• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Crime News: ಸಾಲ ಕೊಡಿಸುವುದಾಗಿ ವಂಚನೆ ಮಾಡುತ್ತಿದ್ದ ತಮಿಳುನಾಡಿನ ರಾಜಕಾರಣಿಯನ್ನು ಬಂಧಿಸಿದ ಬೆಂಗಳೂರು ಪೊಲೀಸ್!

Crime News: ಸಾಲ ಕೊಡಿಸುವುದಾಗಿ ವಂಚನೆ ಮಾಡುತ್ತಿದ್ದ ತಮಿಳುನಾಡಿನ ರಾಜಕಾರಣಿಯನ್ನು ಬಂಧಿಸಿದ ಬೆಂಗಳೂರು ಪೊಲೀಸ್!

ಬಂಧಿತ ಆರೋಪಿ ಹರಿ ನಾಡಾರ್.

ಬಂಧಿತ ಆರೋಪಿ ಹರಿ ನಾಡಾರ್.

ಬೆಂಗಳೂರಿನ ವೆಂಕಟರಮಣ ಶಾಸ್ತ್ರಿ ಎಂಬುವರಿಗೆ ವ್ಯವಹಾರ ನಡೆಸಲು 360 ಕೋಟಿ ಸಾಲ ಕೊಡಿಸುವುದಾಗಿ ಈತ ನಂಬಿಸಿದ್ದಾನೆ.  ಕೇರಳದ ಹೋಟೇಲ್ ನಲ್ಲಿ ಮೀಟಿಂಗ್ ಮಾಡಿ 360 ಕೋಟಿಯ ನಕಲಿ ಡಿಡಿ ತೋರಿಸಿ, ಲೋನ್ ಗೆ ಸರ್ವಿಸ್ ಚಾರ್ಜ್ 7.20 ಕೋಟಿ ಹಣ ಪಡೆದು ವಂಚಿಸಿದ್ದಾನೆ.

  • Share this:

ಬೆಂಗಳೂರು (ಮೇ 06); ರಾಜ್ಯ ರಾಜಧಾನಿ ಬೆಂಗಳೂರಿನ ಉದ್ಯಮಿ ವೆಂಕಟರಮಣ ಶಾಸ್ತ್ರಿ ಎಂಬುವರಿಗೆ 360 ಕೋಟಿ ಸಾಲ ಕೊಡಿಸುವುದಾಗಿ ಹೇಳಿ ನಕಲಿ ಡಿಡಿ ತೋರಿಸಿ ಸುಮಾರು 7.2 ಕೋಟಿ ಹಣ ಪಡೆದು ವಂಚಿಸಿದ್ದ ತಮಿಳುನಾಡಿನ ರಾಜಕಾರಣಿ ಹಾಗೂ ನಡೆದಾಡುವ ಚಿನ್ನದ ಅಂಗಡಿ ಎಂದೇ ಖ್ಯಾತವಾಗಿರುವ ಉದ್ಯಮಿ ಹರಿ ನಾಡಾರ್ ಅವರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಇಂದು ಬಂಧಿಸಿದ್ದು, ಈ ಸುದ್ದಿ ಇದೀಗ ರಾಷ್ಟ್ರೀಯ ಮಟ್ಟದ್ಲಲಿ ದೊಡ್ಡ ಸದ್ದು ಮಾಡುತ್ತಿದೆ. ಹರಿ ನಾಡರ್ ತಮಿಳುನಾಡಿನ ನೆಲ್ಲೈ ಜಿಲ್ಲೆಯವರು. ಈತ ಯಾವಾಗಲೂ ಕುತ್ತಿಗೆ ಮತ್ತು ತೋಳುಗಳ ಸುತ್ತಲೂ ಸುಮಾರು ಮೂರೂವರೆ ಕೆಜಿ ಚಿನ್ನದ ಆಭರಣಗಳನ್ನು ಧರಿಸುತ್ತಾನೆ. ಹೀಗಾಗಿ ಅವರನ್ನು ನಡೆದಾಡುವ ಚಿನ್ನದ ಅಂಗಡಿ ಎಂದು ಕರೆಯಲಾಗುತ್ತದೆ. 


ಬೆಂಗಳೂರಿನ ವೆಂಕಟರಮಣ ಶಾಸ್ತ್ರಿ ಎಂಬುವರಿಗೆ ವ್ಯವಹಾರ ನಡೆಸಲು 360 ಕೋಟಿ ಸಾಲ ಕೊಡಿಸುವುದಾಗಿ ಈತ ನಂಬಿಸಿದ್ದಾನೆ.  ಕೇರಳದ ಹೋಟೇಲ್ ನಲ್ಲಿ ಮೀಟಿಂಗ್ ಮಾಡಿ 360 ಕೋಟಿಯ ನಕಲಿ ಡಿಡಿ ತೋರಿಸಿ, ಲೋನ್ ಗೆ ಸರ್ವಿಸ್ ಚಾರ್ಜ್ 7.20 ಕೋಟಿ ಹಣ ಪಡೆದಿದ್ದಾನೆ. ವೆಂಕಟರಮಣ ಶಾಸ್ತ್ರಿ ಕಂಪನಿಯ ಅಕೌಂಟ್ ನಿಂದ ಆರೋಪಿ ಹಣ ವರ್ಗಾವಣೆ ಮಾಡಿಕೊಂಡಿದ್ದ. ಆದರೆ, ಎಷ್ಟು ದಿನಗಳಾದರೂ ಹಣ ನೀಡದಿದ್ದ ಕಾರಣ ವೆಂಕಟರಮಣ ಶಾಸ್ತ್ರಿ ಈ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸ್ ಆಯುಕ್ತರು ಈ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಿದ್ದರು. ಕೇರಳ ಕೋವಲಂ ನಲ್ಲಿ ಆರೋಪಿ ಹರಿ ನಾಡರ್ ಇರುವ ಕುರಿತ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಇಂದು ಅವರನ್ನು ಬಂಧಿಸಿದ್ದಾರೆ.


ಯಾರು ಈ ಹರಿ ನಾಡಾರ್?


ಹರಿ ನಾಡರ್ ತಮಿಳುನಾಡಿನ ನೆಲ್ಲೈ ಜಿಲ್ಲೆಯವರು. ಈತ ಯಾವುದೇ ಸಮಯದಲ್ಲಿ ಕುತ್ತಿಗೆ ಮತ್ತು ತೋಳುಗಳ ಸುತ್ತಲೂ ಸುಮಾರು ಮೂರೂವರೆ ಕೆಜಿ ಚಿನ್ನದ ಆಭರಣಗಳನ್ನು ಧರಿಸುತ್ತಾನೆ. ಹೀಗಾಗಿ ಅವರನ್ನು ನಡೆದಾಡುವ ಚಿನ್ನದ ಅಂಗಡಿ ಎಂದು ಕರೆಯಲಾಗುತ್ತದೆ.


ಆದರೆ, ಈತ 2021 ರಲ್ಲಿ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಪನಂಗಾಟ್ಟು ಪಡೈ ಎಂಬ ಪಕ್ಷದ ಅಭ್ಯರ್ಥಿಯಾಗಿ ತೆಂಕಾಸಿ ಜಿಲ್ಲೆಯ ಆಲಂಗುಲಂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅವರ ಚುನಾವಣಾ ಪ್ರಚಾರವು ಹೈಟೆಕ್ ಆಗಿತ್ತು. ಹೆಲಿಕಾಪ್ಟರ್ ಮೂಲಕ ಬಂದು ಪ್ರಚಾರ ಮಾಡುವ ಮೂಲಕ ಸದ್ದು ಮಾಡಿದ್ದರು. ಹೆಲ್ಮೆಟ್ ಚಿಹ್ನೆಯಲ್ಲಿ ಸ್ಪರ್ಧಿಸಿದ್ದ ಅವರ ಮೈಮೇಲಿನ ಚಿನ್ನವನ್ನು ನೋಡಲೆಂದೆ ಸಾವಿರಾರು ಮಹಿಳೆಯರು ಆತನ ಚುನಾವಣಾ ಪ್ರಚಾರವನ್ನು ವೀಕ್ಷಿಸಿದ್ದಾರೆ ಎನ್ನಲಾಗುತ್ತಿದೆ.


ಗರಿಷ್ಠ 20,000 ಮತಗಳನ್ನು ಪಡೆಯುವ ನಿರೀಕ್ಷೆಯಲ್ಲಿದ್ದ ಹರಿ ನಾಡಾರ್ 37,000 ಮತಗಳನ್ನು ಪಡೆದರು. ಪರಿಣಾಮ ಕ್ಷೇತ್ರದಲ್ಲಿ ಗೆಲ್ಲುವ ನೆಚ್ಚಿನ ಅಭ್ಯರ್ಥಿಯಾಗಿದ್ದ ಮಾಜಿ ಡಿಎಂಕೆ ಸಚಿವ ಅಲ್ಲಾಡಿ ಅರುಣಾ ಸುಮಾರು 4,000 ಮತಗಳ ಅಂತರದಿಂದ ಸೋಲನುಭವಿಸಿದರು. ಇವರ ಸೋಲಿಗೆ ಹರಿ ನಾಡಾರ್ ಮತಗಳನ್ನು ವಿಭಜಿಸಿದ್ದೆ ಕಾರಣ ಎನ್ನಲಾಗಿತ್ತು.


ಇದನ್ನೂ ಓದಿ: Kerala Lockdown | ಕೇರಳದಲ್ಲಿ ಮೇ 8ರಿಂದ 16ರವರೆಗೆ ಲಾಕ್​ಡೌನ್ ಘೋಷಣೆ; ಅಗತ್ಯ ಸೇವೆಗಳು ಮಾತ್ರ ಲಭ್ಯ


ಆದರೆ, ತಮಿಳುನಾಡು ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಹರಿ ನಾಡಾರ್ ಮತ ಎಣಿಕೆಯಲ್ಲಿ ಭಾಗವಹಿಸಲಿಲ್ಲ. ಅವರು ಕೇರಳದ ಕೋವಲಂ ಬಳಿಯ ಪೂವಾರ್ ಎಂಬ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದಾಗ ಕರ್ನಾಟಕ ಪೊಲೀಸರು ವಂಚನೆ ಪ್ರಕರಣದಲ್ಲಿ ಬಂಧಿಸಿ ಆತನನ್ನು ಬೆಂಗಳೂರಿಗೆ ಕರೆ ತಂದಿದ್ದಾರೆ. ಅಲ್ಲದೆ, ಆತನ  ಆಭರಣಗಳು, ಹಲವಾರು ಲಕ್ಷ ನಗದು ಮತ್ತು ಮೂರು ಕಾರುಗಳನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.


ತನಿಖೆಯ ಸಮಯದಲ್ಲಿ ವಿವಿಧ ಚಕಿತಗೊಳಿಸುವ ಮಾಹಿತಿಗಳು ಹೊರಬಂದಿವೆ ಎನ್ನಲಾಗುತ್ತಿದೆ. ಅಲ್ಲದೆ, ಆರೋಪಿಗಳು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ,ಕೇರಳ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್ ಮೂಲದ ಉದ್ಯಮಿಗಳಿಗೆ ಸಾಲ ಕೊಡಿಸುವುದಾಗಿ ಹೇಳಿ ವಂಚಿಸಿರುವುದು ಬೆಳಕಿಗೆ ಬಂದಿದೆ.


ಇದೀಗ ಆರೋಪಿಯಿಂದ 2 ಕೋಟಿ ಮೌಲ್ಯದ 3,893 ಗ್ರಾಂ ಚಿನ್ನಾಭರಣ, 8,76,916 ಲಕ್ಷ ನಗದು ಹಾಗೂ ಇನೋವಾ ಕ್ರಿಸ್ಟಾ ಕಾರು ವಶಕ್ಕೆ ಪಡೆಯಲಾಗಿದ್ದು, ಮನಿ ಲಾಂಡರಿಂಗ್ ಸೇರಿದಂರೆ ವಂಚನೆ ಪ್ರಕರಣ ದಾಖಲಿಸಲಾಗಿದೆ. ನಡೆದಾಡುವ ಚಿನ್ನದ ಅಂಗಡಿಯಾದ ಹರಿ ನಾಡರ್ ಈ ಚುನಾವಣೆಯಲ್ಲಿ ಗೆದ್ದು ಅಸೆಂಬ್ಲಿಗೆ ಹೋಗುತ್ತಾರೆ ಎಂದು ಅಲಂಗುಲಂ ಕ್ಷೇತ್ರದ ಜನರು ಭಾವಿಸಿದ್ದರು. ಆದರೆ, ಅವರು ವಂಚನೆ ಪ್ರಕರಣದಲ್ಲಿ ಬೆಂಗಳೂರು ಪೊಲೀಸರಿಂದ ಬಂಧನವಾಗಿರುವುದು ಈದೀಗ ಕೋಲಾಹಲಕ್ಕೆ ಕಾರಣವಾಗಿದೆ.

top videos
    First published: