ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬುಲೆಟ್ ಪತ್ತೆ; ಅಮೆರಿಕ ಮಿಲಿಟರಿ ಸಿಬ್ಬಂದಿ ಪೊಲೀಸ್ ವಶಕ್ಕೆ

ಬೆಂಗಳೂರು ಏರ್​ಪೋರ್ಟ್​ಗೆ ಆಗಮಿಸಿದ ತಾಯಿ-ಮಗನ ಬ್ಯಾಗ್​ನಲ್ಲಿ 2 ಬುಲೆಟ್​ಗಳು ಪತ್ತೆಯಾಗಿದ್ದು, ಆ ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

news18-kannada
Updated:January 8, 2020, 9:18 AM IST
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬುಲೆಟ್ ಪತ್ತೆ; ಅಮೆರಿಕ ಮಿಲಿಟರಿ ಸಿಬ್ಬಂದಿ ಪೊಲೀಸ್ ವಶಕ್ಕೆ
ಕೆಂಪೇಗೌಡ ವಿಮಾನ ನಿಲ್ದಾಣದ ಒಳಭಾಗ
  • Share this:
ಬೆಂಗಳೂರು (ಜ. 8): ಇಂದು ಮುಂಜಾನೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಏರ್​ಪೋರ್ಟ್​ನಲ್ಲಿ ಬಂದಿಳಿದ ಪ್ರಯಾಣಿಕರ ಬ್ಯಾಗ್​ಗಳನ್ನು ತಪಾಸಣೆ ಮಾಡುವಾಗ ಬ್ಯಾಗ್​ನಲ್ಲಿ ಎರಡು ಸಜೀವ ಗುಂಡುಗಳು ಪತ್ತೆಯಾಗಿವೆ. ಆ ಬ್ಯಾಗ್​ನ ಮಾಲೀಕರಾದ ಅಮೆರಿಕ ಮಿಲಿಟರಿ ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ 

ಬೆಂಗಳೂರು ಏರ್​ಪೋರ್ಟ್​ಗೆ ಆಗಮಿಸಿದ ತಾಯಿ-ಮಗನ ಬ್ಯಾಗ್​ನಲ್ಲಿ 2 ಬುಲೆಟ್​ಗಳು ಪತ್ತೆಯಾಗಿದ್ದು, ಆ ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಮಂಗಳೂರು ಮೂಲದ ವ್ಯಕ್ತಿ ತಾನು ಅಮೆರಿಕ ಮಿಲಿಟರಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ತಾನು ಅಮೆರಿಕ ಮಿಲಿಟರಿಯಲ್ಲಿ ಕೆಲಸ ಮಾಡುತ್ತಿದ್ದು, ರಜೆ ಹಾಕಿ ಊರಿಗೆ ಬಂದಿದ್ದಾಗಿ ತಿಳಿಸಿದ್ದಾರೆ. ಮಿಲಿಟರಿಯಿಂದ ಬ್ಯಾಗ್ ಪ್ಯಾಕ್ ಮಾಡಿಕೊಂಡು ಬರುವಾಗ ಕಣ್ತಪ್ಪಿನಿಂದ 2 ಗುಂಡುಗಳು ಬ್ಯಾಗ್​ನೊಳಗೆ ಬಿದ್ದಿವೆ ಎಂದು ಸಮಜಾಯಿಷಿ ನೀಡಿದ್ದಾರೆ.

ಇದನ್ನೂ ಓದಿ: ಭಾರತ್​ ಬಂದ್​; ಬೆಂಗಳೂರಿನಲ್ಲಿ ಇಂದಿನ ಪರಿಸ್ಥಿತಿ ಹೇಗಿದೆ? ಯಾವೆಲ್ಲ ಸೌಕರ್ಯ ಲಭ್ಯವಿದೆ? ಇಲ್ಲಿದೆ ಮಾಹಿತಿ...

ಈಗಾಗಲೇ ಇರಾನ್ ಮತ್ತು ಅಮೆರಿಕ ನಡುವೆ ಯುದ್ಧದ ವಾತಾವರಣ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಬೇರೆ ದೇಶಗಳಲ್ಲೂ ಆತಂಕ ಎದುರಾಗಿದೆ. ಹೀಗಾಗಿ, ಅಮೆರಿಕದ ಮಿಲಿಟರಿಯಲ್ಲಿ ಕೆಲಸ ಮಾಡುತ್ತಿರುವ ಮಂಗಳೂರಿನ ವ್ಯಕ್ತಿಯ ವಿಚಾರಣೆಯನ್ನು ಮುಂದುವರೆಸಿರುವ ಪೊಲೀಸರು ತಾಯಿ ಮತ್ತು ಮಗನನ್ನು ವಶಕ್ಕೆ ಪಡೆದಿದ್ದಾರೆ. ಅವರಿಬ್ಬರೂ ಹಲವು ವರ್ಷಗಳಿಂದ ಅಮೆರಿಕದಲ್ಲಿ ವಾಸವಾಗಿದ್ದು, ರಜೆಯ ಮೇಲೆ ಊರಿಗೆ ಬಂದಿದ್ದಾಗಿ ತಿಳಿಸಿದ್ದಾರೆ.

 
Published by: Sushma Chakre
First published: January 8, 2020, 9:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading