Bengaluru North LS Election Result Live: ಬೆಂ. ಉತ್ತರ; ಗೆಲುವಿನ ಕಡೆ ದಾಪುಗಾಲಿಟ್ಟ ಸದಾನಂದ ಗೌಡ ಅಧಿಕೃತ ಘೋಷಣೆಯೊಂದೆ ಬಾಕಿ

ಬೆಂಗಳೂರು ಉತ್ತರದಲ್ಲಿ ಎಲ್ಲಾ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ ಪಾಲಿಗೆ 5,19,344 ಮತಗಳು ಹರಿದುಬಂದಿದ್ದರೆ, ಬಿಜೆಪಿ ಪಾಲಿಗೆ 6,10,813 ಮತಗಳು ದಾಖಲಾಗಿವೆ. ಪರಿಣಾಮ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ 91,468 ಮತಗಳ ಭಾರೀ ಮುನ್ನಡೆ ಸಾಧಿಸುವಲ್ಲಿ ಸಫಲರಾಗಿದ್ದಾರೆ. ಲೆಕ್ಕಾಚಾರಗಳ ಪ್ರಕಾರ ಸದಾನಂದ ಗೌಡರ ಗೆಲುವು ಖಚಿತವಾಗಿದೆ ಎನ್ನಲಾಗುತ್ತಿದೆ.

MAshok Kumar | news18
Updated:May 23, 2019, 1:14 PM IST
Bengaluru North LS Election Result Live: ಬೆಂ. ಉತ್ತರ; ಗೆಲುವಿನ ಕಡೆ ದಾಪುಗಾಲಿಟ್ಟ ಸದಾನಂದ ಗೌಡ ಅಧಿಕೃತ ಘೋಷಣೆಯೊಂದೆ ಬಾಕಿ
ಕೃಷ್ಣ ಬೈರೇಗೌಡ ಮತ್ತು ಸದಾನಂದಗೌಡ ನಡುವೆ ನೇರ ಹಣಾಹಣಿ
  • News18
  • Last Updated: May 23, 2019, 1:14 PM IST
  • Share this:
ಬೆಂಗಳೂರು(ಮೇ.23): ತೀವ್ರ ಹಣಾಹಣಿಯ ಕ್ಷೇತ್ರಗಳ ಪೈಕಿ ಬೆಂಗಳೂರು ಉತ್ತರ ಸಹ ಒಂದು. ಬಿಜೆಪಿಯಿಂದ ಡಿ.ವಿ. ಸದಾನಂದ ಗೌಡ ಸ್ಪರ್ಧೆ ಮಾಡಿದರೆ, ಇವರ ಪ್ರತಿಸ್ಪರ್ಧಿಯಾಗಿ ಮೈತ್ರಿ ಅಭ್ಯರ್ಥಿಯಾಗಿ ಸಚಿವ ಕೃಷ್ಣ ಬೈರೇಗೌಡ ಅಖಾಡಕ್ಕೆ ಧುಮುಕಿದ್ದಾರೆ.

ಈ ಬಾರಿ ಸದಾನಂದಗೌಡರನ್ನು ಸೋಲಿಸಲೇಬೇಕು ಎಂಬ ನಿರ್ಧಾರದಲ್ಲಿ ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಸಚಿವ ಕೃಷ್ಣಭೈರೇಗೌಡರನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು. ಬೈರೇಗೌಡರ ಎಂಟ್ರಿಯೊಂದಿಗೆ ಈ ಕ್ಷೇತ್ರ ಟಫ್​ ಫೈಟ್​ಗೆ ವೇದಿಕೆ ಕಲ್ಪಿಸಿತ್ತು. ಹೀಗಾಗಿ ಕೊನೆಯ ಹಂತದ ಮತ ಎಣಿಕೆವರೆಗೂ ಇಂತಹ ಅಭ್ಯರರ್ಥಿಯೇ ಗೆಲ್ಲಲಿದ್ದಾರೆ ಎಂದು ಖಚಿತವಾಗಿ ಹೇಳುವುದು ಸಾಧ್ಯವಿಲ್ಲ.

ಸದಾನಂದರಿಗೆ ಅಲ್ಪ ಮುನ್ನಡೆ ; ಭಾರೀ ಕುತೂಹಲ ಮೂಡಿಸಿದ್ದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕೃಷ್ಣಭೈರೇಗೌಡರ ವಿರುದ್ಧ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಸತತ ಮುನ್ನಡೆ ಕಾಯ್ದುಕೊಂಡಿದ್ದು ಇನ್ನೂ ಗೆಲುವಿನ ಕುರಿತು ಅಧಿಕೃತ ಘೋಷಣೆಯೊಂದೆ ಬಾಕಿ ಇದೆ.

ಒಟ್ಟಾರೆ ಎಲ್ಲಾ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ ಪಾಲಿಗೆ 5,19,344 ಮತಗಳು ಹರಿದುಬಂದಿದ್ದರೆ, ಬಿಜೆಪಿ ಪಾಲಿಗೆ 6,10,813 ಮತಗಳು ದಾಖಲಾಗಿವೆ. ಪರಿಣಾಮ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ 91,468 ಮತಗಳ ಭಾರೀ ಮುನ್ನಡೆ ಸಾಧಿಸುವಲ್ಲಿ ಸಫಲರಾಗಿದ್ದಾರೆ. ಲೆಕ್ಕಾಚಾರಗಳ ಪ್ರಕಾರ ಸದಾನಂದ ಗೌಡರ ಗೆಲುವು ಖಚಿತವಾಗಿದೆ ಎನ್ನಲಾಗುತ್ತಿದೆ.
First published:May 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading