Digital Property Card: ಇನ್ಮುಂದೆ ಬೆಂಗಳೂರಿನ ಆಸ್ತಿ ಮಾಲೀಕರಿಗೆ ಡಿಜಿಟಲ್ ಆಸ್ತಿ ಕಾರ್ಡ್ ಹಂಚಿಕೆ: ಇದನ್ನು ಪಡೆಯುವುದು ಹೇಗೆ?

ಕಂದಾಯ ಇಲಾಖೆಯ ಅಂಗ ಸಂಸ್ಥೆಯಾದ ಭೂ ಮಾಪನ ಇಲಾಖೆಯು ನಗರ ಆಸ್ತಿ ಮಾಲೀಕತ್ವ ದಾಖಲೆಗಳ (ಯುಪಿಒಆರ್) ಕಾರ್ಡ್‌ಗಳ ಹೆಸರಿನಲ್ಲಿ ಈಗಾಗಲೇ ನಗರದ ನಾಲ್ಕು ವಾರ್ಡ್‌ಗಳಲ್ಲಿ ಇವುಗಳನ್ನು ವಿತರಿಸಲಾಗಿದೆ. ಇನ್ನುಳಿದ ಮೂರು ಹೆಚ್ಚುವರಿ ವಾರ್ಡ್‌ಗಳಲ್ಲಿ ಈಗಾಗಲೇ ಹಂಚಿಕೆ ನಡೆಯುತ್ತಿದೆ. ಪ್ರಸ್ತುತ, ಸೆಟ್ಲಮೆಂಟ್ ಮತ್ತು ಭೂ ದಾಖಲೆಗಳ ಇಲಾಖೆಯ 30 ತಂಡಗಳು ತಿಂಗಳಿಗೆ ಒಂದು ಲಕ್ಷ ಆಸ್ತಿಗಳ ಮೇಲೆ ಕೆಲಸ ಮಾಡುತ್ತಿವೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕರ್ನಾಟಕ ಸರ್ಕಾರವು ಬೆಂಗಳೂರು ಆಸ್ತಿ ಮಾಲೀಕರಿಗೆ (Bangalore property owner) ನಗರ ಆಸ್ತಿ ಮಾಲೀಕತ್ವ ದಾಖಲೆಗಳು (UPOR- ಅರ್ಬನ್ ಪ್ರಾಪರ್ಟಿ ಓನರ್ಶಿಪ್ ರೆಕಾರ್ಡ್) ಎಂಬ ಡಿಜಿಟೈಸ್ಡ್ (Digitized) ಮತ್ತು ಜಿಯೋ-ಉಲ್ಲೇಖಿತ ಆಸ್ತಿ ಕಾರ್ಡುಗಳನ್ನು ನೀಡಲು ಆರಂಭಿಸಿದೆ. ಕಂದಾಯ ಇಲಾಖೆಯ ಅಂಗ ಸಂಸ್ಥೆಯಾದ ಭೂ ಮಾಪನ ಇಲಾಖೆಯು ನಗರ ಆಸ್ತಿ ಮಾಲೀಕತ್ವ ದಾಖಲೆಗಳ (Property ownership record) (ಯುಪಿಒಆರ್) ಕಾರ್ಡ್‌ಗಳ ಹೆಸರಿನಲ್ಲಿ ಈಗಾಗಲೇ ನಗರದ ನಾಲ್ಕು ವಾರ್ಡ್‌ಗಳಲ್ಲಿ ಇವುಗಳನ್ನು ವಿತರಿಸಲಾಗಿದೆ. ಇನ್ನುಳಿದ ಮೂರು ಹೆಚ್ಚುವರಿ ವಾರ್ಡ್‌ಗಳಲ್ಲಿ ಈಗಾಗಲೇ ಹಂಚಿಕೆ ನಡೆಯುತ್ತಿದೆ. ಪ್ರಸ್ತುತ, ಸೆಟ್ಲಮೆಂಟ್ ಮತ್ತು ಭೂ ದಾಖಲೆಗಳ ಇಲಾಖೆಯ 30 ತಂಡಗಳು ತಿಂಗಳಿಗೆ ಒಂದು ಲಕ್ಷ ಆಸ್ತಿಗಳ ಮೇಲೆ ಕೆಲಸ ಮಾಡುತ್ತಿವೆ.

ವಸಾಹತು ಮತ್ತು ಭೂ ದಾಖಲೆಗಳ ಇಲಾಖೆಯ ಸರ್ವೆ ಆಯುಕ್ತ ಮುನೀಶ್ ಮೌದ್ಗಿಲ್ ಮಾತನಾಡಿ, ಪ್ರತಿ ತಿಂಗಳು ಒಂದು ಲಕ್ಷ ಪ್ರಾಪರ್ಟಿ ಕಾರ್ಡ್‌ಗಳನ್ನು ವಿತರಿಸಲು ಯೋಜಿಸಿದ್ದೇವೆ ಎಂದು ತಿಳಿಸಿದ್ದಾರೆ.

ಡಿಜಿಟಲ್ ಆಸ್ತಿ ಕಾರ್ಡ್ ನ ಪ್ರಯೋಜನಗಳೇನು?
ಮಹಾನಗರಗಳಲ್ಲಿ ಆಸ್ತಿ ಮಾಲೀಕತ್ವದ ಸಂಪೂರ್ಣ, ಅಧಿಕೃತ ದಾಖಲಾತಿಯನ್ನು ರಚಿಸುವುದು ಯುಪಿಒಆರ್ (UPOR) ಉಪಕ್ರಮದ ಗುರಿಯಾಗಿದೆ ಮತ್ತು ಮಾಲೀಕತ್ವದ ಅಧಿಕೃತ ದಾಖಲೆಯನ್ನು ಹೊಂದುವುದು ಇದರ ಉದ್ದೇಶವಾಗಿದೆ. ಹಳೆಯ ಭೂ ದಾಖಲೆಗಳ ಸಮಸ್ಯೆಯನ್ನು ನಿಭಾಯಿಸಲು ಇದನ್ನು ಪರಿಚಯಿಸಲಾಗಿದೆ. ಹಕ್ಕುಗಳು, ಶೀರ್ಷಿಕೆಗಳು ಮತ್ತು ಆಸ್ತಿಗಳು ಸೇರಿದಂತೆ ಆಸ್ತಿ ರೇಖಾಚಿತ್ರಗಳು ಮತ್ತು ಮಾಲೀಕತ್ವದ ಮಾಹಿತಿಯು ಯುಪಿಒಆರ್ ಕಾರ್ಡ್‌ಗಳು ಒಳಗೊಂಡಿರುತ್ತವೆ. ಒಟ್ಟಾರೆ ಯುಪಿಒಆರ್ ಮಾಲೀಕರ ಎಲ್ಲಾ ಆಸ್ತಿ-ಸಂಬಂಧಿತ ಮಾಹಿತಿಯನ್ನು ಈ ಕಾರ್ಡ್ ಹೊಂದಿರುತ್ತದೆ.

ಯುಪಿಒಆರ್ ಯೋಜನೆಯ ಉಪಕ್ರಮ 2018ರಲ್ಲಿಯೇ ಆರಂಭಿಕ ಹಂತ ಶುರುವಾಯಿತ್ತಾದರೂ ನಂತರದ ವರ್ಷಗಳಲ್ಲಿ ಕೋವಿಡ್ 19 ಕಾರಣದಿಂದಾಗಿ ಇದನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಸಾಂಕ್ರಾಮಿಕ ರೋಗದಿಂದಾಗಿ ವಿಳಂಬವಾಗಿದ್ದ ಯುಪಿಒಆರ್ ಅನುಷ್ಠಾನವನ್ನು ಈಗ ಮತ್ತೆ ಸಕ್ರೀಯಗೊಳಿಸಲಾಗಿದ್ದು, ಈಗಾಗ್ಲೇ ಕೆಲವು ವಾರ್ಡ್ ಗಳಲ್ಲಿ ಮಾಲೀಕರು ತಮ್ಮ ಕಾರ್ಡ್ ಗಳನ್ನು ಪಡೆದುಕೊಂಡಿದ್ದಾರೆ.

ಯುಪಿಒಆರ್‌ನ ಪ್ರಾಯೋಗಿಕ ಯೋಜನೆ ಡ್ರೋನ್ ಸಮೀಕ್ಷೆಯನ್ನು 2018 ರಲ್ಲಿ ಬೆಂಗಳೂರಿನ ಜಯನಗರ ಮತ್ತು ರಾಮನಗರದಲ್ಲಿ ಆರಂಭಿಸಲಾಯಿತು. ಈ ಪ್ರಾಯೋಗಿಕ ಯೋಜನೆ ಪೂರ್ಣಗೊಂಡ ನಂತರ, ತುಮಕೂರು, ಹಾಸನ, ಉತ್ತರ ಕನ್ನಡ, ಬೆಳಗಾವಿ, ರಾಮನಗರ ಮತ್ತು ಬೆಂಗಳೂರು ನಗರಗಳಲ್ಲಿ ದೊಡ್ಡದಾದ, ಎರಡು ಹಂತದ ಸಮೀಕ್ಷೆಯನ್ನು ಮಂಜೂರು ಮಾಡಲಾಯಿತು. ಸಮೀಕ್ಷೆಯ ಮೊದಲ ಹಂತವು 51,000 ಚದರ ಕಿ.ಮೀ (ಬೆಂಗಳೂರು ಮತ್ತು ಪಕ್ಕದ ಪ್ರದೇಶಗಳಿಗೆ 1,000 ಚ.ಕಿ.ಮೀ ಮತ್ತು ಇತರ ಐದು ಜಿಲ್ಲೆಗಳಿಗೆ 50,000 ಚ.ಕಿ.ಮೀ) ವ್ಯಾಪ್ತಿಗೆ ಬರಬೇಕಿತ್ತು.

ಯುಪಿಒಆರ್ ಹೇಗೆ ಮಾಡಲಾಗುತ್ತದೆ?
ಆಸ್ತಿ ಮಾಲೀಕರು ಯುಪಿಒಆರ್‌ಗೆ ಅರ್ಜಿ ಸಲ್ಲಿಸುವ ಮೂಲಕ ಕಾರ್ಡ್ ಗಳನ್ನು ಪಡೆದುಕೊಳ್ಳಬಹುದು. ಅರ್ಜಿ ಸಲ್ಲಿಸಿದ ನಂತರ ಕಂದಾಯ ಇಲಾಖೆಯು ಮಾಲೀಕರ ಆಸ್ತಿಯ ಗಡಿಗಳನ್ನು ಗುರುತಿಸುತ್ತಾರೆ. ಭೂಮಿ, ವಸಾಹತು ಮತ್ತು ಭೂ ದಾಖಲೆಗಳ ಇಲಾಖೆ ಕರ್ನಾಟಕ, ಡ್ರೋನ್ ಸಮೀಕ್ಷೆಗಳನ್ನು ಬಳಸಿಕೊಂಡು ಬೆಂಗಳೂರಿನ ಪ್ರತಿಯೊಂದು ಆಸ್ತಿಯ ಚಿತ್ರಗಳನ್ನು ಸೆರೆಹಿಡಿಯುತ್ತದೆ.

ಇದನ್ನೂ ಓದಿ:  Houses Damaged: ಮಳೆಯಿಂದ ಕುಸಿದ ಮನೆಗಳು, ಸರ್ಕಾರದ ಸಹಾಯಹಸ್ತದ ನಿರೀಕ್ಷೆಯಲ್ಲಿ ಜನ

ಈ ಚಿತ್ರವನ್ನು ನಂತರ ಆಸ್ತಿಯ ನೆಲಕ್ಕೆ ತೆಗೆದುಕೊಳ್ಳಲಾಗುತ್ತದೆ ಮತ್ತು ಆಯಾಮಗಳನ್ನು ಭೌತಿಕವಾಗಿ ಡಿಜಿಟೈಸ್ ಮಾಡಲಾಗುತ್ತದೆ. ನಂತರ, UPOR ವೆಬ್‌ಸೈಟ್‌ನಲ್ಲಿ ತನ್ನ ಎಲ್ಲಾ ಆಸ್ತಿ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಆಸ್ತಿ ಮಾಲೀಕರಿಗೆ ಸೂಚನೆಯನ್ನು ಕಳುಹಿಸಲಾಗುತ್ತದೆ. ಏಕಕಾಲದಲ್ಲಿ ಬಿಬಿಎಂಪಿ ದಾಖಲೆಗಳು ಮತ್ತು ಸರ್ಕಾರಿ ದಾಖಲೆಗಳನ್ನು ಸಂಗ್ರಹಿಸಿ ಡ್ರಾಫ್ಟ್ ಕಾರ್ಡ್ ಅನ್ನು ಸಿದ್ಧಪಡಿಸಲಾಗುತ್ತದೆ. ನಾಗರಿಕರಿಗೆ ಈ ಬಗ್ಗೆ ಏನಾದರೂ ಆಕ್ಷೇಪಣೆಗಳಿದ್ದರೆ, ಒಂದು ತಿಂಗಳೊಳಗೆ ಮತ್ತೆ ಅರ್ಜಿ ಸಲ್ಲಿಸಬೇಕು.

ಯುಪಿಒಆರ್ ಪ್ರಯೋಜನಗಳು
ಆಸ್ತಿ ಮಾಲೀಕರು ಈ ಡಿಜಿಟಲ್ ಆಸ್ತಿ ಕಾರ್ಡ್ ಗಳನ್ನು ಹೊಂದುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆದುಕೊಳ್ಳುತ್ತಾರೆ.

ಇದನ್ನೂ ಓದಿ: Yadagiri: ನೀರಾವರಿ ಜಮೀನಿಗೆ ಖುಷ್ಕಿ ಭೂಮಿಯೆಂದು ನಮೂದು; ಪರಿಹಾರ ಕಡಿಮೆ ವಿತರಣೆಗೆ ರೈತರಿಗೆ ಮೋಸದಾಟ

  • ಮಾರಾಟದ ನಂತರದ ರೂಪಾಂತರಗಳು ಸ್ವಯಂಚಾಲಿತವಾಗಿ ನವೀಕರಿಸಲ್ಪಡುತ್ತವೆ ಮತ್ತು ಆಸ್ತಿ ಮಾಲೀಕರು 'ಖಾತಾ' ವರ್ಗಾವಣೆಗಾಗಿ ಬೇರೆ ಯಾರನ್ನೂ ಸಂಪರ್ಕಿಸಬೇಕಾಗಿಲ್ಲ.

  • UPOR ನ ಡಿಜಿಟೈಸ್ಡ್ ಪ್ರಾಪರ್ಟಿ ಸ್ಕೆಚ್‌ಗಳೊಂದಿಗೆ, ಆಸ್ತಿ ವಿಭಾಗಗಳನ್ನು ಸ್ವಯಂಚಾಲಿತವಾಗಿ ಮಾಡಬಹುದು.

  • ಆಸ್ತಿ ಮಾಲೀಕರು ಸುಲಭವಾಗಿ ಸಾಲ ಮತ್ತು ಇತರ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

  • ಸಾರ್ವಜನಿಕರ, ಸರಕಾರಿ ಮತ್ತು ಖಾಸಗಿ ಸಂಸ್ಥೆಗಳ ಜಾಗವನ್ನು ಭೂಗಳ್ಳರಿಂದ ರಕ್ಷಿಸಲು ಯೋಜನೆ(ಯುಪಿಒಆರ್) ಸಹಕಾರಿಯಾಗಲಿದೆ.

Published by:Ashwini Prabhu
First published: