• Home
  • »
  • News
  • »
  • state
  • »
  • Traffic Rules: ಬೆಂಗಳೂರಿನ ವಾಹನ ಸವಾರರೇ ಎಚ್ಚರ ಎಚ್ಚರ! ಫುಟ್​ಪಾತ್​ನಲ್ಲಿ ಬೈಕ್ ರೈಡ್ ಮಾಡಿದ್ರೆ ಫೈನ್​ ಜೊತೆಗೆ ಬೀಳುತ್ತೆ ಕೇಸ್

Traffic Rules: ಬೆಂಗಳೂರಿನ ವಾಹನ ಸವಾರರೇ ಎಚ್ಚರ ಎಚ್ಚರ! ಫುಟ್​ಪಾತ್​ನಲ್ಲಿ ಬೈಕ್ ರೈಡ್ ಮಾಡಿದ್ರೆ ಫೈನ್​ ಜೊತೆಗೆ ಬೀಳುತ್ತೆ ಕೇಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಫುಟ್​ಪಾತ್ ಮೇಲೆ ವಾಹನ ನಿಲ್ಲಿಸಿದರೆ ಅಥವಾ ಚಲಾಯಿಸಿದರೆ ವಾಹನ‌ ಸೀಝ್ ಮಾಡಿ ಸೆಕ್ಷನ್ 283 ಅಡಿಯಲ್ಲಿ FIR ದಾಖಲು ಮಾಡಲಾಗುತ್ತೆ ಎಂದು ಸಂಚಾರಿ ಪೋಲಿಸ್ ಇಲಾಖೆ ವಿಶೇಷ ಆಯುಕ್ತರಾದ ಡಾ ಎಂ.ಎ ಸಲೀಂ ಅವರು ಮಾಹಿತಿ ನೀಡಿದ್ದಾರೆ.

  • Share this:

ಬೆಂಗಳೂರು: ನಗರದಲ್ಲಿ (Bengaluru) ಫುಟ್​​ಪಾತ್ ಮೇಲೆ ವಾಹನ ಚಲಾಯಿಸುವುದು (Footpath Riding) ಕಾಮನ್​ ಅನ್ನೋ ರೀತಿ ಆಗಿದೆ. ಜನರು ಸಿಗ್ನಲ್​ ಸಮಸ್ಯೆಯಿಂದ ಪಾರಾಗಲು ಫುಟ್​ಪಾತ್​ ಮೇಲೂ ಬೈಕ್​ ಹತ್ತಿಸಿಕೊಂಡು ಹೋಗುತ್ತಾರೆ. ಆದರೆ ಇನ್ಮುಂದೆ ಆ ರೀತಿ ಫುಟ್​​ಪಾತ್​ ಮೇಲೆ ವಾಹನ ಚಲಾಯಿಸಿದರೆ ಪೊಲೀಸರು ದಂಡದ (Bengaluru Traffic Police) ಜೊತೆ ಪ್ರಕರಣವನ್ನು ದಾಖಲು ಮಾಡಿ ಕೋರ್ಟ್​ಗೆ ಎಳೆಯುತ್ತಾರೆ. ಅಲ್ಲದೇ ಪ್ರಕರಣ ದಾಖಲಿಸಿ ಗಾಡಿಯನ್ನು ಸ್ಥಳದಲ್ಲೇ ಸೀಜ್ ಮಾಡ್ತಾರೆ. ಬೆಂಗಳೂರಿನ ಫುಟ್ ಪಾತ್​ ಮೇಲೆ ವಾಹನ ಚಲಾಯಿಸುವುದು, ಪಾರ್ಕಿಂಗ್ (Parking Violation) ಮಾಡುವುದು ತಡೆಯಲು ಪೊಲೀಸರು ಈ ಕ್ರಮಕ್ಕೆ ಮುಂದಾಗಿದ್ದಾರೆ.


ವಾಹನ ಸೀಜ್ ಮಾಡಿ ಕೋರ್ಟ್ ವಶಕ್ಕೆ ನೀಡ್ತಾರೆ ಪೊಲೀಸ್


ಸಂಚಾರಿ ಪೋಲಿಸ್ ಇಲಾಖೆ ವಿಶೇಷ ಆಯುಕ್ತರಾದ ಡಾ ಎಂ.ಎ ಸಲೀಂ ಅವರು ಮಾಹಿತಿ ನೀಡಿದ್ದು, ಫುಟ್​​ಪಾತ್​ ಮೇಲೆ ವಾಹನ ಚಲಾಯಿಸುವುದು ಬಹಳ ಅನಾಗರಿಕ ವರ್ತನೆ. ಇದರಿಂದ ಪಾದಚಾರಿಗಳಿಗೆ ಬಹಳ ಸಮಸ್ಯೆ ಆಗುತ್ತದೆ. ಅಲ್ಲದೇ ಪ್ರಾಣಹಾನಿ ಆಗುವ ಸಂಭವ ಹೆಚ್ಚು. ಆದ್ದರಿಂದ ಕಠಿಣ ಕ್ರಮದ ಭಾಗವಾಗಿ ಎಫ್​ಐಆರ್​ ಮಾಡಿ ಕೋರ್ಟಿಗೆ ಕಳುಹಿಸುತ್ತಿದ್ದೇವೆ. ಅಲ್ಲದೇ ವಾಹನ ಸೀಜ್ ವಶಕ್ಕೆ ಪಡೆದಕೊಂಡು ಕೋರ್ಟ್​ ವಶಕ್ಕೆ ನೀಡುತ್ತಿದ್ದೇವೆ. ಕೋರ್ಟಿನಿಂದಲೇ ಮಾಲೀಕರು ವಾಹನ ಬಿಡುಗಡೆ ಮಾಡಿಕೊಳ್ಳಬೇಕು.


ಸಾಂದರ್ಭಿಕ ಚಿತ್ರ


ಇದನ್ನೂ ಓದಿ: Buffalo: ಎಮ್ಮೆಗಳ ಮೇಲೆ ಬೆಂಗಳೂರು ಟೆಕ್ಕಿಗಳಿಗೆ ಮುನಿಸು; ಮೂಕ ಪ್ರಾಣಿಗಳ ವಿರುದ್ಧ ಟ್ರಾಫಿಕ್ ಪೊಲೀಸರಿಗೆ ದೂರು!


ಎರಡು ತಿಂಗಳಿನಿಂದ ಕಠಿಣ ಕ್ರಮಕೈಗೊಳ್ಳುತ್ತಿದ್ದೇವೆ. ಇಂತಹ ವರ್ತನೆ ವಾಹನ ಸವಾರರಿಂದ ದೂರ ಆಗ್ಬೇಕು ಅನ್ನೋದು ನಮ್ಮ ಉದ್ದೇಶ. ಫುಟ್​ಪಾತ್ ಪಾದಚಾರಿಗಳಿಗೆ ಸುರಕ್ಷಿತವಾಗಿ ಇರ್ಬೇಕು ಅನ್ನೋದು ನಮ್ಮ ಉದ್ದೇಶ. ಪಾದಾಚಾರಿಗಳ ಸುರಕ್ಷತೆಗೆ ನಾವು ಮೊದಲ ಆದ್ಯತೆ ನೀಡುತ್ತಿದ್ದೇವೆ ಎಂದು ಅಧಿಕಾರಿ ತಿಳಿಸಿದ್ದಾರೆ.


ಸೆಕ್ಷನ್ 283ರ ಅಡಿ ಬೀಳುತ್ತೆ ಕೇಸ್​


ಫುಟ್​ಪಾತ್ ಮೇಲೆ ವಾಹನ ನಿಲ್ಲಿಸಿದರೆ ಅಥವಾ ಚಲಾಯಿಸಿದರೆ ವಾಹನ‌ ಸೀಝ್ ಮಾಡಿ ಸೆಕ್ಷನ್ 283 ಅಡಿಯಲ್ಲಿ FIR ದಾಖಲು ಮಾಡಲಾಗುತ್ತೆ. ಮೋಟಾರ್ ಸೈಕಲ್ ಆಕ್ಟ್ ಆಡಿ ಫೈನ್ ಹಾಕದೇ ಗಾಡಿಯನ್ನು ಸೀಝ್ ಮಾಡಲಾಗುತ್ತದೆ. ಬೇರೆ ಕೇಸ್​ಗಳ ರೀತಿಯಲ್ಲೇ ಕೋರ್ಟ್​ಗೆ ಹೋಗಿ ಫೈನ್​ ಕಟ್ಟಬೇಕಾಗುತ್ತದೆ. ಕಳೆದ 2 ತಿಂಗಳಲ್ಲಿ 3,500 ಕೇಸ್ ದಾಖಲು ಆಗಿದೆ ಎಂದು ತಿಳಿಸಿದ್ದಾರೆ.
ಟ್ರಾಫಿಕ್​ ಪೊಲೀಸರು ಸಂಚಾರ ದಟ್ಟಣೆ ಮಾಡದೆ ಇಷ್ಟೆಲ್ಲಾ ರೂಲ್ಸ್​ ಮಾಡಿದರೆ ಪ್ರಯೋಜನ ಆಗಲ್ಲ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ. ಆದರೆ ರೂಲ್ಸ್​ ಜೊತೆಗೆ ಟ್ರಾಫಿಕ್ಸ್​ ಕಂಟ್ರೋಲ್​ ಮಾಡಿದರೆ ಜನರೂ ಕೂಡ ಫಾಲೋ ಮಾಡುತ್ತಾರೆ ಅಂತ ಹಲವು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಮಕ್ಕಳಲ್ಲಿ ಕುಸಿದ ಕಲಿಕಾ ಗುಣಮಟ್ಟ; ASER ಸರ್ವೆಯಲ್ಲಿ ಮಾಹಿತಿ ಬಹಿರಂಗ


ಮಕ್ಕಳ ಕಲಿಕೆ ವೃದ್ಧಿ ಆಗಬೇಕು, ಶಾಲಾ ಮಕ್ಕಳು ಅಭಿವೃದ್ಧಿ ಆಗಬೇಕು ಅಂತ ಸರ್ಕಾರ ಯೋಜನೆಗಳನ್ನ ಜಾರಿ ಮಾಡುತ್ತೆ. ಆದರೆ ಮಕ್ಕಳ ಕಲಿಕೆ ಗುಣಮಟ್ಟ ಹೇಗಿದೆ ಅಂತ ಕೇಂದ್ರ ASER ಸರ್ವೆಯಲ್ಲಿ ಬಹಿರಂಗವಾಗಿದೆ.


ಇದನ್ನೂ ಓದಿ: PM Modi Metro Ride: ಕೆಲಸವಿಲ್ಲದೆ ಮನೆಯಲ್ಲಿ ಕುಳಿತಿದ್ದ ಯುವತಿಗೆ ಪ್ರಧಾನಿ ಮೋದಿ ಪ್ರಯಾಣಿಸಿದ ಮೆಟ್ರೋ ಚಲಾಯಿಸೋ ಭಾಗ್ಯ!


ಕರ್ನಾಟಕದಲ್ಲಿ ಶಾಲಾ ಮಕ್ಕಳ ಕಲಿಕಾ ಮಟ್ಟ ಕುಸಿತ ಆಗಿದೆ ಅನ್ನೋ ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ. ಕೋವಿಡ್ ಬಳಿಕ ಸರ್ಕಾರಿ ಶಾಲಾ ದಾಖಲಾತಿಯಲ್ಲಿ‌ ಏರಿಕೆಯಾಗಿದೆ. ಎರಡನೇ ತರಗತಿ ಪಠ್ಯವನ್ನು ಮೂರನೇ ತರಗತಿಯ ಸರ್ಕಾರಿ ಅಥವಾ ಖಾಸಗಿ ಶಾಲೆಗಳ ಮಕ್ಕಳಿಗೆ ಓದುವಂತೆ ಹೇಳಿದಾಗ ಮಕ್ಕಳು ತಡವರಿಸಿದ್ದು ಸರ್ವೆಯಲ್ಲಿ ಬಯಲಾಗಿದೆ‌‌.

Published by:Sumanth SN
First published: