Onion Price: ಬೆಂಗಳೂರು ಗ್ರಾಹಕರಿಗೆ ಕಹಿಯಾದ ಈರುಳ್ಳಿ; ಕತ್ತರಿಸದಿದ್ದರೂ ಕಣ್ಣೀರಿಡಿಸುತ್ತಿದೆ ಈ ತರಕಾರಿ

ಬೆಲೆ ಏರಿಕೆ ಬೆನ್ನಲ್ಲೇ ಗ್ರಾಹಕರು ಈರುಳ್ಳಿ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಈರುಳ್ಳಿ ವ್ಯಾಪಾರ ಕಡಿಮೆಯಾಗಿದೆ. ಇದರಿಂದ ಮಾರಾಟಕ್ಕೆ ತಂದ ಈರುಳ್ಳಿ ಕೊಳೆತು ಹೋಗುವ ಭಯವೂ ಅಂಗಡಿಕಾರರಿಗೆ ಕಾಡುತ್ತಿದೆ.

news18-kannada
Updated:November 27, 2019, 11:30 AM IST
Onion Price: ಬೆಂಗಳೂರು ಗ್ರಾಹಕರಿಗೆ ಕಹಿಯಾದ ಈರುಳ್ಳಿ; ಕತ್ತರಿಸದಿದ್ದರೂ ಕಣ್ಣೀರಿಡಿಸುತ್ತಿದೆ ಈ ತರಕಾರಿ
ಈರುಳ್ಳಿ ಮಂಡಿ
  • Share this:
ಬೆಂಗಳೂರು (ನ.27): ಈರುಳ್ಳಿ ಇಲ್ಲದಿದ್ದರೆ ಎಲ್ಲಾದರೂ ಅಡುಗೆ ಆಗುವುದುಂಟೆ? ಹೀಗಂತ ನೀವು ಈರುಳ್ಳಿ ತರಲು ಅಂಗಡಿಗೆ ಹೋಗಿ ‘ಈರುಳ್ಳಿ ಬೆಲೆ ಎಷ್ಟು?’ ಎಂದು ಕೇಳಿದರೆ ಸಾಕು. ಅವರು ನೀಡುವ ಉತ್ತರ ನಿಮ್ಮನ್ನು ಶಾಕ್​ಗೆ ಒಳಪಡಿಸುವುದರಲ್ಲಿ ಯಾವುದೇ ಅಚ್ಚರಿ ಇಲ್ಲ. ಕಾರಣ ಈರುಳ್ಳಿ ಬೆಲೆ ಕೆಜಿಗೆ 140 ರೂಪಾಯಿ ತಲುಪಿದೆ.
ಕಳೆದೊಂದು ವಾರದಿಂದ ಈರುಳ್ಳಿ ಬೆಲೆ ಏರುತ್ತಲೇ ಇದೆ. ಬೆಂಗಳೂರಿನಲ್ಲಿ ತಿಂಗಳ ಹಿಂದೆ ಕೆಜಿಗೆ 80 ರೂಪಾಯಿ ಇದ್ದ ಈರುಳ್ಳಿ ಬೆಲೆ ಈಗ ಕೆಜಿಗೆ 140 ರೂಪಾಯಿ ಆಗಿದೆ.  ಅತ್ಯಂತ ಕಳಪೆ ಗುಣಮಟ್ಟದ ಈರುಳ್ಳಿಯೂ ಇದೇ ಬೆಲೆಗೆ ಮಾರಾಟವಾಗುತ್ತಿದೆ. ಹೀಗಾಗಿ, ಜನರು ಈರುಳ್ಳಿ ಇಲ್ಲದೆಯೂ ಅಡುಗೆ ಮಾಡುತ್ತೇವೆ ಎನ್ನುತ್ತಿದ್ದಾರೆ.

ಬೆಲೆ ಏರಿಕೆ ಬೆನ್ನಲ್ಲೇ ಗ್ರಾಹಕರು ಈರುಳ್ಳಿ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಈರುಳ್ಳಿ ವ್ಯಾಪಾರ ಕಡಿಮೆಯಾಗಿದೆ. ಇದರಿಂದ ಮಾರಾಟಕ್ಕೆ ತಂದ ಈರುಳ್ಳಿ ಕೊಳೆತು ಹೋಗುವ ಭಯವೂ ಅಂಗಡಿಕಾರರಿಗೆ ಕಾಡುತ್ತಿದೆ.

ದಕ್ಷಿಣ ಭಾರತದ ರಾಜ್ಯಗಳಲ್ಲಿಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಈರುಳ್ಳಿ ಬೆಳೆಗಳು ಕೊಳೆತುಹೋಗಿವೆ. ಇದು ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಕೆಲ ದಿನಗಳವರೆಗೆ ಇದೇ ಬೆಲೆ ಮುಂದುವರಿಯಲಿದೆ ಎನ್ನಲಾಗಿದೆ.
First published: November 27, 2019, 9:57 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading