ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರೇ ಬೆಚ್ಚಿ ಬೀಳುವಂತಹ ಅಪರಾಧ ಪ್ರಕರಣವೊಂದು (Bengaluru Crime News) ಬೆಳಕಿಗೆ ಬಂದಿದೆ. ವೃದ್ಧರೊಬ್ಬರ ಕೈಕಾಲು ಕಟ್ಟಿಹಾಕಿ ಕುತ್ತಿಗೆ ಹಿಸುಕಿ ಸ್ವತಃ ವೃದ್ಧರೋರ್ವರನ್ನು ಸಾಯಿಸಿದ್ದಲ್ಲದೇ, (Old Man Murder Case) ಇಡೀ ಮನೆಯನ್ನು ದೋಚಿದ ಪ್ರಕರಣದ ತನಿಖೆಯನ್ನು ಬೆಂಗಳೂರು ಪೊಲೀಸರು (Bengaluru Police) ತೀವ್ರ ಗತಿಯಲ್ಲಿ ನಡೆಸುತ್ತಿದ್ದಾರೆ. ಚಾಮರಾಜಪೇಟೆಯ 4ನೇ ಕ್ರಾಸ್ ಬಳಿಯ ಅಪಾರ್ಟ್ಮೆಂಟ್ ಒಂದರಲ್ಲಿ ಜುಗುರಾಜ್ ಜೈನ್ ಎಂಬ 77 ವರ್ಷದ ವೃದ್ಧರ ಬರ್ಭರ ಕೊಲೆ ನಿನ್ನೆ ರಾತ್ರಿ (ಮೇ 24) ನಡೆದಿತ್ತು. ಈ ಪ್ರಕರಣ ಇಡೀ ಬೆಂಗಳೂರಲ್ಲೇ ತಲ್ಲಣಗೊಳಿಸಿತ್ತು. ಇದೀಗ ವೃದ್ಧರ ಭೀಕರ ಕೊಲೆ, ದರೋಡೆಯ ಆಳ ಅಗಲದ ಹುಡುಕಾಟ ನಡೆಸಿದ ಬೆಂಗಳೂರು ಪೊಲೀಸರು ಪ್ರಕರಣದ ಮಾಹಿತಿ ತೆರೆದಿಟ್ಟಿದ್ದಾರೆ.
ಕೊಲೆ ನಡೆದದ್ದು ಗೊತ್ತಾಗಿದ್ದೇ ಮಾರನೇ ದಿನ!
ನಿನ್ನೆ ರಾತ್ರಿ ಕೊಲೆಯಾದ ವೃದ್ದ ಜುಗುರಾಜ್ ತಮ್ಮ ಮನೆಯಲ್ಲಿ ಒಬ್ಬರೇ ಇದ್ದರು. ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ಅವರನ್ನು ಕೊಲೆ ಮಾಡಿ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಹಣ ಕಳವು ಮಾಡಲಾಗಿತ್ತು. ಮಾರನೇ ದಿನ ಮುಂಜಾನೆ ವೃದ್ಧರ ಮೊಮ್ಮಗ ಅಪಾರ್ಟ್ಮೆಂಟ್ ಗೆ ಬಂದಾಗ ಕೊಲೆ ನಡೆಸಿ ದರೋಡೆ ಮಾಡಿದ ವಿಷಯ ಗೊತ್ತಾಗಿದೆ
ಸದ್ಯ ತನಿಖೆ ಮಾಡ್ತಾ ಇದ್ದೀವಿ, ವಿಶೇಷ ತಂಡ ರಚನೆ ಆಗಿದೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ಹೇಳಿಕೆ ನೀಡಿದ್ದಾರೆ.
ಚಿನ್ನ ಹಾಗೂ ಹಣದ ಕಂತೆ ಚೆಲ್ಲಾಪಿಲ್ಲಿ
ಅಪಾರ್ಟ್ಮೆಂಟ್ ನಲ್ಲಿ ಚಿನ್ನ ಹಾಗೂ ಹಣದ ಕಂತೆಗಳು ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿವೆ. ಕೊಲೆ ಮಾಡಿದ ಬಳಿಕ ಕೊಲೆ ಆರೋಪಿ ಜುಗುರಾಜ್ ಅವರ ಮನೆಯ ಆರೋಪಿ ಕೆಲಸಗಾರ ಚಿನ್ನ ಹಾಗೂ ಹಣವನ್ನು ಬ್ಯಾಗ್ ಗಳಿಗೆ ತುಂಬಿದ್ದಾನೆ. ಈವೇಳೆ ಗಾಬರಿಯಲ್ಲಿ ಕೆಲ ಚಿನ್ನ ಹಾಗೂ ಹಣದ ಕಂತೆಯನ್ನು ಹಾಲ್ ನಲ್ಲಿ ಚೆಲ್ಲಾಡಿದ್ದಾನೆ. ಜುಗುರಾಜ್ ಅವರ ಕಣ್ಣಿಗೆ ಕಾರದಪುಡಿ ಹಾಕಿ ಕೈಕಾಲು ಕಟ್ಟಿ ಹಾಕಿದ್ದಾನೆ. ನಂತರ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎಷ್ಟು ಚಿನ್ನ ದರೋಡೆ?
ಇದುವರೆಗೂ ಎಷ್ಟು ಚಿನ್ನ ಹೋಗಿದೆ ಅನ್ನೋದು ಸ್ಪಷ್ಟವಾಗಿ ಗೊತ್ತಾಗಿಲ್ಲ. ಕೋಟ್ಯಾಂತರ ಮೌಲ್ಯದ ಚಿನ್ನಾಭರಣ ಕಳುವು ಆಗಿರುವ ಸಾಧ್ಯತೆಯಿದೆ. 28 ಕೆ.ಜಿ ಬೆಳ್ಳಿಯನ್ನು ಎರಡು ಮೂಟೆ ಕಟ್ಟಿದ್ದ ಆರೋಪಿ ಅದನ್ನು ಸಾಗಿಸಲು ಆಗದೆ ಅಪಾರ್ಟ್ಮೆಂಟ್ ನಲ್ಲಿ ಬಿಟ್ಟು ಹೋಗಿದ್ದಾನೆ.
ಇದನ್ನೂ ಓದಿ: Dowry Caseನಲ್ಲಿ ಸಿಲುಕಿ ನರಳಾಡಿದ್ದ 80ರ ವೃದ್ಧೆ! ಕೊನೆಗೂ ಆಪಾದನೆಯಿಂದ ಅಜ್ಜಿಗೆ ಮುಕ್ತಿ
ಆದರೆ ಮಿಕ್ಕ ಎರಡು ಬ್ಯಾಗ್ ಗಳ ಸಮೇತ ಎಸ್ಕೇಪ್ ಆಗಿದ್ದಾನೆ. ಎರಡು ಬ್ಯಾಗ್ ನಲ್ಲಿ ಚಿನ್ನಾಭರಣ ಹಾಗೂ ಹಣದ ಸಮೇತ ಪರಾರಿಯಾಗಿದ್ದಾನೆ. ಸದ್ಯ ಮನೆಕೆಲಸದವನಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ಮನೆಯಲ್ಲಿ ಯಾರೂ ಇರ್ಲಿಲ್ಲ!
ಜುಗುರಾಜ್ ಅವರಿಗೆ ಆನಂದ್ ಹಾಗೂ ಪ್ರಕಾಶ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ವ್ಯವಹಾರದ ಮೇಲೆ ಕೆಲಸದ ಮೇಲೆ ಆನಂದ್ ಗೋವಾಕ್ಕೆ ತೆರಳಿದ್ದರು. ಆನಂದ್ ಹೆಂಡತಿ ಮೂಲತಃ ಶಿಕಾರಿಪುರದವರಾಗಿದ್ದು ಮಕ್ಕಳ ಜೊತೆ ಶಿಕಾರಿಪುರಕ್ಕೆ ತೆರಳಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Bengaluru: ದಿಢೀರ್ ಸೇತುವೆ ಕುಸಿದು 30 ಅಡಿ ರಾಜಕಾಲುವೆಗೆ ಬಿದ್ರು 7 ಕಾರ್ಮಿಕರು
ಆರೋಪಿ ಬಿಜುರಾಮ್ ಹೇಗೆ ಕೊಲೆ ನಡೆಸಿದ್ದಾನೆ ಎಂದು ಪೊಲೀಸರು ತಮ್ಮ ಅಂದಾಜು ತಿಳಿಸಿದ್ದಾರೆ. ಜುಗುರಾಜ್ ಅವರ ಮುಖಕ್ಕೆ ಕಾರದಪುಡಿ ಹಾಕಿ ಕೈ ಕಾಲು ಕಟ್ಟಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಅಂಗಡಿಯಿಂದ ಜುಗುರಾಜ್ ಅವರನ್ನು ಕರೆದುಕೊಂಡು ಬಂದಿದ್ದ ಆರೋಪಿ ಸುಮಾರು 10.30 ಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ. ಸದ್ಯ ಆರೋಪಿಯ ಬಂಧನಕ್ಕಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ