Railway Staff Saves Man: ಬೆಂಗಳೂರಲ್ಲಿ 28 ಸೆಕೆಂಡ್‍ಗಳಲ್ಲಿ ಜೀವ ಉಳಿಸಿದ ರೈಲ್ವೆ ಸಿಬ್ಬಂದಿ, ಸಿಸಿಟಿವಿ ದೃಶ್ಯ ಇಲ್ಲಿದೆ

ಬೆಂಗಳೂರಿನ ಕೆ.ಆರ್ ಪುರಂ ನಿಲ್ದಾಣದಲ್ಲಿ ಹಳಿ ದಾಟಿ, ಪ್ಲಾಟ್‍ಫಾರ್ಮ್‍ಗೆ ಏರಲು ಹೋದ ವ್ಯಕ್ತಿ ಕಾಲು ಜಾರಿ ಬೀಳುತ್ತಾನೆ. ಟ್ರೇನ್ ಬರಲು ಕೆಲವೇ ಸೆಕೆಂಡುಗಳು ಬಾಕಿ ಇರುತ್ತೆ. ಆಗ ತಕ್ಷಣವೇ ಆರ್ ಪಿಎಫ್ ಸಿಬ್ಬಂದಿ ಓಡಿ ಹೋಗಿ ಆತನ ಪ್ರಾಣ ರಕ್ಷಿಸುತ್ತಾರೆ. ವ್ಯಕ್ತಿಯನ್ನು ಕಾಪಾಡೋ ದೃಶ್ಯ ರೈಲು ನಿಲ್ದಾಣದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕೆಆರ್ ಪುರಂ ರೈಲ್ವೇ  ನಿಲ್ದಾಣ

ಕೆಆರ್ ಪುರಂ ರೈಲ್ವೇ ನಿಲ್ದಾಣ

  • Share this:
ರೈಲು ನಿಲ್ದಾಣದಲ್ಲಿ (Railway) ಎಷ್ಟೇ ಹುಷಾರಿದ್ದರೂ ಸಾಲದು. ಕೆಲವೊಮ್ಮೆ ಅಚಾನಕ್ಕಾಗಿ ದುರ್ಘಟನೆಗಳು ನಡೆದು ಹೋಗಿ ಬಿಡುತ್ತವೆ. ರೈಲು ಇಳಿಯುವಾಗ, ಹತ್ತುವಾಗ ಎಷ್ಟೋ ಜನ ಸಿಲುಕಿ ಒದ್ದಾಡಿ ಬಿಡುತ್ತಾರೆ. ಕೆಲವು ಬಾರಿ ಪ್ರಾಣವೇ ಹೋಗಿ ಬಿಡುತ್ತೆ. ಅಂತೆಯೇ ಹಳ್ಳಿ ದಾಟುವಾಗಲು ಅಷ್ಟೇ ವೇಗವಾಗಿ ಬರುತ್ತಿರುವ ರೈಲುಗಳಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಾರೆ. ಪ್ರಯಾಣಿಕರು ಓಡಾಡುವ ಜಾಗ ಬಿಟ್ಟು ಹಳಿಗಳ ಮೇಲೆಯೇ ಓಡಾಡಿ ಅನಾಹುತ ಮಾಡಿಕೊಳ್ಳುತ್ತಾರೆ. ಬೆಂಗಳೂರಿನ ಕೆ.ಆರ್ ಪುರಂ ನಿಲ್ದಾಣದಲ್ಲಿ ಹಳಿ (Track) ದಾಟಿ, ಪ್ಲಾಟ್‍ಫಾರ್ಮ್‍ಗೆ (Platform) ಏರಲು ಹೋದ ವ್ಯಕ್ತಿ ಕಾಲು ಜಾರಿ ಬೀಳುತ್ತಾನೆ. ಟ್ರೇನ್ ಬರಲು ಕೆಲವೇ ಸೆಕೆಂಡುಗಳು ಬಾಕಿ ಇರುತ್ತೆ. ಆಗ ತಕ್ಷಣವೇ ಆರ್ ಪಿಎಫ್ (RPF) ಸಿಬ್ಬಂದಿ (Personnel) ಓಡಿ ಹೋಗಿ ಆತನ ಪ್ರಾಣ ರಕ್ಷಿಸುತ್ತಾರೆ.

ರೈಲ್ವೇ ನೌಕರನ ಸಮಯ ಪ್ರಜ್ಞೆಯಿಂದ ಉಳಿದ ಜೀವ
ವ್ಯಕ್ತಿಯೊಬ್ಬ ಬೆಂಗಳೂರಿನ ಕೆ.ಆರ್ ಪುರಂ ನಿಲ್ದಾಣದಲ್ಲಿ ರೈಲು ಬರಲು ಕೆಲವೇ ಸೆಕೆಂಡ್ ಬಾಕಿ ಇರುವಾಗ ಹಳಿ ದಾಟುತ್ತಾನೆ. ಹಳಿ ದಾಟಿ ಪ್ಲಾಟ್‍ಫಾರ್ಮ್‍ಗೆ ಹತ್ತಲು ಪ್ರಯತ್ನಿಸುತ್ತಾನೆ. ಆಗ ಆಗದೇ ಕಾಲು ಜಾರಿ ಕೆಳಗೆ ಬರುತ್ತಾನೆ. ಆಗ ಅಲ್ಲೇ ಇದ್ದ ರೈಲ್ವೇ ಸಿಬ್ಬಂದಿ ಓಡಿ ಹೋಗಿ ಆತನ ಪ್ರಾಣ ರಕ್ಷಿಸುತ್ತಾರೆ. ಆ ವಿಡಿಯೋವನ್ನು ರೈಲ್ವೇ ಸಚಿವಾಲಯ ಟ್ವಿಟರ್‍ನಲ್ಲಿ ಹಂಚಿಕೊಂಡಿದೆ.ವ್ಯಕ್ತಿಯನ್ನು ಕಾಪಾಡೋ ದೃಶ್ಯ ರೈಲು ನಿಲ್ದಾಣದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. 

28 ಸೆಕೆಂಡುಗಳ ಸಿಸಿಟಿವಿ ದೃಶ್ಯದಲ್ಲಿ ಏನಿದೆ?
'ಬೆಂಗಳೂರಿನ ಕೆಆರ್ ಪುರಂ ನಿಲ್ದಾಣದಲ್ಲಿ ರೈಲ್ವೆ ನೌಕರರು ಪ್ಲಾಟ್‍ಫಾರ್ಮ್‍ನಲ್ಲಿ ನಡೆದುಕೊಂಡು ಹೋಗುತ್ತಿರುತ್ತಾರೆ. ಅವರಲ್ಲಿ ಒಬ್ಬರು ಇದ್ದಕ್ಕಿದ್ದಂತೆ ತಿರುಗಿ ನೋಡಿದಾಗ ಪ್ಲಾಟ್‍ಫಾರ್ಮ್‍ಗೆ ಏರಲು ಪ್ರಯತ್ನಿಸುವಾಗ ಕಾಲು ಜಾರಿ ಬಿದ್ದ ವ್ಯಕ್ತಿಯನ್ನು ನೋಡಿತ್ತಾರೆ. ಆಗ ಅವರು ಓಡಿ ಹೋಗುತ್ತಾರೆ. ಇನ್ನು ಇಬ್ಬರು ಸಮವಸ್ತ್ರದಲ್ಲಿದ್ದ ಸಿಬ್ಬಂದಿಯೂ ಆ ವ್ಯಕ್ತಿ ಕಡೆ ಓಡಿ ಬರುತ್ತಾರೆ. ಅಲ್ಲಿದ್ದ ಇತರ ಜನರು ಅವನ ಜೀವ ಉಳಿಸಲು ವ್ಯಕ್ತಿಯ ಕಡೆಗೆ ಹೋಗುತ್ತಾರೆ. ರೈಲ್ವೇ ನೌಕರ ಆತನನ್ನು ಹಿಡಿದು ಮೇಲಕ್ಕೆ ಎತ್ತುತ್ತಾರೆ. ತಕ್ಷಣವೇ ರೈಲು ಪಾಸಾಗುತ್ತೆ.'

ಅಮೂಲ್ಯ ಜೀವವನ್ನು ಉಳಿಸಿದೆ
"ಬೆಂಗಳೂರಿನ ಕೆಆರ್ ಪುರಂ ರೈಲು ನಿಲ್ದಾಣದಲ್ಲಿ ರೈಲು ಬರುವ ಕೆಲವೇ ನಿಮಿಷಗಳ ಮೊದಲು ಆರ್‍ಪಿಎಫ್ ಸಿಬ್ಬಂದಿಯ ತ್ವರಿತ ಪ್ರತಿಕ್ರಿಯೆಯು ಹಳಿಗಳ ಮೇಲೆ ಜಾರಿ ಬಿದ್ದ ವ್ಯಕ್ತಿಯ ಅಮೂಲ್ಯ ಜೀವವನ್ನು ಉಳಿಸಿದೆ" ಎಂದು ರೈಲ್ವೇಸ್ ಬರೆದು ವಿಡಿಯೋವನ್ನು ಟ್ವಿಟರ್‍ನಲ್ಲಿ ಹಂಚಿಕೊಂಡಿದೆ.

ಇದನ್ನೂ ಓದಿ: Bharat Gaurav Train: ಶ್ರಾವಣದಿಂದ ಬೆಂಗಳೂರು To ಕಾಶಿ ಪ್ರವಾಸ ನಡೆಸಿ; ಹೇಗಿರಲಿದೆ ಈ ಯಾತ್ರೆ

ಮೆಚ್ಚುಗೆಯ ಮಹಾಪೂರ
ಆರ್‍ಪಿಎಫ್ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಅಮೂಲ್ಯ ಜೀವ ಉಳಿದಿದೆ. ಆರ್‍ಪಿಎಫ್ ಸಿಬ್ಬಂದಿಯ ಕಾರ್ಯಕ್ಕೆ ಟ್ವಿಟರ್‍ನಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ. ಅಮಾಯನ ಪ್ರಾಣ ಉಳಿಸಿದ್ರಿ. ಥ್ಯಾಂಕ್ ಗಾಡ್. ವ್ಯಕ್ತಿಯ ಪ್ರಾಣ ಉಳಿಯಿತು. ಸೂಪರ್, ಗ್ರೇಟ್ ಜಾಬ್ ಎಂದು ಕಾಮೆಂಟ್ ಗಳು ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವ್ಯಕ್ತಿಗೆ ಬುದ್ದಿ ಹೇಳಿ ಕಳಿಸಿದ  ಆರ್ ಪಿಎಫ್ ಸಿಬ್ಬಂದಿ
ವ್ಯಕ್ತಿಯನ್ನು ಪ್ರಾಣಾಪಾಯದಿಂದ ಕಾಪಾಡಿದ ನಂತರ ಆರ್ ಪಿಎಫ್  ಸಿಬ್ಬಂದಿ ವ್ಯಕ್ತಿಗೆ ಬುದ್ಧಿ ಹೇಳಿ ಕಳಿಸಿದ್ದಾರೆ, ಈ ರೀತಿ ಹಳಿ ದಾಟಬಾರದು. ಪ್ರಾಣಕ್ಕೆ ತೊಂದರೆ ಆಗಿದ್ದರೆ ಏನು ಗತಿ. ಇನ್ನೊಮ್ಮೆ ಈ ಮಾಡಬೇಡಿ ಎಂದು ಹೇಳಿ ಕಳಿಸಿದ್ದಾರೆ.

ಇದನ್ನೂ ಓದಿ: Baby Girl: 10 ತಿಂಗಳ ಮಗುವಿಗೆ ರೈಲ್ವೆ ಇಲಾಖೆಯಲ್ಲಿ ಕೆಲಸ! ಲಕ್ಕಿ ಅಲ್ಲ ಕಣ್ರೀ, ಕಂದಮ್ಮನ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ

ಯಾರೇ ಆಗಲಿ ರೈಲ್ವೇ ಹಳಿ ದಾಟಬೇಡಿ. ಆಗಿಯೂ ದಾಟಿದ್ರೂ ಸುರಕ್ಷಿತವಾಗಿ ಹಳಿ ದಾಟಿ. ಇಲ್ಲ ಅಂದ್ರೆ ನಿಮ್ಮ ಪ್ರಾಣಕ್ಕೆ ಯಾವುದೇ ಗ್ಯಾರಂಟಿ ಇರುವುದಿಲ್ಲ. ನಿಮ್ಮ ಜೀವದ ಬಗ್ಗೆ ಎಚ್ಚರವಿರಲಿ.
Published by:Savitha Savitha
First published: