Teacher Slapped Student: 6ನೇ ತರಗತಿ ವಿದ್ಯಾರ್ಥಿ ಕಪಾಲಕ್ಕೆ ಹೊಡೆದ ಶಿಕ್ಷಕ? ಗಣಿತ ನೋಟ್​ಬುಕ್ ತರದಿರುವುದೇ ಕಾರಣ

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಇಷ್ಟೆಲ್ಲ ಆದರೂ ಪ್ರತಿಷ್ಠಿತ ಖಾಸಗಿ ಶಾಲೆಯ ಆಡಳಿತ ಮಂಡಳಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಖಾಸಗಿ ಶಾಲೆ

ಖಾಸಗಿ ಶಾಲೆ

 • Share this:
  ಬೆಂಗಳೂರು: ಕರ್ನಾಟಕದಲ್ಲಿ ಶಾಲೆಗಳು ಆರಂಭವಾಗುತ್ತಿದ್ದಂತೆ ವಿದ್ಯಾರ್ಥಿಗೆ ಶಿಕ್ಷಕರೋರ್ವರು ಹಲ್ಲೆ ನಡೆಸಿದ ಘಟನೆಯೊಂದು ವರದಿಯಾಗಿದೆ. ಬೆಂಗಳೂರಿನ (Bengaluru News) ಪ್ರತಿಷ್ಠಿತ ಖಾಸಗಿ ಶಾಲೆಯ ಆರನೆಯ ಕ್ಲಾಸ್ ಓದುತ್ತಿದ್ದ ವಿದ್ಯಾರ್ಥಿ ಮೇಲೆ ಟೀಚರ್ ಓರ್ವರು ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ. ಗಣಿತ ಶಿಕ್ಷಕರೋರ್ವರು 6ನೇ ತರಗತಿಯ ವಿದ್ಯಾರ್ಥಿಯ ಕಪಾಳಕ್ಕೆ ಹಲ್ಲೆ (Teacher Slapped Student In Bengaluru) ಮಾಡಿದ್ದಾರೆ ಎಂದು ಪೋಷಕರ ಆರೋಪ ಮಾಡಿದ್ದಾರೆ. ವಿದ್ಯಾರ್ಥಿಯ ಕಿವಿ ಮತ್ತು ಕಣ್ಣಿಗೆ ಏಟು ಬಿದ್ದಿದ್ದು ಕಿವಿ, ಕಣ್ಣಿನ ಭಾಗದಲ್ಲಿ ರಕ್ತ ಹೆಪ್ಪುಕಟ್ಟಿದೆ. ಹೀಗಾಗಿ  ವಿದ್ಯಾರ್ಥಿಯ ಕಣ್ಣಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

  ವಿದ್ಯಾರ್ಥಿನಿ ಗಣಿತದ ನೋಟ್ ಬುಕ್ ತಂದಿಲ್ಲ ಎಂದು ಶಿಕ್ಷಕ ವಿದ್ಯಾರ್ಥಿಯ ಮೇಲೆ ಹಲ್ಲೆ ಮಾಡಿದ್ದಾರೆ  ಎಂದು ಪೋಷಕರು ಆರೋಪ ಮಾಡಿದ್ದಾರೆ.

  ಐಸಿಯುನಲ್ಲಿ ಅಡ್ಮಿಟ್; ನಡೆಯುತ್ತಿದೆ ಚಿಕಿತ್ಸೆ
  ಸದ್ಯ ವಿದ್ಯಾರ್ಥಿಯನ್ನು ಐಸಿಯುನಲ್ಲಿ ಅಡ್ಮಿಟ್ ಮಾಡಲಾಗಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಇಷ್ಟೆಲ್ಲ ಆದರೂ ಪ್ರತಿಷ್ಠಿತ ಖಾಸಗಿ ಶಾಲೆಯ ಆಡಳಿತ ಮಂಡಳಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

  ಇದನ್ನೂ ಓದಿ: Bengaluru Property Prices: ಬೆಂಗಳೂರಿನ ಯಾವ ಏರಿಯಾದಲ್ಲಿ ಫ್ಲಾಟ್​ಗಳ ಬೆಲೆ ಎಷ್ಟಿದೆ? ಇಲ್ಲಿದೆ ವಿವರ

  ಅಲ್ಲದೇ ಶಿಕ್ಷಕರಿಗೆ ಕೊರೊನಾ ತಗುಲಿದೆ. ಹೀಗಾಗಿ ನಾವೂ ಏನುಮಾಡುವಂತಿಲ್ಲ ಎಂದು ಪ್ರಾಂಶುಪಾಲರು ಸಬೂಬು ನೀಡುತ್ತಿರುವುದಾಗಿ ವಿದ್ಯಾರ್ಥಿಯ ಪೋಷಕರು ತಿಳಿಸಿದ್ದಾಗಿ ವರದಿಯಾಗಿದೆ.

  ಮಕ್ಕಳ ಗುಪ್ತಾಂಗ ಮುಟ್ಟುತ್ತಿದ್ದ ಶಿಕ್ಷಕ ಪೊಲೀಸರ ವಶಕ್ಕೆ; ವರ್ಷದ ಹಿಂದೆಯೇ ದೂರು ನೀಡಿದ್ದ ಪತ್ನಿ

  ಕೊಪ್ಪಳದಲ್ಲಿ ಪಾಠದ ನೆಪದಲ್ಲಿ ಮಕ್ಕಳನ್ನು ಸಂಜೆ ಕ್ಲಾಸ್​ಗೆ ಕರೆಸಿ ಅವರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಶಿಕ್ಷಕ ಮಹಮ್ಮದ್ ಅಜರುದ್ಧಿನ್ ನನ್ನು ಧಾರವಾಡ ಜಿಲ್ಲೆಯಲ್ಲಿ ಪೊಲೀಸರು  ಬಂಧಿಸಿದ್ದಾರೆ. ಇಷ್ಟು ಮಾತ್ರ ಅಲ್ಲದೇ ಮಕ್ಕಳ ತಾಯಂದಿರಿಗೆ ಸರ್ಕಾರಿ ಸೌಲಭ್ಯ ಕೊಡಿಸೋದಾಗಿ ಹೇಳಿ ಅವರ ಜೊತೆ ದೈಹಿಕ ಸಂಪರ್ಕ ಹೊಂದಿದ್ದನು. ಮಕ್ಕಳ ಜೊತೆಗ ಅಸಭ್ಯವಾಗಿ ವರ್ತನೆ ಮತ್ತು ಮಹಿಳೆಯರ ಜೊತೆಗಿನ ಖಾಸಗಿ ವಿಡಿಯೋಗಳು ವೈರಲ್ ಆಗಿದ್ದವು. ಇತ್ತ ಸಂತ್ರಸ್ತೆ ತನಗಾದ ಮೋಸದ ಬಗ್ಗೆ ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದರು. ದೂರು ದಾಖಲಾದ ಬಳಿಕ ಶಿಕ್ಷಕ ಮಹಮದ್ ಅಜರುದ್ಧಿನ್ ಮೊಬೈಲ್ ಸ್ವಿಚ್ಛ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದನು.

  ಇದನ್ನೂ ಓದಿ: Suicide: ಪ್ರೀತಿ ನಿರಾಕರಿಸಿದ್ದಕ್ಕೆ ಮನನೊಂದು ಯುವಕ ನೇಣಿಗೆ ಶರಣು

  ಸದ್ಯ ಧಾರವಾಡ ಪೊಲೀಸರ ವಶದಲ್ಲಿರುವ ಶಿಕ್ಷಕನನ್ನು ಕಾರಟಗಿ ಪೊಲೀಸ್ ಠಾಣೆಗೆ ಕರೆತರುವ ಸಾಧ್ಯತೆಗಳಿವೆ. ಕಳೆದ ಎರಡು ದಿನಗಳಿಂದ ಇತನ ಕರ್ಮಕಾಂಡದ ವಿಡಿಯೀ ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

  ವರ್ಷದ ಹಿಂದೆ ದಾಖಲಾಗಿತ್ತು ದೂರು
  ವಿಕೃತಕಾಮಿ ಶಿಕ್ಷಕನ ವಿರುದ್ದ ಪತ್ನಿ ಸಲ್ಮಾ ಬೇಗ ವರ್ಷ ಹಿಂದೆಯೇ ಬಿಇಓ (ಶಿಕ್ಷಣಾಧಿಕಾರಿ) ಗೆ ದೂರು ಸಲ್ಲಿಸಿದ್ದರು. ನಾನು ಮನೆಯಲ್ಲಿರುವಾಗಲೇ ವಿವಾಹಿತ, ವಿಧವೆಯರನ್ನು ಕರೆದುಕೊಂಡು ಬರುತ್ತಿದ್ದನು. ಶಾಲೆಗೆ ಅನಧಿಕೃತವಾಗಿ ಗೈರು ಹಾಜರಾಗುತ್ತಿದ್ದನು. ಈ ಸಮಯದಲ್ಲಿ ಬೇರೆ ಬೇರೆ ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಹೊಂದುತ್ತಿದ್ದ.

  ಮಹಮ್ಮದ್ ಅಜರುದ್ದೀನ್ ಅಮಾನತು
  ಮಹಮ್ಮದ್ ಅಜರುದ್ಧೀನ್ ಸಿಂಧನೂರು (Sindhanuru) ತಾಲೂಕಿನ ಸಿಂಗಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕನಾಗಿ ಕೆಲಸ ಮಾಡಿಕೊಂಡು, ಕೊಪ್ಪಳ ಜಿಲ್ಲೆಯ ಕಾರಟಗಿಯ (Karatagi, Koppal) ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು. ಸಂಜೆ ಕ್ಲಾಸ್ ನೆಪದಲ್ಲಿ ಮಕ್ಕಳ ಅಂಗಾಂಗ ಮುಟ್ಟಿ ಶಿಕ್ಷಕ ಅಜರುದ್ದೀನ್ ಪಾಠ ಮಾಡುತ್ತಿದ್ದನು ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆ ಶಿಕ್ಷಕನನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
  Published by:guruganesh bhat
  First published: