ಬೆಂಗಳೂರಿನಲ್ಲಿ ಎಟಿಎಂನಲ್ಲಿ ಹಣ ದೋಚುತ್ತಿದ್ದ ನಟೋರಿಯಸ್ ಗ್ಯಾಂಗ್ ಬಂಧನ

ಎಟಿಎಂನಲ್ಲಿದ್ದ ಸುಮಾರು 27 ಲಕ್ಷ ರೂಪಾಯಿ ಹಣವನ್ನು ಎಗರಿಸಿ ಪರಾರಿ ಆಗಿದ್ದರು. ಈ ಬಗ್ಗೆ ದೂರು ದಾಖಲಿಸಿದ ಜಾಲಹಳ್ಳಿ ಪೊಲೀಸರು ಎಟಿಎಂ ದರೋಡೆಕೋರರ ಬೆನ್ನು ಬಿದ್ದಿದ್ದರು

ಆರೋಪಿಗಳು

ಆರೋಪಿಗಳು

  • Share this:
ಬೆಂಗಳೂರು(ಆಗಸ್ಟ್​. 26): ಎಟಿಎಂ ಯಂತ್ರಗಳನ್ನ ಹೊಡೆದು ಕಳ್ಳತನ ಮಾಡುತ್ತಿದ್ದ ಕಳ್ಳರ ಗ್ಯಾಂಗ್ ವೊಂದನ್ನ ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಹರಿಯಾಣದ ಮೂಲದ ಸಮರ್ ಜ್ಯೋತ್ ಸಿಂಗ್, ಜಾಫರ್ ಸಾಧಿಕ್, ಯಹ್ಯಾ ಬಂಧಿತ ಆರೋಪಿಗಳು. 

ಆರೋಪಿಗಳು ಇದೇ ಅಗಸ್ಟ್ 10 ರಂದು ಜಾಲಹಳ್ಳಿ ಮುಖ್ಯರಸ್ತೆಯ ಎಟಿಎಂವೊಂದನ್ನು ಹೊಡೆದು ನಗದು ಹಣ ದೊಚ್ಚಿದ್ದರು. ಎಟಿಎಂನಲ್ಲಿದ್ದ ಸುಮಾರು 27 ಲಕ್ಷ ರೂಪಾಯಿ ಹಣವನ್ನು ಎಗರಿಸಿ ಪರಾರಿ ಆಗಿದ್ದರು. ಈ ಬಗ್ಗೆ ದೂರು ದಾಖಲಿಸಿದ ಜಾಲಹಳ್ಳಿ ಪೊಲೀಸರು ಎಟಿಎಂ ದರೋಡೆಕೋರರ ಬೆನ್ನು ಬಿದ್ದಿದ್ದರು.

ಮೊದಲು ಎಟಿಎಂನ ಸಿಸಿಟಿವಿಗಳ ಪರಿಶೀಲನೆ ವೇಳೆ ಪೊಲೀಸರಿಗೆ ಅಚ್ಚರಿಯೊಂದು ಕಾದಿತ್ತು. ಎಟಿಎಂ ಸಿಸಿಟಿವಿಗೆ ಬ್ಲಾಕ್ ಸ್ಪ್ರೇ ಹೊಡೆದಿದ್ದ ಕಳ್ಳರು, ಬಳಿಕ ಗ್ಯಾಸ್ ಕಟರ್ ಬಳಸಿ ಎಟಿಎಂ ಯಂತ್ರ ಹೊಡೆದು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಎಟಿಎಂ ಹಣ ಕಳ್ಳತನ ಸಂಬಂಧ ಮೂವರು ಆರೋಪಿಗಳ ಬೆನ್ನು ಬಿದ್ದ ಪೊಲೀಸರು ಸಮರ್ ಜ್ಯೋತ್ ಸಿಂಗ್ ಸೇರಿ ಆತನ ಇಬ್ಬರು ಸಹಚರರನ್ನ ಬಂಧಿಸಿದ್ದಾರೆ. ಬಂಧಿತರಿಂದ 15 ಲಕ್ಷ ನಗದು, ಎರಡು ಬೈಕ್, ಒಂದು ಕಾರು, ಮೂರು ಮೊಬೈಲ್ ಜಪ್ತಿ ಮಾಡಲಾಗಿದೆ.

ಇದನ್ನೂ ಓದಿ : ಟಿಪ್ಪು ಹೊಗಳಿದ ವಿಶ್ವನಾಥ್; ಬಿಜೆಪಿಗರು ಈಗಲಾದರೂ ಸತ್ಯ ತಿಳಿದುಕೊಳ್ಳಲಿ ಎಂದ ಗುಂಡೂರಾವ್, ಖಂಡ್ರೆ

ಇನ್ನೂ ಪ್ರಮುಖ ಆರೋಪಿ ಸಮರ್ ಜ್ಯೋತ್ ಸಿಂಗ್ ಈ ಹಿಂದೆ ನಗರದ ಹಲವು ಎಟಿಎಂ ದರೊಡೆ ಪ್ರಕರಣದಲ್ಲಿ ಜೈಲು ಸೇರಿದ್ದ. ಆರೋಪಿ ಜೈಲಿನಲ್ಲಿದ್ದ ವೇಳೆ ಗಾಂಜಾ ಕೇಸ್ ನಲ್ಲಿ ಸಿಕ್ಕಿ ಬಿದ್ದಿದ್ದ ಜಾಫರ್ ಹಾಗೂ ಯಹ್ಯಾ ಪರಿಚಯವಾಗಿದೆ. ಪರಪ್ಪನ ಅಗ್ರಹಾರದಲ್ಲಿ ಇಬ್ಬರನ್ನು ಭೇಟಿಯಾಗಿದ್ದ ಸಮರ್. ಬಳಿಕ ಎಟಿಎಂ ಕಳ್ಳತನ ಮಾಡುವ ಬಗ್ಗೆ ಹೇಳಿದ್ದಾನೆ.  ಜೈಲಿನಿಂದ ಬಿಡುಗಡೆ ಬಳಿಕ ಕೃತ್ಯಕ್ಕೆ ಸ್ಕೆಚ್ ಹಾಕಿದ್ದು, ಅದರಂತೆ ಜಾಲಹಳ್ಳಿಯ ಎಟಿಎಂಗೆ ದರೋಡೆ ಮಾಡಲು ಮುಂದಾಗಿದ್ದಾರೆ.

ಕುಖ್ಯಾತ ಎಟಿಎಂ ರಾಬರ್ಸ್ ಆಗಿರುವ ಖದೀಮರು ಬ್ಯಾಟರಾಯನಪುರ, ಪರಪ್ಪನ ಅಗ್ರಹಾರ ಸೇರಿದಂತೆ ಹಲವು ಕಡೆ ಎಟಿಎಂ ರಾಬರಿ ಮಾಡಿದ್ದಾರೆ. ಇತ್ತೀಚಿಗೆ ಜೈಲಿನಿಂದ ಬಿಡುಗಡೆಯಾಗಿ ಬಳಿಕ ಮತ್ತದೇ ಕೃತ್ಯದಲ್ಲಿ ಭಾಗಿಯಾಗಿದ್ದ. ಈಗ ಪುನಃ ಎಟಿಎಂ ಕಳ್ಳತನ ಮಾಡಿ ಆರೋಪಿ ಜೈಲಿನಲ್ಲಿ ಮುದ್ದೆ ಮುರಿಯಲು ಹೊರಟಿದ್ದಾನೆ.
Published by:G Hareeshkumar
First published: