• Home
  • »
  • News
  • »
  • state
  • »
  • Bengaluru Lockdown: ಬೆಂಗಳೂರಿನ ಬಹುತೇಕ ರಸ್ತೆಗಳು ಬಂದ್​; ಇಂದು ಬೆಳಗ್ಗೆಯಿಂದ 100ಕ್ಕೂ ಹೆಚ್ಚು ವಾಹನ ಸೀಜ್

Bengaluru Lockdown: ಬೆಂಗಳೂರಿನ ಬಹುತೇಕ ರಸ್ತೆಗಳು ಬಂದ್​; ಇಂದು ಬೆಳಗ್ಗೆಯಿಂದ 100ಕ್ಕೂ ಹೆಚ್ಚು ವಾಹನ ಸೀಜ್

ಬೆಂಗಳೂರು ಸಂಚಾರಿ ಪೊಲೀಸರು

ಬೆಂಗಳೂರು ಸಂಚಾರಿ ಪೊಲೀಸರು

Lockdown in Bangalore: ನಗರದಲ್ಲಿ ಬೆಳಗ್ಗೆಯಿಂದ 100ಕ್ಕೂ ಹೆಚ್ಚು ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ತಮ್ಮ ಬೈಕ್​ಗಳನ್ನು ಸೀಜ್ ಮಾಡಿದ್ದಕ್ಕೆ ಸವಾರರು ಪೊಲೀಸರ ಜೊತೆ ವಾಗ್ವಾದ ನಡೆಸುತ್ತಿದ್ದ ದೃಶ್ಯಗಳು ಕಂಡುಬಂದವು.

  • Share this:

ಬೆಂಗಳೂರು (ಏ. 22): ಲಾಕ್​ಡೌನ್ ಇದ್ದರೂ ನಿನ್ನೆ ಬೆಂಗಳೂರಿನ ಹಲವು ಕಡೆ ಟ್ರಾಫಿಕ್ ಜಾಮ್ ಕಂಡುಬಂದಿದ್ದರಿಂದ ಎಚ್ಚೆತ್ತುಕೊಂಡಿರುವ ಪೊಲೀಸರು ಇಂದು ನಗರದಾದ್ಯಂತ ಭಾರೀ ಬಂದೋಬಸ್ತ್ ವಹಿಸಿದ್ದಾರೆ. ಇಂದು ಬೆಳಗ್ಗೆಯಿಂದ ಬೆಂಗಳೂರಿನಲ್ಲಿ 100ಕ್ಕೂ ಹೆಚ್ಚು ವಾಹನಗಳನ್ನು ಸೀಜ್ ಮಾಡಲಾಗಿದೆ.


ಇಂದು ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಅನಗತ್ಯವಾಗಿ ರಸ್ತೆಗಳಲ್ಲಿ ಓಡಾಡುವ ವಾಹನಗಳನ್ನು ಸೀಜ್ ಮಾಡಲಾಗುತ್ತಿದೆ. ನಗರದ ಕೆಲವೇ ಕೆಲವು ಪ್ರಮುಖ ರಸ್ತೆಗಳನ್ನು ಹೊರತುಪಡಿಸಿ ಬಹುತೇಕ ರಸ್ತೆಗಳನ್ನು ಪೂರ್ತಿಯಾಗಿ ಬಂದ್ ಮಾಡಲಾಗಿದೆ. ಬ್ಯಾರಿಕೇಡ್​ಗಳನ್ನು ಅಡ್ಡ ಇಟ್ಟಿರುವ ಪೊಲೀಸರು ರಸ್ತೆಗಳನ್ನು ಬಂದ್ ಮಾಡಿದ್ದಾರೆ.


ಬೆಂಗಳೂರು ನಗರದಾದ್ಯತ ಪ್ರತಿಯೊಂದು ವಾಹನಗಳನ್ನೂ ತಡೆದು ಪರಿಶೀಲನೆ ಮಾಡುತ್ತಿರುವ ಪೊಲೀಸರು ಕೆ.ಆರ್​. ಮಾರ್ಕೆಟ್​ನಿಂದ ಮೈಸೂರು ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ತಪಾಸಣೆ ನಡೆಸಿದ್ದಾರೆ. ಮಾರ್ಕೆಟ್ ಬಳಿ 10ಕ್ಕೂ ಹೆಚ್ಚು ವಾಹನಗಳನ್ನು ಸೀಜ್ ಮಾಡಲಾಗಿದೆ. ಲಾಕ್​ಡೌನ್ ಇದ್ದರೂ ಅನವಶ್ಯಕವಾಗಿ ರಸ್ತೆಗೆ ಇಳಿಯುತ್ತಿರುವವರಿಗೆ ಬಿಸಿ ಮುಟ್ಟಿಸುತ್ತಿರುವ ಪೊಲೀಸರು ಪ್ರತಿಯೊಬ್ಬರ ಪಾಸ್ ತಪಾಸಣೆ ಮಾಡುತ್ತಿದ್ದಾರೆ. ಪಾಸ್ ದುರ್ಬಳಕೆ ಮಾಡಿಕೊಂಡಿರುವುದು ಕಂಡು ಬಂದರೆ ಕೂಡಲೇ ವಾಹನ್ ಸೀಜ್ ಮಾಡುತ್ತಿದ್ದಾರೆ.


ಇದನ್ನೂ ಓದಿ: ಪಾದರಾಯನಪುರ ಪುಂಡರನ್ನು ರಾಮನಗರ ಜೈಲಿಗೆ ಶಿಫ್ಟ್​ ಮಾಡಿದ್ದೀರಿ; ಮುಂದಿನ ಅನಾಹುತಕ್ಕೆ ಸರ್ಕಾರವೇ ಹೊಣೆ; ಎಚ್​​ಡಿಕೆ


ನಗರದಲ್ಲಿ ಬೆಳಗ್ಗೆಯಿಂದ 100ಕ್ಕೂ ಹೆಚ್ಚು ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ತಮ್ಮ ಬೈಕ್​ಗಳನ್ನು ಸೀಜ್ ಮಾಡಿದ್ದಕ್ಕೆ ಸವಾರರು ಪೊಲೀಸರ ಜೊತೆ ವಾಗ್ವಾದ ನಡೆಸುತ್ತಿದ್ದ ದೃಶ್ಯಗಳು ಕಂಡುಬಂದವು. ಇಂದು ಬೆಳಗ್ಗೆ ಮಲ್ಯ ಆಸ್ಪತ್ರೆಯ ಸಿಬ್ಬಂದಿ ಎಂದು ಬೋರ್ಡ್ ಹಾಕಿಕೊಂಡು ಓಡಾಡುತ್ತಿದ್ದವನ ಬಳಿ ಐಡಿ ಕಾರ್ಡ್​ ಕೇಳಿದರೆ ಮನೆಯಲ್ಲಿ ಬಿಟ್ಟುಬಂದಿದ್ದೇನೆ ಎಂದು ಹೇಳಿದ್ದಕ್ಕೆ ಆತನ ಬೈಕ್ ಸೀಜ್ ಮಾಡಲಾಗಿದೆ. ಮೈಸೂರು ರಸ್ತೆಯೊಂದರಲ್ಲೇ 3 ಕಡೆ ಬ್ಯಾರಿಕೇಡ್​ ಹಾಕಿ ತಪಾಸಣೆ ಮಾಡಲಾಗುತ್ತಿದೆ. ಈ ವೇಳೆ ಈ ವ್ಯಕ್ತಿ ಸಿಕ್ಕಿಬಿದ್ದಿದ್ದಾನೆ.


ಇದನ್ನೂ ಓದಿ: ಏಪ್ರಿಲ್​​ 30ರವರೆಗೂ ಬಡವರಿಗೆ ಉಚಿತ ಹಾಲು ವಿತರಣೆ - ರಾಜ್ಯ ಸರ್ಕಾರ

Published by:Sushma Chakre
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು