Bengaluru: ಬೆಂಗಳೂರಿಗರೇ ಇಂದು ಈ ರಸ್ತೆಗಳು ಕಂಪ್ಲೀಟ್ ಬಂದ್, ಸಂಚಾರಕ್ಕೆ ಬದಲಿ ಮಾರ್ಗ ಬಳಸಿ

ಬೆಂಗಳೂರಿಗರೇ ಇಂದು ರಸ್ತೆಗಿಳಿಯೋವಾಗ ಎಚ್ಚರ. ರೋಡಿಗಿಳಿದ ಮೇಲೆ ಪರದಾಟ ನಡೆಸ್ಬೇಡಿ. ಭಾನುವಾರ ಅಂತಾ ಫ್ಯಾಮಿಲಿ ಎಲ್ಲಾ ಹೊರಗೆ ಬಂದ್ರೆ ಲಾಕ್ ಆಗ್ತೀರಾ ಅಷ್ಟೇ. ಯಾಕಂದ್ರೆ ಇಂದು ಬೆಂಗಳೂರಿನಲ್ಲಿ ಪ್ರಮುಖ ರೋಡ್​ಗಳು ಬಂದ್ ಆಗಿರಲಿದೆ. ಯಾವ ರೋಡ್​ ಅಂತಾ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರಿಗರೇ ಇಂದು ರಸ್ತೆಗಿಳಿಯೋವಾಗ ಎಚ್ಚರ. ರೋಡಿಗಿಳಿದ ಮೇಲೆ ಪರದಾಟ ನಡೆಸ್ಬೇಡಿ. ಭಾನುವಾರ (Sunday) ಅಂತಾ ಫ್ಯಾಮಿಲಿ ಎಲ್ಲಾ ಹೊರಗೆ ಬಂದ್ರೆ ಲಾಕ್ ಆಗ್ತೀರಾ ಅಷ್ಟೇ. ಯಾಕಂದ್ರೆ ಇಂದು ಬೆಂಗಳೂರಿನಲ್ಲಿ (Bengaluru) ಪ್ರಮುಖ ರೋಡ್​ಗಳು ಬಂದ್ (Main Road Bund) ಆಗಿರಲಿದೆ. ಬೆಂಗಳೂರಿನಲ್ಲಿ ಇಂದು ಗಣೇಶ ಹಬ್ಬದ ಸಂಭ್ರಮ ಜೋರಾಗಿ ಇರಲಿದೆ. ಬೆಂಗಳೂರಿನಲ್ಲಿ ಇಂದು ಅತೀಹೆಚ್ಚು ಗಣೇಶ ಮೂರ್ತಿಯ ವಿಸರ್ಜನೆ ನಡೆಯಲಿದೆ. ಬೆಂಗಳೂರಿನಲ್ಲಿ ಸಾಮೂಹಿಕ ಗಣೇಶ ವಿಸರ್ಜನೆ (Mass Ganesha Discharge) ಹಿನ್ನೆಲೆ ಒಂದಷ್ಟು ರೋಡ್​ಗಳಲ್ಲಿ ಸಂಚಾರ (Vehicle bund) ನಿರ್ಬಂಧಿಸಲಾಗಿದೆ. ವಾಹನ ಪ್ರಯಾಣಕ್ಕೆ ಬದಲಿ ರಸ್ತೆಗಳ ವ್ಯವಸ್ಥೆ (Alternative Road) ಮಾಡಲಾಗಿದೆ. ಪೂರ್ವ ವಿಭಾಗದ ಕೆಲ ಸಂಚಾರಿ ಮಾರ್ಗಗಳ ಬದಲಾವಣೆಯಾಗಲಿದೆ. ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸಂಚಾರ ನಿರ್ಬಂಧಿಸಲಾಗಿದೆ.

ನಾಗವಾರ ಜಂಕ್ಷನ್ ನಿಂದ ಪಾಟರಿ ಸರ್ಕಲ್ ರಸ್ತೆಯವರೆಗೆ ಭಾಗಶಃ ಸಂಚಾರ ನಿರ್ಬಂಧ ಮಾಡಲಾಗಿದೆ. ಜೊತೆಗೆ ನಿರ್ಬಂಧಿಸಲಾದ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕೈಗೊಳ್ಳಲಾಗಿದೆ. ಕೆಲವೆಡೆ ರಸ್ತೆಯ ಎರಡು ಬದಿಯಲ್ಲಿ ವಾಹನಗಳ ಪಾರ್ಕಿಂಗ್‌ ನಿರ್ಬಂಧ ಮಾಡಲಾಗಿದೆ.

ನಾಗವಾರ ಜಂಕ್ಷನ್‌ನಿಂದ ಸಂಚಾರ ಹೀಗೆ ಮಾಡಿ

-ಥಣಿಸಂದ್ರ ಕಡೆಯಿಂದ ಶಿವಾಜಿನಗರ ಜಂಕ್ಷನ್‌ ಕಡೆಗೆ ಬರುವ ವಾಹನಗಳನ್ನು ಮಾರ್ಗ ಬದಲಾವಣೆ ಮಾಡಲಾಗಿದೆ

-ಹೆಣ್ಣೂರು ಜಂಕ್ಷನ್-ಸಿದ್ದಪ್ಪ ರೆಡ್ಡಿ ಜಂಕ್ಷನ್-ಅಯೋಧ್ಯ ಜಂಕ್ಷನ್ ಲಿಂಗರಾಜಪುರಂ

-ಐಟಿಸಿ ಫೈ ಓವರ್ ಮೂಲಕ ರಾಬರ್ಟ್‌ನ್ ರಸ್ತೆ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದುಕೊಂಡು ಹೇನ್ಸ್ ರಸ್ತೆ ಮೂಲಕ ಶಿವಾಜಿನಗರ ತಲುಪುವುದು.

Bengaluru people dont get off this road today Ganesh mass discharge so Road Bandh use alternate route
ಸಾಂದರ್ಭಿಕ ಚಿತ್ರ


ಇದನ್ನೂ ಓದಿ: ಮಳೆ ಬರ್ಲಿ, ಗುಂಡಿನೇ ಇರ್ಲಿ ಹೋಗ್ತಿರ್ಬೇಕು ಅಷ್ಟೇ! ಇಲ್ಲಾಂದ್ರೆ ಫೈನ್ ಗ್ಯಾರೆಂಟಿ

ನಾಗವಾರ ಕಡೆ ಬರುವವರು ಹೀಗೆ ಬನ್ನಿ

-ಶಿವಾಜಿನಗರದ ಕಡೆಯಿಂದ ನಾಗವಾರ ಜಂಕ್ಷನ್ ಕಡೆಗೆ ಬರುವ ವಾಹನಗಳು ಸ್ಪೆನ್ಸರ್ ರಸ್ತೆ

-ಕೋಲ್ಸ್ ರಸ್ತೆ,  ವೀಲರ್ ರಸ್ತೆ ಮೂಲಕ ಹೆಣ್ಣೂರು, ಬಾಣಸವಾಡಿ, ಹಲಸೂರು ಕಡೆಗೆ ಸಂಚರಿಸಲು ಅವಕಾಶ

-ಆರ್.ಟಿ.ನಗರ ದಿಂದ ಕಾವಲ್ ಬೈರಸಂದ್ರ ಮೂಲಕ ಬರುವ ವಾಹನಗಳು ಪುಷ್ಪಾಂಜಲಿ ಟಾಕೀಸ್ ಬಳಿ ಎಡ

-ತಿರುವು ಪಡೆದು ವೀರಣ್ಣಪಾಳ್ಯ ಜಂಕ್ಷನ್‌ ಕಡೆಗೆ ಬಲ ತಿರುವು ಪಡೆದು ನಾಗವಾರ ಜಂಕ್ಷನ್ ರಸ್ತೆ ಕಡೆಗೆ ಸಂಚರಿಸಬಹುದು.

ವಾಹನ ಪಾರ್ಕಿಂಗ್ ನಿರ್ಬಂಧಿಸಿರುವ ಸ್ಥಳಗಳು

-ಪಾಟರಿ ಸರ್ಕಲ್ ನಿಂದ ನಾಗವಾರ ಸಿಗ್ನಲ್, ಗೋವಿಂದಪುರ ಜಂಕ್ಷನ್ ನಿಂದ ಗೋವಿಂದಪುರ ಪೊಲೀಸ್ ಠಾಣೆಯವರೆಗೆ

-ಹೆಚ್.ಬಿ.ಆರ್ ಬಡಾವಣೆಯ ಸಿದ್ದಪ್ಪ ರೆಡ್ಡಿ ಜಂಕ್ಷನ್ ನಿಂದ ನರೇಂದ್ರ ಟೆಂಟ್, ಜಂಕ್ಷನ್‌ ವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಸಿಸಿಟಿವಿ, ಡ್ರೋಣ್ ಮೂಲಕ ನಿಗಾ

ಟ್ಯಾನಿ ರಸ್ತೆಯಲ್ಲಿ ಗಣೇಶ ಮೆರವಣಿಗೆ ಇರಲಿದೆ. ಮೆರವಣಿಗೆ ಬರುವ ರಸ್ತೆಗಳಲ್ಲಿ ಸಿಸಿಟಿವಿ, ಡ್ರೋಣ್ ಮೂಲಕ ನಿಗಾ ಇಡಲಾಗುತ್ತದೆ. 250 ಪೊಲೀಸ್ ಸಿಬ್ಬಂದಿ ಬಾಡಿ ವೋರ್ನ್ ಕ್ಯಾಮೆರಾ ಧರಿಸಿ ಭದ್ರತೆಗೆ ಇಳಿಯಲಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಒಂದೇ ಮಳೆಗೆ ಸಿಲಿಕಾನ್ ಸಿಟಿ ಬರ್ಬಾದ್! 255 ಕೋಟಿ ನಷ್ಟ, ಐಟಿ ಕಂಪೆನಿಗಳಿಂದ ಬೆಂಗಳೂರು ತೊರೆಯುವ ಎಚ್ಚರಿಕೆ

ಬಾರ್ & ರೆಸ್ಟೋರೆಂಟ್, ಪಬ್ ಗಳಿಗೆ ನಿಷೇಧ

ಸಾಮೂಹಿಕ ಗಣೇಶ ಮೂರ್ತಿ ವಿಸರ್ಜನೆ ಕಾರ್ಯಕ್ರಮ ಹಿನ್ನಲೆ ಅತಿಸೂಕ್ಷ್ಮ ಪ್ರದೇಶದಲ್ಲಿನ ಬಾರ್ & ರೆಸ್ಟೋರೆಂಟ್, ಪಬ್ ಗಳಿಗೆ ನಿಷೇಧ ಹೇರಲಾಗಿದೆ. ಕೊತ್ತನೂರು, ರಾಮಮೂರ್ತಿನಗರ, ಅಮೃತಹಳ್ಳಿ, ಸಂಪಿಗೆಹಳ್ಳಿ ಕೆಜೆಹಳ್ಳಿ ಹೆಣ್ಣೂರು ಠಾಣೆ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ.

ಗಣೇಶ ವಿಸರ್ಜನೆ ಹಿನ್ನೆಲೆ ಪೊಲೀಸರಿಂದ ಪಥಸಂಚಲನ

ನಗರದ ಹಲವಡೆ ಗಣೇಶ ವಿಸರ್ಜನೆ ಹಿನ್ನೆಲೆ ಪೂರ್ವ ವಿಭಾಗದ ಪೊಲೀಸರಿಂದ ಪಥಸಂಚಲನ ನಡೆಸಿದರು. ಕೆಜಿ ಹಳ್ಳಿ, ಡಿಜೆ ಹಳ್ಳಿ,‌ ನಾಗವಾರ, ಸೇರಿದಂತೆ ಹಲವು ಏರಿಯಾಗಳಲ್ಲಿ ರೂಟ್ ಮಾರ್ಚ್ ನಡೆಸಿದರು. ಪೂರ್ವ ವಿಭಾಗದ ಪೊಲೀಸರಿಗೆ ಕೆಎಸ್ಆರ್ಪಿ, ಆರ್ಎಎಫ್,ಸಿಎಆರ್ ಸಿಬ್ಬಂದಿ ಸಾಥ್ ನೀಡಿದ್ರು. ಸೂಕ್ಷ್ಮ ಪ್ರದೇಶಗಳಲ್ಲಿ ಗಣೇಶ ಮೆರವಣಿಗೆಯಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.
Published by:Thara Kemmara
First published: