗಿದ್ದು, ಪೊಲೀಸರು ಬ್ಯಾರಿಕೇಡ್ ಹಾಕಿ ಸಂಚಾರ ನಿರ್ಬಂಧಿಸಿದ್ದಾರೆ.


ನಮ್ಮ ಗೋಳು ಕೇಳೋರು ಯಾರು?


ಬನ್ನೇರುಘಟ್ಟದ ಕೋಡಿಚಿಕ್ಕನಹಳ್ಳಿ ಜಲಾವೃತ ಆಗಿದೆ. ಮನೆಗಳಿಗೆ ನೀರು ನುಗ್ಗಿದೆ. ಲೇಔಟ್‌ನ ರಸ್ತೆಗಳು ಕೆರೆಯಂತಾಗಿವೆ. ಅಗ್ನಿಶಾಮಕ ದಳ ಸಿಬ್ಬಂದಿ ನೀರು ಹೊರಹಾಕಲು ಹರಸಾಹಸ ಪಡುತ್ತಿದ್ದಾರೆ. ಪ್ರತಿ ಬಾರಿ ಮಳೆ ಬಂದ್ರೂ ಇದೇ ಪರಿಸ್ಥಿತಿ ನಿರ್ಮಾಣವಾಗುತ್ತೆ. ಅಧಿಕಾರಿಗಳು ಗಮನ ಕೊಡ್ತಿಲ್ಲ ಅಂತ ಸ್ಥಳೀಯರು ಬಿಬಿಎಂಪಿ ಅಧಿಕಾರಿಗಳಿಗೆ ಹಿಡಿಶಾಪ ಹಾಕ್ತಿದ್ದಾರೆ.


ಆನೇಕಲ್ ಭಾಗದಲ್ಲಿಯೂ ಜೋರು ಮಳೆ


ಬೆಂಗಳೂರು ಹೊರವಲಯ ಆನೇಕಲ್ ಬಳಿಯ ನಾರಾಯಣಪುರ ಕೆರೆಯಂತಾಗಿದೆ. ಮಳೆ ನೀರು ಮನೆಗಳಿಗೆ ನುಗ್ಗಿದ್ದು, ಜನ್ರು ರಾತ್ರಿಯಿಡೀ ನರಕಯಾತನೆ ಅನುಭವಿಸಿದ್ರು. ಮನೆಯಲ್ಲಿರುವ ದಿನಸಿ ಮತ್ತು ಎಲೆಕ್ಟ್ರಾನಿಕ್ ವಸ್ತುಗಳು ನೀರಿನಲ್ಲಿ ಮುಳುಗಿವೆ. ಕೆರೆ ಜಾಗದಲ್ಲಿ ಮನೆಗಳನ್ನು ನಿರ್ಮಿಸಿದ್ದಕ್ಕೆ ಈ ಸಮಸ್ಯೆ ಸೃಷ್ಟಿಯಾಗಿದೆ ಎನ್ನಲಾಗ್ತಿದೆ.


ಅಂಡರ್​ಪಾಸ್​​ನಲ್ಲಿ ಎಂಟು ಅಡಿ ನೀರು ಸಂಗ್ರಹ


ಅರವಂಟಿಗೆಪುರ ರೈಲ್ವೆ ಅಂಡರ್ ಪಾಸ್ ಜಲಾವೃತವಾಗಿದೆ. ಅವೈಜ್ಞಾನಿಕವಾಗಿ ಅಂಡರ್ ಪಾಸ್ ನಿರ್ಮಿಸಿರೋದ್ರಿಂದ ಎಂಟು ಅಡಿ ನೀರು ನಿಂತಿದೆ. ಆದ್ದರಿಂದ ಜನರು ರೈಲ್ವೆ ಹಳಿ ಮೇಲೆ ಹಾದು ಸಾಗುತ್ತಿದ್ದಾರೆ.


ಇದನ್ನೂ ಓದಿ: Mandya Politics: ರವೀಂದ್ರ ಶ್ರೀಕಂಠಯ್ಯಗೆ ಮೈತುಂಬಾ ದುರಹಂಕಾರ ತುಂಬಿದೆ; ಸುಮಲತಾ ಅಂಬರೀಶ್ ತಿರುಗೇಟು


ರಾತ್ರಿ ಸುರಿದ ಮಳೆಗೆ ಆನೇಕಲ್​​ನ ತೋಟಗಾರಿಕಾ ಇಲಾಖೆ ಕಚೇರಿ ಜಲಾವೃತವಾಗಿದೆ. ಕಚೇರಿಯಲ್ಲಿ ಮೂರ್ನಾಲ್ಕು ಅಡಿಗಳಷ್ಟು ನೀರು ತುಂಬಿದ್ದು, ಹಲವು ವಸ್ತುಗಳಿಗೆ ಹಾನಿಯಾಗಿದೆ. ತಾಲ್ಲೂಕು ಮಟ್ಟದ ಕ್ರೀಡಾಂಗಣ ಜಲಾವೃತವಾಗಿದೆ. ಮೊದಲು ಈ ಕ್ರೀಡಾಂಗಣದಲ್ಲಿ ಚಿಕ್ಕಕೆರೆ ಇತ್ತಂತೆ. ಕೆರೆಯನ್ನ ಕ್ರೀಡಾಂಗಣವಾಗಿ ಮಾಡಿದ್ರು. ಈಗ ನೀರು ತುಂಬಿ ಕ್ರೀಡಾಂಗಣ ಕೆರೆಯಂತಾಗಿದೆ.


ಭಾನುವಾರ ಮಳೆ ಸಾಧ್ಯತೆ


ಹವಾಮಾನ ಇಲಾಖೆ ಪ್ರಕಾರ, ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತವು ರೂಪುಗೊಳ್ಳುತ್ತಿದ್ದು, ಭಾನುವಾರ ಕರಾವಳಿಯನ್ನು ಅಪ್ಪಳಿಸುವ ನಿರೀಕ್ಷೆಯಿದೆ. ಭಾನುವಾರ ತಡರಾತ್ರಿಯ ವೇಳೆಗೆ ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತವು ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.


ಇದನ್ನೂ ಓದಿ:  Tumakur: ಕುಡಿಯಲು ಹಣ ಕೊಡಲಿಲ್ಲವೆಂದು ಹಾರೆಯಿಂದ ಹೊಡೆದು ಪತ್ನಿ, ಮಗುವನ್ನು ಕೊಂದ ನೀಚ

 ಐಎಂಡಿ ಮೀನುಗಾರರಿಗೆ ಅಕ್ಟೋಬರ್ 22 ರಿಂದ ಪಶ್ಚಿಮ ಮಧ್ಯ ಮತ್ತು ಪಕ್ಕದ ಉತ್ತರ ಬಂಗಾಳ ಕೊಲ್ಲಿಗೆ ಹೋಗದಂತೆ ಮತ್ತು ಅಕ್ಟೋಬರ್ 23 ರಿಂದ ಒಡಿಶಾ ಕರಾವಳಿಯಿಂದ ಹೊರಗುಳಿಯಲು ಸಲಹೆ ನೀಡಿದೆ.

Published by:Mahmadrafik K
First published: