ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣದ ಪ್ರಮುಖ ಆರೋಪಿ ಲೋಹಿತ್ ಕಾಲಿಗೆ ಗುಂಡೇಟು

ಆತ್ಮರಕ್ಷಣೆಗಾಗಿ ರೌಡಿಶೀಟರ್ ಕಾಲಿಗೆ ಗುಂಡು ಹಾರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ವಿರುದ್ಧ ರಾಬರಿ, ಅಪಹರಣ, ಕೊಲೆ, ಹಲ್ಲೆ ಮುಂತಾದ ಪ್ರಕರಣಗಳು ದಾಖಲಾಗಿದೆ. ಲೋಹಿತ್@ರೋಹಿತ್ ಹೆಚ್ಎಸ್ಆರ್ ಲೇಔಟ್ ಮತ್ತು ಬನ್ನೇರುಘಟ್ಟ ಠಾಣೆಯ ರೌಡಿಶೀಟರ್.

ಆರೋಪಿ ಮತ್ತು ಮಾಜಿ ಸಚಿವ ವರ್ತೂರು ಪ್ರಕಾಶ್

ಆರೋಪಿ ಮತ್ತು ಮಾಜಿ ಸಚಿವ ವರ್ತೂರು ಪ್ರಕಾಶ್

  • Share this:
ಮಾಜಿ ಸಚಿವ ವರ್ತೂರು ಪ್ರಕಾಶ್ (Varthur Prakash Kidnap Case) ಅಪಹರಣದ ಪ್ರಮುಖ ಆರೋಪಿ (Accused) ಕಾಲಿಗೆ ಗುಂಡೇಟು ಹೊಡೆದು ಪೊಲೀಸರು (Bengaluru Police) ಬಂಧಿಸಿದ್ದಾರೆ. ಇಂದು ಬೆಳಗ್ಗೆ ಇಂದಿರಾ ನಗರ ಠಾಣೆಯ (Indira nagara police station) ಪೊಲೀಸರ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಯ ಬಂಧನವಾಗಿದೆ. ಸದ್ಯ ಆರೋಪಿಯನ್ನು ಆಸ್ಪತ್ರೆಗ ರವಾನಿಸಲಾಗಿದೆ.  ಲೋಹಿತ್ ಅಲಿಯಾಸ್ ರೋಹಿತ್ ಮೇಲೆ ಬಂಧಿತ ಆರೋಪಿ. ಇಂದಿರಾನಗರ ಠಾಣೆ ಪಿಎಸ್ಐ ಅಮರೇಶ್ ಅವರು ರೌಡಿ ಬಲಗಾಲಿಗೆ ಗುಂಡೇಟು ಬಂಧಿಸಿದ್ದಾರೆ. ಇಂದಿರಾನಗರ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆ,  ಅಪಹರಣ ಸೇರಿ ಇತರೆ 17 ಪ್ರಕರಣಗಳಲ್ಲಿ ಆರೋಪಿ ಲೋಹಿತ್ ಪೊಲೀಸರಿಗೆ ಬೇಕಾಗಿದ್ದನು.

ಆರೋಪಿ ಬಂಧನ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನ ಮಾಡಿದ್ದನು. ಮೊದಲು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಪಿಐ ಹರೀಶ್‌ ಸೂಚನೆ ನೀಡಿದ್ರು. ಈ ವೇಳೆ ಕಾನ್ಸ್‌ಟೇಬಲ್ ಸೈಯದ್ ಮೊಯೀನುಲ್ಲಾ ಮೇಲೆ ಮಚ್ಚಿನಿಂದ ಹಲ್ಲೆಗೆ ಮುಂದಾಗಿದ್ದನು.

ಆತ್ಮರಕ್ಷಣೆಗಾಗಿ ರೌಡಿಶೀಟರ್ ಕಾಲಿಗೆ ಗುಂಡು ಹಾರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ವಿರುದ್ಧ ರಾಬರಿ, ಅಪಹರಣ, ಕೊಲೆ, ಹಲ್ಲೆ ಮುಂತಾದ ಪ್ರಕರಣಗಳು ದಾಖಲಾಗಿದೆ. ಲೋಹಿತ್@ರೋಹಿತ್ ಹೆಚ್ಎಸ್ಆರ್ ಲೇಔಟ್ ಮತ್ತು ಬನ್ನೇರುಘಟ್ಟ ಠಾಣೆಯ ರೌಡಿಶೀಟರ್.

ಇದನ್ನೂ ಓದಿ:  ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣ; ಪ್ರಮುಖ ಆರೋಪಿ ಸೇರಿ ಆರು ಮಂದಿ ಬಂಧನ

ಪೂರ್ವ ವಿಭಾಗ ಡಿಸಿಪಿ ಡಾ. ಶರಣಪ್ಪ ಹೇಳಿಕೆ

ಬಂಧಿತ ಆರೋಪಿ ಆಟೋ ಚಾಲಕನ ಕಿಡ್ನಾಪ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದನು. ಈ ಬಗ್ಗೆ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇನ್ನೂ ಕೂಡ ಪತ್ತೆಯಾಗದೆ ತಲೆಮರೆಸಿಕೊಂಡಿದ್ದನು. ಆತನ ಪತ್ತೆಗೆ ಹಲಸೂರು ಎಸಿಪಿ ನೇತೃತ್ವದಲ್ಲಿ ನಾಲ್ಕು ವಿಶೇಷ ತಂಡ ರಚನೆ ಮಾಡಲಾಗಿತ್ತು. ಇಂದು ಆರೋಪಿ ಜೀವನ್ ಭೀಮಾನಗರ ಕಡೆಗೆ ಬರುವ ಮಾಹಿತಿ ಸಿಕ್ಕಿತ್ತು. ಬೆಳಗ್ಗೆ ಪೊಲೀಸರು ಆತನ ಬೆನ್ನತ್ತಿ ಬಂಧಿಸಲು ಹೋಗಿದ್ರು. ಈ ವೇಳೆ ಕಾನ್ಸ್‌ಟೇಬಲ್ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದನು.  ಈ ವೇಳೆ ಸಬ್ ಇನ್ಸ್‌ಪೆಕ್ಟರ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಈತನ ಬಳಿ ಒಂದು ಇನ್ನೋವಾ ಕಾರು ಸಹ ಪತ್ತೆಯಾಗಿದೆ.  ಆಂಧ್ರಪ್ರದೇಶದಲ್ಲಿ ಬಾಡಿಗೆಗೆ ಕಾರು ಪಡೆದು ಚಾಲಕನ ಮೇಲೆ ಹಲ್ಲೆ ನಡೆಸಿ ಕಾರು ಕಳ್ಳತನ ಮಾಡಿದ್ದನು.  ಅದೇ ಕಾರಿನಲ್ಲಿ ಆರೋಪಿ ಓಡಾಡುತ್ತಿದ್ದ.

ಇಂದು ಬೆಳಗ್ಗೆ ಆತನ ಚಲನವಲನ ಈ ಭಾಗದಲ್ಲಿ ಪತ್ತೆಯಾಗಿದ್ದರಿಂದ ಪೊಲೀಸರು ಬಂಧಿಸಲು ಮುಂದಾಗಿದ್ದಾರೆ. ಆರೋಪಿ ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ. ವಿಜಯ್ ಕುಮಾರ್ ಎಂಬಾತನ ಕಿಡ್ನಾಪ್ ಮಾಡಿ ಕೊಲೆ ಮಾಡಿದ್ರು.

ಇದನ್ನೂ ಓದಿ:  ಮಾಜಿ ಸಚಿವ ವರ್ತೂರು ಪ್ರಕಾಶ್​ರನ್ನು ಅಪಹರಿಸಿ 30 ಕೋಟಿ ಹಣಕ್ಕಾಗಿ ಬೇಡಿಕೆ; ಪ್ರಕರಣ ದಾಖಲು

ಈ ಪ್ರಕರಣದಲ್ಲಿ ಆರೋಪಿಗೆ ಪೊಲೀಸರು ಶೋಧ ನಡೆಸಿ ಬಂಧಿಸಿದ್ದಾರೆ. ಆರೋಪಿ ವಿರುದ್ಧ ಕೋಲಾರ ಬೆಂಗಳೂರು ಸೇರಿ 17 ಪ್ರಕರಣಗಳು ದಾಖಲಾಗಿವೆ‌ ಎಂದು ಪೂರ್ವ ವಿಭಾಗ ಡಿಸಿಪಿ ಡಾ. ಶರಣಪ್ಪ ಹೇಳಿಕೆ ನೀಡಿದ್ದಾರೆ.

ವರ್ತೂರು ಪ್ರಕಾಶ್ ಕಿಡ್ನಾಪ್ ಕೇಸ್

2020ರ ನವೆಂಬರ್ ತಿಂಗಳ 25 ನೇ ತಾರೀಖು ಮಾಜಿ ಸಚಿವ  ವರ್ತೂರು ಪ್ರಕಾಶ್ ಹಾಗೂ ಚಾಲಕನನ್ನು ಕಿಡ್ನಾಪರ್ಸ್‍ಗಳು ಕೋಲಾರ ತಾಲೂಕಿನ ಬೆಗ್ಲಿಹೊಸಹಳ್ಳಿ ಬಳಿ ಅಪಹರಿಸಿದ್ದರು. ಮೂರು ದಿನಗಳ ಕಾಲ ಕಾರಲ್ಲೇ ಇರಿಸಿಕೊಂಡು ತಿರುಗಾಟ ನಡೆಸಿ ವರ್ತೂರು  ಪ್ರಕಾಶ್ ಅವರ ಬಳಿ 48 ಲಕ್ಷ ಹಣವನ್ನು ಪಡೆದುಕೊಂಡು, ಇನ್ನೂ ಹೆಚ್ಚಿನ ಹಣಕ್ಕಾಗಿ ಕಿಡ್ನಾಪರ್ಸ್‍ಗಳು ವರ್ತೂರು ಪ್ರಕಾಶ್ ಅವರನ್ನು ತಮ್ಮಲ್ಲಿ ಇಟ್ಟುಕೊಂಡಿದ್ದರು.

ಆದರೆ ಚಾಲಕ ಸುನೀಲ್ ಅಪಹರಣಕಾರರಿಂದ ತಪ್ಪಿಸಿಕೊಂಡ ಹಿನ್ನೆಲೆ, ಪೊಲೀಸರಿಗೆ ಚಾಲಕ ಮಾಹಿತಿ ನೀಡುವ ಭಯ ಅಪಹರಣಕಾರರಿಗೆ ಶುರುವಾಗಿತ್ತು. ಹೀಗಾಗಿ ನವೆಂಬರ್ 28 ರಂದು ಬೆಳಗಿನ ಜಾವ 4 ಗಂಟೆಗೆ ಹೊಸಕೋಟೆ ತಾಲೂಕಿನ ನಂದಗುಡಿಯ ಶಿವನಾಪುರ ಬಳಿ ವರ್ತೂರು ಪ್ರಕಾಶ್ ಅವರನ್ನು ಬಿಟ್ಟು ಹೋಗಿದ್ದರು.
Published by:Mahmadrafik K
First published: