• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Bengaluru Lakes: ಸರ್ಕಾರಿ ಸಂಸ್ಥೆಗಳಿಂದಲೇ ಬೆಂಗಳೂರಿನ 26 ಕೆರೆಗಳ ಅತಿಕ್ರಮಣ! 21 ಕೆರೆಗಳು ಮಾತ್ರ ಬಚಾವ್

Bengaluru Lakes: ಸರ್ಕಾರಿ ಸಂಸ್ಥೆಗಳಿಂದಲೇ ಬೆಂಗಳೂರಿನ 26 ಕೆರೆಗಳ ಅತಿಕ್ರಮಣ! 21 ಕೆರೆಗಳು ಮಾತ್ರ ಬಚಾವ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಂಗಳೂರಿನ ರಾಜಕಾಲುವೆಗಳಲ್ಲಿ ಅರ್ಧದಷ್ಟು ಮಾತ್ರ ಅಂದರೆ ಸುಮಾರು 490.10 ಕಿ.ಮೀ ಅಭಿವೃದ್ಧಿ ಪಡಿಸಲಾಗಿದ್ದು ಉಳಿದವುಗಳನ್ನು ಇನ್ನೂ ಮರುರೂಪಿಸಿಲ್ಲ. ಇದು ಮಳೆಗಾಲದಲ್ಲಿ ದಿಢೀರ್ ಪ್ರವಾಹಕ್ಕೆ ಪ್ರಮುಖ ಕಾರಣವಾಗಿದೆ.

  • Share this:

    ಬೆಂಗಳೂರನ್ನು ಒಂದು ಕಾಲದಲ್ಲಿ ಸರೋವರಗಳ ನಗರ (Lake City) ಎಂದು ಕರೆಯಲಾಗುತ್ತಿತ್ತು. ಆದರೆ ಈಗ?  ಬೆಂಗಳೂರು ನಗರ ವ್ಯಾಪ್ತಿಯ ಕೆರೆ ಅತಿಕ್ರಮಣದ (Lake Encroachments) ಕುರಿತು ನಡೆಸಿದ ಸರ್ವೆಯೊಂದರಲ್ಲಿ ಆಘಾತಕಾರಿ ಮಾಹಿತಿಯೊಂದು ಒಟ್ಟು 201 ಕೆರೆಗಳಿದ್ದು, 19 ಕೆರೆಗಳನ್ನು ಮೃತಪಟ್ಟ ಕೆರೆಗಳೆಂದು ಪರಿಗಣಿಸಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ. ಸುಮಾರು 161 ಕೆರೆಗಳನ್ನು ಮಿಶ್ರ ಅತಿಕ್ರಮಣ ಜಲಮೂಲಗಳೆಂದು ಪರಿಗಣಿಸಲಾಗಿದೆ. 161 ಕೆರೆಗಳಲ್ಲಿ 26 ಕೆರೆಗಳು ಸರ್ಕಾರಿ ಸಂಸ್ಥೆಗಳಿಂದ ಅತಿಕ್ರಮಣಗೊಂಡಿವೆ! 6 ಕೆರೆಗಳು ಕೊಳೆಗೇರಿಗಳಾಗಿ ಮಾರ್ಪಟ್ಟಿವೆ. 129 ಕೆರೆಗಳು ಭಾಗಶಃ ಅತಿಕ್ರಮಣಗೊಂಡಿವೆ. ಇದೀಗ ಕೇವಲ 21 ಕೆರೆಗಳು ಮಾತ್ರ ಅತಿಕ್ರಮಣ ಮುಕ್ತವಾಗಿವೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ನಡೆಸಿದ ಇತ್ತೀಚಿನ ಸಮೀಕ್ಷೆಯಿಂದ ಈ ಆಘಾತಕಾರಿ ಸಂಗತಿ ತಿಳಿದುಬಂದಿದೆ.


    ಈ ಹಿಂದೆ ಹಸಿರು ಹಸಿರಾಗಿ ಕಂಗೊಳಿಸುತ್ತಿದ್ದ ವಾತಾವರಣ-ಪರಿಸರ ಬೆಂಗಳೂರನ್ನು ಕಣ್ಣಿಗೆ, ಮನಸಿಗೆ ತಂಪು ಉಂಟುಮಾಡುತ್ತಿತ್ತು. ಇದಕ್ಕೆ ಕಾರಣ ಬೆಂಗಳೂರಿನ ನೂರಾರು ಜಲಮೂಲಗಳು. ಆದರೆ ಕಾಲ ಕಳೆದಂತೆ ಲೇಔಟ್‌ಗಳು ಮತ್ತು ಉದ್ಯಾನವನಗಳಿಂದ ಕೆರೆಗಳನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಈಗ ಬೆಂಗಳೂರು ನಗರದಲ್ಲಿ 21 ಕೆರೆಗಳು ಮಾತ್ರ ಸಂಪೂರ್ಣ ಒತ್ತುವರಿ ಮುಕ್ತವಾಗಿವೆ ಎಂಬ ಮಾಹಿತಿ ಬಹಿರಂಗಗೊಂಡಿದೆ.


    ಬೆಂಗಳೂರಿನ ರಾಜಕಾಲುವೆ ಎಷ್ಟು ಉದ್ದ ಇದೆ ಗೊತ್ತೇ?
    ಬೆಂಗಳೂರು 859.9 ಕಿಮೀ ರಾಜಕಾಲುವೆ ಜಾಲವನ್ನು ಹೊಂದಿದೆ. ಬೆಂಗಳೂರು ರಾಜಕಾಲುವೆಯನ್ನು ವಲಯವಾರು ಗಮನಿಸುವುದಾದರೆ  ಅವುಗಳ ವ್ಯಾಪ್ತಿ ಹೀಗಿದೆ ನೋಡಿ.


    ಪೂರ್ವ ವಲಯ 73.31 ಕಿಮೀ, ಪಶ್ಚಿಮ 55.24 ಕಿಮೀ, ದಕ್ಷಿಣ-53.22 ಕಿಮೀ, ಕೋರಮಂಗಲ ಕಣಿವೆ-71.30 ಕಿಮೀ, ಯಲಹಂಕ-98.18 ಕಿಮೀ, ಮಹದೇವಪುರ-199 ಕಿಮೀ, ಬೊಮ್ಮನಹಳ್ಳಿ-112 ಕಿಮೀ, ರಾಜರಾಜೇಶ್ವರಿನಗರ-19 ಕಿಮೀ. 


    ಅರ್ಧದಷ್ಟು ರಾಜಕಾಲುವೆ ಮಾತ್ರ ಅಭಿವೃದ್ಧಿ
    ಆದರೆ ಈ ರಾಜಕಾಲುವೆಗಳಲ್ಲಿ ಅರ್ಧದಷ್ಟು ಮಾತ್ರ ಅಂದರೆ ಸುಮಾರು 490.10 ಕಿ.ಮೀ ಅಭಿವೃದ್ಧಿ ಪಡಿಸಲಾಗಿದ್ದು ಉಳಿದವುಗಳನ್ನು ಇನ್ನೂ ಮರುರೂಪಿಸಿಲ್ಲ. ಇದು ಮಳೆಗಾಲದಲ್ಲಿ ದಿಢೀರ್ ಪ್ರವಾಹಕ್ಕೆ ಪ್ರಮುಖ ಕಾರಣವಾಗಿದೆ.


    ಈಕುರಿತು ಮಾಹಿತಿ ನೀಡಿದ ಬಿಬಿಎಂಪಿಯ ವಿಶೇಷ ಆಯುಕ್ತ (ಎಸ್ಟೇಟ್) ರಾಮ್ ಪ್ರಸಾದ್ ಮನೋಹರ್ ವಿ “ಲಭ್ಯವಿರುವ ಮಾಹಿತಿಯ ಪ್ರಕಾರ ನಗರದಲ್ಲಿ 310 ಕೆರೆಗಳಿದ್ದು, ಅವುಗಳಲ್ಲಿ 201 ಮಾತ್ರ ಉಳಿದಿವೆ. ಈಗ ಅಮೃತ ಮಹೋತ್ಸವ ಯೋಜನೆಯಡಿ 39 ಕೆರೆಗಳನ್ನು ಆದ್ಯತೆ ಮೇರೆಗೆ ಅಭಿವೃದ್ಧಿಪಡಿಸುತ್ತಿದ್ದೇವೆ. ಆಗಸ್ಟ್ 15ರೊಳಗೆ ದೊಡ್ಡಕಲ್ಲಸಂದ್ರ, ಚುಂಚನಕಟ್ಟೆ, ಚಿಕ್ಕಬಸ್ತಿ, ಗುಬ್ಬಾಳ, ಕೋನಪ್ಪನ ಅಗ್ರಹಾರ, ಪುಟ್ಟೇನಹಳ್ಳಿ, ಬಸವನಪುರ ಕೆರೆ ಸೇರಿದಂತೆ 22 ಕೆರೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಡಿಸೆಂಬರ್ ತಿಂಗಳ ವೇಳೆಗೆ ಉಳಿದ ಕೆರೆಗಳಿಗೆ ಕಾಯಕಲ್ಪ ನೀಡಲಾಗುವುದು ಎಂದು ತಿಳಿಸಿದ್ದಾಗಿಬೆಂಗಳೂರು ಮಿರರ್ ವರದಿ ಮಾಡಿದೆ.


    ಇದನ್ನೂ ಓದಿ: Karnataka Lokayukta: ಭ್ರಷ್ಟರೇ ಹುಷಾರ್! ಕರ್ನಾಟಕಕ್ಕೆ ಸದ್ಯದಲ್ಲೇ ಬರ್ತಾರೆ ಹೊಸ ಲೋಕಾಯುಕ್ತರು


    ಹೇಗೆ ಕೆರೆ ಅಭಿವೃದ್ಧಿ ಮಾಡಲಾಗುತ್ತೆ?
    ಮುಂದುವರೆದು ಮಾತನಾಡಿದ ಅವರು, ನಮ್ಮ ಸಮೀಕ್ಷೆಯ ದಾಖಲೆಗಳ ಪ್ರಕಾರ ಒಳಚರಂಡಿ ನೀರಿನ ಒಳಹರಿವು ಮತ್ತು ಹೊರಹರಿವಿನ ನಿರ್ವಹಣೆ, ಒಳಚರಂಡಿ ನೀರನ್ನು ತಿರುಗಿಸುವುದು, ಗಡಿಗಳಿಗೆ ಬೇಲಿ ಹಾಕುವುದು, ಜಾಗಿಂಗ್/ವಾಕಿಂಗ್ ಮತ್ತು ಫುಟ್‌ಪಾತ್‌ಗಳನ್ನು ಅಭಿವೃದ್ಧಿಪಡಿಸುವುದು ಸೇರಿದಂತೆ ಕೆರೆಗಳ ಸಮಗ್ರ ಅಭಿವೃದ್ಧಿ ಮಾಡಲಿದ್ದೇವೆ ಎಂದು ತಿಳಿಸಿದರು.


    ಇದನ್ನೂ ಓದಿ: Free Heart Treatment: ಬಡ ಹೃದಯ ರೋಗಿಗಳಿಗೆ ಒಳ್ಳೆ ಸುದ್ದಿ; ಉಚಿತ ಸ್ಟಂಟ್ ಅಳವಡಿಕೆಗೆ ಅವಕಾಶ ಇಲ್ಲಿದೆ


    ಅಷ್ಟೇ ಅಲ್ಲದೇ ಕೆರೆಗಳ ಸುತ್ತ ಉದ್ಯಾನವನಗಳನ್ನು ರಚಿಸುವುದು, ಎಲ್ಲ ಕೆರೆ ಒತ್ತುವರಿ ತೆರವು ನಮ್ಮ ಆದ್ಯತೆಯಾಗಿದೆ. ಮೊದಲನೆಯದಾಗಿ ಕೆರೆಗಳ ಗಡಿಯ ಗೋಡೆಯನ್ನು ಭದ್ರಪಡಿಸುತ್ತೇವೆ. ನಾವು ಈಗ ಅಸ್ತಿತ್ವದಲ್ಲಿರುವ ಕೆರೆಗಳನ್ನು ಹೊಸದಾಗಿ ಅತಿಕ್ರಮಣ ಆಗುವುದರಿಂದ ರಕ್ಷಿಸಲು ಬಯಸುತ್ತೇವೆ. ನಂತರ ಇತರ ಕೆರೆಗಳಲ್ಲಿನ ಅತಿಕ್ರಮಣ ಭೂಮಿಯನ್ನು ಮರುಪಡೆಯಲು ಯೋಜನೆ ರೂಪಿಸುತ್ತೇವೆ ಎಂದು ಬಿಬಿಎಂಪಿಯ ವಿಶೇಷ ಆಯುಕ್ತ (ಎಸ್ಟೇಟ್) ರಾಮ್ ಪ್ರಸಾದ್ ಮನೋಹರ್ ವಿ  ತಿಳಿಸಿದ್ದಾರೆ.

    Published by:guruganesh bhat
    First published: