ಕುಬೇರ ಮೂಲೆಗೆ ಹೋಗಿ ಕ್ಷಣಾರ್ಧದಲ್ಲೇ ಕನ್ನ ಹಾಕುತ್ತಿದ್ದ ಕೊಲಂಬಿಯಾ ಹೈಟೆಕ್ ಗ್ಯಾಂಗ್!

ಓಡುತ್ತಿರುವವರು ಕಳ್ಳರೇ ಎಂದು ತಿಳಿದ ಪೊಲೀಸರು ಅವರ ಬೆನ್ನು ಅಟ್ಟಿದರು. ಆದರೆ ಎಂಟು ಅಡಿಯ ಗೋಡೆಯನ್ನು ಸುಲಭವಾಗಿ ಜಿಗಿದು ಮತ್ತೆ 15 ಅಡಿಯ ಕಾಂಪೌಂಡ್ ಅನ್ನು ಬೆಕ್ಕಿನಂತೆ ಜಿಗಿದು ಎಸ್ಕೇಪ್  ಆಗಿದ್ದರು. ಪೊಲೀಸರು ಸಹ ಎಂಟು ಅಡಿಯ ಕಾಂಪೌಂಡ್ ಜಿಗಿದರು. ಆದರೆ, 15 ಅಡಿಯ ಗೋಡೆ ಜಿಗಿಯಲು ಸಾಧ್ಯವಾಗಲಿಲ್ಲ.

news18-kannada
Updated:August 1, 2020, 5:47 PM IST
ಕುಬೇರ ಮೂಲೆಗೆ ಹೋಗಿ ಕ್ಷಣಾರ್ಧದಲ್ಲೇ ಕನ್ನ ಹಾಕುತ್ತಿದ್ದ ಕೊಲಂಬಿಯಾ ಹೈಟೆಕ್ ಗ್ಯಾಂಗ್!
ಬಂಧಿತ ವಿದೇಶಿ ಕಳ್ಳರು.
  • Share this:
ಬೆಂಗಳೂರು; ಶ್ರೀಮಂತರ ಮನೆಗಳಿಗೆ ಕ್ಷಣಾರ್ಧದಲ್ಲಿ ಕನ್ನ ಹಾಕಿ ಪರಾರಿಯಾಗಿತ್ತಿದ್ದ ವಿಲಿಯನ್ ಪಡಿಲ್ಲಾ, ಸ್ಟೆಫಾನಿಯಾ, ಕ್ರಿಶ್ಚಿಯನ್ ಇನಿಸ್ ಎಂಬ ಕೊಲಂಬಿಯಾದ ಆರೋಪಿಗಳನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ.

ಒಂದು ವರ್ಷದ ಹಿಂದೆ ಬೆಂಗಳೂರಿಗೆ ಬಂದು ವಿವಿಧ ಪಿಜಿ ರೂಮ್ ಗಳಲ್ಲಿ ಉಳಿದುಕೊಂಡಿದ್ದರು. ಸಂಜೆ ಮೂವರು ಆರೋಪಿಗಳು ಸೈಕಲ್ ಏರಿ ಹೊರಟರೆ ಯಾವುದಾದರೂ ಮನೆ ಮಾರ್ಕ್ ಮಾಡಿಯೇ ಬರುತ್ತಿದ್ದರು. ಅಲ್ಲದೇ ಕೊಲಂಬಿಯಾದಿಂದ‌ ತಂದ ವಾಕಿಟಾಕಿ, ಮೊಬೈಲ್ ಜಾಮರ್, ಮಾಸ್ಕ್, ಹ್ಯಾಂಡ್ ಗ್ಲೌಸ್, ಪಿಪಿಇ ಕಿಟ್ ತರದ ಗೌನ್ ಧರಿಸಿ ಮಧ್ಯರಾತ್ರಿ ಎಂಟ್ರಿ ಕೊಡುತ್ತಿದ್ದರು.

ಮೂವರ ಪೈಕಿ ಯುವತಿ ಸ್ಟೆಫಾನಿಯಾ ಮಾಸ್ಟರ್ ಮೈಂಡ್ ಆಗಿದ್ದು, ಮೊದಲು ಸ್ಟೆಫಾನಿಯಾ ಮನೆಯೊಳಗೆ ಎಂಟ್ರಿ ಕೊಟ್ಟು, ಮೂರ್ನಾಲ್ಕು ಬಾರಿ ಬೆಲ್ ಮಾಡುತ್ತಿದ್ದಳು. ಒಂದು ವೇಳೆ ಯಾರಾದರು ಬಂದರೆ ಅಡ್ರೆಸ್ ಕೇಳುವ ನೆಪದಲ್ಲಿ ಮಾತನಾಡಿಸಿ ವಾಪಸ್ ಬರುತ್ತಿದ್ದರು. ಒಂಟಿಯಾಗಿ ಇದ್ದರೆ ಅವರ ಮುಖಕ್ಕೆ ಸ್ಪ್ರೇ ಮಾಡಿ, ಮೂರ್ಚೆ ಬರುವಂತೆ ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದರು. ಮೊದಲು ಗ್ರಿಲ್ ಲಾಕ್ ಬ್ರೇಕ್ ಮಾಡಲು ಸ್ಟೆಫಾನಿಯಾ ಬರುತ್ತಿದ್ದಲು. ಲೈಟ್ ಆಫ್ ಆಗಿದ್ದ ಮನೆಯಲ್ಲಿ ಯಾರೂ ಇರದನ್ನು ಕಂಡು ವಾಕಿ ಟಾಕಿಲಿ ಇನ್ನಿಬ್ಬರಿಗೆ ಮಾಹಿತಿ ನೀಡುತ್ತಿದ್ದಳು.

ಬಳಿಕ ಮೂವರು ಗ್ಯಾಸ್ ಕಟರ್ ನಿಂದ ಲಾಕ್ ಬ್ರೇಕ್ ಮಾಡಿ ಒಳನುಗ್ಗುತ್ತಿದ್ದರು. ಆದರೆ ಆರೋಪಿಗಳು ಪೊಲೀಸರಿಗೆ ಸಿಗುವ ಭಯದಲ್ಲಿ ಒಡವೆ ಹಣವನ್ನು ಬಿಟ್ಟು ಏನನ್ನೂ ಮುಟ್ಟುತ್ತಿರಲಿಲ್ಲ. ಭಾರತದ ಸೈಕಾಲಜಿ ಅರಿತಿದ್ದ ಇವರು ಮನೆಗೆ ಎಂಟ್ರಿ ಕೊಟ್ಟ ಕೂಡಲೇ ಕುಬೇರ ಮೂಲೆಗೆ ಹೋಗಿ ಲಾಕ್ ಒಡೆದು ಚಿನ್ನಾಭರಣ ದೋಚುತ್ತಿದ್ದರು. ಕೈಗೆ ಸಿಕ್ಕಷ್ಟು ಹಣ ತೆಗೆದುಕೊಂಡು ಹೋಗಿ ಐಷಾರಾಮಿ ಜೀವನ‌ ನಡೆಸುತ್ತಿದ್ದರು.

ಶ್ರೀಮಂತ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದ ಅವರು ಆಯ್ಕೆ ಮಾಡಿಕೊಂಡ ಸ್ಥಳ ಮಾನ್ಯತಾ ಟೆಕ್ ಪಾರ್ಕ್. ಸೈಕಲ್​ನಲ್ಲಿ ಹೋದರೆ ಯಾವುದೇ ಸಮಸ್ಯೆಯಾಗೋದಿಲ್ಲ‌ ಎಂದು ಅರಿತು ಮನೆಗಳನ್ನು ಮಾರ್ಕ್ ಮಾಡುತ್ತಿದ್ದರು. ತಪ್ಪದೇ ಮೊಬೈಲ್ ಜಾಮರ್ ಬೆಲ್ಟ್ ಹಾಕಿಕೊಂಡು ಎಂಟ್ರಿ ಕೊಡುತ್ತಿದ್ದರು. ಇದೇ ರೀತಿ ಚಿತ್ತರಂಜನ್ ದಾಸ್ ಮನೆಗೆ ಹೋಗಿ ಜರ್ಮನ್ ಫೇಸ್ ಲಾಕರ್ ಒಡೆದು 1.5 ಕೆಜಿ ಚಿನ್ನಾಭರಣ, ಹಣ ಕಳ್ಳತನ‌ ಮಾಡಿದ್ದರು. ಐದು ತಿಂಗಳಿಂದ‌ ಕಳ್ಳತನ‌ ಮಾಡುತ್ತಿದ್ದರೂ ಯಾರಿಗೂ ಸುಳಿವು ಸಿಕ್ಕಿರಲಿಲ್ಲ.

ಇನ್ನು ಕೊಲಂಬಿಯಾ ಗ್ಯಾಂಗ್ ಪೊಲೀಸರಿಗೆ ಸಿಕ್ಕಿದ್ದು ರೋಚಕ ಕತೆಯಾಗಿದೆ. ಮಾನ್ಯತಾ ಟೆಕ್ ಪಾರ್ಕ್ 4ನೇ ಕ್ರಾಸ್ ಕೇಶವ ಮೂರ್ತಿ ಮನೆಗೆ ಗ್ಯಾಂಗ್ ಎಂಟ್ರಿ ಕೊಟ್ಟಿತ್ತು. ಆದರೆ  ಲಾಕ್ ಬ್ರೇಕ್ ಮಾಡಿದರೆ ಡೋರ್ ಓಪನ್ ಆಗದೆ ಅಲ್ಲಿಂದ ವಾಪಸ್ ಆಗಿದ್ದರು. ಇದೆಲ್ಲವೂ ಅದೇ ಮನೆಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿತ್ತು. ಅವತ್ತು ಹೊರಬಂದವರು ಮನೆ ಪಕ್ಕದ ಪಾರ್ಕ್ ಬಳಿ ಕಾರು ನಿಲ್ಲಿಸಿ ಮತ್ತೊಂದು ಮನೆಗೆ ಸ್ಕೆಚ್ ಹಾಕುತ್ತಿದ್ದರು. ಅದೇ ಸಮಯಕ್ಕೆ ಆ ರಸ್ತೆ ಮಾರ್ಗವಾಗಿ ಬೀಟ್ ಪೊಲೀಸ್ ಸಹ ಬಂದರು. ಆರೋಪಿಗಳನ್ನು ನೋಡದೆ ಒಮ್ಮೆ ವಿಶಲ್ ಹಾಕಿದ್ದನ್ನು ಕೇಳಿ ಆರೋಪಿಗಳು ಕಾರನ್ನು ಅಲ್ಲೇ ಬಿಟ್ಟು ಅಲ್ಲಿಂದ ಕಾಲ್ಕಿತ್ತಿದ್ದರು.

ಓಡುವ ಸಮಯದಲ್ಲಿ ಪೊಲೀಸ್ ಸಿಬ್ಬಂದಿಗೆ ಕಾಣಿಸಿಕೊಂಡರು. ಓಡುತ್ತಿರುವವರು ಕಳ್ಳರೇ ಎಂದು ತಿಳಿದ ಪೊಲೀಸರು ಅವರ ಬೆನ್ನು ಅಟ್ಟಿದರು. ಆದರೆ ಎಂಟು ಅಡಿಯ ಗೋಡೆಯನ್ನು ಸುಲಭವಾಗಿ ಜಿಗಿದು ಮತ್ತೆ 15 ಅಡಿಯ ಕಾಂಪೌಂಡ್ ಅನ್ನು ಬೆಕ್ಕಿನಂತೆ ಜಿಗಿದು ಎಸ್ಕೇಪ್  ಆಗಿದ್ದರು. ಪೊಲೀಸರು ಸಹ ಎಂಟು ಅಡಿಯ ಕಾಂಪೌಂಡ್ ಜಿಗಿದರು. ಆದರೆ, 15 ಅಡಿಯ ಗೋಡೆ ಜಿಗಿಯಲು ಸಾಧ್ಯವಾಗಲಿಲ್ಲ. ಅಲ್ಲದೇ, ಆರೋಪಿಗಳು ಈ ಗೋಡೆಯನ್ನು ಜಿಗಿದಿದ್ದನ್ನ ಕಂಡು ಆಶ್ಚರ್ಯವಾಯಿತ್ತು. ಪುನಃ ವಾಪಸ್ ಬಂದ ಪೊಲೀಸ್ ಸಿಬ್ಬಂದಿ ಕಾರು ಪರಿಶೀಲಿಸಿದಾಗ ಆರು ವಾಕಿಟಾಕಿ, ನಾಲ್ಕೈದು ಮೊಬೈಲ್, ಮೊಬೈಲ್ ಜಾಮರ್ ಹಾಗೂ ಅತ್ಯಾಧುನಿಕ‌‌ ಸಲಕರಣೆಗಳು ಪತ್ತೆಯಾಗಿದ್ದವು.ಇದನ್ನು ಓದಿ: ರೈಲು ಬಾರದೆ ಸೀಬೆ ಸಾಗಣೆಗೆ ರೈತರು, ವ್ಯಾಪಾರಿಗಳ ಪರದಾಟ: ತೋಟದಲ್ಲೇ ಕೊಳೆಯುತ್ತಿರುವ ಕೋಳೂರು ಪೇರಲ

ಈ ವೇಳೆ ಒಂದು ಮೊಬೈಲ್​ನಲ್ಲಿ 600ಕ್ಕೂ ಹೆಚ್ಚು ಮೆಸೇಜ್, ಕಾಲ್​ ಡೀಟೆಲ್ಸ್ ಸಿಕಿತ್ತು. ಕೊನೇ ಕಾಲ್ ಲಿಸ್ಟ್ ನಲ್ಲಿ ಜೊಮೊಟೋ ಫುಡ್ ಡೆಲವರಿ ಬಾಯ್ ನಂಬರ್ ಸಿಕ್ಕಿ ಕಾರ್ಯಾಚರಣೆಗೆ ಇಳಿದಿದರು. ಜೊಮೊಟೋ ಹುಡುಗನನ್ನು ವಿಚಾರಿಸಿದಾಗ ಥಣಿಸಂದ್ರದ ಮನೆಯೊಂದರಲ್ಲಿ ಡೆಲವರಿ ಕೊಟ್ಟಿದ್ದಾಗಿ ಮಾಹಿತಿ ‌ಸಿಕ್ಕಿತು. ಆ‌ಗ ಮನೆ ಮೇಲೆ ಪೊಲೀಸರು ರೈಡ್ ಮಾಡಿದಾಗ, ಇಬ್ಬರು ಆರೋಪಿಗಳು ಸಿಕ್ಕಿ ಬಿದ್ದರು. ಮಾಸ್ಟರ್ ಮೈಂಡ್ ಸ್ಟೆಫಾನಿಯಾ ವಿದ್ಯಾರಣ್ಯಪುರದ ಮನೆಯೊಂದರಲ್ಲಿ ವಾಸವಾಗಿದ್ದು, ಆಕೆಯನ್ನು ಬಂಧಿಸಿದರು. ಹೀಗೆ ಕೊಲಂಬಿಯಾದ ಹೈಟೆಕ್ ಕಳ್ಳರ ಗ್ಯಾಂಗ್ ಬೆಂಗಳೂರು ಪೊಲೀಸರ ಬಲೆಗೆ ಬಿದ್ದರು.
Published by: HR Ramesh
First published: August 1, 2020, 5:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading