ಗಾಳಿ-ಮಳೆಗೆ ತತ್ತರಿಸಿದ ಬೆಂಗಳೂರು; ಬಿದ್ದ ಮರಗಳ ತೆರವು ಕಾರ್ಯಾಚರಣೆಯೇ ಸವಾಲು

ನಿನ್ನೆಯ ರಾತ್ರಿಯನ್ನು ಬೆಂಗಳೂರು ಕತ್ತಲಲ್ಲೇ ಕಳೆದಿದೆ. ಸಾಕಷ್ಟು ಮರಗಳು ವಿದ್ಯುತ್ ಕಂಬದ ಮೇಲೆ ಬಿದ್ದಿವೆ. ಪರಿಣಾಮ ಎಲ್ಲ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಸದ್ಯ ರಸ್ತೆಯ ಮೇಲೆ ಬಿದ್ದಿರುವ ಮರ ಹಾಗೂ ಟೊಂಗೆಗಳ ತೆರವು ಕಾರ್ಯಚರಣೆ ಬಿಬಿಎಂಪಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ

Rajesh Duggumane | news18
Updated:June 7, 2019, 8:08 AM IST
ಗಾಳಿ-ಮಳೆಗೆ ತತ್ತರಿಸಿದ ಬೆಂಗಳೂರು; ಬಿದ್ದ ಮರಗಳ ತೆರವು ಕಾರ್ಯಾಚರಣೆಯೇ ಸವಾಲು
ನಿನ್ನೆ ಮಳೆಗೆ ಬಿದ್ದಿರುವ ಮರದ ಟೊಂಗೆಗಳು
Rajesh Duggumane | news18
Updated: June 7, 2019, 8:08 AM IST
ಬೆಂಗಳೂರು (ಜೂ. 7): ನಿನ್ನೆ ರಾತ್ರಿ ಸುರಿದ ಗಾಳಿ-ಮಳೆಗೆ ಬೆಂಗಳೂರಿನ ಜನತೆ ಅಕ್ಷರಶಃ ತತ್ತರಿಸಿದೆ. ರಾತ್ರಿ ಸುಮಾರು 10 ಗಂಟೆಗೆ ಆರಂಭವಾದ ಮಳೆ ಒಂದು ಗಂಟೆಗಳ ಕಾಲ ಸುರಿದಿತ್ತು. ಈ ವೇಳೆ ಅನೇಕ ಕಡೆಗಳಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

ಭಾರೀ ಗಾಳಿ ಬೀಸಿದ್ದರಿಂದ ಅನೇಕ ಕಡೆಗಳಲ್ಲಿ ಮರಗಳು ಬುಡ ಸಮೇತ ಕುಸಿದು ಬಿದ್ದಿವೆ. ಕೆಲ ಭಾಗದಲ್ಲಿ ಮರದ ಟೊಂಗೆಗಳು ಮುರಿದಿವೆ. ಮರ ಹಾಗೂ ಟೊಂಗೆ ನೆಲಕ್ಕುರುಳಿದ ಪರಿಣಾಮ ಅನೇಕ ಕಡೆಗಳಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

ನಿನ್ನೆ ರಾತ್ರಿಯನ್ನು ಬೆಂಗಳೂರಿಗರು ಕತ್ತಲಲ್ಲೇ ಕಳೆದಿದ್ದಾರೆ. ಸಾಕಷ್ಟು ಮರಗಳು ವಿದ್ಯುತ್ ಕಂಬದ ಮೇಲೆ ಬಿದ್ದಿವೆ. ಪರಿಣಾಮ ಹಲವು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಸದ್ಯ ರಸ್ತೆಯ ಮೇಲೆ ಬಿದ್ದಿರುವ ಮರ ಹಾಗೂ ಟೊಂಗೆಗಳ ತೆರವು ಕಾರ್ಯಚರಣೆ ಬಿಬಿಎಂಪಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ರಾತ್ರಿಯಿಂದಲೇ ಸಿಬ್ಬಂದಿ ಬಿದ್ದ ಮರಗಳನ್ನು ತೆಗೆಯುವ ಕಾರ್ಯದಲ್ಲಿ ತೊಡಗಿದ್ದು, ಹಲವು ಕಡೆಗಳಲ್ಲಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ.

ಇದನ್ನೂ ಓದಿ: ಬೆಂಗಳೂರು ಸೇರಿ ವಿವಿಧೆಡೆ ಭಾರೀ ಮಳೆ; ಜನಜೀವನ ಅಸ್ತವ್ಯಸ್ಥ

ಗಾಳಿ-ಮಳೆಗೆ ಬೆಸ್ಕಾಂನ ದಕ್ಷಿಣ ಮತ್ತು ಪಶ್ಚಿಮ ಭಾಗದಲ್ಲಿ 95 ವಿದ್ಯುತ್ ಕಂಬಗಳು ಹಾಗೂ 83 ಮರಗಳು ನೆಲಕ್ಕುರುಳಿವೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಮಳೆಯಿಂದ ಪ್ಯಾಲೇಸ್ ರಸ್ತೆಯಲ್ಲಿ ಕಾರು ಹಾಗೂ ವ್ಯಾನ್ ನಡುವೆ ಡಿಕ್ಕಿ ಸಂಭವಿಸಿದೆ. ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಘಟನೆಯಿಂದಾಗಿ ಪ್ಯಾಲೇಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.

First published:June 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...