• Home
  • »
  • News
  • »
  • state
  • »
  • ಸಿನಿಮೀಯ ಶೈಲಿಯಲ್ಲಿ ಜ್ಯುವೆಲ್ಲರಿ ಶಾಪ್ ಕಳ್ಳತನ‌ ಮಾಡಿದ್ದ ಖದೀಮರ ಬಂಧನ

ಸಿನಿಮೀಯ ಶೈಲಿಯಲ್ಲಿ ಜ್ಯುವೆಲ್ಲರಿ ಶಾಪ್ ಕಳ್ಳತನ‌ ಮಾಡಿದ್ದ ಖದೀಮರ ಬಂಧನ

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

ಚಿನ್ನದುಂಗುರ ಬೇಕೆಂದು ತೋರಿಸಿ ಸಿಬ್ಬಂದಿಗೆ ಹೇಳಿದ್ದಾರೆ.‌ ಉಂಗುರ ತರಲು ಸೇಫ್‌ ಲಾಕರ್ ರೂಮ್ ಹೋದಾಗ ಕೊಠಡಿಯೊಳಗೆ ನುಗ್ಗಿ ಸಿಬ್ಬಂದಿಗೆ ಹೊಡೆದು ಕಿರುಚಾಡದಂತೆ ಸೆಲ್ಲೋಟೇಪ್​​ನಿಂದ ಕೈಕಾಲು ಹಾಗೂ ಬಾಯಿಗೆ ಸುತ್ತಿದ್ದಾರೆ.‌ ಕುತ್ತಿಗೆಗೆ ಚಾಕು ತೋರಿಸಿ ಕೂಗಾಡಿದರೆ ಚುಚ್ಚಿ ಬಿಡುವುದಾಗಿ ಬೆದರಿಸಿದ್ದಾರೆ.

ಮುಂದೆ ಓದಿ ...
  • Share this:

ಬೆಂಗಳೂರು(ಸೆ.26): ಸಿನಿಮೀಯ ಶೈಲಿಯಲ್ಲಿ ಹಾಡಹಾಗಲೇ ಜ್ಯೂವೆಲ್ಲರಿ ಶಾಪ್ ದರೋಡೆ ಮಾಡಿದ್ದ ಆರೋಪಿಗಳನ್ನ ಬಂಧಿಸಲಾಗಿದೆ. ಶಾಪ್​​ನಲ್ಲಿದ್ದ ಸಿಬ್ಬಂದಿಯ ಬಾಯಿಗೆ ಸೆಲ್ಲೋಟೆಪ್ ಸುತ್ತಿ, ಚಾಕುವಿನಿಂದ ಬೆದರಿಸಿ 90 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ. ರಾಜಸ್ತಾನ ಮೂಲದ ಗೋಪಾರಾಮ್, ಜಿತೇಂದರ್ ಮಾಳಿ ಹಾಗೂ ವೀರ್ ಮಾ ಬಂಧಿತ ಆರೋಪಿಗಳು. ಖದೀಮರಿಂದ 90 ಲಕ್ಷ ಮೌಲ್ಯದ 1 ಕೆಜಿ 756 ಗ್ರಾಂ ಚಿನ್ನ, 3.5 ಲಕ್ಷ ರೂಪಾಯಿ ನಗದು ಹಣ, ಒಂದು ಏರ್ ಗನ್ ಹಾಗೂ 2 ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.


ಇದೇ ತಿಂಗಳ 20ನೇ ತಾರೀಕು ಜಾಲಹಳ್ಳಿಯ ವಿನೋದ್ ಬ್ಯಾಂಕರ್ಸ್ ಅಂಗಡಿಗೆ ಗ್ರಾಹಕರಂತೆ ಬಂದ ಇಬ್ಬರು ಆರೋಪಿಗಳು 2.5 ಗ್ರಾಂ ಚಿನ್ನದ ಸರ ಬೇಕೆಂದು ಹೇಳಿ ಒಂದು ಸಾವಿರ ರೂಪಾಯಿ ಅಡಾನ್ಸ್ ಕೊಟ್ಟು ಹೋಗಿದ್ದಾರೆ. ಬಳಿಕ ಸ್ವಲ್ಪ ಸಮಯ ಬಿಟ್ಟು ಮೂವರು ಆರೋಪಿಗಳು ಬಂದಿದ್ದಾರೆ.


ಚಿನ್ನದುಂಗುರ ಬೇಕೆಂದು ತೋರಿಸಿ ಸಿಬ್ಬಂದಿಗೆ ಹೇಳಿದ್ದಾರೆ.‌ ಉಂಗುರ ತರಲು ಸೇಫ್‌ ಲಾಕರ್ ರೂಮ್ ಹೋದಾಗ ಕೊಠಡಿಯೊಳಗೆ ನುಗ್ಗಿ ಸಿಬ್ಬಂದಿಗೆ ಹೊಡೆದು ಕಿರುಚಾಡದಂತೆ  ಸೆಲ್ಲೋಟೇಪ್​​ನಿಂದ ಕೈಕಾಲು ಹಾಗೂ ಬಾಯಿಗೆ ಸುತ್ತಿದ್ದಾರೆ.‌ ಕುತ್ತಿಗೆಗೆ ಚಾಕು ತೋರಿಸಿ ಕೂಗಾಡಿದರೆ ಚುಚ್ಚಿ ಬಿಡುವುದಾಗಿ ಬೆದರಿಸಿದ್ದಾರೆ.


ಇದನ್ನೂ ಓದಿ: ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ಬಿಜೆಪಿಯೇತರ ಪಕ್ಷಗಳ ವಿರೋಧ; ಸೋಮವಾರ ಕೊಡಗು ಬಂದ್ ಯಶಸ್ವಿಗೊಳಿಸಲು ಸಿದ್ಧತೆ


ಬಳಿಕ ಸೇಫ್ ಲಾಕರ್​​ನಲ್ಲಿದ್ದ 90 ಲಕ್ಷ ಮೌಲ್ಯದ 3 ಕೆ.ಜಿ. 455 ಗ್ರಾಂ ಚಿನ್ನ, ಬೆಳ್ಳಿಯ ಸಾಮಾನುಗಳು, 3.96 ಲಕ್ಷ ರೂಪಾಯಿ ಬ್ಯಾಗ್​​ನಲ್ಲಿ ತುಂಬಿಕೊಂಡು ಬೈಕ್‌ ಮೂಲಕ ಪರಾರಿಯಾಗಿದ್ದಾರೆ. ಈ ಸಂಬಂಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Published by:Ganesh Nachikethu
First published: