ಬೆಂಗಳೂರು: (Bengaluru) ಓದಿದ್ದು ಇಂಜಿನಿಯರಿಂಗ್ ಮಾಡ್ತಿರೋದು ಕಾಲೇಜಿನಲ್ಲಿ ಕಳ್ಳತನ (Robbery). ಕಳ್ಳತನವನ್ನೆ ಕಸುಬಾಗಿಸಿಕೊಂಡ ಇಂಜಿನಿಯರಿಂಗ್ ಪದವೀಧರನೊಬ್ಬ (Engineering Student) ಕಾಲೇಜಿನಲ್ಲಿ ಕಂಪ್ಯೂಟರ್ ಬಿಡಿಭಾಗಗಳನ್ನ (Computer Spare Parts) ಕಳ್ಳತನ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ನಗರದ ಬಾಗಲೂರು ಪೊಲೀಸರು ಒಡಿಶಾ ಮೂಲದ ರಾಜ್ ಪಾತ್ರ ಎಂಬಾತನನ್ನ ಬಂಧಿಸಿ ಲಕ್ಷಾಂತರ ಮೌಲ್ಯದ ಕಂಪ್ಯೂಟರ್ ಬಿಡಿಭಾಗಗಳನ್ನ ವಶ ಪಡಿಸಿಕೊಂಡಿದ್ದಾರೆ. ಆರೋಪಿ ರಾಜ್ ಪಾತ್ರ ಇಂಜಿನಿಯರಿಂಗ್ ಪದವಿ ಮುಗಿಸಿದ್ದು ಸೆಕ್ಯುರಿಟಿಯಾಗಿ ಕೆಲಸಕ್ಕೆ ಸೇರಿಕೊಂಡಿದ್ದ. ಅದರಲ್ಲೂ ಪ್ರತಿಷ್ಠಿತ ಕಾಲೇಜು ಮತ್ತು ಇನ್‌ಸ್ಟಿಟ್ಯೂಟ್ ಗಳಲ್ಲಿ ಸೆಕ್ಯುರಿಟಿ ಕೆಲಸಕ್ಕೆ ಸೇರುತ್ತಿದ್ದ ರಾಜ್ ಪಾತ್ರ ಒಂದು ತಿಂಗಳು ಕೆಲಸ ಮಾಡಿ ಕಾಲೇಜು ವಾತಾವರಣ ಗಮನಿಸಿ ಬಳಿಕ ತನ್ನ ಕೈಚಳಕ ತೋರಿಸುತ್ತಿದ್ದನಂತೆ.
ರಾಜ್ ಪಾತ್ರನ ಕೈಚಳಕಕ್ಕೆ ಹಲವು ಸಂಸ್ಥೆಗಳಲ್ಲಿ ಕಂಪ್ಯೂಟರ್ ಬಿಡಿಭಾಗಗಳು ಕಳ್ಳತನವಾಗಿದ್ದು ಲಕ್ಷಾಂತರ ಮೌಲ್ಯದ ವಸ್ತುಗಳನ್ನ ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿ ಒಡಿಶಾದ ಪ್ರತಿಷ್ಠಿತ ವ್ಯಕ್ತಿಗೆ ಸೇರಿದ ಲರ್ನಿಂಗ್ ಇನ್‌ಸ್ಟಿಟ್ಯೂಟ್ ನಲ್ಲೂ ತನ್ನ ಕೈಚಳಕ ತೋರಿಸಿದ್ದು ಸುಮಾರು ಹತ್ತು ಲಕ್ಷಕ್ಕೂ ಅಧಿಕ ಮೌಲ್ಯದ ಪ್ರೊಸೆಸರ್ ಮತ್ತು ರ್ಯಾಮ್ ಕಳ್ಳತನ ಮಾಡಿದ್ದನಂತೆ. ಸೆಕ್ಯುರಿಟಿ ಕೆಲಸಕ್ಕೆ ಸೇರಿ ನಂತರ ಗೇಮ್ ಫ್ಲಾನ್ ಮಾಡ್ತಿದ್ದ ಆರೋಪಿ ಕಾಲೇಜಿನಲ್ಲಿ ಎಷ್ಟು ಕಂಪ್ಯೂಟರ್ ಗಳಿವೆ ಎಂದು ಮಾಹಿತಿ ಸಂಗ್ರಹ ಮಾಡುತ್ತಿದ್ದನಂತೆ. ಬಳಿಕ ಕೆಲ ದಿನಗಳಲ್ಲಿ ಕಂಪ್ಯೂಟರ್ ನ ಪ್ರೊಸೆಸರ್, ರ್ಯಾಮ್ ಗಳನ್ನ ಕದ್ದು ಎಸ್ಕೇಪ್ ಆಗ್ತಿದ್ದ ಎನ್ನಲಾಗಿದೆ.
ಇದೇ ರೀತಿ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಕಳ್ಳತನ ಮಾಡಿ ಒಡಿಶಾಗೆ ಎಸ್ಕೇಪ್ ಆಗಿದ್ದ ಆರೋಪಿ, ಅಲ್ಲಿನ ಲರ್ನಿಂಗ್ ಕಾಲೇಜಿನಲ್ಲಿ ಸೆಕ್ಯುರಿಟಿ ಕೆಲಸಕ್ಕೆ ಸೇರಿದ್ದ. ಅಲ್ಲಿಯೂ ಸಹ ಕಂಪ್ಯೂಟರ್ ನ ಹಾರ್ಡ್ ಡಿಸ್ಕ್, ರ್ಯಾಮ್, ಪ್ರೊಸೆಸರ್ ಎಗರಿಸಿದ್ದು, ಊರಲ್ಲಿ ಸೇಲ್ ಮಾಡೋಕಾಗಲ್ಲ ಅಂತ ಮತ್ತೆ ಬೆಂಗಳೂರಿಗೆ ಬಂದು ವೆಬ್ ನಲ್ಲಿ ಕಂಪನಿ ತೆರೆದು ತಾನೇ ಡೈರೆಕ್ಟರ್ ಅಂತ ಹೇಳಿಕೊಂಡಿದ್ದ. ಆರೋಪಿ ಕದ್ದ ವಸ್ತುಗಳನ್ನ ಒಡಿಶಾದಲ್ಲಿ ಸೇಲ್ ಮಾಡುವುದು ಕಷ್ಟ ಎಂದು ಆಗಾಗ ಬೆಂಗಳೂರಿಗೆ ಬರುತ್ತಿದ್ದ ಎನ್ನಲಾಗಿದೆ. ನಗರಕ್ಕೆ ಬಂದು ಸೆಕ್ಯುರಿಟಿ ಕೆಲಸಕ್ಕೆ ಸೇರಿ ಕಾಲೇಜುಗಳ ಲ್ಯಾಬ್ ಸೇರಿ ಹಲವೆಡೆ ಸುತ್ತಾಡುತ್ತಿದ್ದ. ಬಳಿಕ ಕಾಲೇಜಿನ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದು ತನ್ನ ಕೈಚಳಕ ತೋರುತ್ತಿದ್ದ. ಕಂಪ್ಯೂಟರ್ ಬಿಡಿಭಾಗಗಳೆ ಆರೋಪಿಯ ಟಾರ್ಗೆಟ್ ಆಗಿದ್ದು, ಹಲವೆಡೆ ಈ ರೀತಿ ಕಳ್ಳತನ ಮಾಡಿದ್ದ ಎನ್ನಲಾಗಿದೆ.
ಇದನ್ನು ಓದಿ: Mekedatu Project: DPR ವಜಾಗೊಳಿಸುವಂತೆ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ ತಮಿಳುನಾಡು
ವೆಬ್‌ಸೈಟ್ ನಲ್ಲಿ ಕಡಿಮೆ ಬೆಲೆಗೆ ಕಂಪ್ಯೂಟರ್ ರ್ಯಾಮ್, ಪ್ರೊಸೆಸರ್, ಹಾರ್ಡ್ ಡಿಸ್ಕ್ ಸೇಲ್ ಮಾಡೋದಾಗಿ ಆಡ್ ನೀಡಿ ಮಾರಾಟ ಮಾಡಲು ಮುಂದಾಗಿದ್ದನಂತೆ. ಸದ್ಯ ಬಾಗಲೂರು ಪೊಲೀಸರು ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಲಕ್ಷಾಂತರ ಮೌಲ್ಯದ ರ್ಯಾಮ್, ಹಾರ್ಡ್ ಡಿಸ್ಕ್, ಪ್ರೊಸೆಸರ್ ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ಸದ್ಯ ಬಾಗಲೂರು ಪೊಲೀಸರು ಆರೋಪಿ ವಶಕ್ಕೆ ಪಡೆದು ಇನ್ನಷ್ಟು ಪ್ರಕರಣಗಳ ಪತ್ತೆ ಹಚ್ಚಲು ಮುಂದಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ