• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Bengaluru: ಎಲೆಕ್ಷನ್‌ ಟೈಂನಲ್ಲಿ ಭಾರೀ ಪ್ರಮಾಣದ ಗಾಂಜಾ ಸಪ್ಲೈ! ಶೆಡ್‌ನಲ್ಲಿ ಮೂಟೆಗಳಲ್ಲಿ ಸಂಗ್ರಹ

Bengaluru: ಎಲೆಕ್ಷನ್‌ ಟೈಂನಲ್ಲಿ ಭಾರೀ ಪ್ರಮಾಣದ ಗಾಂಜಾ ಸಪ್ಲೈ! ಶೆಡ್‌ನಲ್ಲಿ ಮೂಟೆಗಳಲ್ಲಿ ಸಂಗ್ರಹ

ಗಾಂಜಾ ಪೆಡ್ಲರ್​ ಅರೆಸ್ಟ್​

ಗಾಂಜಾ ಪೆಡ್ಲರ್​ ಅರೆಸ್ಟ್​

ವಿಶಾಖಪಟ್ನಂ ಹಾಗೂ ಅಸ್ಸಾಂ ನಿಂದ ಗಾಂಜಾ ತಂದು ಹೊಸಕೋಟೆಯ ನಿರ್ಜನ ಪ್ರದೇಶದಲ್ಲಿನ ಶೆಡ್ ಒಂದರಲ್ಲಿ ಕಸದಂತೆ ಶೇಖರಣೆ ಮಾಡಿದ್ದ ಆರೋಪಿಯನ್ನು ಬಂಧಿಸಿ 230 ಕೆಜಿ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ರಾಜ್ಯ ಚುನಾವಣಾ (Election) ಹಿನ್ನೆಲೆ ನಗರದಾದ್ಯಂತ ಖಾಕಿ ಕಟ್ಟೆಚ್ಚರ ವಹಿಸಿದೆ. ಈ ಮಧ್ಯೆ ಪೊಲೀಸರು (Police) ಚಾಪೆ ಕೆಳೆಗೆ ತೂರಿದರೆ ಆ ಭೂಪ ರಂಗೋಲಿ (Rangoli) ಕೆಳಗೆ ತೂರ್ತಿದ್ದ, ಹೀಗೇ ಖತರ್ನಾಕ್‌ ಐಡಿಯಾ (Idea) ಮಾಡುತ್ತಿದ್ದವ ಖಾಕಿ ಕೈಗೆ ಮಾಲ್ ಸಮೇತ ಲಾಕ್ ಆಗಿದ್ದಾನೆ. ಹೀಗೆ ಕೊಠಡಿಯಲ್ಲಿ ಒಂದರ ಮೇಲೊಂದು ಜೋಡಿಸಿರುವ ಮೂಟೆಗಳು ಯಾವುದೋ ಭತ್ತದ್ದೋ, ರಾಗಿದೋ ಅಲ್ಲ. ಇವೆಲ್ಲ ಗಾಂಜಾ (Cannabis), ಹೌದು ಡಿಜೆ ಹಳ್ಳಿ (DJ Halli) ಪೊಲೀಸರು ಓರ್ವ ರೌಡಿ ಆಸಾಮಿಯಿಂದ ನೂರಾರು ಕೆ.ಜಿ ಗಾಂಜಾ ಸಂಗ್ರಹದ ಮಾಹಿತಿಯನ್ನ ಪಡೆದುಕೊಂಡು ರೇಡ್ ಮಾಡಿದ್ದಾಗ ಸಿಕ್ಕಿರುವ 230 ಕೆಜಿ ಗಾಂಜಾ.


ಬರೋಬ್ಬರಿ 1 ಕೋಟಿ ರೂಪಾಯಿ ಮೌಲ್ಯದ ಗಾಂಜಾ ವಶಕ್ಕೆ


ಚುನಾವಣೆ ಹಿನ್ನಲೆ ಪೊಲೀಸರು ನಗರದಲ್ಲಿ ಸ್ಪೆಷಲ್ ಡ್ರೈವ್ ಶುರು ಮಾಡಿದ್ದಾರೆ. ಈ ಹೊತ್ತಲ್ಲಿ ಓರ್ವ ರೌಡಿ ಬಾಯ್ಬಿಟ್ಟ ಸತ್ಯವನ್ನ ಹುಡುಕುತ್ತಾ ಬಂದ ಡಿಜೆ ಹಳ್ಳಿ ಪೊಲೀಸರಿಗೆ ಹೊಸಕೋಟೆಯ ಬಳಿ ಒಂದು ಶೆಡ್‌ನಲ್ಲಿ ಸಂಗ್ರಹಿಸಿಟ್ಟಿದ್ದ ಬರೋಬ್ಬರಿ 1 ಕೋಟಿ ರೂಪಾಯಿ ಮೌಲ್ಯದ ಮೂಟೆಯಲ್ಲಿದ್ದ 230 ಕೆಜಿ ಗಾಂಜಾ ಸಿಕ್ಕಿದೆ.


ಈ ವೇಳೆ ಪ್ರಮುಖ ಆರೋಪಿ ತನ್ವೀರ್ ಎಂಬಾತ ಕೂಡಾ ಲಾಕ್ ಆಗಿದ್ದಾನೆ. ಹೀಗಿರುವಾಗ ಪೊಲೀಸರು ವಿಚಾರಣೆ ವೇಳೆ ಚುನಾವಣೆಯ ನಿಮಿತ್ತ ನಗರಕ್ಕೆ ಗಾಂಜಾ ಸಪ್ಲೈ ಮಾಡಲು ಪ್ಲಾನ್ ಮಾಡಿದ್ದು ಬೆಳಕಿಗೆ ಬಂದಿದೆ.


ಗಾಂಜಾ ಪೆಡ್ಲರ್​ ಅರೆಸ್ಟ್​


ಬಸ್ ಗಳಲ್ಲಿ ಗಾಂಜಾ ಸಾಗಾಟ


ವಿಶಾಖಪಟ್ನಂ ಹಾಗೂ ಅಸ್ಸಾಂ ನಿಂದ ಗಾಂಜಾ ತಂದು ಹೊಸಕೋಟೆಯ ನಿರ್ಜನ ಪ್ರದೇಶದಲ್ಲಿನ ಶೆಡ್ ಒಂದರಲ್ಲಿ ಕಸದಂತೆ ಶೇಖರಣೆ ಮಾಡಿದ್ದ. ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಹೆಚ್ಚಿದ್ದ ಹಿನ್ನಲೆ ಕಡಿಮೆ ಪ್ರಮಾಣದಲ್ಲಿ ಗಾಂಜಾ ಬಸ್ ಗಳಲ್ಲಿ ಸಾಗಾಟ ಮಾಡುತ್ತಿದ್ದ. ಈ ಮೂಲಕ ಇನ್ನಿಬ್ಬರು ಸಹಚರರು ಸಹ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ‌.




ಕೆಲ ರೌಡಿ ಶೀಟರ್ ಗಳು ಇದೇ ತನ್ವೀರ್ ಮೂಲಕ ಗಾಂಜಾ ದಂಧೆ ನಡೆಸುತ್ತಿದ್ದದ್ದು ಗೊತ್ತಾಗಿದೆ. ಈ ಹಿಂದೆ ಕೆಜಿ ಹಳ್ಳಿ ಡಿಜೆ ಹಳ್ಳಿ ಗಲಭೆ ಕೇಸ್ ನಲ್ಲಿ ಆರೋಪಿ ಬಂಧನವಾಗಿದ್ದು ತಿಳಿದು ಬಂದಿದೆ. ಸದ್ಯ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ. ಆರೋಪಿ ತನ್ವೀರ್ ಇಷ್ಟು ದೊಡ್ಡ ಪ್ರಮಾಣದಲ್ಲಿ ಹೇಗೆ ರಾಜ್ಯಕ್ಕೆ ತಂದಿದ್ದ ಅನ್ನೋದು ಗೊತ್ತಾಗಬೇಕಿದೆ.

top videos


    (ವರದಿ: ಗಂಗಾಧರ್ ವಾಗಟ,ಕ್ರೈಂ ಬ್ಯೂರೋ, ನ್ಯೂಸ್ 18 ಕನ್ನಡ)

    First published: