ಬೆಂಗಳೂರು: ಅದು ಸಿನಿಮಾವನ್ನು (Cinema) ಮೀರಿಸುವ ನೈಜ ಘಟನೆ. ರಾಜಧಾನಿ ಬೆಂಗಳೂರಿನಲ್ಲಿ (Bengaluru) ರಾತ್ರಿ ಬೇಟೆಯೊಂದು ತಾನಾಗಿಯೇ ಬಂದು ಖಾಕಿ ಬಲೆಗೆ ಬಿದಿದೆ. ಕಗ್ಗತ್ತಲಿನ ರಾತ್ರಿ, ಎರಡು ಪೊಲೀಸ್ (Bengaluru Police) ಜೀಪುಗಳು ಒಂದರ ಹಿಂದೆ ಒಂದು, ಸೈರನ್ ಮೊಳಗಿಸುತ್ತಾ ವೇಗವಾಗಿ ಹೋಗುತ್ತಿದ್ದರೆ ಇದಾವೋ ಸಿನಿಮಾ ಶೂಟಿಂಗ್ ದೃಶ್ಯಾವಳಿ (Cinema Shooting) ಎಂದುಕೊಂಡಿದ್ದರು. ಆದರೆ ಇದು ರೀಲ್ ಚೇಸಿಂಗ್ ಅಲ್ಲ, ಬದಲಿಗೆ ಬೆಂಗಳೂರು ಪೊಲೀಸರ ರಿಯಲ್ ಚೇಸಿಂಗ್, ಘಟನೆ ನಡೆದಿದ್ದು ಎಲ್ಲಿ, ಅಷ್ಟಕ್ಕೂ ಏನಾಯ್ತು ಅನ್ನೋ ಕುತೂಹಲನದ ಸ್ಟೋರಿ ನಾವು ಹೇಳ್ತೀವಿ.
ಮೊನ್ನೆ ತಡರಾತ್ರಿ ಕೋರಮಂಗಲದ 100 ಅಡಿ ರಸ್ತೆಯಲ್ಲಿ ಆಡುಗೋಡಿ ಪೊಲೀಸರು ಚೆಕ್ ಪೋಸ್ಟ್ ಹಾಕಿಕೊಂಡು ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಹೋಂಡಾ ಕಾರೊಂದು ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಗುದ್ದಿ, ಅಲ್ಲಿಂದ ಅದೇ ವೇಗದಲ್ಲಿ ಎಸ್ಕೇಪ್ ಆಗ್ತಿತ್ತು.
ಕಾರಿನಿಂದ ಕಾಪಾಡಿ.. ಕಾಪಾಡಿ.. ಅನ್ನೋ ಚೀರಾಟದ ಶಬ್ದ
ಆದರೆ ಇದೇ ವೇಳೆ ಕಾರಿನಿಂದ ಕಾಪಾಡಿ.. ಕಾಪಾಡಿ.. ಅನ್ನೋ ಚೀರಾಟದ ಶಬ್ದವೊಂದು ಆಡುಗೋಡಿ ಠಾಣೆ ಇನ್ಸ್ಪೆಕ್ಟರ್ ಮಂಜುನಾಥ್ ಕಿವಿಗೆ ಬಿದ್ದಿತ್ತು. ಕೂಡಲೇ ತಮ್ಮ ಜೀಪ್ ಹತ್ತಿದ ಇನ್ಸ್ಪೆಕ್ಟರ್ ಮಂಜುನಾಥ್, ಹೋಂಡಾ ಕಾರು ಫಾಲೋ ಮಾಡಿಕೊಂಡು ಹೊರಟಿದ್ದರು. ಹಾಗೂ ಅದೇ ರಸ್ತೆಯಲ್ಲಿ ಚೇಸಿಂಗ್ ಮಾಡುತ್ತಿದ್ದ ತಮ್ಮ ಇನ್ನೊಂದು ತಂಡಕ್ಕೆ ಮಾಹಿತಿ ನೀಡಿ ಎರಡು ಜೀಪುಗಳಿಂದ ಕಾರು ಬೆನ್ನತ್ತಿದ್ದರು.
ಕಿಡ್ನಾಪರ್ಸ್ ಇದ್ದ ಕಾರು, ಸೆಂಟ್ ಜಾನ್ ಆಸ್ಪತ್ರೆ ಮಾರ್ಗವಾಗಿ ಕೋರಮಂಗಲ ವಾಟರ್ ಟ್ಯಾಂಕ್ ಜಂಕ್ಷನ್ ತಲುಪುತ್ತಿದ್ದಂತೆ ಪೊಲೀಸರು ಕಾರು ರೌಂಡಪ್ ಮಾಡಿ ನಿಲ್ಲಿಸಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ಮೂವರು ಜಿಗಿದು ಪರಾರಿಯಾದರೆ, ಮತ್ತೋರ್ವ ಗೋಪಿ ಎಂಬಾತ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಇದನ್ನೂ ಓದಿ: Bengaluru: ಕೇರಳ ಮೂಲದ ಯುವತಿಯಿಂದ ಕರ್ನಾಟಕದ ವೈದ್ಯೆ ಮೇಲೆ ಹಲ್ಲೆ; ಕನ್ನಡ ಭಾಷಿಕರ ಬಗ್ಗೆ ನಿಂದನೆ ಆರೋಪ!
ಬೈಕ್ ಖರೀದಿ ಹಣ ನೀಡದಿದ್ದಕ್ಕೆ ಕಿಡ್ನಾಪ್!
ಕಿಡ್ನಾಪ್ ಆಗಿದ್ದ ಯುವಕ ತೌಹಿದ್ ಎಂಬಾತನನ್ನ ಪೊಲೀಸರು ರಕ್ಷಣೆ ಮಾಡಿ ಮಡಿವಾಳ ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನೂ ಯುವಕನ ಕಿಡ್ನಾಪ್ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಅಸಲಿ ಸತ್ಯ ಬೆಳಕಿಗೆ ಬಂದಿದೆ. ಕಿಡ್ನಾಪ್ ಆಗಿದ್ದ ಯುವಕ ತೌಹಿದ್ ಮತ್ತು ಆರೋಪಿಗಳು ಒಂದೇ ಕಡೆ ಕೆಲಸ ಮಾಡುತ್ತಿದ್ದು, ಆರೋಪಿಗಳ ಬಳಿಯಿದ್ದ ಬೈಕನ್ನ ತೌಹಿದ್ ಖರೀದಿ ಮಾಡಿದ್ದನಂತೆ.
45 ಸಾವಿರಕ್ಕೆ ಬೈಕ್ ತೆಗೆದುಕೊಂಡು 5 ಸಾವಿರ ಹಣ ನೀಡಿದ್ನಂತೆ. ಅದ್ರೆ ಉಳಿದ ಹಣ ಕೊಡಲು ತಡ ಆಗಿದ್ದರಿಂದ ತೌಹಿದ್ನನ್ನ ಕಿಡ್ನಾಪ್ ಮಾಡಿದ್ದರಂತೆ. ನಿನ್ನೆ ತೌಹಿದ್ ತಾಯಿ 35 ಸಾವಿರ ಹಣ ನೀಡಿದ್ದರೂ ಸಹ ಬಾಕಿ 5 ಸಾವಿರ ಹಣ ನೀಡುವಂತೆ ಬೆದರಿಕೆ ಹಾಕಿ ಮೊಬೈಲ್ ಕಿತ್ತುಕೊಂಡು ಹೋಗಿದ್ದರಂತೆ.
ಪೊಲೀಸರನ್ನ ಕಂಡು ಭಯದಿಂದ ಬ್ಯಾರಿಕೇಡ್ಗೆ ಗುದ್ದಿದ್ದ ಕಿಡ್ನಾಪರ್ಸ್
ಇನ್ನೂ ನಾಲ್ವರು ಆರೋಪಿಗಳು ಕಳೆದ ಮೂರು ದಿನಗಳ ಹಿಂದೆ ಬಂಡೆಪಾಳ್ಯದಲ್ಲಿ ತೌಹಿದ್ ಕಿಡ್ನಾಪ್ ಮಾಡಿ ಮೂರ್ನಾಲ್ಕು ಹೊಟೇಲ್ ಗಳಲ್ಲಿ ಅಡಗಿದ್ದರಂತೆ. ನಿನ್ನೆ ಹಣ ಪಡೆದ ಬಳಿಕ ಕಾರಿನಲ್ಲಿ ಲೊಕೇಷನ್ ಚೇಂಜ್ ಮಾಡಲು ಹೋಗಿ ಪೊಲೀಸರನ್ನ ಕಂಡು ಭಯದಿಂದ ಬ್ಯಾರಿಕೇಡ್ಗೆ ಕಾರು ಗುದ್ದಿದ್ದರು ಅಂತ ಗೊತ್ತಾಗಿದೆ. ಸದ್ಯ ಈ ಬಗ್ಗೆ ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಾಗಿದ್ದು, ಪೊಲೀಸರು ಉಳಿದ ಆರೋಪಿಗಳ ಬೆನ್ನು ಬಿದ್ದಿದ್ದಾರೆ. ಇನ್ನೂ ಮೂರು ದಿನಗಳ ನಂತರ ಮಗ ಪತ್ತೆಯಾಗಿದ್ದನ್ನ ಕಂಡು ತೌಹಿದ್ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ